ಮೈಸೂರು

ಪ್ರಜಾಪ್ರಭುತ್ವದ 4 ಅಂಗಗಳು ಭ್ರಷ್ಟಾಚಾರದಿಂದ ಕೂಡಿವೆ
ಮೈಸೂರು

ಪ್ರಜಾಪ್ರಭುತ್ವದ 4 ಅಂಗಗಳು ಭ್ರಷ್ಟಾಚಾರದಿಂದ ಕೂಡಿವೆ

November 18, 2018

ಮೈಸೂರು:  ಪ್ರಜಾಪ್ರಭುತ್ವದ ನಾಲ್ಕು ಆಧಾರ ಸ್ತಂಭಗಳೆಸಿರುವ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಮತ್ತು ಪತ್ರಿಕಾಂಗ ವ್ಯವಸ್ಥೆಗಳು ಭ್ರಷ್ಟಾ ಚಾರದಿಂದ ತುಂಬಿ ಹೋಗಿವೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿ ನಲ್ಲಿ ಏರ್ಪಡಿಸಿದ್ದ ಭಾರತದಲ್ಲಿ `ಭ್ರಷ್ಟಾಚಾರ ತಡೆಗಟ್ಟುವಲ್ಲಿ ವಿದ್ಯಾರ್ಥಿಗಳ ಪಾತ್ರ’ ಕುರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ರಾಜಕಾರಣಿಗಳು, ಅಧಿಕಾರಿಗಳಿಗೆ ಹಣ ಗಳಿಕೆಯಲ್ಲಿ ತೃಪ್ತಿಯೇ ಇಲ್ಲ ಎನ್ನುವಷ್ಟು ಭ್ರಷ್ಟರಾಗಿದ್ದಾರೆ ಎಂಬುದಕ್ಕೆ ಸಾಕಷ್ಟು ನಿದರ್ಶನಗಳಿವೆ ಎಂದು ತಿಳಿಸಿದರು. ಹಿಂದೆ ಪಾಶ್ಚಾತ್ಯರ…

ಖಾದಿ ಉತ್ಸವದಲ್ಲಿ ತರಾವರಿ ವಸ್ತ್ರ ವೈಭವ
ಮೈಸೂರು

ಖಾದಿ ಉತ್ಸವದಲ್ಲಿ ತರಾವರಿ ವಸ್ತ್ರ ವೈಭವ

November 18, 2018

ಮೈಸೂರು:  ಮೈಸೂರಿನ ಜೆಕೆ ಮೈದಾನದಲ್ಲಿ ಹಮ್ಮಿಕೊಂಡಿ ರುವ ಖಾದಿ ಉತ್ಸವದಲ್ಲಿ ಬಗೆಬಗೆಯ ಖಾದಿ ಉಡುಪು ಸೇರಿದಂತೆ ತರಾವರಿ ಖಾದಿ ಬಟ್ಟೆಗಳ ಖರೀದಿ ಜೋರಾಗಿದ್ದು, ಉತ್ತಮ ಪ್ರಕ್ರಿಯೆ ವ್ಯಕ್ತವಾಗಿದೆ. ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಮಂಡಳಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಜಂಟಿ ಆಶ್ರಯದಲ್ಲಿ ಏರ್ಪಡಿಸಿರುವ ಈ ಖಾದಿ ಉತ್ಸವದಲ್ಲಿ ಖಾದಿಯ ವೈವಿಧ್ಯಮಯ ಲೋಕವೇ ಅನಾವರಣ ಗೊಂಡಿದೆ. ನೇಯ್ದ ಶುದ್ಧ ಖಾದಿಯ ಜುಬ್ಬ-ಪೈಜಾಮ, ಚೂಡಿದಾರ್‍ಗಳು, ದುಪ್ಪಟ್ಟಗಳು ವಿವಿಧ ವಿನ್ಯಾಸದಲ್ಲಿ ಇಲ್ಲಿನ ಮಳಿಗೆಗಳಲ್ಲಿ ಆಕರ್ಷಿಸುತ್ತಿವೆ. ಟವೆಲ್, ಕರವಸ್ತ್ರ,…

ಕುರುಬಾರಹಳ್ಳಿ ಸರ್ವೆ ನಂ.4ರ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯ ಜಾಗದಲ್ಲಿ ಡೆಬ್ರಿಸ್ ತೆರವು ಕಾರ್ಯ
ಮೈಸೂರು

ಕುರುಬಾರಹಳ್ಳಿ ಸರ್ವೆ ನಂ.4ರ ಲಲಿತ ಮಹಲ್ ಹೆಲಿಪ್ಯಾಡ್ ಬಳಿಯ ಜಾಗದಲ್ಲಿ ಡೆಬ್ರಿಸ್ ತೆರವು ಕಾರ್ಯ

November 18, 2018

ಮೈಸೂರು: 2015ರಲ್ಲಿ ಜಿಲ್ಲಾಧಿಕಾರಿ ಗಳು ‘ಬಿ’ ಖರಾಬು ಎಂದು ಆದೇಶಿಸಿರುವ ವಿವಾದಿತ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂಬರ್ 4ರ ಬ್ಲಾಕ್ 5ಎ ಮತ್ತು ಸಿ ಪ್ರದೇಶದಲ್ಲಿ ಶೇಖರಣೆಯಾಗಿರುವ ಡೆಬ್ರಿಸ್(ಕಟ್ಟಡ ತ್ಯಾಜ್ಯ) ಅನ್ನು ಖಾಸಗಿ ವ್ಯಕ್ತಿಯೊಬ್ಬರು ತೆರವುಗೊಳಿಸುವ ಕಾರ್ಯ ಆರಂಭಿಸಿದ್ದಾರೆ. ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್ ಬಳಿ ಲಲಿತಾ ದ್ರಿಪುರಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ರುವ ಸಿ ಬ್ಲಾಕ್‍ನಿಂದ ಪಕ್ಕದ ಎ ಬ್ಲಾಕಿನ ತಗ್ಗು ಪ್ರದೇಶಕ್ಕೆ ಕಟ್ಟಡ ತ್ಯಾಜ್ಯವನ್ನು ಜೆಸಿಬಿ ಬಳಸಿ ಟ್ರಾಕ್ಟರ್ ಮೂಲಕ ಸ್ಥಳಾಂತರಿಸಲಾಗುತ್ತಿದೆ. ಸಾರ್ವಜನಿಕರು ರಾತ್ರಿ ವೇಳೆ…

ವನ್ಯಜೀವಿ ನೆಲೆ ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷ
ಮೈಸೂರು

ವನ್ಯಜೀವಿ ನೆಲೆ ಕಡಿಮೆಯಾಗುತ್ತಿರುವುದರಿಂದ ಮಾನವ-ಪ್ರಾಣಿ ಸಂಘರ್ಷ

November 18, 2018

ಮೈಸೂರು: ವನ್ಯ ಜೀವಿಗಳು ವಾಸಿಸು ತ್ತಿರುವ ಅರಣ್ಯ ಪ್ರದೇಶ ದಿನೇ ದಿನೆ ಕಡಿಮೆಯಾಗು ತ್ತಿರುವುದು ಮಾನವ-ಪ್ರಾಣಿ ಸಂಘರ್ಷಕ್ಕೆ ಪ್ರಮುಖ ಕಾರಣ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿದ್ರಾ ಮಪ್ಪ ಚೆಲ್ಕಾಪುರೆ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಮೈಸೂರು ರೌಂಡ್ ಟೇಬಲ್-21 ಮತ್ತು ಮೈಸೂರು ಲೇಡಿಸ್ ಸರ್ಕಲ್-9 ಸಂಯುಕ್ತಾಶ್ರಯದಲ್ಲಿ ಮೈಸೂರಿನ ಗೋಕುಲಂನಲ್ಲಿರುವ ಮೈಸೂರು ಪಶ್ಚಿಮ ಲಯನ್ಸ್ ಸೇವಾ ನಿಕೇತನ ಶಾಲಾ ಸಭಾಂಗಣದಲ್ಲಿ ಏರ್ಪಡಿಸಿದ್ದ `ಮಾನವ ಪ್ರಾಣಿ ಸಂಘರ್ಷ: ಶಾಂತಿಯುತ ಸಹಬಾಳ್ವೆ’ (Human-Animal Conflict : Finding Peaceful Co-Existence) ಕುರಿತ ಟ್ಯಾಲೆಂಟ್ಸ್…

ಜೆಎಸ್‍ಎಸ್ ವಿಜ್ಞಾನ-ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವ
ಮೈಸೂರು

ಜೆಎಸ್‍ಎಸ್ ವಿಜ್ಞಾನ-ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿಕೋತ್ಸವ

November 18, 2018

ಮೈಸೂರು:  ಮೈಸೂರಿನ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವ ವಿದ್ಯಾನಿಲಯದ ಮೊಟ್ಟ ಮೊದಲ ಘಟಿಕೋತ್ಸವ ಶನಿವಾರ ಮೈಸೂರಿನ ವಿದ್ಯಾ ಸಂಸ್ಥೆಯ ಆವರಣದಲ್ಲಿ ನಡೆದು 2017-18ನೇ ಸಾಲಿನಲ್ಲಿ 149 ಎಂ.ಟೆಕ್, 96 ಎಂಬಿಎ ಹಾಗೂ 24 ಕಾರ್ಪೊ ರೇಟ್ ಫೈನಾನ್ಸ್ ವಿದ್ಯಾರ್ಥಿಗಳು ಪದವಿ ಪ್ರಮಾಣಪತ್ರ ಗಳನ್ನು ಪಡೆದುಕೊಂಡರು. ಪ್ರತಿ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಗಳಿಸಿದ 13 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪದಕಗಳನ್ನು ಮತ್ತು 4 ದತ್ತಿ ಬಹುಮಾನಗಳನ್ನು ವಿತರಿಸಲಾಯಿತು. ಘಟಿಕೋತ್ಸವದ ಪ್ರಮುಖ ಅತಿಥಿ ಭಾರತ ಸರ್ಕಾರದ ಪ್ರಸಾರ ಭಾರತಿ…

ಉತ್ತರಪ್ರದೇಶ ಆಧುನಿಕ ಸತಿ ಸಾವಿತ್ರಿಯರ ಆಘಾತಕಾರಿ ಕಥೆ!
ಮೈಸೂರು

ಉತ್ತರಪ್ರದೇಶ ಆಧುನಿಕ ಸತಿ ಸಾವಿತ್ರಿಯರ ಆಘಾತಕಾರಿ ಕಥೆ!

November 18, 2018

ಲಖನೌ:  ಕಾಲ ಬದಲಾಗಿದೆ. ಯಮನೊಡನೆ ಹೋರಾಡಿ ಸತ್ತ ಪತಿಯನ್ನು ಬದುಕಿಸಿಕೊಂಡ ಸತ್ಯವಾನ್ ಸಾವಿತ್ರಿಯ ನಾಡಾದ ಭರತ ಖಂಡದಲ್ಲಿ, ಸರ್ಕಾರದಿಂದ ಪಿಂಚಣಿ ಹಣಕ್ಕಾಗಿ ಬದುಕಿರುವ ಗಂಡನನ್ನೇ ದಾಖಲೆಗಳಲ್ಲಿ `ಸಾಯಿಸಿ’ದ ಪತ್ನಿಯರೂ ಇದ್ದಾರೆ. ಇದು ಆಧುನಿಕ ಕಾಲದ ಸತಿ ಸಾವಿತ್ರಿಯರ ಆಘಾತಕಾರಿ ಕಥೆ! ಅಲ್ಪಾಯು ಸತ್ಯವಾನನನ್ನು ಸಾವಿತ್ರಿ ವರಿಸುತ್ತಾಳೆ. ಮದುವೆಯ ಬೆನ್ನಿಗೇ ಪತಿ ಸಾಯುತ್ತಾನೆ. ಯಮಧರ್ಮ ಸತ್ಯವಾನನ ಪ್ರಾಣವನ್ನು ಸೆಳೆದೊಯ್ಯುವಾಗ ಬಿಡದೇ ಹಿಂಬಾಲಿಸುವ ಸತಿ ಸಾವಿತ್ರಿ, ಕಾಲಪುರುಷನೊಡನೆ ಸುದೀರ್ಘ ವಾದ ನಡೆಸಿ, ಕೊನೆಗೂ ಗೆದ್ದು ಪತಿಯನ್ನು ಬದುಕಿಸಿಕೊಳ್ಳುತ್ತಾಳೆ. ಇದು ಸತ್ಯವಾನ್…

ಅಂತಾರಾಷ್ಟ್ರೀಯ ಪೇಟೆಂಟ್‍ನಲ್ಲಿ ತೀರಾ ಹಿಂದುಳಿದ ಭಾರತ
ಮೈಸೂರು

ಅಂತಾರಾಷ್ಟ್ರೀಯ ಪೇಟೆಂಟ್‍ನಲ್ಲಿ ತೀರಾ ಹಿಂದುಳಿದ ಭಾರತ

November 18, 2018

ಮೈಸೂರು: ಅಂತಾರಾಷ್ಟ್ರೀಯ ಪೇಟೆಂಟ್‍ಗೆ ಅರ್ಜಿ ಸಲ್ಲಿಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತ ತೀರಾ ಹಿಂದುಳಿದಿದೆ ಎಂಬುದು ನಿರಾಶಾದಾಯಕ ವಿಚಾರ ಎಂದು ಭಾರತ ಸರ್ಕಾರದ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ ಡಾ.ಎ.ಸೂರ್ಯಪ್ರಕಾಶ್ ಇಂದಿಲ್ಲಿ ಬೇಸರ ವ್ಯಕ್ತಪಡಿಸಿದರು. ಮೈಸೂರಿನ ಎಸ್‍ಜೆಸಿಇ ಆವರಣದಲ್ಲಿ ಶನಿವಾರ ಜೆಎಸ್‍ಎಸ್ ವಿಜ್ಞಾನ ಮತ್ತು ತಾಂತ್ರಿಕ ವಿಶ್ವವಿದ್ಯಾನಿಲಯದ ಪ್ರಥಮ ಘಟಿ ಕೋತ್ಸವ ಭಾಷಣ ಮಾಡಿದ ಅವರು, 2017ರಲ್ಲಿ ವಲ್ರ್ಡ್ ಇಂಟಲೆಕ್ಚುಯಲ್ ಪ್ರಾಪರ್ಟಿ ಆರ್ಗನೈಸೇಷನ್ (ಡಬ್ಲುಐಪಿಒ) ಪ್ರಕಾರ, ಜಗತ್ತಿನಾದ್ಯಂತ ಸಂಶೋಧಕರು ಪೇಟೆಂಟ್ ಸಹಕಾರ ಒಪ್ಪಂದದ ಅಡಿಯಲ್ಲಿ 2,43,500 ಅಂತಾರಾಷ್ಟ್ರೀಯ ಪೇಟೆಂಟ್…

ಹೆಸರಾಂತ ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ  ಅವರಿಗೆ “ಮೌಲ್ಯಯುತ ನಾಗರಿಕ ಪ್ರಶಸ್ತಿ’ ಪ್ರದಾನ
ಮೈಸೂರು

ಹೆಸರಾಂತ ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ  ಅವರಿಗೆ “ಮೌಲ್ಯಯುತ ನಾಗರಿಕ ಪ್ರಶಸ್ತಿ’ ಪ್ರದಾನ

November 18, 2018

ಮೈಸೂರು: ಮೈಸೂರಿನ ಖ್ಯಾತ ಉದ್ಯಮಿ ಡಾ.ಎಂ.ಜಗನ್ನಾಥ್ ಶೆಣೈ ಅವರಿಗೆ `ಮೌಲ್ಯಯುತ ನಾಗರಿಕ ಪ್ರಶಸ್ತಿ’ ಅನ್ನು ಮೈಸೂರು ಲಿಟರರಿ ಫೋರಂ ಚಾರಿ ಟಬಲ್ ಟ್ರಸ್ಟ್ ಪರವಾಗಿ `ಮೈಸೂರು ಮಿತ್ರ’ ಹಾಗೂ `ಸ್ಟಾರ್ ಆಫ್ ಮೈಸೂರ್’ ಪ್ರಧಾನ ಸಂಪಾದಕರಾದ ಕೆ.ಬಿ.ಗಣಪತಿ ಅವರು ಇಂದು ಪ್ರಧಾನ ಮಾಡಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದ ಕೆ.ಬಿ.ಗಣಪತಿ ಅವರು, ಡಾ.ಜಗನ್ನಾಥ್ ಶೆಣೈ ಅವರ ಸಾಮಾಜಿಕ ಸೇವೆ ಶ್ಲಾಘನೀಯ. ಶೆಣೈ ಅವರ ಸಾಮಾಜಿಕ ಕೆಲಸಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ….

ರಸ್ತೆ ಸುರಕ್ಷತೆ ಸಂಬಂಧ ಆರ್‍ಬಿಐ ಸಿಐಎಸ್‍ಎಫ್ ಬೈಕ್ ರ್ಯಾಲಿ
ಮೈಸೂರು

ರಸ್ತೆ ಸುರಕ್ಷತೆ ಸಂಬಂಧ ಆರ್‍ಬಿಐ ಸಿಐಎಸ್‍ಎಫ್ ಬೈಕ್ ರ್ಯಾಲಿ

November 18, 2018

ಮೈಸೂರು:  ಮೈಸೂರಿನ ಆರ್‍ಬಿಐ ನೋಟು ಮುದ್ರಣಾಲಯದ ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್‍ಎಫ್) ವಿಭಾಗದ ಪೊಲೀಸರು ಬೈಕ್ ರ್ಯಾಲಿ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು. ಬಿಆರ್‍ಬಿಎನ್‍ಎಂಪಿಎಲ್‍ನ ಸುವರ್ಣ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ಆಯೋಜಿಸಿದ್ದ ರಸ್ತೆ ಸುರಕ್ಷತಾ ಜಾಗೃತ ಬೈಕ್ ರ್ಯಾಲಿಗೆ ಸಿಐಎಸ್‍ಎಫ್ ವಿಭಾಗದ ಸಹಾಯಕ ಕಮಾಂಡೆಂಟ್ ಸಂಜಯ್ ಕುಮಾರ್ ಚಾಲನೆ ನೀಡಿದರು. ಆರ್‍ಬಿಐ ಆವರಣದಿಂದ 40ಕ್ಕೂ ಹೆಚ್ಚು ಬೈಕ್‍ಗಳಲ್ಲಿ 80ಕ್ಕೂ ಹೆಚ್ಚು ಮಂದಿ ಪೊಲೀಸರು ರಸ್ತೆ ಸುರಕ್ಷತಾ ನಾಮ ಫಲಕಗಳೊಂದಿಗೆ ಹೊರಟ…

ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ `ಆಯುರ್ ದರ್ಶನ’
ಮೈಸೂರು

ಮೈಸೂರು ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ `ಆಯುರ್ ದರ್ಶನ’

November 18, 2018

14 ವಿಭಾಗಗಳ ಗಿಡಮೂಲಿಕೆ ಔಷಧ, ಆಯುರ್ವೇದ ಚಿಕಿತ್ಸೆ ಮೂಲಕ ರೋಗಗಳ ಗುಣಪಡಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೈಸೂರು:  ಸರ್ಕಾರಿ ಆಯುರ್ವೇದ ಮೆಡಿಕಲ್ ಕಾಲೇಜು ಆವರಣ ದಲ್ಲಿ ರೋಗಗಳ ಗುಣ ಪಡಿಸುವ ಹಾಗೂ ಆಯುರ್ವೇದ ಚಿಕಿತ್ಸೆಯ ಉಪಯೋಗ ಕುರಿತ ವಸ್ತುಪ್ರದರ್ಶನ ಆರಂಭವಾಗಿದೆ. ರಾಷ್ಟ್ರೀಯ ಆಯುರ್ವೇದ ಸಪ್ತಾಹದ ಅಂಗವಾಗಿ ಇಂದು ಆರಂಭವಾದ `ಆಯುರ್ ದರ್ಶನ’ ಮುಕ್ತ ದಿನ ಹಾಗೂ ವಸ್ತು ಪ್ರದರ್ಶನವನ್ನು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ ಉದ್ಘಾಟಿಸಿದರು. ಕಾಲೇಜಿನ ಮೂರು ಮಹಡಿಗಳ 10 ಕೊಠಡಿಗಳು ಹಾಗೂ…

1 1,276 1,277 1,278 1,279 1,280 1,611
Translate »