ಧಾರ್ಮಿಕ ವಿಕೇಂದ್ರೀಕರಣದತ್ತ ಮುರುಘಾ ಮಠ
ಮೈಸೂರು

ಧಾರ್ಮಿಕ ವಿಕೇಂದ್ರೀಕರಣದತ್ತ ಮುರುಘಾ ಮಠ

February 14, 2019

ಮೈಸೂರು: ಇಂದು ಧಾರ್ಮಿಕ ವಿಕೇಂದ್ರೀಕರಣ, ಜಾಗೃತೀ ಕರಣ ಆಗಬೇಕು. ಸಾಮಾಜಿಕ ಅಸಮಾ ನತೆ, ಅಸ್ಪøಶ್ಯತೆ, ಶೋಷಣೆ ನಿವಾರಣೆ ಆಗಬೇಕು. ಆ ಕೆಲಸವನ್ನು ಮುರುಘಾ ಮಠ ಮಾಡುತ್ತಿದೆ ಎಂದು ಚಿತ್ರದುರ್ಗ ಬೃಹನ್ಮಠ ಬಸವಕೇಂದ್ರದ ಡಾ.ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಮೈಸೂರಿನ ದಸರಾ ವಸ್ತುಪ್ರದರ್ಶನದ ಪಿ.ಕಾಳಿಂಗರಾವ್ ಗಾನಮಂಟಪದಲ್ಲಿ ಮೈಸೂರು ನಗರ ಮೇದರ ಜನಾಂಗದ ಕ್ಷೇಮಾಭಿವೃದ್ಧಿ ಸಂಘ, ಚಿತ್ರದುರ್ಗದ ಅಖಿಲ ಕರ್ನಾಟಕ ಶ್ರೀಗುರು ಮೇದರ ಕೇತೇಶ್ವರ ಟ್ರಸ್ಟ್, ಮೇದ ಸೇವಾ ಸಂಘ, ಅಖಿಲ ಕರ್ನಾಟಕ ಮೇದ ಗಿರಿಜನ ಕಲ್ಯಾಣ ಸೇವಾ ಸಂಘ ಜಂಟಿ ಯಾಗಿ ಆಯೋಜಿಸಿದ್ದ ಶ್ರೀ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋತ್ಸವ ಮತ್ತು ರಾಜ್ಯ ಮಟ್ಟದ 5ನೇ `ಮೇದರ’ ಜನಾಂಗದ ಮಹಾಧಿವೇಶನಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

12ನೇ ಶತಮಾನದಲ್ಲೇ ಜಾತಿಗಳ ಧ್ರುವೀಕರಣ ನಡೆಯಿತು. ಇಂದು ಧಾರ್ಮಿಕ ವಿಕೇಂದ್ರೀಕರಣ ಮಾಡುವಲ್ಲಿ ಮುರುಘಾ ಶರಣರು 18 ಕುಲಗಳಿಗೂ ಮಠ, ಪೀಠ ಗಳನ್ನು ಮಾಡಿದೆ. ಈ ನಿಟ್ಟಿನಲ್ಲಿ ನಮ್ಮಿಂದ ದೀಕ್ಷೆ ಪಡೆದ ಸ್ವಾಮೀಜಿಗಳು ಧಾರ್ಮಿಕ ವಿಕೇಂದ್ರೀಕರಣ ಕಾರ್ಯದಲ್ಲಿ ತೊಡಗಿ ದ್ದಾರೆ ಎಂದು ಹೇಳಿದರು.

ವೀರಶೈವರು, ಬ್ರಾಹ್ಮಣರು, ಲಿಂಗಾಯ ತರನ್ನು ಬಿಟ್ಟರೆ ಯಾವ ಜಾತಿ ಜನಾಂ ಗಕ್ಕೂ ಸ್ವಾಮೀಜಿಗಳನ್ನು ಮಾಡುವ ಹಕ್ಕು ಇರಲಿಲ್ಲ. ಸ್ವಾಮಿತ್ವ ಎಂಬುದು ಕೇವಲ 2-3 ಜಾತಿಗಳಿಗೆ ಮಾತ್ರ ಸೀಮಿತ ಆಗ ಬಾರದು ಎಂಬ ಕಾರಣಕ್ಕಾಗಿ ಮುರುಘಾ ಮಠ ಅಲಕ್ಷಿತ ಜಾತಿಗಳಿಗೆ ಸನ್ಯಾಸ ದೀಕ್ಷೆ ನೀಡಿ, ಕಾವಿ ಕೊಟ್ಟಿತು. ಪ್ರತಿ ಜಾತಿಗೆ ಐದೈದು ಎಕರೆ ಭೂಮಿ ದೊರೆಯುವಂತೆ ಮಾಡಿದ್ದು ಮುರುಘಾ ಶರಣರು ಎಂದು ತಿಳಿಸಿದರು.
ಮೇದರ ಜನಾಂಗಕ್ಕೆ ಮೀಸಲಾತಿ ಕೊಡುವಂತೆ ನಾನು ಸರ್ಕಾರಕ್ಕೆ ಶಿಫಾ ರಸು ಪತ್ರ ಕಳಿಸಿಕೊಟ್ಟಿದ್ದರ ಪರಿಣಾಮ ಮೀಸಲಾತಿ ಸಿಕ್ಕಿದೆ ಎಂದು ಹೇಳಿದ ಅವರು, ಜಾಗೃತಿ ಇಲ್ಲದ ಜಾತಿಗಳಿಗೆ 5 ಎಕರೆ ಜಮೀನು ನೀಡಿದ್ದು ಸಿದ್ದರಾ ಮಯ್ಯ ಸರ್ಕಾರ. ಅವರಿಗೆ ಶಿಫಾರಸು ಮಾಡಿದ್ದು ಮುರುಘಾ ಮಠ. ರಾಜ್ಯವನ್ನು ಮುನ್ನಡೆಸುವ ನೀವೇಕೆ ಇಂಥ ಕೆಲಸ ಮಾಡಬಾರದು ಎಂದು ಅವರಿಗೆ ಹೇಳಿ ದಾಗ, ಎಲ್ಲಾ ಹಿಂದುಳಿದ ಜಾತಿಗಳಿಗೂ ಬೆಂಗಳೂರಿನ ಆಸುಪಾಸಿನಲ್ಲಿ ಭೂಮಿ ನೀಡಿದರು. ಆ ಕೆಲಸ ಮಾಡಿದ್ದು ಮುರುಘಾ ಶರಣರು ಎಂದರು. ಮಹಾಧಿವೇಶನದಲ್ಲಿ ಮಂಡಿಸಿರುವ ನಿಮ್ಮ ಬೇಡಿಕೆಗಳನ್ನು ಸರ್ಕಾ ರಕ್ಕೆ ತಲುಪಿಸುವ ಜೊತೆಗೆ ಈ ಕುರಿತು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಚರ್ಚಿಸುವುದಾಗಿ ಭರವಸೆ ನೀಡಿದರು.

ಚಿತ್ರದುರ್ಗದ ಕೇತೇಶ್ವರ ಮಹಾಮಠದ ಇಮ್ಮಡಿ ಬಸವ ಮೇದರ ಕೇತಯ್ಯ ಸ್ವಾಮೀಜಿ, ಸಮಾಜದ ಏಕೈಕ ಶಾಸಕ ಮಹಾರಾಷ್ಟ್ರದ ಹರೀಶ್ ಮಾರುತಿ ಪಿಂಪಳೆ, ಚಿತ್ರದುರ್ಗ ಅಖಿಲ ಕರ್ನಾಟಕ ಶ್ರೀ ಗುರುದೇವರ ಕೇತೇಶ್ವರ ಟ್ರಸ್ಟ್ ಅಧ್ಯಕ್ಷ ಸಿ.ಪಿ.ಪಾಟೀಲ್, ಅಖಿಲ ಮಹಾರಾಷ್ಟ್ರ ಬುರುಡ್ ಸಮಾ ಜದ ಅಧ್ಯಕ್ಷ ವಿಕಾಸ್ ನಾಗೆ, ತೆಲಂಗಾಣ ಟಿಎಸ್‍ಎಂಎಸ್ ಅಧ್ಯಕ್ಷ ವೆಂಕಟರಾ ಮುಡು, ಆಂಧ್ರಪ್ರದೇಶದ ಟಿ.ಎಲ್. ಬಾಬು, ತಮಿಳುನಾಡು ಮೇದರ ಸಮಾ ಜದ ಅಧ್ಯಕ್ಷ ಟಿ.ಗೋವಿಂದರಾಜು, ಸುದ ರ್ಶನ್, ಹುಬ್ಬಳ್ಳಿಯ ಅಖಿಲ ಕರ್ನಾಟಕ ಮೇದ ಗಿರಿ ಜನಾಂಗದ ಕಲ್ಯಾಣ ಸಂಘದ ಗೌರವಾಧ್ಯಕ್ಷ ಕೆ.ಎಂ.ಶೀಗೇಹಳ್ಳಿ, ಅಧ್ಯಕ್ಷ ಯ.ಕಾ.ಹಳೇಪೇಟೆ, ಚಿತ್ರದುರ್ಗದ ಅಧ್ಯಕ್ಷ ಎಂ.ಎಸ್.ಪ್ರಹ್ಲಾದಪ್ಪ, ಮಂಡ್ಯ ಸಂಘದ ಕಾರ್ಯದರ್ಶಿ ಎಂ.ಎಲ್.ಕುಮಾರ್, ಮೇದ ಸೇವಾ ಸಂಘದ ಅಧ್ಯಕ್ಷ ಕೃಷ್ಣಪ್ಪ, ಮೈಸೂರು ನಗರ ಮೇದ ಜನಾಂಗದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಿ.ಮಂಜುನಾಥ್ ಕುಮಾರ್ ಇನ್ನಿತರರು ಉಪಸ್ಥಿತರಿದ್ದರು.

ಮಹಾಧಿವೇಶನದಲ್ಲಿ ಬೇಡಿಕೆಗಳ ಮಂಡನೆ
ಮೈಸೂರು: ಮೈಸೂರಿನ ದಸರಾ ವಸ್ತು ಪ್ರದರ್ಶನ ಆವರಣದಲ್ಲಿ ನಡೆಯುತ್ತಿರುವ ಶ್ರೀ ಕುಕ್ವಾಡೇಶ್ವರಿ ಅಮ್ಮನವರ ದೊಡ್ಡ ಜಾತ್ರಾ ಮಹೋ ತ್ಸವ ಮತ್ತು ರಾಜ್ಯಮಟ್ಟದ 5ನೇ `ಮೇದರ’ ಜನಾಂ ಗದ ಮಹಾಧಿವೇಶನದಲ್ಲಿ ಮೇದರ ಜನಾಂಗದ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆಗಳು ನಡೆದವು.

ರಾಜ್ಯದಲ್ಲಿ ಮೇದರ ಜನಾಂಗ 2018ರ ಗಣತಿ ಪ್ರಕಾರ ಮೇದ, ಮೇದಾರ, ಮೇದಾರಿ, ಗೌರಿಗ, ಬುರುಡ ಹೆಸರಿನಲ್ಲಿ 2.40 ಲಕ್ಷ ಜನಸಂಖ್ಯೆ ಹೊಂದಿದೆ. ಬಿದಿರು, ಬೊಂಬಿನಿಂದ ಬುಟ್ಟಿ, ಮರ, ಚಾಪೆ, ಚಂದ್ರಿಕೆ, ಬ್ಯಾಸ್ಕೆಟು, ರೈತರಿಗೆ ಮತ್ತು ಮನೆ ಉಪಯೋಗಕ್ಕೆ ಬೇಕಾಗುವ ಬೊಂಬಿನ ವಸ್ತುಗಳನ್ನು ತಯಾರಿಸಿ, ಊರೂರು ಸುತ್ತಿ ಮಾರಿ ಬಂದ ಹಣದಲ್ಲಿ ಜೀವನ ನಿರ್ವಹಿ ಸುತ್ತಿವೆ. 2012ರಲ್ಲಿ ಕೇಂದ್ರ ಸರ್ಕಾರದ ಆದೇಶದ ಮೇರೆಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಯಿತಾದರೂ ಅನೇಕ ಸೌಲಭ್ಯಗಳಿಂದ ಹಿಂದುಳಿದಿದೆ. ಹೀಗಾಗಿ ಹಲವು ಬೇಡಿಕೆಗಳ ಈಡೇರಿಕೆಗಾಗಿ ಇಂದಿನ ಮಹಾ ಧಿವೇಶನದಲ್ಲಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಕರ್ನಾಟಕದಲ್ಲಿ ಬಂಬೂ ಮತ್ತು ಬೆತ್ತದ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ನಿಗಮಕ್ಕೆ ಎಸ್‍ಟಿ ಅನುದಾನ ದಲ್ಲಿ 2 ವರ್ಷಗಳವರೆಗೆ 200 ಕೋಟಿ ರೂ. ಮೀಸ ಲಿಡಬೇಕು. ಮೇದಾರ ಜನಾಂಗದ ಕೈಗಾರಿಕೆಗಾಗಿ ಉತ್ತಮ ಜಾತಿಯ ಬೊಂಬುಗಳನ್ನು ಬೆಳೆಸಲು ಪಶ್ಚಿಮ ಘಟ್ಟ ಅರಣ್ಯ, ಧಾರವಾಡ, ಬೆಳಗಾವಿ, ಶಿರ್ಶಿ, ಶಿವಮೊಗ್ಗ, ಮೈಸೂರು, ಚಿಕ್ಕಮಗಳೂರು ಇನ್ನಿತರ ಕಡೆಗಳಲ್ಲಿ 10,000 ಅರಣ್ಯ ಪ್ರದೇಶ ಬೊಂಬು ಬೆಳೆಸಲು ಮೀಸಲಿಡಬೇಕು. ಮೇದ, ಮೇದಾರ, ಮೇದಾರಿ, ಗೌರಿಗ, ಬುರುಡ ಈ ಜನರಿಗೆ ಜನಸಂಖ್ಯೆ ಆಧಾರದ ಮೇಲೆ ಅಲೆಮಾರಿ ಜನಾಂಗದ ಮೀಸಲಾತಿ ಹಂಚಿಕೆಗೆ ಅನುದಾನಕ್ಕೆ ಕ್ರಮ ಕೈಗೊಳ್ಳಬೇಕು. ಬೆಂಗಳೂರಿನ ಆನೇಕಲ್ ಪ್ರದೇಶದಲ್ಲಿ ಈಗಾಗಲೇ ಎಸ್‍ಸಿ,ಎಸ್‍ಟಿ ಜನಾಂಗಗಳಿಗೆ ಹಂಚಿಕೆ ಮಾಡುತ್ತಿರುವ ಸಮು ದಾಯಗಳ ಜೊತೆಗೆ ಮೇದಾರ ಜನಾಂಗಕ್ಕೆ ಒಂದು ಎಕರೆ ಪ್ರದೇಶ ಉಚಿತವಾಗಿ ರಾಜ್ಯ ಸಂಘಕ್ಕೆ ನೀಡಬೇಕು. ಬೊಂಬಿನ ಕಚ್ಛಾಮಾಲಿನ ಮೇಲಿನ ಜಿಎಸ್‍ಟಿ ರದ್ದು ಪಡಿಸಬೇಕು. ಕರ್ನಾಟಕದ ಅರಣ್ ಕಾಯಿದೆಯಲ್ಲಿ ಚೆಕ್‍ಪೋಸ್ಟ್‍ಗಳಲ್ಲಿ ಬೊಂಬಿನ ರಫ್ತು ಪಾಸ್ ರದ್ದತಿ ಆದೇಶ ನೀಡಬೇಕು. ಸೂರಿಲ್ಲದ ಅಲೆಮಾರಿ ಗಿರಿಜನಾಂಗಕ್ಕೆ ಜಿಲ್ಲೆಗೆ 500 ನಿವೇಶನಗಳನ್ನು ಉಚಿತವಾಗಿ ಕಟ್ಟಿಸಿಕೊಡ ಬೇಕು. ಸರ್ಕಾರದ ವತಿಯಿಂದ ಮೇದರ ಕೇತೇಶ್ವರ ಜಯಂತಿ ಆಚರಣೆಯಾಗಬೇಕು. ಇನ್ನಿತರ ಬೇಡಿಕೆಗಳನ್ನು ಮಹಾಧಿವೇಶನದಲ್ಲಿ ಮಂಡಿಸಿದರು.

Translate »