ಮೈಸೂರು: ಗುಣಪಡಿ ಸಲು ಕಷ್ಟ ಸಾಧ್ಯವಿರುವ 7 ಸಾವಿರ ಕಾಯಿಲೆಗಳಿದ್ದು, ಇಂತಹ ರೋಗದಿಂದ ಬಳಲುವವರ ಆರೈಕೆ ಹಾಗೂ ಈ ಕಾಯಿಲೆಗಳ ಬಗ್ಗೆ ಜಾಗೃತಿ ಮೂಡಿಸಲು ಆರ್ಗನೈಸೇಷನ್ ಫಾರ್ ರೇರ್ ಡಿಸೀಸ್ ಇಂಡಿಯಾ (ಒಆರ್‍ಡಿಐ) ವತಿಯಿಂದ ಜೆಎಸ್‍ಎಸ್ ಆಸ್ಪತ್ರೆ ಸಹಯೋಗದಲ್ಲಿ ಮಾ.3ರಂದು ‘ರೇಸ್ ಫಾರ್ 7’ ಶೀರ್ಷಿಕೆ ಯಡಿ ಓಟ ಆಯೋಜಿಸಲಾಗಿದೆ ಎಂದು ಒಆರ್‍ಡಿಐ ಸಹ ಸಂಸ್ಥಾಪಕ ಪ್ರಸನ್ನ ಶೀರೋಲ್ ತಿಳಿಸಿದರು.
ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅನುವಂಶಿಕ ಕಾಯಿಲೆ ಹಾಗೂ ಅಪರೂಪದ ಇತರೆ 7 ಸಾವಿರ ರೋಗಗಳ ಬಗ್ಗೆ ಜಾಗೃತಿ ಮೂಡಿಸಲು ಈ ಓಟ ಏರ್ಪಡಿಸಲಾಗಿದೆ. ಅಪರೂ ಪದ ಕಾಯಿಲೆಗಳು ಉಲ್ಬಣಗೊಳ್ಳದಂತೆ ಚಿಕಿತ್ಸೆ ನೀಡಲು ದುಬಾರಿ ಹಣ ವೆಚ್ಚ ಮಾಡಬೇಕಾಗುತ್ತದೆ. ಹೀಗಾಗಿ, ಸಾರ್ವಜ ನಿಕರಲ್ಲಿ ಈ ಬಗ್ಗೆ ಅರಿವು ಮೂಡಿಸುವ ಜೊತೆಗೆ ಬಡರೋಗಿಗಳ ಚಿಕಿತ್ಸೆಗಾಗಿ ನಿಧಿ ಸಂಗ್ರಹಿಸಿ ಸಹಾಯ ಮಾಡಲು ಈ ಕಾರ್ಯ ಕ್ರಮ ನಡೆಸಲಾಗುತ್ತಿದೆ ಎಂದು ಹೇಳಿದರು.
ಒಆರ್‍ಡಿಐ ಸಂಸ್ಥೆ ವತಿಯಿಂದ ಕಳೆದ ವರ್ಷ ಬೆಂಗಳೂರಿನಲ್ಲಿ ಓಟ ಕಾರ್ಯ ಕ್ರಮ ಆಯೋಜಿಸಲಾಗಿತ್ತು. ಆಗ ಸುಮಾರು 4 ಸಾವಿರ ಮಂದಿ ಭಾಗವಹಿಸಿದ್ದರು. `ರೇಸ್ ಫಾರ್ 7’ ಎಂದರೆ 7 ಸಾವಿರ ಕಾಯಿಲೆಗಳನ್ನು ಸಾಂಕೇತಿಕವಾಗಿ ಗುರುತಿ ಸುವುದಾಗಿದೆ. ಸ್ವತಃ ನನ್ನ ಮಗನೂ ಅಪ ರೂಪದ ಕಾಯಿಲೆಯೊಂದಕ್ಕೆ ತುತ್ತಾಗಿದ್ದಾನೆ. ಈ ಬಗ್ಗೆ ಪೋಷಕರು ಎಚ್ಚರ ವಹಿಸಬೇಕು ಎಂದರು. ಜೆಎಸ್‍ಎಸ್ ವೈದ್ಯ ಕಾಲೇಜು ಸಹ ಪ್ರಾಧ್ಯಾಪಕಿ ದೀಪಾ ಭಟ್ ಮಾತ ನಾಡಿ, ದೇಶದಲ್ಲಿ ಅನುವಂಶಿಕ ಕಾಯಿಲೆ ಪ್ರಮಾಣ ಹೆಚ್ಚುತ್ತಿದೆ. ಹಿಂದೆ ಈ ಕಾಯಿ ಲೆಗೆ ತುತ್ತಾದವರು ಚಿಕಿತ್ಸೆಗೆ ಬೆಂಗಳೂರಿಗೆ ಹೋಗಬೇಕಿತ್ತು. 2017ರಿಂದ ಮೈಸೂರಿನ ಜೆಎಸ್‍ಎಸ್ ಆಸ್ಪತ್ರೆಯಲ್ಲೇ ‘ಜೆನೆಟಿಕ್ ಕೌನ್ಸಿಲ್ ಸರ್ವೀಸ್ ಸೆಂಟರ್’ ಮೂಲಕ ರೋಗ ಲಕ್ಷಣ ಗುರುತಿಸಿ ಸೂಕ್ತ ಚಿಕಿತ್ಸೆ ನೀಡಲಾ ಗುತ್ತಿದೆ. ಈಚೆಗೆ ‘ಅತೀ ವಿರಳ ರೋಗಗಳ ಆರೈಕೆ ಮತ್ತು ಸಮನ್ವಯ ಕೇಂದ್ರ’ವು ಜೆಎಸ್‍ಎಸ್ ಆಸ್ಪತ್ರೆಯ ಮಕ್ಕಳ ವಿಭಾಗದಲ್ಲಿ ಆರಂಭಗೊಂಡಿದೆ ಎಂದು ತಿಳಿಸಿದರು.
ಸಂಬಂಧಿಗಳನ್ನೇ ಮದುವೆ ಆಗುವ ಬಗ್ಗೆ ಗ್ರಾಮೀಣ ಜನರಲ್ಲಿ ಕೆಲ ನಂಬಿಕೆಗಳಿವೆ. ಇದರಿಂದ ಮುಂದಿನ ಪೀಳಿಗೆಗೆ ಆರೋಗ್ಯಕರ ವಾತಾವರಣ ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ಅವರಲ್ಲಿ ಜಾಗೃತಿ ಅಗತ್ಯ. ಅನುವಂಶಿಕ ರೋಗಕ್ಕೆ ಸಂಬಂಧಿಸಿದಂತೆ ಚಾಮ ರಾಜನಗರ, ಮಡಿಕೇರಿ, ಮದ್ದೂರು, ಕೊಳ್ಳೆಗಾಲದಿಂದ ಹೆಚ್ಚು ಪ್ರಕರಣಗಳು ಬರುತ್ತಿವೆ. ಕಳೆದ 18 ತಿಂಗಳಿಂದ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ಈ ಸಂಬಂಧ 275 ಪ್ರಕರಣಗಳನ್ನು ಗುರುತಿಸಿದ್ದೇವೆ ಎಂದು ವಿವರಿಸಿದರು.
ಇದೇ ವೇಳೆ ಓಟದ ಪೋಸ್ಟರ್ ಅನ್ನು ಬಿಡುಗಡೆ ಮಾಡಲಾಯಿತು. ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನೆ ಅಕಾಡೆಮಿ ನಿರ್ದೇಶಕ ಡಾ.ಪಿ.ಎ.ಕುಶಾ ಲಪ್ಪ, ಜೆಎಸ್‍ಎಸ್ ಆಸ್ಪತ್ರೆ ಉಪನಿರ್ದೇಶಕ ಡಾ.ಸುರೇಶ್ ಬಾಬು ಗೋಷ್ಠಿಯಲ್ಲಿದ್ದರು.