ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾದಲ್ಲಿ ನವರಾತ್ರಿ ಪೂಜೆ
ಮೈಸೂರು

ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾದಲ್ಲಿ ನವರಾತ್ರಿ ಪೂಜೆ

October 8, 2018

ಮೈಸೂರು: ಮೈಸೂರು ಚಾಮರಾಜ ಮೊಹಲ್ಲಾ ದಲ್ಲಿರುವ ಸ್ವರ್ಣ ನೃಸಿಂಹ ದತ್ತ ಸಾಯಿ ಪೀಠಿಕಾ ಸೇವಾ ಟ್ರಸ್ಟ್ ಆಶ್ರಯದಲ್ಲಿ ಅ.10ರಿಂದ 19ರವರೆಗೆ ಶರನ್ನವರಾತ್ರಿ ಪೂಜಾ ಮಹೋತ್ಸವವನ್ನು ಏರ್ಪಡಿಸಲಾಗಿದೆ.

ಪರಮಪೂಜ್ಯ ಶ್ರೀ ಅರ್ಜುನ ಅವಧೂತ ಮಹಾ ರಾಜರ ದಿವ್ಯ ಸಾನಿಧ್ಯದಲ್ಲಿ ಪ್ರತಿನಿತ್ಯ ಬೆಳಿಗ್ಗೆಯಿಂದಲೇ ಗಾಯತ್ರಿ ಹೋಮ, ಕನಕ ದುರ್ಗಾ ಹೋಮ, ಶ್ರೀಸೂಕ್ತ ಹೋಮ, ಲಲಿತಾ ಹೋಮ, ವನದುರ್ಗಾ ಹೋಮ, ಸರಸ್ವತಿ ಹೋಮ, ಲಕ್ಷ್ಮೀನಾರಾಯಣ ಹೋಮ, ದುರ್ಗಾ ಹೋಮ, ಚಂಡಿ ಹೋಮ, ಧನ್ವಂತರಿ ಹೋಮಗಳು ಸೀತಾವಿಲಾಸ ರಸ್ತೆ ಕಂಚಿ ಮಠದ ಶ್ರೀ ಸೀತಾರಾಮಸ್ವಾಮಿ ದೇವಸ್ಥಾನದಲ್ಲಿ ನಡೆಯಲಿದೆ. ಅಲ್ಲದೆ ಪ್ರತಿದಿನ ಸಂಜೆ 7ರಿಂದ 9ಗಂಟೆವರೆಗೆ ಸೋನಾರ್ ಬೀದಿಯಲ್ಲಿರುವ ಗೀತಾ ನಿಕೇತನದಲ್ಲಿ ದುರ್ಗಾ ದೀಪ ನಮಸ್ಕಾರ ಹಾಗೂ ಪ್ರಸಾದ ವಿನಿಯೋಗ ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಮಾಹಿತಿಗಾಗಿ 7022713141, 9686017717 ಸಂಪರ್ಕಿಸಿ.

Translate »