ಬೆಂಗಳೂರು: ರೈತ ವಿರೋಧಿ ನೀತಿ ಅನುಸರಿಸುತ್ತಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜೀನಾಮೆ ಕೊಡುವ ವರೆಗೂ ಹೋರಾಟ ಮುಂದುವರೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಗುಡುಗಿದ್ದಾರೆ. ಪಕ್ಷದ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿದ ಅವರು, ರೈತ ಮಹಿಳೆ ಬಗ್ಗೆ ಮುಖ್ಯಮಂತ್ರಿ ಕೆಟ್ಟ ಪದ ಗಳನ್ನು ಬಳಸಿದ್ದಾರೆ, ಬೆಳಗಾವಿ ಅಧಿವೇಶನ ಆರಂಭಕ್ಕೂ ಮುನ್ನ ಕುಮಾರಸ್ವಾಮಿ ರೈತರ ಕ್ಷಮೆ ಕೇಳಬೇಕು. ಇಲ್ಲವಾದರೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು. ಕಬ್ಬು ಬೆಳೆ ಗಾರರ ಸಮಸ್ಯೆ ಪರಿಹರಿಸಲು ನಿನ್ನೆಯಿಡೀ…
ಹಿಮ್ಮುಖವಾಗಿ ಜಿಗಿದ ಕಾರು: ಮನೆ ಜಗುಲಿ ಮೇಲೆ ಕೂತಿದ್ದ ಮಹಿಳೆ ಸಾವು
November 22, 2018ಚಾಮರಾಜನಗರ: ಹಿಮ್ಮುಖವಾಗಿ ಕಾರೊಂದು ಜಿಗಿದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡ ದುರಂತ ಚಾಮರಾಜನಗರ ಸಮೀಪದ ಚನ್ನಿಪುರ ಮೋಳೆ ಬಳಿಯ ಹಳೆ ಜಾಲಹಳ್ಳಿ ಹುಂಡಿಯಲ್ಲಿ ಕಳೆದ ರಾತ್ರಿ ಸಂಭವಿಸಿದೆ. ಈ ಅಪಘಾತ ಗ್ರಾಮಸ್ಥರಲ್ಲಿ ಮಾತ್ರವಲ್ಲ, ಪೊಲೀಸರಿಗೂ ಆಘಾತ ಉಂಟು ಮಾಡಿದೆ. ಹೀಗೆ ಹಿಮ್ಮುಖವಾಗಿ ಜಿಗಿದಿರುವ ಕಾರು, ಸುಮಾರು 8 ಅಡಿ ಎತ್ತರದ ಮನೆ ಮೇಲ್ಛಾವಣಿ ಮೇಲೆ ನಿಂತಿದೆ. ಕಾರು ಮನೆ ಮುಂದಿನ ಜಗುಲಿ ಮೇಲಿಂದ ಮೇಲ್ಛಾವಣಿ ಮೇಲೇರಿದ್ದು ಹೇಗೆ ಎಂಬ ಬಗ್ಗೆ ಗ್ರಾಮಸ್ಥರು ಹಾಗೂ ಪೊಲೀಸರಲ್ಲಿ…
ಪುರಭವನ ವಾಹನ ನಿಲುಗಡೆ ಸ್ಥಳದಲ್ಲಿ ಸುಲಿಗೆ
November 22, 2018ಮೈಸೂರು: ನಾಡ ಹಬ್ಬ ದಸರಾ ವೇಳೆ ಪ್ರವಾಸಿಗರ ವಾಹನ ನಿಲುಗಡೆಗೆ ಪುರಭವನದಲ್ಲಿ ನಗರಪಾಲಿಕೆಯಿಂದ ವ್ಯವಸ್ಥೆ ಮಾಡಿದ್ದ ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆ ಇದೀಗ ಸುಲಿಗೆ ತಾಣವಾಗಿ ಮಾರ್ಪಟ್ಟಿದ್ದು, ವಾಹನ ಮಾಲೀಕರಿಂದ ಅಧಿಕ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಮೈಸೂರಿಗೆ ಬರುವ ಪ್ರವಾಸಿಗರ ವಾಹನ ನಿಲುಗಡೆಗೆ ನಗರಪಾಲಿಕೆ ಪುರಭವನದ ಆವರಣದಲ್ಲಿ ನಿರ್ಮಾಣ ಹಂತದ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡದಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಿ, ಅದಕ್ಕೆ ಟೆಂಡರ್ ಕರೆದಿತ್ತು. ಮೈಸೂರಿನ ಮನು ಎಂಬುವವರು ವಾಹನ ನಿಲುಗಡೆ ಹಾಗೂ ನಿರ್ವಹಣೆ ಟೆಂಡರ್ ಪಡೆದಿದ್ದರು….
ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ
November 22, 2018ಮದ್ದೂರು: ಸಮೀಪದ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಕಾರ್ಖಾನೆಯ ನೌಕರ ಆನಂದ್ ಗಾಯಗೊಂಡಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಯ್ಲರ್ ಸ್ಫೋಟದಿಂದ ಕಾರ್ಖಾನೆಯ ಕಾಂಪೌಂಡ್ ಛಿದ್ರವಾಗಿದ್ದು, ಸಮೀಪ 20 ಮೀಟರ್ ವ್ಯಾಪ್ತಿ ಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲದೆ ಸ್ಫೋಟದಿಂದ ಹೊರ ಬಂದ ಡಿಸ್ಟಲರಿ ವಾಟರ್ ಕಾಲುವೆ ನೀರಿಗೆ ಸೇರಿ ಸುತ್ತಮುತ್ತಲ ಗ್ರಾಮಗಳ ನೂರಾರು ಎಕರೆ ಪ್ರದೇಶದ ಲಕ್ಷಾಂತರ ರೂ….
ಹತ್ತೂವರೆ ತಿಂಗಳಲ್ಲಿ 3.31 ಕೋಟಿ ದಂಡ ವಸೂಲಿ
November 22, 2018ಮೈಸೂರು: ಮೈಸೂರಲ್ಲಿ ಸಂಚಾರ ಪೊಲೀಸರು, ಸಂಚಾರ ನಿಯಮ ಉಲ್ಲಂಘನೆ ಸಂಬಂಧ ತಪಾಸಣೆ ತೀವ್ರಗೊಳಿಸಿದ್ದಾರೆ. ಎಫ್‍ಟಿವಿಆರ್ (ಫೀಲ್ಡ್ ಟ್ರಾಫಿಕ್ ವಯಾಲೇಷನ್ ರಿಪೋರ್ಟ್)ನಡಿ 2018ರ ಜನವರಿ 1ರಿಂದ ನವೆಂಬರ್ 16ರವರೆಗೆ ಸಂಚಾರ ಪೊಲೀಸರ ತಪಾಸಣೆಯಿಂದ ಒಟ್ಟು 3,31,27, 200 ರೂ.ಗಳ ದಂಡ ಸಂಗ್ರಹಿಸಲಾಗಿದೆ. ಸರ್ಕಲ್‍ಗಳು, ಜಂಕ್ಷನ್‍ಗಳು ಹಾಗೂ ಮುಖ್ಯರಸ್ತೆಗಳಲ್ಲಿ ನಿಂತು ಕಾರ್ಯಾ ಚರಣೆ ಮಾಡುವುದನ್ನು ತೀವ್ರಗೊಳಿಸಲಾ ಗಿದ್ದು, ಅದರ ಜೊತೆಗೆ ಮೈಸೂರು ನಗರದಲ್ಲಿ ಅಳವಡಿಸಿರುವ 59 ಸಿಸಿ ಕ್ಯಾಮರಾ ಗಳ ಫುಟೇಜಸ್ ಮೂಲಕವೂ ನಗರ ಪೊಲೀಸ್ ಕಮೀಷ್ನರ್ ಕಚೇರಿ ಆವರಣದಲ್ಲಿರುವ…
ನೂತನ ಮೇಯರ್ ಪುಷ್ಪಲತಾ ಜಗನ್ನಾಥ್‍ಗೆ ಸನ್ಮಾನ
November 22, 2018ಮೈಸೂರು: ಮೈಸೂರಿನ ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಬುಧವಾರ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು. ಐದು ವರ್ಷಗಳ ನಂತರ ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಒಲಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಎಂ.ಕೆ.ಸೋಮ ಶೇಖರ್, ವಾಸು, ಸಿ.ಹೆಚ್.ವಿಜಯಶಂಕರ್ ಅವರು ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರನ್ನು ಸನ್ಮಾನಿಸಿದರು. ಇದೇ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಈ ಹಿಂದೆ…
ನಾಳೆಯಿಂದ ಮೈಸೂರಲ್ಲಿ ನಾಲ್ಕು ದಿನಗಳ `ನಮ್ಮೂರ ತಿಂಡಿ ಮೇಳ’
November 22, 2018ಮೈಸೂರು: ಮೈಸೂರು ದಸರಾ ಆಹಾರ ಮೇಳದ ಬಳಿಕ ಮೈಸೂರಿನಲ್ಲಿ ನಾನಾ ರೀತಿಯ ಸಸ್ಯಹಾರಿ ಆಹಾರಗಳನ್ನು ಸವಿಯುವ ಮತ್ತೊಂದು ಅವಕಾಶ ದೊರೆತಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನ.23ರಿಂದ 26ರವ ರೆಗೆ `ನಮ್ಮೂರ ತಿಂಡಿ ಮೇಳ’ವನ್ನು ಭಾಗ್ಯಲಕ್ಷ್ಮಿ ಫುಡ್ಸ್ ಆಯೋಜಿಸಿದೆ. ಮಹಿಳೆಯರಲ್ಲಿನ ಅಡುಗೆ ಕೌಶಲ್ಯವನ್ನು ಗುರ್ತಿಸಿ, ಪ್ರೋತ್ಸಾಹಿಸುವ ಸಲುವಾಗಿ ಈ ಮೇಳವನ್ನು ಆಯೋಜಿಸಿದ್ದು, ಮೇಳದಲ್ಲಿ 150 ವಿವಿಧ ಖಾದ್ಯಗಳ ಸ್ಟಾಲ್‍ಗಳಿರಲಿವೆ. ಈಗಾಗಲೇ ಕಳೆದ ವರ್ಷ ಏರ್ಪಡಿಸಿದ್ದ ತಿಂಡಿ ಮೇಳ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ವರ್ಷ ಮತ್ತೆ ನಮ್ಮೂರ ತಿಂಡಿ…
ಮೈಸೂರಲ್ಲಿ ಭಕ್ತಿ ಭಾವದ ಈದ್ ಮಿಲಾದ್ ಉನ್ ನಬಿ ಮೆರವಣಿಗೆ
November 22, 2018ಮೈಸೂರು: ದಾವತೆ-ಇಸ್ಲಾಮಿ ಹಿಂದ್ ಕರ್ನಾಟಕದ ವತಿಯಿಂದ ಪ್ರತಿ ವರ್ಷದಂತೆ ಜುಲೂಸ್ ಮೊಹಮದಿ ಈದ್ ಮಿಲಾದ್ ಉನ್ ನಬಿ ಮೆರವಣಿಗೆ ಬುಧವಾರ ಮಧ್ಯಾಹ್ನ 2.12 ಗಂಟೆಗೆ ಮೈಸೂರಿನ ಲಷ್ಕರ್ ಮೊಹಲ್ಲಾ, ಅಶೋಕ ರಸ್ತೆ ಯಲ್ಲಿರುವ ಮಸೀದಿ ಅಜಾóಮ್ ಮರ್‍ಕಾಜ್ó ಅಹಲ ಸುನ್ನತೋ ಜಮಾತ್‍ನಿಂದ ಹೊರಟು, ಸಾಡೆ ರಸ್ತೆ, ಈದ್ಗಾ ಮಸೀದಿ ರಸ್ತೆ, ಪುಲ ಕೇಶಿ ರಸ್ತೆ, ಮಂಡಿ ಮೊಹಲ್ಲಾ, ಲಷ್ಕರ್ ಮೊಹಲ್ಲಾ ರಸ್ತೆಗಳಲ್ಲಿ ಸಾಗಿತು. ಜಮೀಲ್ ಅಹಮದ್ ಅಶ್ರಫಿ, ಉಪಾಧ್ಯಕ್ಷರು, ಮೈಸೂರು ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ,…
ಮೈಸೂರಲ್ಲಿ ನಾಳೆಯಿಂದ ರಾಜ್ಯಮಟ್ಟದ ಪಿಯು ಕಾಲೇಜು ಅಥ್ಲೆಟಿಕ್ ಕ್ರೀಡಾಕೂಟ
November 22, 2018ಮೈಸೂರು: ಪದವಿ ಪೂರ್ವ ಶಿಕ್ಷಣ ಇಲಾಖೆ, ವಿಜಯ ವಿಠಲ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯ ದಲ್ಲಿ ನ.23ರಿಂದ 26ರವರೆಗೆ ಮೈಸೂರಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ 2018-19ನೇ ಸಾಲಿನ ಪದವಿ ಪೂರ್ವ ಕಾಲೇಜು ಬಾಲಕ-ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ ನಡೆಯ ಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಮೈಸೂರು ಜಿಲ್ಲಾ ಉಪ ನಿರ್ದೇಶಕ ಡಾ.ದಯಾನಂದ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಕ್ರೀಡಾ ಕೂಟದ ವಿವರಗಳನ್ನು ನೀಡಿದ ಅವರು, 23ರಂದು ಸಂಜೆ…
ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವು
November 22, 2018ಮಂಡ್ಯ: ಬೈಕ್, ಕಾರು ಹಾಗೂ ಟೆಂಪೆÇೀ ಟ್ರಾವೆಲರ್ ನಡುವೆ ಸರಣಿ ಅಪಘಾತ ಸಂಭವಿಸಿ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಂಡ್ಯ ತಾಲೂಕಿನ ಸಿದ್ದಯ್ಯನ ಕೊಪ್ಪಲು ಗೇಟ್ ಬಳಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ನಡೆದಿದೆ. ಕಟ್ಟಡ ಕಾರ್ಮಿಕರಾದ ಮಾದೇಶ್ (45), ಜೇಮ್ಸ್ (30) ಮೃತರು. ಎಂದಿನಂತೆ ಇಬ್ಬರೂ ಗಾರೆ ಕೆಲಸಕ್ಕೆ ಬೈಕ್‍ನಲ್ಲಿ ಹೋಗು ತ್ತಿದ್ದರು. ಈ ವೇಳೆ ಸಿದ್ದಯ್ಯನಕೊಪ್ಪಲು ಗೇಟ್ ಬಳಿ ಬೆಂಗ ಳೂರು-ಮೈಸೂರು ಹೆದ್ದಾರಿಯಲ್ಲಿ ಎದುರಿನಿಂದ ಬಂದ ಕಾರು ಬೈಕ್‍ಗೆ ಡಿಕ್ಕಿ ಹೊಡೆದಿದೆ. ಇದರಿಂದ ನಿಯಂತ್ರಣ ತಪ್ಪಿದ ಬೈಕ್…