ಸಾರ್ವಜನಿಕರು, ಪ್ರವಾಸಿಗರ ಸುರಕ್ಷತೆಗೆ ಮೈಸೂರು ನಗರ ಪೊಲೀಸರ `ಮೈ ಸುರಕ್ಷಾ ಆ್ಯಪ್’
ಮೈಸೂರು

ಸಾರ್ವಜನಿಕರು, ಪ್ರವಾಸಿಗರ ಸುರಕ್ಷತೆಗೆ ಮೈಸೂರು ನಗರ ಪೊಲೀಸರ `ಮೈ ಸುರಕ್ಷಾ ಆ್ಯಪ್’

September 25, 2018

ಮೈಸೂರು: ಸಾರ್ವ ಜನಿಕರು ಮತ್ತು ಪ್ರವಾಸಿಗರ ಸುರಕ್ಷತೆಗಾಗಿ ಮೈಸೂರು ನಗರ ಪೊಲೀಸರು `ಮೈ ಸುರಕ್ಷಾ ಆ್ಯಪ್’ ಎಂಬ ಮೊಬೈಲ್ ಅಪ್ಲಿ ಕೇಷನ್ ಅನ್ನು ಪ್ರಾರಂಭಿಸಿದ್ದಾರೆ.

ಪ್ರತಿ ವರ್ಷ ಲಕ್ಷಾಂತರ ಮಂದಿ ಪ್ರವಾಸಿ ಗರು ದೇಶ-ವಿದೇಶಗಳಿಂದ ಮೈಸೂರಿನ ಪ್ರೇಕ್ಷಣಿಯ ಸ್ಥಳಗಳನ್ನು ವೀಕ್ಷಿಸಲು ಆಗಮಿ ಸುತ್ತಾರೆ. ಈ ವೇಳೆ ಪ್ರಯಾಣಕ್ಕಾಗಿ ಆಟೋ, ಕ್ಯಾಬ್‍ಗಳು ಹಾಗೂ ಇತರೆ ಖಾಸಗಿ ವಾಹನ ಗಳನ್ನು ಬಳಕೆ ಮಾಡುತ್ತಾರೆ. ಪ್ರಯಾಣದ ಸಮಯದಲ್ಲಿ ಸಾರ್ವಜನಿಕರು, ಪ್ರಯಾಣಿ ಕರು, ಚಾಲಕರ ಮೇಲೆ ದೌರ್ಜನ್ಯ, ಕಳ್ಳ ತನಗಳು ನಡೆದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲು `ಮೈ ಸುರಕ್ಷಾ ಆ್ಯಪ್’ ಎಂಬ ಮೊಬೈಲ್ ಅಪ್ಲಿಕೇಷನ್ ಅನ್ನು ಪ್ರಾರಂಭಿಸಲಾಗಿದೆ.
ಆ್ಯಪ್ ಕುರಿತು: ಮೈಸೂರು ನಗರದ ಸಾರ್ವಜನಿಕ ಸಾರಿಗೆ ವಾಹನಗಳು ಮತ್ತು ಅದರ ಚಾಲಕರ ಸಂಪೂರ್ಣ ಮಾಹಿತಿ ಯನ್ನು ನಗರ ಸಂಚಾರ ಪೊಲೀಸರು ಸಂಗ್ರ ಹಿಸಿ, ಕ್ಯೂಆರ್ ಕೋಡ್‍ಗಳನ್ನು ತಯಾರಿಸಿ, ಅಂಟಿಸಲಾಗುತ್ತದೆ. ಈ ವಾಹನದಲ್ಲಿ ಪ್ರಯಾ ಣಿಸುವ ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ಮೂಲಕ `ಮೈ ಸುರಕ್ಷಾ ಆ್ಯಪ್’ ಮೊಬೈಲ್ ಅಪ್ಲಿಕೇಷನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಬೇಕು. ಇದರ ಮೂಲಕ ವಾಹನದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ, ಅವರು ಪ್ರಯಾಣಿಸುತ್ತಿರುವ ವಾಹನ ಮತ್ತು ಚಾಲಕನ ವಿವರಗಳನ್ನು ಅಪ್ಲಿಕೇಷನ್‍ನಲ್ಲಿ ಪಡೆಯಬಹುದು.

ಹಾಗೆಯೇ, ಪ್ರಯಾಣಿಕರಿಗೆ ಯಾವುದೇ ರೀತಿಯ ಕಿರುಕುಳ, ಕಳ್ಳತನ, ದೌರ್ಜನ್ಯ ಮತ್ತಿತರೆ ತೊಂದರೆಗಳು ಉಂಟಾದರೆ `ಮೈಸುರಕ್ಷಾ ಆ್ಯಪ್’ ಅಪ್ಲಿಕೇಷನ್‍ನಲ್ಲಿರುವ ಎಸ್‍ಓಎಸ್ ಬಟನ್ ಒತ್ತಬೇಕು. ಕೂಡಲೇ ಪೊಲೀಸ್ ಕಂಟ್ರೋಲ್ ರೂಂಗೆ ಮಾಹಿತಿ ರವಾನೆಯಾಗುತ್ತದೆ. ಇವರು ಜಿಪಿಎಸ್ ಲೊಕೇಷನ್ ಮೂಲಕ ಸಮೀಪದ ಪೊಲೀಸ್ ಗಸ್ತು ವಾಹನಕ್ಕೆ ಮಾಹಿತಿ ರವಾನಿಸುತ್ತಾರೆ. ಇದಾದ 2-5 ನಿಮಿಷಗಳೊಳಗೆ ಗಸ್ತು ವಾಹನವು ಪ್ರಯಾಣಿಕರ ಸ್ಥಳಕ್ಕೆ ತಲುಪಿ ರಕ್ಷಣೆ ಒದಗಿಸಲಿದ್ದಾರೆ. ಜತೆಗೆ ಪೊಲೀಸ್ ಕಂಟ್ರೋಲ್ ರೂಂನಿಂದ ಪೊಲೀಸ್ ಇಲಾ ಖೆಗೆ ಸಂಬಂಧಿಸಿದ ನಗರದ ಮುಖ್ಯ ವಿಚಾರ ಗಳು ಮತ್ತು ಸುರಕ್ಷತಾ ಸಂದೇಶಗಳನ್ನು ಈ ಅಪ್ಲಿಕೇಷನ್ ಹೊಂದಿರುವವರಿಗೆ ರವಾನಿಸುವ ವ್ಯವಸ್ಥೆ ಕೂಡ ಇದೆ.

ಈ ಸಂಬಂಧ `ಮೈ ಸುರಕ್ಷಾ ಆ್ಯಪ್’ ಮೊಬೈಲ್ ಅಪ್ಲಿಕೇಷನ್ ಕುರಿತು ಮಾಹಿತಿ ನೀಡಲು ದಕ್ಷಿಣ ವಲಯ ಐಜಿಪಿ ಕಚೇರಿ ಆವರಣದಲ್ಲಿರುವ ಸಭಾಂಗಣದಲ್ಲಿ ಮೈಸೂರು ನಗರ ಸಂಚಾರ ಪೊಲೀಸ್ ವತಿಯಿಂದ ಆಯೋಜಿಸಿದ್ದ ಆಟೋ ಮತ್ತು ಟ್ಯಾಕ್ಸಿ ಅಸೋ ಸಿಯೇಷನ್ ಮುಖ್ಯಸ್ಥರು, ಸದಸ್ಯರು ಹಾಗೂ ಚಾಲಕರುಗಳ ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಮಾತ ನಾಡಿ, ನಗರ ವ್ಯಾಪ್ತಿಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಸಾರ್ವಜನಿಕ ಸಾರಿಗೆ ವಾಹನ ಗಳು ಕಡ್ಡಾಯವಾಗಿ ವಾಹನ ಮತ್ತು ಚಾಲ ಕರ ಮಾಹಿತಿಯನ್ನು ಸಂಚಾರ ಪೊಲೀಸರಿಗೆ ನೀಡಿ, ತಮ್ಮ ವಾಹನಗಳಿಗೆ ಕ್ಯೂಆರ್ ಕೋಡನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳಿದರು. ನಗರ ಕಾನೂನು ಮತ್ತು ಸುವ್ಯ ವಸ್ಥೆ ವಿಭಾಗದ ಡಿಸಿಪಿ ಎನ್.ವಿಷ್ಣುವರ್ಧನ, ಬೆಂಗಳೂರು ಕೇಂದ್ರ ಸ್ಥಾನದ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಡಾ. ವಿಕ್ರಂ ವಿ ಅಮಟೆ ಹಾಗೂ ಸಂಚಾರ ವಿಭಾಗದ ಎಲ್ಲಾ ಪೊಲೀಸ್ ಇನ್ಸ್‍ಪೆಕ್ಟರ್ ಗಳು ಭಾಗವಹಿಸಿದ್ದರು.

Translate »