ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ಅವ್ಯವಹಾರ: ಏಕಾಏಕಿ ಆರ್‍ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ
ಮೈಸೂರು

ಎಂಜಿ ರಸ್ತೆ ಕಾಮಗಾರಿಯಲ್ಲಿ 1.40 ಕೋಟಿ ಅವ್ಯವಹಾರ: ಏಕಾಏಕಿ ಆರ್‍ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ

February 14, 2019

ಮೈಸೂರು: ಎಂಜಿ ರಸ್ತೆ ಕಾಮಗಾರಿಗೆ ಡಬಲ್ ಬಿಲ್ಲಿಂಗ್ ಮಾಡಿ 1.40 ಕೋಟಿ ರೂ. ಹಣ ಗುಳುಂ ಮಾಡಿದ ಆರೋಪಕ್ಕೆ ಗುರಿಯಾಗಿರುವ ಗುತ್ತಿಗೆದಾರ ಸಿ.ಕರೀಗೌಡ, ಇಂದು ಏಕಾಏಕಿ ಆರ್‍ಟಿಓ ಕಚೇರಿ ಹಿಂಭಾಗದ ರಸ್ತೆ ಕಾಮಗಾರಿ ಕೈಗೊಂಡಿದ್ದು, ಹಲವು ಅನುಮಾನಕ್ಕೆ ಆಸ್ಪದ ನೀಡಿತು.

ಮೈಸೂರು ಮಹಾನಗರಪಾಲಿಕೆ ಕೌನ್ಸಿಲ್ ಸಭೆಯಲ್ಲಿ 1.40 ಕೋಟಿ ರೂ. ಹಗರಣ ಬಯಲಾಗುತ್ತಿದ್ದಂತೆಯೇ ರಾತ್ರೋರಾತ್ರಿ ಎಂಜಿ ರಸ್ತೆಗೆ ರಿಫ್ಲೆಕ್ಟಿಂಗ್ ಸ್ಟಡ್‍ಗಳನ್ನು ಅಳವಡಿಸಿದ್ದ ಗುತ್ತಿಗೆ ದಾರರು, ಸತ್ಯಶೋಧನಾ ಸಮಿತಿ ತನಿಖೆ ಆರಂಭಿಸುತ್ತಿದ್ದಂತೆಯೇ ಇಂದು ಬೆಳಿಗ್ಗೆ ಎಂಜಿ ರಸ್ತೆಗೆ ಸಂಪರ್ಕ ಸಾಧಿಸುವ ಆರ್‍ಟಿಓ ಕಚೇರಿ ಹಿಂಭಾಗದ ರಸ್ತೆಯಲ್ಲಿ ವರ್ಕ್ ಆರ್ಡರ್ ಇಲ್ಲದೆಯೇ ಕಾಮಗಾರಿ ಆರಂಭಿಸಿದ್ದರು.

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ತೆರಳಿದ ಮೈಸೂರು ಮಹಾನಗರ ಪಾಲಿಕೆ ವಲಯ ಕಚೇರಿ-1ರ ಆಯುಕ್ತ ಕುಬೇರಪ್ಪ, ಅಭಿವೃದ್ಧಿ ಅಧಿಕಾರಿ ಸೋಮಶೇಖರಪ್ಪ, ಇಂಜಿನಿಯರ್ ಕಿರಣ್ ಅವರು ಕೆಲಸ ಸ್ಥಗಿತಗೊಳಿಸಿ, ಸ್ಥಳದಲ್ಲಿ ವೀಡಿಯೋ ರೆಕಾರ್ಡಿಂಗ್ ಮಾಡಿಕೊಂಡರು.

ರಸ್ತೆ ಕಾಮಗಾರಿ ನಡೆಸುತ್ತಿದ್ದವರು ಗುತ್ತಿಗೆದಾರ ಸಿ.ಕರೀಗೌಡರು ಹೇಳಿದ್ದ ರಿಂದ ತಾವು ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಡಬಲ್ ಬಿಲ್ಲಿಂಗ್ ಮೂಲಕ ಎಂಜಿ ರಸ್ತೆ ಅಭಿವೃದ್ಧಿ ಹೆಸರಲ್ಲಿ 1.40 ಕೋಟಿ ರೂ. ಹಣ ಕಬಳಿಸಿದ್ದಾರೆ ಎನ್ನಲಾದ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸುನೀಲ್ ಬಾಬು, ಜೂನಿಯರ್ ಇಂಜಿನಿ ಯರ್ ಎಂ.ಎನ್.ಮೋಹನ ಕುಮಾರಿ, ಅವರು ಆರೋಪದಿಂದ ತಪ್ಪಿಸಿಕೊಳ್ಳಲು ಗುತ್ತಿಗೆದಾರ ಕರೀಗೌಡ ನಿಂದ ಈ ಕೆಲಸ ಮಾಡಿಸುತ್ತಿದ್ದಾರೆ ಎಂಬುದು ಪಾಲಿಕೆ ಅಧಿಕಾರಿಗಳಿಗೆ ತಿಳಿದು ಬಂದಿದೆ.

1.40 ಕೋಟಿ ರೂ.ಗಳನ್ನು ಸರಿದೂಗಿ ಸಲು ಕೆಲಸ ಮಾಡಿ ತೋರಿಸುವ ಸಲು ವಾಗಿ ರಾತ್ರೋರಾತ್ರಿ ಹಾಗೂ ಮುಂಜಾನೆ ರಸ್ತೆಗಳಲ್ಲಿ ಡಾಂಬರೀಕರಣ ನಡೆಸುತ್ತಿರು ವುದರಿಂದ ಎಚ್ಚೆತ್ತ ಪಾಲಿಕೆ ಅಧಿಕಾರಿ ಗಳು, ವರ್ಕ್ ಆರ್ಡರ್ ಇಲ್ಲದೆ ಮಾಡು ತ್ತಿರುವ ಕೆಲಸಗಳ ಮೇಲೆ ನಿಗಾ ಇರಿಸಿ ದ್ದಾರೆ. ತನಿಖೆ ನಡೆಸುತ್ತಿರುವ ಮೇಯರ್ ಪುಷ್ಪಲತಾ ಜಗನ್ನಾಥ್ ನೇತೃತ್ವದ ಸತ್ಯಶೋಧನಾ ಸಮಿತಿ ಸದಸ್ಯರು, ಫೆ.16ರಂದು ಎಂಜಿ ರಸ್ತೆಗೆ ಭೇಟಿ ನೀಡಿ ಪರಿಶೀಲನೆ ನಡೆಸುವರು.

Translate »