ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ
ಮೈಸೂರು

ಕೊಪ್ಪ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ

November 22, 2018

ಮದ್ದೂರು: ಸಮೀಪದ ಕೊಪ್ಪದ ಎನ್‍ಎಸ್‍ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟಗೊಂಡ ಪರಿಣಾಮ ಓರ್ವ ಸಿಬ್ಬಂದಿ ಗಾಯಗೊಂಡಿದ್ದು, ರೈತರ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ.

ಕಾರ್ಖಾನೆಯ ನೌಕರ ಆನಂದ್ ಗಾಯಗೊಂಡಿದ್ದು, ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಯ್ಲರ್ ಸ್ಫೋಟದಿಂದ ಕಾರ್ಖಾನೆಯ ಕಾಂಪೌಂಡ್ ಛಿದ್ರವಾಗಿದ್ದು, ಸಮೀಪ 20 ಮೀಟರ್ ವ್ಯಾಪ್ತಿ ಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಅಲ್ಲದೆ ಸ್ಫೋಟದಿಂದ ಹೊರ ಬಂದ ಡಿಸ್ಟಲರಿ ವಾಟರ್ ಕಾಲುವೆ ನೀರಿಗೆ ಸೇರಿ ಸುತ್ತಮುತ್ತಲ ಗ್ರಾಮಗಳ ನೂರಾರು ಎಕರೆ ಪ್ರದೇಶದ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾ ಗಿದೆ. ಬಾಯ್ಲರ್ ಸ್ಫೋಟದ ವೇಳೆ ಸಮೀಪ ಹೆಚ್ಚಿನ ನೌಕರರು ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ. ವಿಷಯ ತಿಳಿದು ಎಸ್‍ಪಿ ಶಿವಪ್ರಕಾಶ್ ದೇವರಾಜು, ಉಪ ವಿಭಾಗಾಧಿಕಾರಿ ರಾಜೇಶ್, ಪ್ರಭಾರ ತಹಶೀಲ್ದಾರ್ ಶ್ವೇತಾ ಸೇರಿದಂತೆ ಪರಿಸರ ಮಾಲಿನ್ಯಾ ಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿ ಶೀಲಿಸಿದರು. ಕೊಪ್ಪ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ರೈತರ ಪ್ರತಿಭಟನೆ: ಕಾರ್ಖಾನೆಯ ಅವ ಘಡದಿಂದ ನಾಶವಾಗಿರುವ ಬೆಳೆಗಳಿಗೆ ಸೂಕ್ತ ಪರಿಹಾರ ನೀಡುವಂತೆ ಆಗ್ರಹಿಸಿ ರೈತ ಸಂಘ ಮತ್ತು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ರೈತರುಕಾರ್ಖಾನೆ ಆವರಣದಲ್ಲಿ ಪ್ರತಿಭಟಿಸಿ, ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಕೀಳಘಟ್ಟ ನಂಜುಂಡಯ್ಯ, ವರದರಾಜು, ಉಮೇಶ್, ವೆಂಕಟೇಶ್, ವಕೀಲ ಸತ್ಯಪ್ಪ, ಜಯ ಕರ್ನಾಟಕ ಸಂಘಟನೆಯ ಹೋಬಳಿ ಘಟಕದ ಅಧ್ಯಕ್ಷ ಮೂಗೂರೇಗೌಡ, ಮುಖಂಡರಾದ ಮಹಮದ್ ಇಲಿಯಾಜ್, ಜಬೀವುಲ್ಲ ಸೇರಿದಂತೆ ಇನ್ನಿತರರಿದ್ದರು. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಸುರೇಶ್‍ಗೌಡ, ಘಟನೆಯಿಂದ ರೈತರಿಗೆ ನಷ್ಟವಾಗಿದ್ದು, ಬೆಳೆ ಪರಿಹಾರ ನೀಡಲು ಸರ್ಕಾರದ ಜತೆಯಲ್ಲಿ ಮಾತನಾಡಿ, ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಈ ವೇಳೆ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಕೂಡ ಹಾಜರಿದ್ದರು.

Translate »