ನೂತನ ಮೇಯರ್ ಪುಷ್ಪಲತಾ ಜಗನ್ನಾಥ್‍ಗೆ ಸನ್ಮಾನ
ಮೈಸೂರು

ನೂತನ ಮೇಯರ್ ಪುಷ್ಪಲತಾ ಜಗನ್ನಾಥ್‍ಗೆ ಸನ್ಮಾನ

November 22, 2018

ಮೈಸೂರು: ಮೈಸೂರಿನ ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರಿಗೆ ಬುಧವಾರ ಕಾಂಗ್ರೆಸ್ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಸಮಿತಿ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಐದು ವರ್ಷಗಳ ನಂತರ ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಒಲಿದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಭವನದಲ್ಲಿ ಇಂದು ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾಜಿ ಶಾಸಕರುಗಳಾದ ಎಂ.ಕೆ.ಸೋಮ ಶೇಖರ್, ವಾಸು, ಸಿ.ಹೆಚ್.ವಿಜಯಶಂಕರ್ ಅವರು ನೂತನ ಮೇಯರ್ ಪುಷ್ಪಲತಾ ಜಗನ್ನಾಥ್ ಅವರನ್ನು ಸನ್ಮಾನಿಸಿದರು.

ಇದೇ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಈ ಹಿಂದೆ ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೈಸೂರು ನಗ ರಾಭಿವೃದ್ಧಿಗೆ 3 ಸಾವಿರ ಕೋಟಿ ರೂ. ಅನು ದಾನ ಬಿಡುಗಡೆ ಮಾಡಿತ್ತು. ಮೈಸೂರಿನಲ್ಲಿ ಕಳೆದ ಸರ್ಕಾರದ ಅವಧಿಯಲ್ಲಿ ಹಿಂದೆಂದೂ ಆಗಿರದಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಸಿದ್ದ ರಾಮಯ್ಯ ಅವರ ಸರ್ಕಾರ ನೀಡಿರುವ ಅನುದಾನ ಹಾಗೂ ರೂಪಿಸಿರುವ ಯೋಜನೆ, ಅಭಿವೃದ್ಧಿ ಕೆಲಸಗಳನ್ನು ಮುಂದಿನ 3 ತಿಂಗ ಳಲ್ಲಿ ಪೂರ್ಣಗೊಳಿಸುವ ಜವಾಬ್ದಾರಿ ಮೇಯರ್ ಅವರ ಮೇಲಿದೆ ಎಂದು ಹೇಳಿದರು.

ಯಾವುದೇ ಪಕ್ಷವೂ ಮಾಡದಷ್ಟು ಅಭಿವೃದ್ಧಿ ಕಾರ್ಯವನ್ನು ಕಾಂಗ್ರೆಸ್ ಪಕ್ಷ ತನ್ನ ಅವಧಿಯಲ್ಲಿ ಮಾಡಿದೆ. ಆದರೆ, ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡದ ಹಿನ್ನೆಲೆಯಲ್ಲಿ ನಾವು ಸೋಲಬೇಕಾಯಿತು. ಪ್ರಚಾರದಲ್ಲಿ ನೈಪುಣ್ಯರಾಗಿರುವ ಬಿಜೆಪಿಯವರು ಕೆಲಸಕ್ಕಿಂತ ಹೆಚ್ಚು ಪ್ರಚಾರದಲ್ಲೇ ತೊಡಗಿಸಿಕೊಂಡಿದ್ದರು. ವಿಚಿತ್ರ ವೆಂದರೆ, ನಮ್ಮ ಕ್ಷೇತ್ರದ ನೂತನ ಶಾಸಕರು ನನ್ನ ಅವಧಿಯಲ್ಲಿ ಚಾಲನೆಗೊಂಡಿರುವ ಕಾಮಗಾರಿಗಳನ್ನು ತಮ್ಮ ಅವಧಿಯಲ್ಲಿ ನಡೆ ದಿದೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ಘಟನೆ ಪಾಲಿಕೆಯಲ್ಲಿ ಆಗಬಾರದು. ಈ ನಿಟ್ಟಿನಲ್ಲಿ ಮೇಯರ್ ಹಾಗೂ ಪಕ್ಷದ ಪಾಲಿಕೆ ಸದಸ್ಯರು ಹಿಂದಿನ ಸರ್ಕಾರದ ಕಾರ್ಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನು ಷ್ಠಾನಗೊಳಿಸುವುದರೊಂದಿಗೆ ಜನರ ಗಮನ ಸೆಳೆಯಬೇಕೆಂದು ಅವರು ಸಲಹೆ ನೀಡಿದರು.

ಮಾಜಿ ಸಚಿವ ಸಿ.ಹೆಚ್.ವಿಜಯಶಂಕರ್ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿ ರುವ ಪುಷ್ಪಲತಾ ಜಗನ್ನಾಥ್ ಅವರಿಗೆ ಮೇಯರ್ ಸ್ಥಾನ ದೊರೆತಿರುವುದು ಶ್ಲಾಘ ನೀಯ. ಮೈಸೂರು ನಗರದಲ್ಲಿ 8 ಲಕ್ಷ ನಿವಾಸಿಗಳಿದ್ದು, ಮೇಯರ್ ಅವರ ಜವಾ ಬ್ದಾರಿ ಹೆಚ್ಚಿದೆ. ದೇಶದ ಸುಂದರ ನಗರ ವಾಗಿರುವ ಮೈಸೂರಿಗೆ ಐತಿಹಾಸಿಕ, ಪಾರಂ ಪರಿಕ, ಸಾಂಸ್ಕøತಿಕ ಹಿನ್ನೆಲೆಯಿದೆ. ಪ್ರವಾ ಸೋದ್ಯಮ, ಶಿಕ್ಷಣ, ಯೋಗ, ಕೈಗಾರಿ ಕೋದ್ಯಮ, ದಸರಾ ನಗರದ ಪ್ರಮುಖ ಆಕರ್ಷಣೆಯಾಗಿದೆ. ಈ ಎಲ್ಲಾ ವಿಶೇ ಷತೆಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ತಮ್ಮ ಅಧಿಕಾರವನ್ನು ಯಶಸ್ವಿಯಾಗಿ ನಿಭಾಯಿಸ ಬೇಕೆಂದು ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಮಾಜಿ ಸಚಿವ ಆತ್ಮಾನಂದ, ಪಾಲಿಕೆ ಸದಸ್ಯ ಲೋಕೇಶ್ ಪಿಯಾ, ಮಾಜಿ ಮೇಯರ್‍ಗಳಾದ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಮೋದಾಮಣಿ, ಟಿ.ಬಿ.ಚಿಕ್ಕಣ್ಣ, ಮುಖಂಡರಾದ ಬ್ಯಾಂಕ್ ಪುಟ್ಟಸ್ವಾಮಿ, ಚಂದ್ರು, ಡೈರಿ ವೆಂಕಟೇಶ್, ಈಶ್ವರ್ ಚಕ್ಕಡಿ, ವಿಶ್ವ, ವೀಣಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Translate »