ಬೆಂಗಳೂರು: ಧ್ವನಿ ಸುರುಳಿ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆ ಬಿಜೆಪಿ ವರಿಷ್ಠರು ತಕ್ಷಣವೇ ಆಪರೇಷನ್ ಕಮಲ ಕಾರ್ಯಾ ಚರಣೆ ಕೈಬಿಡಿ ಎಂದು ರಾಜ್ಯ ಘಟಕದ ನಾಯಕರಿಗೆ ಕಟ್ಟಾ ದೇಶ ಮಾಡಿದ್ದಾರೆ. ಆಪರೇಷನ್ ಕಮಲದ ಸುಳಿಗೆ ಸಿಲುಕಿ ಮುಂಬೈನಲ್ಲಿ ಬಿಡಾರ ಹೂಡಿದ್ದ ಐವರು ಶಾಸಕರು ಬೆಳಿಗ್ಗೆಯೇ ಬೆಂಗಳೂರಿಗೆ ಬಂದಿಳಿದರು. ಇವರ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಪಕ್ಷದ ಮಲ್ಲೇಶ್ವರಂ ಶಾಸಕ ಡಾ|| ಅಶ್ವತ್ಥನಾರಾಯಣ ನೇತೃತ್ವದಲ್ಲಿ ಮುಂಜಾನೆ ನಗರಕ್ಕೆ ಆಗಮಿಸಿದರಲ್ಲದೆ, ಅಧಿ ವೇಶನದಲ್ಲೂ ಪಾಲ್ಗೊಂಡರು. ಧ್ವನಿ ಸುರುಳಿ ಪ್ರಸ್ತಾಪ ರಾಜ್ಯ ವಿಧಾನಮಂಡಲಕ್ಕೆ ಸೀಮಿತವಾಗದೆ ಸಂಸತ್‍ನಲ್ಲೂ…
ಸಮರ್ಥ ಆಡಳಿತ ನೀಡಿದ ಸಂತೃಪ್ತಿ
February 14, 2019ನವದೆಹಲಿ: ಹದಿನಾರನೇ ಲೋಕಸಭೆಯ ಕಟ್ಟ ಕಡೆಯ ಅಧಿ ವೇಶನದಲ್ಲಿ, ಕೊನೆಯ ದಿನವಾದ ಬುಧವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ತಮ್ಮ ಎಂದಿನ ಆಕ್ರಮಣಕಾರಿ ಶೈಲಿ ಬಿಟ್ಟು ಧನ್ಯವಾದ ಮತ್ತು ಅಭಿನಂದನೆಯ ಮಾತುಗಳಿಂದ ಭಿನ್ನರೀತಿಯಲ್ಲಿ ದೀರ್ಘ ಕಾಲ ಮಾತನಾಡಿದರು. `ನೀವೇ ಮತ್ತೊಮ್ಮೆ ಪ್ರಧಾನಿಯಾಗಬೇಕು’ ಎಂದು ಹಾರೈ ಸಿದ, ಪ್ರತಿಪಕ್ಷಗಳ ಸಾಲಿನ ಹಿರಿಯ ಸದಸ್ಯ ಮುಲಾಯಂಸಿಂಗ್ ಯಾದವ್ ಅವರಿಗೆ ಧನ್ಯವಾದ ಹೇಳಿದರು. ಸದನದ ಕಲಾಪಗಳನ್ನು 5 ವರ್ಷಗಳ ಅವಧಿ ಯಲ್ಲಿ ಅತ್ಯುತ್ತಮ ರೀತಿ ನಡೆಸಿಕೊಟ್ಟಿದ್ದಕ್ಕಾಗಿ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಅವರಿಗೆ…
ಸೋನಿಯಾ ಗಲಿಬಿಲಿ, ರಾಹುಲ್ ತಬ್ಬಿಬ್ಬು…
February 14, 2019ನವದೆಹಲಿ: ಪಕ್ಕದ ಆಸನ ದಲ್ಲಿ ಕುಳಿತಿದ್ದ ಮುಲಾಯಂ ಸಿಂಗ್ ಅವರು ಎದ್ದು ನಿಂತು ಮಾತನಾಡಲು ಆರಂಭಿಸಿದಾಗ ಕುತೂಹಲದಿಂದ ಕಿವಿಗೊಟ್ಟಿದ್ದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು, ಮರು ಕ್ಷಣವೇ ಗಲಿಬಿಲಿಗೊಳಗಾದರೆ, ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ತಬ್ಬಿಬ್ಬಾದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಲು ತಿಣುಕಾಡಿದರು. ಮುಲಾಯಂ ಅವರು ತಮ್ಮ ಕಡು ರಾಜಕೀಯ ವಿರೋಧಿ ಪ್ರಧಾನಿ ಮೋದಿ ಅವರನ್ನು ಪ್ರಶಂಸಿಸ ಲಾರಂಭಿಸಿದ್ದು ಕಿವಿಗೆ ಬಿದ್ದೊಡನೆ ಸೋನಿಯಾ ಜೀ ಅವರ ಕಣ್ಣುಗಳು ಹಿಗ್ಗಿದವು. `ಇದೇನಿದು’ ಎನ್ನುವಂತೆ ಮುಲಾಯಂ ಅವರತ್ತ ನೋಡಿದರು. ಮರುಕ್ಷಣ ಹಿಂದಿನ…
ಲ್ಯಾನ್ಸ್‍ಡೌನ್, ದೇವರಾಜ ಮಾರುಕಟ್ಟೆಗೆ ಯದುವೀರ್ ಭೇಟಿ, ಪರಿಶೀಲನೆ
February 14, 2019ಮೈಸೂರು: ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡಗಳ ಮಾಹಿತಿ ಪಡೆದುಕೊಂಡರು. ಈ ವೇಳೆ ಅಲ್ಲಿದ್ದ ಸಾರ್ವಜನಿಕರು, ಸದರಿ ಕಟ್ಟಡಗಳನ್ನು ನಿಮ್ಮ ಪೂರ್ವಿಕರೇ ನಿರ್ಮಿಸಿದ್ದಾರೆ. ಆದರೆ ಸರ್ಕಾರ ಇದನ್ನು ಕೆಡವಿ ಪುನರ್ ನಿರ್ಮಿಸಲು ಹೊರಟಿದೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡಿ ಎಂದು ಯದುವೀರ್ ಅವ ರಿಗೆ ಮನವಿ ಮಾಡಿಕೊಂಡರು. ಸರ್ಕಾರ ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರು ಕಟ್ಟೆ…
ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ಅವ್ಯವಹಾರ: ಏಕಾಏಕಿ ಆರ್‍ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ
February 14, 2019ಮೈಸೂರು: ಎಂಜಿ ರಸ್ತೆ ಕಾಮಗಾರಿಗೆ ಡಬಲ್ ಬಿಲ್ಲಿಂಗ್ ಮಾಡಿ 1.40 ಕೋಟಿ ರೂ. ಹಣ ಗುಳುಂ ಮಾಡಿದ ಆರೋಪಕ್ಕೆ ಗುರಿಯಾಗಿರುವ ಗುತ್ತಿಗೆದಾರ ಸಿ.ಕರೀಗೌಡ, ಇಂದು ಏಕಾಏಕಿ ಆರ್‍ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ಕೈಗೊಂಡಿದ್ದು, ಹಲವು ಅನುಮಾನಕ್ಕೆ ಆಸ್ಪದ ನೀಡಿತು. ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ 1.40 ಕೋಟಿ ರೂ. ಹಗರಣ ಬಯಲಾಗುತ್ತಿದ್ದಂತೆಯೇ ರಾತ್ರೋರಾತ್ರಿ ಎಂಜಿ ರಸ್ತೆಗೆ ರಿಫ್ಲೆಕ್ಟಿಂಗ್ ಸ್ಟಡ್‍ಗಳನ್ನು ಅಳವಡಿಸಿದ್ದ ಗುತ್ತಿಗೆ ದಾರರು, ಸತ್ಯಶೋಧನಾ ಸಮಿತಿ ತನಿಖೆ ಆರಂಭಿಸುತ್ತಿದ್ದಂತೆಯೇ ಇಂದು ಬೆಳಿಗ್ಗೆ ಎಂಜಿ ರಸ್ತೆಗೆ ಸಂಪರ್ಕ…
ಧಾರ್ಮಿಕ ವಿಕೇಂದ್ರೀಕರಣದತ್ತ ಮುರುಘಾ ಮಠ
February 14, 2019ಮೈಸೂರು: ಇಂದು ಧಾರ್ಮಿಕ ವಿಕೇಂದ್ರೀಕರಣ, ಜಾಗೃತೀ ಕರಣ ಆಗಬೇಕು. ಸಾಮಾಜಿಕ ಅಸಮಾ ನತೆ, ಅಸ್ಪøಶ್ಯತೆ, ಶೋಷಣೆ ನಿವಾರಣೆ ಆಗಬೇಕು. ಆ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ ಎಂದು ಚಿತ್ರದುರ್ಗ ಬೃಹನ್ಮಠ ಬಸವಕೇಂದ್ರದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು. ಮೈಸೂರಿನ ದಸರಾ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಮೈಸೂರು ನಗರ ಮೇದರ ಜನಾಂಗದ ಕ್ಷೇಮಾಭಿವೃದ್ಧಿ ಸಂಘ, ಚಿತ್ರದುರ್ಗದ ಅಖಿಲ ಕರ್ನಾಟಕ ಶ್ರೀಗುರು ಮೇದರ ಕೇತೇಶ್ವರ ಟ್ರಸ್ಟ್, ಮೇದ ಸೇವಾ ಸಂಘ, ಅಖಿಲ ಕರ್ನಾಟಕ ಮೇದ ಗಿರಿಜನ ಕಲ್ಯಾಣ ಸೇವಾ ಸಂಘ…
ಪಾರಂಪರಿಕ ದೇವರಾಜ ಮಾರುಕಟ್ಟೆ, ಲ್ಯಾನ್ಸ್‍ಡೌನ್ ಕಟ್ಟಡ ಸಂರಕ್ಷಿಸಿ
February 14, 2019ಮೈಸೂರು -ಪಾರಂಪರಿಕ ಶೈಲಿಯ ಮೈಸೂರಿನ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಕಟ್ಟಡಗಳನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕೆಂದು ಪಾರಂಪರಿಕ ತಜ್ಞರ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದೆ. ಸಮಿತಿ ಸದಸ್ಯರಾದ ಪ್ರೊ. ಎನ್.ಎಸ್.ರಂಗ ರಾಜು, ಮೇಜರ್ ಜನರಲ್ (ನಿವೃತ್ತ) ಎಸ್.ಜಿ. ಒಂಭತ್ಕೆರೆ, ಪ್ರೊ. ವಿ.ಎ.ದೇಶಪಾಂಡೆ, ಹೆಚ್.ಡಿ. ನಾಗೇಶ, ಎನ್.ಆರ್.ಅಶೋಕ್ ಹಾಗೂ ಈಚ ನೂರು ಕುಮಾರ್ ಅವರು ಸಹಿ ಮಾಡಿರುವ ಪತ್ರವನ್ನು ಸೋಮವಾರ ರಾಜ್ಯ ಮುಖ್ಯ ಕಾರ್ಯದರ್ಶಿ ತ.ಮ.ವಿಜಯಭಾಸ್ಕರ್ ಅವರಿಗೆ ರವಾನಿಸಿದ್ದಾರೆ. ಶಿಥಿಲಗೊಂಡಿವೆ ಎಂಬ ಕಾರಣ ನೀಡಿ ಮೈಸೂ ರಿನ ದೇವರಾಜ…
3 ವಿಕೆಟ್ ನಷ್ಟಕ್ಕೆ 282: ಸುಸ್ಥಿತಿಯಲ್ಲಿ ಭಾರತ
February 14, 2019ಮೈಸೂರು: ಮೈಸೂ ರಿನ ಮಾನಸಗಂಗೋತ್ರಿಯಲ್ಲಿನ ಶ್ರೀಕಂಠ ದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ(ಗ್ಲೇಡ್ಸ್) ಬುಧವಾರ ಆರಂಭವಾದ ಭಾರತ `ಎ’ ಹಾಗೂ ಇಂಗ್ಲೆಂಡ್ ಲಯನ್ಸ್ ತಂಡದ ನಡುವಿನ ಮೊದಲ ಟೆಸ್ಟ್‍ನಲ್ಲಿ ಆತಿಥೇಯ ಭಾರತ ಮೊದಲ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದು ಕೊಂಡು 282 ರನ್ ಗಳಿಸುವ ಮೂಲಕ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಟಾಸ್ ಗೆದ್ದ ಭಾರತ `ಎ’ ತಂಡದ ನಾಯಕ ಕೆ.ಎಲ್.ರಾಹುಲ್ ಮೊದಲು ಬ್ಯಾಟ್ ಮಾಡಲು ನಿರ್ಧರಿಸಿದರು. ಆರಂ ಭಿಕ ಆಟಗಾರರಾಗಿ ಕ್ರೀಸ್‍ಗೆ ಇಳಿದ ಕೆ.ಎಲ್. ರಾಹುಲ್,…
ಅಧಿಕಾರಕ್ಕಾಗಿ ಪಕ್ಷಾಂತರ ಮಾಡುವುದನ್ನು ತಡೆಯಲು ಕಾನೂನು ತಿದ್ದುಪಡಿ ಅವಶ್ಯ
February 14, 2019ಮೈಸೂರು: ಪಕ್ಷದ ಚಿಹ್ನೆ ಮೇಲೆ ಆಯ್ಕೆಯಾದ ಜನಪ್ರತಿನಿಧಿ ಗಳು ಅಧಿಕಾರ ಸಿಗದಿದ್ದಲ್ಲಿ ಪಕ್ಷಾಂತರ ಮಾಡುವುದಾಗಿ ಪಕ್ಷಕ್ಕೆ ಬೆದರಿಕೆ ಹಾಕುವುದು ತರವಲ್ಲ. ಈ ರೀತಿಯ ರಾಜಕಾರಣಕ್ಕೆ ಕಾನೂನು ತಿದ್ದುಪಡಿ ಮೂಲಕ ಕಡಿವಾಣ ಹಾಕುವುದು ಅಗತ್ಯ ಎಂದು ಮಾಜಿ ಸಚಿವ ಪ್ರೊ.ಬಿ.ಕೆ. ಚಂದ್ರಶೇಖರ್ ಅಭಿಪ್ರಾಯಪಟ್ಟರು. ಮೈಸೂರು ವಿವಿ ಅತಿಥಿ ಗೃಹದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ದೇಶದ ರಾಜಕಾರಣ ದಲ್ಲಿ ಮುತ್ಸದ್ಧಿ ರಾಜಕಾರಣಿಗಳ ಕೊರತೆ ಎದ್ದು ಕಾಣುತ್ತಿದೆ. ಇದರಿಂದಾಗಿ ಎಲ್ಲಾ ಪಕ್ಷಗಳಲ್ಲೂ ಸಾಮಾಜಿಕ ಮೌಲ್ಯ ಮತ್ತು ಸಿದ್ಧಾಂತ ರೂಢಿಸಿಕೊಂಡ…
ಗುಣಪಡಿಸಲು ಕಷ್ಟಸಾಧ್ಯವಿರುವ ರೋಗಗಳ ಬಗ್ಗೆ ಜಾಗೃತಿಗಾಗಿ ಮಾ.3ರಂದು ‘ರೇಸ್ ಫಾರ್ 7’
February 14, 2019ಮೈಸೂರು: ಗುಣಪಡಿ ಸಲು ಕಷ್ಟ ಸಾಧ್ಯವಿರುವ 7 ಸಾವಿರ ಕಾಯಿಲೆಗಳಿದ್ದು, ಇಂತಹ ರೋಗದಿಂದ ಬಳಲುವವರ ಆರೈಕೆ ಹಾಗೂ ಈ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರ್ಗನೈಸೇಷನ್ ಫಾರ್ ರೇರ್ ಡಿಸೀಸ್ ಇಂಡಿಯಾ (ಒಆರ್‍ಡಿಐ) ವತಿಯಿಂದ ಜೆಎಸ್‍ಎಸ್ ಆಸ್ಪತ್ರೆ ಸಹಯೋಗದಲ್ಲಿ ಮಾ.3ರಂದು ‘ರೇಸ್ ಫಾರ್ 7’ ಶೀರ್ಷಿಕೆ ಯಡಿ ಓಟ ಆಯೋಜಿಸಲಾಗಿದೆ ಎಂದು ಒಆರ್‍ಡಿಐ ಸಹ ಸಂಸ್ಥಾಪಕ ಪ್ರಸನ್ನ ಶೀರೋಲ್ ತಿಳಿಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅನುವಂಶಿಕ ಕಾಯಿಲೆ ಹಾಗೂ ಅಪರೂಪದ…










