ದ್ರೋಣಾಚಾರ್ಯರಿಗೆ ನೂರಾರು ಶಿಷ್ಯರಾದರೆ ಮೈಸೂರು ತಾತಯ್ಯನವರಿಗೆ ಸಾವಿರಾರು ಶಿಷ್ಯರು
ಮೈಸೂರು

ದ್ರೋಣಾಚಾರ್ಯರಿಗೆ ನೂರಾರು ಶಿಷ್ಯರಾದರೆ ಮೈಸೂರು ತಾತಯ್ಯನವರಿಗೆ ಸಾವಿರಾರು ಶಿಷ್ಯರು

September 25, 2018

ಮೈಸೂರು: ಸ್ವಂತ ಮನೆ ಯನ್ನು ದಾನ ಮಾಡಿದ ದಯಾಸಾಗರ ಎಂ.ವ್ಯೆಂಕಟಕೃಷ್ಣಯ್ಯ, ಗಾಂಧೀಜಿಯನ್ನು ಬಿಟ್ಟರೇ ಸರ್ವರನ್ನು ಸಮಾನತೆಯಲ್ಲಿ ಕಂಡ ವರು ಮೈಸೂರಿನ ತಾತಯ್ಯ ಎಂದು ಹಿರಿಯ ಸಮಾಜ ಸೇವಕ ಡಾ.ರಘುರಾಮ್ ವಾಜಪೇಯಿ ಗುಣಗಾನ ಮಾಡಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿ ಷತ್ ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕರ್ನಾಟಕ ವಿಚಾರ ವೇದಿಕೆ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾಜ ಸುಧಾರಕ ‘ಎಂ.ವೆಂಕಟಕೃಷ್ಣಯ್ಯ (ತಾತಯ್ಯ)’ ಒಂದು ನೆನಪು ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ತಾತಯ್ಯ ಅವರೇ ನಿವೇನಾದರೂ ಉತ್ತರ ಭಾರತದಲ್ಲಿ ಜನಿಸಿದ್ದರೆ ಲೋಕಮಾನ್ಯ ತಿಲಕರಿಗಿಂತ ದೊಡ್ಡ ಸ್ಥಾನಕ್ಕೆ ಬೆಳೆಯು ತ್ತಿದ್ದೀರಿ. ಅಂತೆಯೇ ದಕ್ಷಿಣ ಭಾಗದಲ್ಲಿ ಧ್ರುವ ತಾರೆಯಾಗಿದ್ದೀರಿ ಎಂದು ಗಾಂಧೀಜಿ ಹೇಳಿ ದ್ದಾರೆ. ಅಂತಹ ಸಾಧನೆಯನ್ನು ಪತ್ರಿಕೋ ದ್ಯಮ ಕ್ಷೇತ್ರದಲ್ಲಿ ಮಾಡಿರುವ ಅವರು, ಮೈಸೂರಿನ ಗಾಂಧೀಜಿ ಎಂದೇ ಪ್ರಸಿದ್ದ ರಾಗಿದ್ದಾರೆ. ಮೈಸೂರಿನಲ್ಲಿ ಮಹಿಳಾ ಸಬಲೀಕರಣಕ್ಕೆ ನಾಂದಿಯಾಡಿದ ವ್ಯಕ್ತಿ ತಾತಯ್ಯ. ಅಂದಿನ ಕಾಲದಲ್ಲಿ ಎಲ್ಲಾ ಕ್ಷೇತ್ರದ ಸಮಿತಿಗಳಿಗೂ ಅವರೇ ಅಧ್ಯಕ್ಷರಾಗಿರು ತ್ತಿದ್ದರು. ಬ್ರಿಟಿಷರ ಕಾಲದ ಏಕಮೇವ ಪತ್ರ ಕರ್ತರಾಗಿ, ನಾಲ್ವಡಿ ಕೃಷ್ಣರಾಜ ಒಡೆಯರಿಗೆ ರಾಜಗುರುವಾಗಿ ಸೇವೆ ನೀಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನು ಪರಿಗಣಿಸುವ ವ್ಯಕ್ತಿತ್ವ ಅವರದಾಗಿತ್ತು ಎಂದು ಹೇಳಿದರು.

ಮೈಸೂರು ವಿವಿ ಪತ್ರಿಕೋದ್ಯಮ ವಿಭಾ ಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಆರ್. ಎನ್.ಪದ್ಮನಾಭ ಮಾತನಾಡಿ, ಮೈಸೂರು ನಗರಕ್ಕೆ ಬೇರೆ ಕಡೆಯಿಂದ ಬಂದು ಬದುಕು ಕಟ್ಟಿಕೊಂಡು ಶ್ರೇಷ್ಠ ವ್ಯಕ್ತಿಯಾಗಿ ಬೆಳೆದ ಮೊದಲ ವ್ಯಕ್ತಿ ತಾತಯ್ಯನವರು. ಸುಮಾರು 60 ವರ್ಷಗಳ ಕಾಲ ಮೈಸೂ ರಿಗಾಗಿ ತನು, ಮನವನ್ನು ಅರ್ಪಿಸಿದವರು. ಮೈಸೂರಿನ ಸರ್ವತೋಮುಖ ಮುನ್ನುಡಿ. ಆದರೆ ಮೈಸೂರಿಗರು ಇವರನ್ನು ಸಮ ರ್ಪಕವಾಗಿ ಬಳಸಿಕೊಂಡಿಲ್ಲ ಎಂದರು.

ಕರ್ನಾಟಕದ 60 ವರ್ಷಗಳ ಸಾಕ್ಷಿಪ್ರಜ್ಞೆ ತಾತಯ್ಯ. ಇಲ್ಲಿಯವರೆಗೆ 174 ವರ್ಷ ವಾದರೂ ಅವರನ್ನು ನೆನಪಿಕೊಳ್ಳುವುದ ರಲ್ಲಿಯೇ ಅವರ ಸಾಧನೆಯನ್ನು ಅರಿಯ ಬಹುದಾಗಿದೆ. ಯಾವುದೇ ಕೆಲಸವನ್ನು ಮಾಡುವಂತೆ ಪಟ್ಟು ಹಿಡಿದು ಮಾಡಿಸು ತ್ತಿದ್ದ ಗುಣ ಅವರದಾಗಿತ್ತು. ದ್ರೋಣಾ ಚಾರ್ಯರಿಗೆ ನೂರಾರು ಮಂದಿ ಶಿಷ್ಯರಾದರೆ ತಾತಯ್ಯರಿಗೆ ಸಾವಿರಾರು ಶಿಷ್ಯರಿದ್ದು, ಅವರಲ್ಲಿ ನಾನು ಒಬ್ಬ ಎಂದು ಹೇಳಿದರು.

ತಾತಯ್ಯ ಸಕಾರಾತ್ಮಕ ಚಿಂತನೆಯುಳ್ಳ ನಮ್ರತೆಯ ಮೂರ್ತಿಯಾಗಿದ್ದರು. ಆತ್ಮ ವಿಶ್ವಾಸದಿಂದ ಯಾವುದೇ ಕಾರ್ಯದ ಬಾಗಿ ಲನ್ನು ತೆರೆಸುವ ದಕ್ಷತೆಯನ್ನು ಹೊಂದಿ ದ್ದರು. ಬದುಕಿನುದ್ದಕ್ಕೂ ಸದಾ ನೋವನ್ನು ಕಂಡ ಅವರು, ಅರ್ಪಣಾ ಮನೋ ಭಾವನೆ ಹೊಂದಿದ್ದರು. ತಮ್ಮಲ್ಲಿದ್ದ ಎಲ್ಲವನ್ನು ದಾನ ಮಾಡಿ ಪರಿಪೂರ್ಣ ವ್ಯಕ್ತಿಯಾಗಿದ್ದರು.

ಪತ್ರಿಕೋದ್ಯಮ ಸಾಮ್ರಾಜ್ಯದ ಧ್ರುವ ತಾರೆ ತಾತಯ್ಯ. ಮೈಸೂರು ದಿವಾನರಾ ಗಿದ್ದ ಮಿರ್ಜಾ ಇಸ್ಮಾಯಿಲ್ ಅವರು, ನಾಯ ಕರ ನಾಯಕ ಸಮಾಜ ಸುಧಾರಕ ಎಂದು ಹೇಳಿದರೆ, ಡಿವಿಜಿಯವರು ಮೈಸೂರಿನ ಸಾಕ್ರಟಿಸ್ ಎಂದು ಬಣ್ಣಿಸಿದ್ದಾರೆ. ಹಾಗೆಯೇ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು, ಕನ್ನಡದ ವಿಚಾರವಾದಿ ಎಂದು ಕರೆದಿದ್ದಾರೆ ಎಂದು ತಿಳಿಸಿದರು.

ಅಗರಂ ರಂಗಯ್ಯ ಪತ್ರಿಕೋದ್ಯಮದಲ್ಲಿ ಮೊಟ್ಟ ಮೊದಲ ಪದÀವಿಯನ್ನು ಪಡೆ ಯಲು ಕಾರಣಿಭೂತರಾದರು. ಮಹಿಳಾ ವಿದ್ಯಾಭ್ಯಾಸದ ಹರಿಕಾರ. ಅರಮನೆಯ ವಿಚಾರ ಗಳನ್ನು ತೀಕ್ಷ್ಣವಾಗಿ ಬರೆಯುತ್ತಿದ್ದರು. ಪತ್ರಿ ಕೋದ್ಯಮ ಶಿಕ್ಷಣದಲ್ಲಿ ಅಪಾರ ನಂಬಿಕೆ ಯನ್ನು ಇಟ್ಟುಕೊಂಡಿದ್ದರು. ಮುಂದಾ ಲೋಚÀನೆಯಿಂದ ಅವರು, 25 ಸಾವಿರ ಚೆಕ್ ಅನ್ನು ಮೈಸೂರು ವಿಶ್ವವಿದ್ಯಾಲಯಕ್ಕೆ ಕಳುಹಿಸಿ, ಮೈಸೂರು ವಿವಿಯಲ್ಲಿ ಪತ್ರಿಕೋ ದ್ಯಮ ವಿಭಾಗ ಪ್ರಾರಂಬಿಸಿ, ಅಲ್ಲಿ ಪ್ರಥಮ ರ್ಯಾಂಕ್ ಪಡೆಯುವ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಎಂದು ಪತ್ರ ಬರೆಯು ತ್ತಾರೆ. ಇದಕ್ಕೆ ಉತ್ತರಿಸಿದ ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗ ಇಲ್ಲದಿರುವುದರಿಂದ ಈ ಹಣ ಬಳಸು ವಂತಿಲ್ಲ ಎಂದು ತಿಳಿಸುತ್ತದೆ. ತಾತಯ್ಯ ನವರು ಇದಕ್ಕೆ ಪ್ರತ್ಯುತ್ತರವಾಗಿ ಮುಂದಿನ ದಿನಗಳಲ್ಲಿ ಪತ್ರಿಕೋದ್ಯಮ ವಿಭಾಗ ಖಂಡಿತ ವಾಗಿ ಪ್ರಾರಂಭವಾಗುತ್ತದೆ. ಆದ್ದರಿಂದ ಸದ್ಯಕ್ಕೆ ಈ ಹಣವನ್ನು ಕನ್ನಡ ಸಾಹಿತ್ಯದಲ್ಲಿ ಪ್ರಥಮ ರ್ಯಾಂಕ್ ಗಳಿಸುವ ವಿದ್ಯಾರ್ಥಿ ಗಳಿಗೆ ನೀಡಿ. ಪತ್ರಿಕೋದ್ಯಮ ವಿಭಾಗ ಪ್ರಾರಂಭವಾದ ನಂತರ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಎಂದು ತಿಳಿಸಿದ್ದರು. ಅದರಂತೆ ನನ್ನ ಸಹಪಾಠಿ ಈಶ್ವರ ದೈ ತೋಟ ಎಂಬುವವರು ಈ ಹಣವನ್ನು ಪಡೆದುಕೊಂಡರು ಎಂದರು.

‘ತುಟಿಗಳಿಗೆ ಸತ್ಯ, ಶಬ್ದಗಳಿಗೆ ಪ್ರಾರ್ಥನೆ, ಕಣ್ಣುಗಳಿಗೆ ದಯೆ, ಕೈಗಳಿಗೆ ದಾನ, ಹೃದ ಯಕ್ಕೆ ಪ್ರೇಮ, ಮುಖಕ್ಕೆ ಮುಗುಳು ನಗೆ, ದೊಡ್ಡವರಾಗಲು ಕ್ಷಮೆ’ಯಂತಹ ಗುಣ ಗಳನ್ನು ಹೊಂದಿದ್ದ ಅವರು ಮೈಸೂರಿನ ಬ್ರಾಂಡ್ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ, ಕರ್ನಾಟಕ ವಿಚಾರ ವೇದಿಕೆ ಅಧ್ಯಕ್ಷ ಹಿರಿಮರಳಿ ಧರ್ಮರಾಜು, ಮಡ್ಡಿ ಕೆರೆ ಗೋಪಾಲ್ ಉಪಸ್ಥಿತರಿದ್ದರು.

Translate »