ಬೆಂಗಳೂರು: ಮಾರುತಿ ಗೌಡ ಅಪಹರಣ ಹಾಗೂ ಮಾರಣಾಂತಿಕ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದುನಿಯಾ ವಿಜಿ ಹಾಗೂ ಸಹಚರರ ಜಾಮೀನು ಅರ್ಜಿ ವಿಚಾರಣೆ ತೀರ್ಪನ್ನು ಬುಧವಾರಕ್ಕೆ ಕೋರ್ಟ್ ಕಾಯ್ದಿರಿಸಿದೆ. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನಗರದ 8ನೇ ಎಸಿಎಂಎಂ ನ್ಯಾಯಾಲಯ, ಆದೇಶವನ್ನು ಸೆ.26ಕ್ಕೆ ಕಾಯ್ದಿರಿಸಿದ ಹಿನ್ನೆಲೆಯಲ್ಲಿ ದುನಿಯಾ ವಿಜಿ ಹಾಗೂ ಆಪ್ತರಿಗೆ ಸದ್ಯ ಜೈಲೇ ಗತಿ. ಅಪಹರಣ ಹಾಗೂ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಜಾಮೀನು ಕೋರಿ ವಿಜಯ್ ಹಾಗೂ ಆಪ್ತರು ಅರ್ಜಿ ಸಲ್ಲಿಸಿದ್ದರು. ಜಾಮೀನು ವಿರೋಧಿಸಿ…
ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಪರಿಷತ್ ಚುನಾವಣೆಗೂ ಅಭ್ಯರ್ಥಿಗಳ ಕಣಕ್ಕಿಳಿಸಲಾಗದಂತಹ ಪರಿಸ್ಥಿತಿ
September 25, 2018ಬೆಂಗಳೂರು: – ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಹೊಸ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ, ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದೆ ಭಾರೀ ಮುಖಭಂಗಕ್ಕೆ ಒಳಗಾಗಿದೆ. ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವುದರಿಂದ ನಾಮಪತ್ರ ಸಲ್ಲಿಸಿ ರುವ ಕಾಂಗ್ರೆಸ್‍ನ ನಜೀರ್ ಅಹಮದ್, ವೇಣುಗೋಪಾಲ್ ಹಾಗೂ ಜೆಡಿಎಸ್‍ನ ರಮೇಶ್ ಗೌಡ ಅವಿರೋಧ ಆಯ್ಕೆ ಖಚಿತ. ಸರ್ಕಾರ ರಚನೆಗಾಗಿ ಮೈತ್ರಿ ಪಕ್ಷಗಳ 18 ಶಾಸಕರನ್ನು ಸೆಳೆದಿದ್ದು, ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಪತನಗೊಳಿ…
ಸಾರ್ವಜನಿಕರು, ಪ್ರವಾಸಿಗರ ಸುರಕ್ಷತೆಗೆ ಮೈಸೂರು ನಗರ ಪೊಲೀಸರ `ಮೈ ಸುರಕ್ಷಾ ಆ್ಯಪ್’
September 25, 2018ಮೈಸೂರು: ಸಾರ್ವ ಜನಿಕರು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಮೈಸೂರು ನಗರ ಪೊಲೀಸರು `ಮೈ ಸುರಕ್ಷಾ ಆ್ಯಪ್’ ಎಂಬ ಮೊಬೈಲ್ ಅಪ್ಲಿ ಕೇಷನ್ ಅನ್ನು ಪ್ರಾರಂಭಿಸಿದ್ದಾರೆ. ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿ ಗರು ದೇಶ-ವಿದೇಶಗಳಿಂದ ಮೈಸೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಆಗಮಿ ಸುತ್ತಾರೆ. ಈ ವೇಳೆ ಪ್ರಯಾಣಕ್ಕಾಗಿ ಆಟೋ, ಕ್ಯಾಬ್‍ಗಳು ಹಾಗೂ ಇತರೆ ಖಾಸಗಿ ವಾಹನ ಗಳನ್ನು ಬಳಕೆ ಮಾಡುತ್ತಾರೆ. ಪ್ರಯಾಣದ ಸಮಯದಲ್ಲಿ ಸಾರ್ವಜನಿಕರು, ಪ್ರಯಾಣಿ ಕರು, ಚಾಲಕರ ಮೇಲೆ ದೌರ್ಜನ್ಯ, ಕಳ್ಳ ತನಗಳು ನಡೆದರೆ ಕೂಡಲೇ…
ದ್ರೋಣಾಚಾರ್ಯರಿಗೆ ನೂರಾರು ಶಿಷ್ಯರಾದರೆ ಮೈಸೂರು ತಾತಯ್ಯನವರಿಗೆ ಸಾವಿರಾರು ಶಿಷ್ಯರು
September 25, 2018ಮೈಸೂರು: ಸ್ವಂತ ಮನೆ ಯನ್ನು ದಾನ ಮಾಡಿದ ದಯಾಸಾಗರ ಎಂ.ವ್ಯೆಂಕಟಕೃಷ್ಣಯ್ಯ, ಗಾಂಧೀಜಿಯನ್ನು ಬಿಟ್ಟರೇ ಸರ್ವರನ್ನು ಸಮಾನತೆಯಲ್ಲಿ ಕಂಡ ವರು ಮೈಸೂರಿನ ತಾತಯ್ಯ ಎಂದು ಹಿರಿಯ ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ ಗುಣಗಾನ ಮಾಡಿದರು. ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾಜ ಸುಧಾರಕ ‘ಎಂ.ವೆಂಕಟಕೃಷ್ಣಯ್ಯ (ತಾತಯ್ಯ)’ ಒಂದು ನೆನಪು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ತಾತಯ್ಯ ಅವರೇ ನಿವೇನಾದರೂ…
ಮೈಸೂರು ಭಾಗದ ಕೈಗಾರಿಕಾ ಪ್ರದೇಶಗಳ ನಾನಾ ಬೇಡಿಕೆ ಸಂಬಂಧ ಸಣ್ಣ ಕೈಗಾರಿಕಾ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಸಲ್ಲಿಕೆ
September 25, 2018ಮೈಸೂರು: ಮೈಸೂರು ಕೈಗಾ ರಿಕಾ ಪಟ್ಟಣ ಪ್ರಾಧಿಕಾರ ರಚನೆ, ಮೈಸೂರು ರಫ್ತ್ತು ಕೇಂದ್ರ ನಿರ್ಮಾಣ, ಕೈಗಾರಿಕಾ ಘನ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಸುಮಾರು 20 ಅಂಶಗಳುಳ್ಳ ಮನವಿ ಪತ್ರವನ್ನು ಮೈಸೂರು ಕೈಗಾರಿಕೆಗಳ ಸಂಘದ ವತಿ ಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ನಿರ್ದೇಶನಾಲಯದ ಪ್ರಥಮ ಆಯುಕ್ತರಾದ ಗುಂಜನ್ ಕೃಷ್ಣ ಅವರಿಗೆ ಸಲ್ಲಿಸಲಾಗಿದೆ. ಬೆಳಗಾವಿಯಲ್ಲಿ ಸೋಮವಾರ ಕರ್ನಾ ಟಕ ಸಣ್ಣ ಕೈಗಾರಿಕೆಗಳ ಸಂಘದ ವತಿ ಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ…
ಭಾರೀ ಮಳೆ: ಹಿನಕಲ್‍ನ ವಿವಿಧೆಡೆ ಮನೆಗೆ ನುಗ್ಗಿದ ನೀರು
September 25, 2018ಮೈಸೂರು: ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಮೈಸೂರು ನಗರದ ಹೊರವಲಯದ ಹಿನಕಲ್‍ನ ಕೆಲ ಭಾಗ ಜಲಾವೃತಗೊಂಡು ಹಲವಾರು ಮನೆಗಳಿಗೆ ನೀರು ನುಗ್ಗಿದ್ದು, ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಇಲ್ಲಿಗೆ ಭೇಟಿ ನೀಡಿ, ಪರಿಶೀಲಿಸಿದರಲ್ಲದೆ, ಮಳೆ ನೀರು ಸರಾಗವಾಗಿ ಹರಿದು ಹೋಗುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಭಾನುವಾರ ರಾತ್ರಿ ಗುಡುಗು, ಸಿಡಿಲಿನೊಂದಿಗೆ ಆರಂಭವಾದ ಮಳೆ ಸೋಮವಾರ ಮುಂಜಾನೆ ಯವರೆಗೂ ಎಡೆಬಿಡದೆ ಸುರಿದ ಪರಿಣಾಮ ಕೆಲವೆಡೆ ತಗ್ಗು ಪ್ರದೇಶದಲ್ಲಿ ನೀರು ತುಂಬಿ ಕೊಂಡರೆ, ಹಲವೆಡೆ ಮನೆಗಳಿಗೆ…
ಮೈಸೂರು ವಿಭಾಗದ ಪ್ರವಾಸೋದ್ಯಮ ರಾಯಭಾರಿ ಆಗಲು ಯದುವೀರ್ ಸಮ್ಮತಿ
September 25, 2018ಮೈಸೂರು: ಪ್ರವಾಸಿತಾಣವಾದ ಮೈಸೂರನ್ನು ದಕ್ಷಿಣ ಭಾರತದ ಪ್ರವಾಸೋದ್ಯಮ ಭೂಪಟದಲ್ಲಿ ಅಗ್ರಸ್ಥಾನಕ್ಕೇರಿಸುವ ಮಹದಾಸೆ ಹೊಂದಿರುವ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಪ್ರವಾಸೋದ್ಯಮ ಇಲಾಖೆಯ ಮೈಸೂರು ವಿಭಾಗದ ರಾಯಭಾರಿಯಾಗಲು ಸಮ್ಮತಿ ಸೂಚಿಸಿದ್ದಾರೆ. ಕಳೆದ ಬುಧವಾರ ಮೈಸೂರು ಅರಮನೆಗೆ ಭೇಟಿ ನೀಡಿದ್ದ ಪ್ರವಾಸೋ ದ್ಯಮ ಸಚಿವ ಸಾ.ರಾ.ಮಹೇಶ್, ಈ ವೇಳೆ ಯದುವೀರ್ ಅವರೊಂದಿಗೆ ಮಾತುಕತೆ ನಡೆಸಿ ಮೈಸೂರು ವಿಭಾಗದ ಪ್ರವಾ ಸೋದ್ಯಮ ಇಲಾಖೆ ರಾಯಭಾರಿಯಾಗುವಂತೆ ಅವರಲ್ಲಿ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿರುವ ಯದುವೀರ್ ಅವರು, ರಾಯಭಾರಿಯಾಗಲು ಸಮ್ಮತಿ ಸೂಚಿಸಿ…
ಕೊಡಗಿನ ನೆರೆ ಸಂತ್ರಸ್ತರಿಗೆ ಮೈಸೂರು ಪಾಲಿಕೆ ಗುತ್ತಿಗೆದಾರರಿಂದ 4,77,100 ರೂ. ನೆರವು
September 25, 2018ಮೈಸೂರು: ನೆರೆ ಹಾಗೂ ಭೂಕುಸಿತದಿಂದ ತತ್ತರಿಸಿ ಹೋಗಿರುವ ಕೊಡಗಿಗೆ ಮೈಸೂರು ಮಹಾನಗರ ಪಾಲಿಕೆ ಗುತ್ತಿಗೆದಾರರ ಸಂಘವು ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರ ಮೂಲಕ 4,77,100 ರೂ. ನೆರವು ನೀಡಿದೆ. ಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅಧ್ಯಕ್ಷತೆಯಲ್ಲಿ ಪಾಲಿಕೆಯ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಗುತ್ತಿಗೆದಾರರ ಸಂಘದ ಗೌರವಾಧ್ಯಕ್ಷ ಸಿ.ವೆಂಕಟಪ್ಪ ಸೇರಿದಂತೆ ಸಂಘದ ಪದಾಧಿಕಾರಿಗಳು ನೆರವಿನ ಚೆಕ್ ಅನ್ನು ನೀಡಿದರು. ಸಂಘದ ಪದಾಧಿಕಾರಿಗಳು ಮಾತನಾಡಿ ನೆರೆ ಹಾನಿಗೆ ತುತ್ತಾಗಿದ್ದ ಕೊಡಗಿಗೆ ನೆರವು ನೀಡಲು ಪಾಲಿಕೆಯ ಗುತ್ತಿಗೆದಾರರು…
ಶಿಕ್ಷಣದಲ್ಲಿ ಕಲೆ, ಸಾಹಿತ್ಯ, ಕ್ರೀಡೆ ಜೊತೆಗೆ ಯೋಗ ಸೇರ್ಪಡೆಗೆ ಚಿಂತನೆ
September 25, 2018ಮೈಸೂರು: ಕಾಲೇಜು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲವು ಬದ ಲಾವಣೆಗಳಾಗ ಬೇಕಿದ್ದು, ಆ ನಿಟ್ಟಿನಲ್ಲಿ ಕಲೆ, ಸಾಹಿತ್ಯ, ಕ್ರೀಡೆ ಯನ್ನು ಶಿಕ್ಷಣದಲ್ಲಿ ಅಳವಡಿಸುವ ಅಗತ್ಯವಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿ ವರೂ ಆಗಿರುವ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅಭಿಪ್ರಾಯಪಟ್ಟರು. ಮೈಸೂರಿನ ಊಟಿ ರಸ್ತೆ ಜೆಎಸ್‍ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇ ಜಿನಲ್ಲಿ ಡಾ.ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಯವರ 103ನೇ ಜಯಂತಿ ಹಾಗೂ ವಿದ್ಯಾರ್ಥಿ ವೇದಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು,…
ಎಲೆಕ್ಟ್ರಿಕಲ್ ಕಾಂಟ್ರಾಕ್ಟರ್ ವಾಹನ ಡಿಕ್ಕಿ: ಅರಮನೆ ಮುಂದಿನ ವಿಶೇಷ ಕಲ್ಲಿನ ಬ್ಯಾರಿಕೇಡ್ ಧ್ವಂಸ
September 25, 2018ಮೈಸೂರು: ಟಯರ್ ಸಿಡಿದು ಎಲೆಕ್ಟ್ರಿಕಲ್ ಕಂಟ್ರಾಕ್ಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಅರಮನೆ ಜಯ ಮಾರ್ತಾಂಡ ಗೇಟ್ ಬಳಿ ಅಳವಡಿಸಿರುವ ಕಲ್ಲಿನ ವಿಶೇಷ ಬ್ಯಾರಿಕೇಡ್ ಧ್ವಂಸವಾಗಿ ರುವ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಮೈಸೂರಿನ ಕ್ಯಾತಮಾರನಹಳ್ಳಿಯ ಎಲೆ ಕ್ಟ್ರಿಕಲ್ ಗುತ್ತಿಗೆದಾರ ರವಿಕುಮಾರ್ ಎಂಬು ವರಿಗೆ ಸೇರಿದ ಬೊಲೆರೋ(ಕೆಎ09, ಸಿ4060) ವಾಹನವು ನಂಜನಗೂಡಿನಿಂದ ಬರುತ್ತಿ ದ್ದಾಗ ಶನಿವಾರ ಮುಂಜಾನೆ ಸುಮಾರು 5 ಗಂಟೆ ವೇಳೆಗೆ ಅದರ ಮುಂಭಾಗದ ಎಡ ಗಡೆ ಚಕ್ರದ ಟಯರ್ ಸಿಡಿದ ಪರಿ ಣಾಮ ಚಾಲಕನ…