ಮೈಸೂರು

ಸರ್ವಾಧಿಕಾರ ಧೋರಣೆಯಿಂದ ಹುಣಸೂರು ನಗರ ಸಭೆಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ವಿಶ್ವನಾಥ್ ಆರೋಪ
ಮೈಸೂರು

ಸರ್ವಾಧಿಕಾರ ಧೋರಣೆಯಿಂದ ಹುಣಸೂರು ನಗರ ಸಭೆಯಲ್ಲಿ ಅಧಿಕಾರ ಕಳೆದುಕೊಂಡ ಕಾಂಗ್ರೆಸ್: ವಿಶ್ವನಾಥ್ ಆರೋಪ

October 8, 2018

ಹುಣಸೂರು: ಇಲ್ಲಿನ ನಗರಸಭೆಯಲ್ಲಿ ಕಾಂಗ್ರೆಸ್‍ಗೆ ಬಹುಮತ ವಿದ್ದರೂ, ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ವಿಫಲವಾಗಿದ್ದಾರೆ. ಇದಕ್ಕೆ ಅವರ ಸರ್ವಾಧಿಕಾರವೇ ಕಾರಣವಾಗಿದೆ ಎಂದು ಶಾಸಕ ಅಡಗೂರು ಎಚ್.ವಿಶ್ವನಾಥ್ ಹೇಳಿದರು. ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಮಾಜದಲ್ಲಿ ಯಾವುದೇ ಒಂದು ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ, ಆ ಸಮುದಾಯಕ್ಕೆ ರಾಜಕೀಯ ಶಕ್ತಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜೆಡಿಎಸ್ ಸಮಾಜದ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದ ಸಮಾಜಗಳಿಗೆ ರಾಜಕೀಯ ಶಕ್ತಿ ನೀಡಿದೆ ಎಂದರು. ಪಕ್ಷ ಸಮಾಜದ ಅತ್ಯಂತ ಸಣ್ಣಕೋಮಿಗೆ…

ಅಂಬೇಡ್ಕರ್, ಕನಕದಾಸರ ವೈಚಾರಿಕ ಚಿಂತನೆ ಇಂದಿಗೂ ಪ್ರಸ್ತುತ: ಪ್ರೊ.ಜೆ.ಸೋಮಶೇಖರ್
ಮೈಸೂರು

ಅಂಬೇಡ್ಕರ್, ಕನಕದಾಸರ ವೈಚಾರಿಕ ಚಿಂತನೆ ಇಂದಿಗೂ ಪ್ರಸ್ತುತ: ಪ್ರೊ.ಜೆ.ಸೋಮಶೇಖರ್

October 8, 2018

ನಂಜನಗೂಡು:  ಮನು ಕುಲದ ಉದ್ಧಾರಕ್ಕೆ ಅಗತ್ಯವಾದ ನೀತಿ ಸಂಗತಿಗಳನ್ನು ಕನಕದಾಸರು ತಮ್ಮ ಕೀರ್ತನೆ ಗಳ ಮೂಲಕ ಕಟ್ಟಿಕೊಟ್ಟರೆ, ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನ ದಲ್ಲಿ ನಾಗರಿಕ ಹಕ್ಕುಗಳನ್ನು ಅಳವಡಿಸುವ ಮೂಲಕ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾದರು ಎಂದು ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಹೇಳಿದರು. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ನಡೆದ ‘ಸಂತಕವಿ ಕನಕದಾಸರು ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ತಾತ್ವಿಕ ನಿಲುವುಗಳು’ ಕುರಿತ…

ವಿದ್ಯುತ್ ಕಂಬದ ಸುತ್ತಲಿನ ಗಿಡಗಂಟಿ ತೆರವಿಗೆ ಆಗ್ರಹ
ಮೈಸೂರು

ವಿದ್ಯುತ್ ಕಂಬದ ಸುತ್ತಲಿನ ಗಿಡಗಂಟಿ ತೆರವಿಗೆ ಆಗ್ರಹ

October 8, 2018

ಬೈಲಕುಪ್ಪೆ:  ಟ್ರಾನ್ಸ್‍ಫಾರ್ಮರ್ ಅಳವಡಿಸಿರುವ ವಿದ್ಯುತ್ ಕಂಬದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದರೂ ಸಂಬಂಧ ಪಟ್ಟ ಅಧಿಕಾರಿಗಳು ಕಂಡರೂ ಕಾಣದಂತೆ ತಿರುಗಾಡುತ್ತಿದ್ದಾರೆ ಎಂದು ಗೆರೋಸಿಯಾ ಕಾಲೋನಿಯ ಮುಖಂಡ ಧರ್ಮ ತಿಳಿಸಿದ್ದಾರೆ. ಪಿರಿಯಾಪಟ್ಟಣ ತಾಲೂಕು ಕೊಪ್ಪ ಬಿ.ಎಂ.ರಸ್ತೆಯಿಂದ ಗೆರೋಸಿಯಾ ಕಾಲೋನಿಯ ಮಾರ್ಗ ಚೌಡೇಶ್ವರಿ ದೇವಸ್ಥಾನಕ್ಕೆ ಹೋಗುವ ಮುಖ್ಯರಸ್ತೆಬದಿಯಲ್ಲಿ ಅಳವಡಿಸಲಾಗಿದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಹಾಗೂ ಅದೇ ಮಾರ್ಗ ಮತ್ತೊಂದು ವಿದ್ಯುತ್ ಟ್ರಾನ್ಸ್ ಫಾರ್ಮರ್ ಕಂಬದ ಸುತ್ತ ಗಿಡಗಂಟಿಗಳು ಬೆಳೆದು ನಿಂತಿದ್ದು, ಟ್ರಾನ್ಸ್‍ಫಾರ್ಮರ್ ತಂತಿಗೆ ಗಿಡಗಳು ತಗಲುತ್ತಿದೆ. ದಿನಕ್ಕೆ ಹಲವು ಬಾರಿ…

ಗ್ರಾಹಕರಿಲ್ಲದೆ ನಡೆದ ಸೆಸ್ಕಾಂ ಜನಸಂಪರ್ಕ ಸಭೆ
ಮೈಸೂರು

ಗ್ರಾಹಕರಿಲ್ಲದೆ ನಡೆದ ಸೆಸ್ಕಾಂ ಜನಸಂಪರ್ಕ ಸಭೆ

October 8, 2018

ರೈತ ಮುಖಂಡರಿಂದ ಸಭೆ ಬಹಿಷ್ಕಾರ, 9 ದೂರು ದಾಖಲಾಗಿರುವ ಬಗ್ಗೆ ಅಧಿಕಾರಿಗಳ ಮಾಹಿತಿ ತಿ.ನರಸೀಪುರ: ಪಟ್ಟಣದ ಸೆಸ್ಕಾಂ ಇಲಾಖೆ ಆವರಣದಲ್ಲಿ ಮೈಸೂರು ವೃತ್ತದ ಅಧೀಕ್ಷಕ ಇಂಜಿನಿಯರ್ ಅಧ್ಯಕ್ಷತೆ ಯಲ್ಲಿ ನಡೆದ ಉಪ ವಿಭಾಗ ಮಟ್ಟದ ಜನ ಸಂಪರ್ಕ ಸಭೆಗೆ ಗ್ರಾಹಕರ ಕೊರತೆ ಎದುರಾಯಿತು. ಕಚೇರಿ ಆವರಣದಲ್ಲಿ ಮಧ್ಯಾಹ್ನ 3 ಗಂಟೆಗೆ ಹಮ್ಮಿಕೊಳ್ಳಲಾಗಿದ್ದ, ಅಧಿಕಾರಿ ಗಳು ಗ್ರಾಹಕರಿಗಾಗಿ ಕಾದು ಕುಳಿತ ಪ್ರಸಂಗ ನಡೆಯಿತು. ಈ ವೇಳೆ ಸಭೆಗೆ ಆಗಮಿಸಿದ್ದ ರೈತ ಮುಖಂಡರು, ಗ್ರಾಹಕರಿಗೆ ಯಾವುದೇ ಮಾಹಿತಿ ನೀಡದೇ ಅಧಿಕಾರಿಗಳು…

ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾದಲ್ಲಿ ನವರಾತ್ರಿ ಪೂಜೆ
ಮೈಸೂರು

ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾದಲ್ಲಿ ನವರಾತ್ರಿ ಪೂಜೆ

October 8, 2018

ಮೈಸೂರು: ಮೈಸೂರು ಚಾಮರಾಜ ಮೊಹಲ್ಲಾ ದಲ್ಲಿರುವ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಅ.10ರಿಂದ 19ರವರೆಗೆ ಶರನ್ನವರಾತ್ರಿ ಪೂಜಾ ಮಹೋತ್ಸವವನ್ನು ಏರ್ಪಡಿಸಲಾಗಿದೆ. ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾ ರಾಜರ ದಿವ್ಯ ಸಾನಿಧ್ಯದಲ್ಲಿ ಪ್ರತಿನಿತ್ಯ ಬೆಳಿಗ್ಗೆಯಿಂದಲೇ ಗಾಯತ್ರಿ ಹೋಮ, ಕನಕ ದುರ್ಗಾ ಹೋಮ, ಶ್ರೀಸೂಕ್ತ ಹೋಮ, ಲಲಿತಾ ಹೋಮ, ವನದುರ್ಗಾ ಹೋಮ, ಸರಸ್ವತಿ ಹೋಮ, ಲಕ್ಷ್ಮೀನಾರಾಯಣ ಹೋಮ, ದುರ್ಗಾ ಹೋಮ, ಚಂಡಿ ಹೋಮ, ಧನ್ವಂತರಿ ಹೋಮಗಳು ಸೀತಾವಿಲಾಸ ರಸ್ತೆ ಕಂಚಿ ಮಠದ ಶ್ರೀ…

ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ದೊರೆತಿದ್ದು ತರಗತಿಯಲ್ಲಿ ರ‍್ಯಾಂಕ್ ಪಡೆದಷ್ಟು ಸಂತಸ ತಂದಿದೆ
ಮೈಸೂರು

ನಾಡಹಬ್ಬ ದಸರಾ ಉದ್ಘಾಟನೆ ಅವಕಾಶ ದೊರೆತಿದ್ದು ತರಗತಿಯಲ್ಲಿ ರ‍್ಯಾಂಕ್ ಪಡೆದಷ್ಟು ಸಂತಸ ತಂದಿದೆ

October 7, 2018

ಬೆಂಗಳೂರು: ನಾಡಹಬ್ಬ ದಸರಾ ಉದ್ಘಾಟನೆಗೆ ತಮಗೆ ಅವಕಾಶ ದೊರೆತಿರುವುದು ತರಗತಿಯಲ್ಲಿ ಮೊದಲನೇ ರ‍್ಯಾಂಕ್ ಪಡೆದಷ್ಟು ಸಂತಸವಾಗಿದೆ ಎಂದು ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ನಾರಾಯಣಮೂರ್ತಿ ಇಂದಿಲ್ಲಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರು ಪ್ರೆಸ್‍ಕ್ಲಬ್ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾಡಹಬ್ಬದ ಉದ್ಘಾಟನೆ ಅವಕಾಶ ದೊರೆಯುತ್ತದೆ ಎಂದು ಕನಸಿನಲ್ಲೂ ಕಂಡಿರಲಿಲ್ಲ ಎಂದರು. ದೇವರ ದಯೆಯಿಂದ ದಸರಾ ಉದ್ಘಾಟನೆ ಭಾಗ್ಯ ದೊರೆತಿದೆ, ವಿಶ್ವವಿದ್ಯಾಲಯದ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವುದು ಮತ್ತು ದಸರಾ ಉದ್ಘಾಟನೆ ಅವಕಾಶ ಎರಡೂ ಹೆಮ್ಮೆಯ ವಿಷಯ ಎಂದು ಬಣ್ಣಿಸಿದರು. ಪ್ರತಿ ರಾಜ್ಯಕ್ಕೆ…

ಮೈಸೂರು ಜಿಲ್ಲಾಡಳಿತದ ಮಾತುಕತೆ ವಿಫಲ
ಮೈಸೂರು

ಮೈಸೂರು ಜಿಲ್ಲಾಡಳಿತದ ಮಾತುಕತೆ ವಿಫಲ

October 7, 2018

ಮೈಸೂರು:  ಮುಷ್ಕರ ನಿರತ ಪೌರ ಕಾರ್ಮಿಕರೊಂದಿಗೆ ಜಿಲ್ಲಾಡಳಿತ ನಡೆಸಿದ ಮಾತುಕತೆ ವಿಫಲವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮುಖ್ಯ ಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರೇ ದೂರವಾಣಿ ಮೂಲಕ ಭರವಸೆ ನೀಡಿದರೂ ಪ್ರತಿಭಟನೆ ಕೈಬಿಡಲು ಒಪ್ಪದ ಪೌರ ಕಾರ್ಮಿಕರ ಮುಖಂಡರು, ಈ ಸಂಬಂಧ ನಾಳೆ(ಅ.7) ಒಮ್ಮತದ ತೀರ್ಮಾನಕ್ಕೆ ಬರಲು ನಿರ್ಧರಿಸಿದ್ದಾರೆ. ಖಾಯಂಮಾತಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮೈಸೂರು ನಗರ ಪಾಲಿಕೆ ಪೌರಕಾರ್ಮಿಕರು ಕಳೆದ ನಾಲ್ಕು ದಿನಗಳಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಶನಿವಾರ ಉನ್ನತ…

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ
ಮೈಸೂರು

ದಸರಾ ಉತ್ಸವಕ್ಕೆ ರಾಜಮಾತೆ ಪ್ರಮೋದಾದೇವಿ ಒಡೆಯರ್‍ಗೆ ಜಿಲ್ಲಾಡಳಿತದಿಂದ ಅಧಿಕೃತ ಆಹ್ವಾನ

October 7, 2018

ಮೈಸೂರು:  ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಈ ಬಾರಿಯ ದಸರಾ ಮಹೋತ್ಸವಕ್ಕೆ ಜಿಲ್ಲಾಡಳಿತದಿಂದ ಶನಿ ವಾರ ಅಧಿಕೃತವಾಗಿ ಆಹ್ವಾನಿಸಲಾಯಿತು. ಮೈಸೂರು ಅರಮನೆಗೆ ಮೈಸೂರು ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಸಿ.ಪುಟ್ಟರಂಗಶೆಟ್ಟಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಅವರು ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರಿಗೆ ಶಾಲು ಹೊದಿಸಿ, ಫಲತಾಂಬೂಲ ನೀಡಿ ಆಹ್ವಾನಿಸಿದರು. ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್, ಪರಿಷತ್ ಸದಸ್ಯ ಧರ್ಮಸೇನಾ ಹಾಗೂ ಜಿಲ್ಲಾಧಿಕಾರಿ…

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‍ಘಡ, ರಾಜಾಸ್ಥಾನ, ಮಿಜೋರಾಂ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ
ಮೈಸೂರು

ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‍ಘಡ, ರಾಜಾಸ್ಥಾನ, ಮಿಜೋರಾಂ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ

October 7, 2018

ನವದೆಹಲಿ: ಕೇಂದ್ರ ಚುನಾ ವಣಾ ಆಯೋಗ ಮಧ್ಯ ಪ್ರದೇಶ, ಮಿಜೋ ರಾಂ, ರಾಜಾಸ್ಥಾನ, ತೆಲಂಗಾಣ ಹಾಗೂ ಛತ್ತೀಸ್‍ಗಢ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಶನಿವಾರ ಪ್ರಕಟಿಸಿದ್ದು, ಛತ್ತೀಸ್‍ಗಢ್‍ದಲ್ಲಿ ಎರಡು ಹಂತದಲ್ಲಿ ಹಾಗೂ ಇತರೆ ನಾಲ್ಕು ರಾಜ್ಯಗಳಲ್ಲಿ ಒಂದೇ ಹಂತದ ಮತದಾನ ನಡೆಯಲಿದೆ. ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿ ಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಅವರು, ಮಧ್ಯ ಪ್ರದೇಶ ಹಾಗೂ ಮಿಜೋ ರಾಂನಲ್ಲಿ ನವೆಂಬರ್ 28ಕ್ಕೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್ ಗಢದಲ್ಲಿ ನವೆಂಬರ್ 12…

ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ, ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ಕ್ಕೆ ಉಪ ಚುನಾವಣೆ
ಮೈಸೂರು

ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರ, ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್ 3ಕ್ಕೆ ಉಪ ಚುನಾವಣೆ

October 7, 2018

ಬೆಂಗಳೂರು: ಮಂಡ್ಯ, ಶಿವಮೊಗ್ಗ, ಬಳ್ಳಾರಿ ಲೋಕಸಭಾ ಕ್ಷೇತ್ರಗಳು, ರಾಮನಗರ ಮತ್ತು ಜಮಖಂಡಿ ವಿಧಾನಸಭಾ ಕ್ಷೇತ್ರಗಲಿಗೆ ನವೆಂಬರ್ 3ರಂದು ಉಪ ಚುನಾವಣೆ ಘೋಷಣೆಯಾಗಿದೆ. ಐದು ತಿಂಗಳ ಅವಧಿಗೆ ಮೂರು ಲೋಕಸಭಾ ಕ್ಷೇತ್ರಗಳ ಜನಪ್ರತಿನಿಧಿಗಳ ಆಯ್ಕೆಗೆ ಕೇಂದ್ರ ಚುನಾವಣಾ ಆಯೋಗ ಅವಕಾಶ ಮಾಡಿದ್ದರೆ, ಉಳಿದ ಎರಡು ವಿಧಾನಸಭಾ ಕ್ಷೇತ್ರಗಳ ಕಾಲಾವಧಿ 4 ವರ್ಷ 8 ತಿಂಗಳದ್ದಾಗಿರುತ್ತದೆ. ದೆಹಲಿಯಲ್ಲಿಂದು ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಒ.ಪಿ. ರಾವತ್ ಇತರ ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಜೊತೆಗೆ ಕರ್ನಾಟಕದಲ್ಲಿ ತೆರವಾಗಿದ್ದ ಕ್ಷೇತ್ರಗಳಿಗೂ ಚುನಾವಣಾ…

1 1,340 1,341 1,342 1,343 1,344 1,611
Translate »