ಲ್ಯಾನ್ಸ್‍ಡೌನ್, ದೇವರಾಜ ಮಾರುಕಟ್ಟೆಗೆ ಯದುವೀರ್ ಭೇಟಿ, ಪರಿಶೀಲನೆ
ಮೈಸೂರು

ಲ್ಯಾನ್ಸ್‍ಡೌನ್, ದೇವರಾಜ ಮಾರುಕಟ್ಟೆಗೆ ಯದುವೀರ್ ಭೇಟಿ, ಪರಿಶೀಲನೆ

February 14, 2019

ಮೈಸೂರು: ಪಾರಂಪರಿಕ ಕಟ್ಟಡಗಳಾದ ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‍ಡೌನ್ ಬಿಲ್ಡಿಂಗ್‍ಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಟ್ಟಡಗಳ ಮಾಹಿತಿ ಪಡೆದುಕೊಂಡರು.

ಈ ವೇಳೆ ಅಲ್ಲಿದ್ದ ಸಾರ್ವಜನಿಕರು, ಸದರಿ ಕಟ್ಟಡಗಳನ್ನು ನಿಮ್ಮ ಪೂರ್ವಿಕರೇ ನಿರ್ಮಿಸಿದ್ದಾರೆ. ಆದರೆ ಸರ್ಕಾರ ಇದನ್ನು ಕೆಡವಿ ಪುನರ್ ನಿರ್ಮಿಸಲು ಹೊರಟಿದೆ. ಹೀಗಾಗಿ ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಡಿ ಎಂದು ಯದುವೀರ್ ಅವ ರಿಗೆ ಮನವಿ ಮಾಡಿಕೊಂಡರು.

ಸರ್ಕಾರ ಮೈಸೂರಿನ ಲ್ಯಾನ್ಸ್‍ಡೌನ್ ಬಿಲ್ಡಿಂಗ್ ಹಾಗೂ ದೇವರಾಜ ಮಾರು ಕಟ್ಟೆ ಕೆಡವಿ ಪುನರ್ ನಿರ್ಮಿಸಲು ಮುಂದಾಗಿದ್ದು, ಈ ಬಗ್ಗೆ ನಿನ್ನೆ ಯದು ವೀರ್ ಮಾಧ್ಯಮದೊಂದಿಗೆ ಮಾತನಾಡಿ, ಕಟ್ಟಡ ಶಿಥಿಲಗೊಂಡಿದೆ ಎಂಬ ನೆಪವೊಡ್ಡಿ ನಗರದ ಎಲ್ಲಾ ಪಾರಂಪರಿಕ ಕಟ್ಟಡ ಗಳನ್ನು ಈ ರೀತಿ ಕೆಡವುತ್ತಾ ಹೋದರೆ ಮೈಸೂರನ್ನು `ಸಾಂಸ್ಕøತಿಕ ನಗರಿ’ ಎನ್ನಲು ಏನೂ ಉಳಿಯುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದ್ದರು.

ತಜ್ಞರ ವರದಿಗಳ ಪ್ರಕಾರ ಈ ಎರಡೂ ಪಾರಂಪರಿಕ ಕಟ್ಟಡಗಳನ್ನು ಪುನರುಜ್ಜೀ ವನಗೊಳಿಸಲು ಅವಕಾಶವಿದೆ. ಇದಕ್ಕಾಗಿ ಹಲವಾರು ರೀತಿಯ ತಂತ್ರಜ್ಞಾನಗಳು ಚಾಲ್ತಿಯಲ್ಲಿವೆ. ಜೈಪುರ ಸೇರಿದಂತೆ ದೇಶದ ನಾನಾ ನಗರಗಳಲ್ಲಿ ಕುಸಿಯುವ ಹಂತದಲ್ಲಿದ್ದ ಕಟ್ಟಡಗಳನ್ನು ಉಳಿಸಿ ಕೊಳ್ಳಲಾಗಿದೆ. ಅದೇ ರೀತಿ ಮೈಸೂರಿನ ಲ್ಯಾನ್ಸ್‍ಡೌನ್ ಹಾಗೂ ದೇವರಾಜ ಮಾರುಕಟ್ಟೆಗಳನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದ್ದರು.

Translate »