ಆಪರೇಷನ್ ಕಮಲ ಕೈಬಿಡಿ
ಮೈಸೂರು

ಆಪರೇಷನ್ ಕಮಲ ಕೈಬಿಡಿ

February 14, 2019

ಬೆಂಗಳೂರು: ಧ್ವನಿ ಸುರುಳಿ ರಾಷ್ಟ್ರವ್ಯಾಪಿ ಸುದ್ದಿಯಾಗುತ್ತಿದ್ದಂತೆ ಬಿಜೆಪಿ ವರಿಷ್ಠರು ತಕ್ಷಣವೇ ಆಪರೇಷನ್ ಕಮಲ ಕಾರ್ಯಾ ಚರಣೆ ಕೈಬಿಡಿ ಎಂದು ರಾಜ್ಯ ಘಟಕದ ನಾಯಕರಿಗೆ ಕಟ್ಟಾ ದೇಶ ಮಾಡಿದ್ದಾರೆ. ಆಪರೇಷನ್ ಕಮಲದ ಸುಳಿಗೆ ಸಿಲುಕಿ ಮುಂಬೈನಲ್ಲಿ ಬಿಡಾರ ಹೂಡಿದ್ದ ಐವರು ಶಾಸಕರು ಬೆಳಿಗ್ಗೆಯೇ ಬೆಂಗಳೂರಿಗೆ ಬಂದಿಳಿದರು. ಇವರ ಉಸ್ತುವಾರಿ ನೋಡಿ ಕೊಳ್ಳುತ್ತಿದ್ದ ಪಕ್ಷದ ಮಲ್ಲೇಶ್ವರಂ ಶಾಸಕ ಡಾ|| ಅಶ್ವತ್ಥನಾರಾಯಣ ನೇತೃತ್ವದಲ್ಲಿ ಮುಂಜಾನೆ ನಗರಕ್ಕೆ ಆಗಮಿಸಿದರಲ್ಲದೆ, ಅಧಿ ವೇಶನದಲ್ಲೂ ಪಾಲ್ಗೊಂಡರು. ಧ್ವನಿ ಸುರುಳಿ ಪ್ರಸ್ತಾಪ ರಾಜ್ಯ ವಿಧಾನಮಂಡಲಕ್ಕೆ ಸೀಮಿತವಾಗದೆ ಸಂಸತ್‍ನಲ್ಲೂ ಕೋಲಾಹಲ ಎಬ್ಬಿಸಿ, ರಾಷ್ಟ್ರವ್ಯಾಪಿ ಚರ್ಚೆಗೆ ಗ್ರಾಸವಾಗಿದ್ದು, ಕೇಂದ್ರ ಸರ್ಕಾರ ಮತ್ತು ಬಿಜೆಪಿಗೆ ಇರುಸು-ಮುರುಸು ಉಂಟು ಮಾಡಿತು.

ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಧ್ವನಿ ಸುರುಳಿಯನ್ನು ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲು ಮುಂದಾಗುತ್ತಿದ್ದಂತೆ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮತ್ತು ಸಂಘಟನಾ ಕಾರ್ಯದರ್ಶಿ ಸಂತೋಷ್ ಅವರಿಗೆ ಕಾರ್ಯಾಚರಣೆ ನಿಲ್ಲಿಸುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಸಲಹೆ ನೀಡಿದರು. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಈ ಬೆಳವಣಿಗೆ ಪಕ್ಷದ ವರ್ಚಸ್ಸಿಗೆ ಘಾಸಿಯುಂಟು ಮಾಡಿದ್ದು, ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಿ, ಚುನಾವಣೆ ಮೇಲೆ ಗಮನಹರಿಸಿ ಎಂದು ವರಿಷ್ಠರು ರಾಜ್ಯ ನಾಯಕರಿಗೆ ಸ್ಪಷ್ಟ ಸೂಚನೆ ನೀಡಿದರು.

ಮಹಾರಾಷ್ಟ್ರ ಸರ್ಕಾರದ ಕಣ್ಗಾವಲಿನಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಐವರು ಶಾಸಕರನ್ನು ಇರಿಸಲಾಗಿದೆ ಎಂದು ನಿನ್ನೆ ದೊಡ್ಡ ಮಟ್ಟದ ಕೂಗು ಕೂಡಾ ಆರಂಭ ಗೊಂಡಿತ್ತು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಗೆ ಹೋಗಲು ಸಜ್ಜಾಗಿದ್ದ ಕಾಂಗ್ರೆಸ್‍ನ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಹಾಗೂ ಜೆಡಿಎಸ್‍ನ ನಾರಾಯಣಗೌಡ ಇಂದು ವಿಧಾನಸಭೆಯಲ್ಲಿ ಪ್ರತ್ಯಕ್ಷವಾದರು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ನಾಲ್ವರನ್ನು ಅನರ್ಹಗೊಳಿಸುವಂತೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಸಭಾಧ್ಯಕ್ಷರಿಗೆ ಈ ಮೊದಲೇ ದೂರು ನೀಡಿದ್ದರು. ತಮ್ಮನ್ನು ಅನರ್ಹಗೊಳಿಸದಂತೆ ಕಾಂಗ್ರೆಸ್‍ನ ನಾಲ್ವರು ಶಾಸಕರು ರಾಜ್ಯದಲ್ಲಿ ಪಕ್ಷದ ಉಸ್ತುವಾರಿ ವಹಿಸಿಕೊಂಡ ಕೆ.ಸಿ. ವೇಣುಗೋಪಾಲ್ ಅವರಿಗೆ ನಿನ್ನೆ ಮನವಿ ಮಾಡಿಕೊಂಡಿದ್ದರು. ಇದಕ್ಕೆ ಪ್ರತಿಯಾಗಿ ಅವರು, ನಿಮ್ಮ ವಿರುದ್ಧ ಅನರ್ಹತೆಯ ಕ್ರಮ ಕೈಗೊಳ್ಳಬಾರದು ಎಂದರೆ ನೀವು ಬುಧವಾರದ ವಿಧಾನಸಭಾ ಕಲಾಪಕ್ಕೆ ಹಾಜರಾಗಿ ಎಂದು ಸೂಚನೆ ನೀಡಿದ್ದರು.

Translate »