ಮೈಸೂರು ಭಾಗದ ಕೈಗಾರಿಕಾ ಪ್ರದೇಶಗಳ ನಾನಾ ಬೇಡಿಕೆ ಸಂಬಂಧ ಸಣ್ಣ ಕೈಗಾರಿಕಾ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಸಲ್ಲಿಕೆ
ಮೈಸೂರು

ಮೈಸೂರು ಭಾಗದ ಕೈಗಾರಿಕಾ ಪ್ರದೇಶಗಳ ನಾನಾ ಬೇಡಿಕೆ ಸಂಬಂಧ ಸಣ್ಣ ಕೈಗಾರಿಕಾ ನಿರ್ದೇಶನಾಲಯದ ಆಯುಕ್ತರಿಗೆ ಮನವಿ ಸಲ್ಲಿಕೆ

September 25, 2018

ಮೈಸೂರು: ಮೈಸೂರು ಕೈಗಾ ರಿಕಾ ಪಟ್ಟಣ ಪ್ರಾಧಿಕಾರ ರಚನೆ, ಮೈಸೂರು ರಫ್ತ್ತು ಕೇಂದ್ರ ನಿರ್ಮಾಣ, ಕೈಗಾರಿಕಾ ಘನ ತ್ಯಾಜ್ಯ ಸಂಗ್ರಹ ಹಾಗೂ ವಿಲೇವಾರಿ ಘಟಕ ಸ್ಥಾಪನೆ ಸೇರಿದಂತೆ ಸುಮಾರು 20 ಅಂಶಗಳುಳ್ಳ ಮನವಿ ಪತ್ರವನ್ನು ಮೈಸೂರು ಕೈಗಾರಿಕೆಗಳ ಸಂಘದ ವತಿ ಯಿಂದ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳ ನಿರ್ದೇಶನಾಲಯದ ಪ್ರಥಮ ಆಯುಕ್ತರಾದ ಗುಂಜನ್ ಕೃಷ್ಣ ಅವರಿಗೆ ಸಲ್ಲಿಸಲಾಗಿದೆ.

ಬೆಳಗಾವಿಯಲ್ಲಿ ಸೋಮವಾರ ಕರ್ನಾ ಟಕ ಸಣ್ಣ ಕೈಗಾರಿಕೆಗಳ ಸಂಘದ ವತಿ ಯಿಂದ ಆಯೋಜಿಸಲಾಗಿದ್ದ ಸಭೆಯಲ್ಲಿ ಮೈಸೂರು, ಮಂಡ್ಯ ಹಾಗೂ ಚಾಮರಾಜ ನಗರ ಜಿಲ್ಲೆಗಳ ಕೈಗಾರಿಕೆಗಳ ಬೇಕು-ಬೇಡ ಗಳ ಬಗ್ಗೆ ಮನವಿ ಸಲ್ಲಿಸಲಾಗಿದ್ದು, ಜಿಲ್ಲಾ ಮಟ್ಟದ ಸಹಾಯಧನ ಮಂಜೂರಾತಿ ಸಮಿತಿಯಲ್ಲಿ ಕೈಗಾರಿಕಾ ಸಂಘದ ಪ್ರತಿ ನಿಧಿಯನ್ನುನೇಮಿಸಲು ಆದೇಶಿಸಿ, ಸಹಾಯ ಧನ ಮಂಜೂರಾತಿಗಾಗಿ ಬರುವ ಅರ್ಜಿ ಗಳ ವಿವರ ಹಾಗೂ ಮಂಜೂರಾತಿ ಮೊತ್ತ, ದಿನಾಂಕ ಮತ್ತು ಉದ್ಯಮಗಳ ವಿವರವನ್ನು ವೆಬ್‍ಸೈಟ್‍ನಲ್ಲಿ ಪ್ರಕಟಿಸುವ ಮೂಲಕ ಪಾರದರ್ಶಕತೆ ಕಾಪಾಡ ಬೇಕೆಂದು ಒತ್ತಾಯಿಸಲಾಯಿತು.

ಮೈಸೂರಿನ ಬನ್ನಿಮಂಟಪ ಎ ಮತ್ತು ಬಿ ಬಡಾವಣೆ ಹಾಗೂ ವಿಶ್ವೇಶ್ವರನಗರ ಸೇರಿದಂತೆ ದಕ್ಷಿಣ ಕೈಗಾರಿಕಾ ಪ್ರದೇಶದ ಮೂಲಭೂತ ಅಗತ್ಯತೆ ಪೂರೈಕೆಗಾಗಿ ಕನಿಷ್ಟ 10 ಕೋಟಿ ರೂಗಳನ್ನು ಮಹಾ ನಗರ ಪಾಲಿಕೆಗೆ ಬಿಡುಗಡೆ ಮಾಡಿ ಕಾಮ ಗಾರಿ ಕೈಗೊಳ್ಳಲು ಸೂಚಿಸಬೇಕು. ಡಿ.ದೇವ ರಾಜ ಅರಸುರವರ ಕೊಡುಗೆಯಾದ ಹೆಬ್ಬಾಳು, ಮೇಟಗಳ್ಳಿ, ಹೂಟಗಳ್ಳಿ, ಬೆಳ ವಾಡಿ ಕೈಗಾ ರಿಕಾ ಪ್ರದೇಶಗಳ ಕೆಲವು ರಸ್ತೆಗಳ ಅಗಲೀ ಕರಣ, ಸದೃಢೀಕರಣ, ಡಕ್ಟ್ ಪೈಪ್ ಅಳ ವಡಿಕೆ, ಸಾಲು ಮರ ನೆಡುವಿಕೆ ಇತ್ಯಾದಿ ಅಭಿವೃದ್ಧಿ ಕಾಮಗಾರಿಗಳಿಗಾಗಿ ಕೆಐಎಡಿಬಿಗೆ 20 ಕೋಟಿ ರೂ.ಗಳನ್ನು ನೀಡಬೇಕು. ಕೈಗಾರಿಕೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಿವಾರಣೆಗಾಗಿ ರಾಜ್ಯ ಸರ್ಕಾರ ಅನುಷ್ಠಾನ ಗೊಳಿಸಿರುವ `ಕೈಗಾರಿಕಾ ಸ್ಪಂದನ’ ಹಾಗೂ `ಕೈಗಾರಿಕಾ ಅದಾಲತ್’ ಕಾರ್ಯ ಕ್ರಮ ಪರಿಣಾಮಕಾರಿಯಾಗಿ ನಿಗಧಿತವಾಗಿ ನಡೆಸಲು ಕ್ರಮ ಕೈಗೊಳ್ಳಬೇಕು. ಎಂಎಸ್ ಇಎಪ್‍ಸಿ, ವಿಳಂಬ ಪಾವತಿ ಕಾಯಿದೆ ಅನುಷ್ಟಾನ ಸಮಿತಿಗೆ ಸಂಬಂಧಿಸಿದಂತೆ ಕೆಲವೊಂದು ಮಾರ್ಪಾಡುಗಳಾಗಬೇಕು. ಕೈಗಾರಿಕಾ ಪ್ರದೇಶದಲ್ಲಿ ಸಂಪೂರ್ಣವಾಗಿ ಸೋಲಾರ್ ಬೀದಿ ದೀಪ ಅಳವಡಿಸುವು ದರ ಜೊತೆಗೆ ಗುಜರಾತ್ ಮಾದರಿಯಲ್ಲಿ ಕೈಗಾರಿಕಾ ಪ್ರದೇಶದ ಕಾಲುವೆ, ದೊಡ್ಡ ಮೋರಿಗಳ ಮೇಲೆ ಸೋಲಾರ್ ವಿದ್ಯುತ್ ಉತ್ಪಾದನಾ ಕೆಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಬೇಕೆಂದು ಮೈಸೂರು ಕೈಗಾರಿಕೆ ಗಳ ಸಂಘ ಒತ್ತಾಯಿಸಿದೆ.

ಕೆಐಎಡಿಬಿ ಅಭಿವೃದ್ಧಿಪಡಿಸಿದ ಪ್ರದೇಶ ದಲ್ಲಿ ಸಣ್ಣ ಕೈಗಾರಿಕೆಗಳಿಗೆ ನಿವೇಶನಗಳನ್ನು ಮೀಸಲಿಟ್ಟು, ಸೂಕ್ಷ್ಮ ಕೈಗಾರಿಕೆಗಳಿಗೆ ಶೇ.75 ರಷ್ಟು ರಿಯಾಯಿತಿ ನೀಡಬೇಕು. ಜೋನಲ್ ರೆಗ್ಯುಲೇಶನ್ ಕಟ್ಟುನಿಟ್ಟಿನ ಜಾರಿಯಾಗಬೇಕು. ಕೈಗಾರಿಕಾ ಪ್ರದೇಶದಲ್ಲಿರುವ ಕೆರೆ, ಕಟ್ಟೆ, ಸರ್ಕಾರಿ ತೋಪುಗಳು, ರಾಜಕಾಲುವೆ ಗಳನ್ನು ಮೂಲ ಸ್ಥಿತಿಯಲ್ಲಿ ಉಳಿಸಿ ಅಭಿವೃದ್ಧಿ ಪಡಿಸಬೇಕು. ಒತ್ತುವರಿ ಅಥವಾ ಮಂಜೂ ರಾತಿಯಾಗಿದ್ದರೂ ಕೆರೆ ಪ್ರದೇಶವನ್ನು ವಾಪಸ್ಸು ಪಡೆದು ಅಭಿವೃದಿಪಡಿಸ ಬೇಕು. ಕೈಗಾರಿಕಾ ಘನತ್ಯಾಜ್ಯ ಸಂಗ್ರಹ-ವಿಲೇ ವಾರಿ ಕೇಂದ್ರ, ಕೈಗಾರಿಕಾ ಪಟ್ಟಣ ಪ್ರಾಧಿ ಕಾರ ರಚನೆ, ಮೈಸೂರು ರಫ್ತು ಕೇಂದ್ರ ನಿರ್ಮಾಣ, ಕೂರ್ಗಳ್ಳಿ ಕೈಗಾರಿಕಾ ಪ್ರದೇಶ ದಲ್ಲಿ ಟ್ರಕ್ ಟರ್ಮಿನಲ್, ಮಂಡ್ಯ ಕೈಗಾ ರಿಕಾ ಪ್ರದೇಶ ಅಭಿವೃದ್ಧಿ, ಉದ್ಯಮಗಳಿಗೆ ಸುಲಲಿತ ವಿದ್ಯುತ್ ಸರಬರಾಜಿಗಾಗಿ ಗ್ಯಾಸ್ ಇನ್ಸುಲೇಟೆಡ್ ಸಬ್ ಸ್ಟೇಷನ್ ಸ್ಥಾಪನೆ, ಹೆಬ್ಬಾಳು ಕೈಗಾರಿಕಾ ಪ್ರದೇಶದ ಬೊಮ್ಮೇನ ಹಳ್ಳಿ ಕೆರೆಯಿಂದ ವರ್ತುಲ ರಸ್ತೆಗೆ ಸಂಪರ್ಕ ರಸ್ತೆ ನಿರ್ಮಾಣ, ಬಿಇಎಂಎಲ್‍ನಿಂದ ಬಳಕೆ ಯಾಗದಿರುವ ವಸತಿ ಪ್ರದೇಶವನ್ನು ಹಿಂಪ ಡೆದು ಕೈಗಾರಿಕೋದ್ಯಮಿಗಳು ಹಾಗೂ ಕಾರ್ಮಿಕರಿಗೆ ವಸತಿ ಸೌಲಭ್ಯಕ್ಕಾಗಿ ನೀಡು ವುದು, ಕೈಗಾರಿಕಾ ಪ್ರದೇಶದಲ್ಲಿ ಪಟಾಕಿ ಮಳಿಗೆಗಳ ನಿಷೇಧ, ಡಿ-ನೋಟಿಫಿಕೇಷನ್ ಆದ ಪ್ರದೇಶಗಳಿಗೆ ಅಭಿವೃದ್ಧಿ ಶುಲ್ಕ ವಿಧಿಸ ಬೇಕು, ಕೈಗಾರಿಕಾ ಪ್ರದೇಶದ ಜಮೀನಿನಲ್ಲಿ ರೆವಿನ್ಯೂ ನಿವೇಶನ ಅಭಿವೃದ್ಧಿಯಾಗದಂತೆ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ನಿವೇ ಶನ, ಸಿಎ ನಿವೇಶನ, ವಸತಿ ನಿವೇಶನ ಮಂಜೂರಾತಿಗೆ ರಾಜ್ಯಾದ್ಯÀಂತ ಏಕರೂಪದ ಮಾರ್ಗಸೂಚಿ ರಚನೆ ಮಾಡಬೇಕು, ಹೀಗೆ ಹಲವಾರು ಅಂಶಗಳನ್ನು ಮನವಿ ಪತ್ರದಲ್ಲಿ ನಮೂದಿಸಲಾಗಿದೆ.

Translate »