ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಪರಿಷತ್ ಚುನಾವಣೆಗೂ ಅಭ್ಯರ್ಥಿಗಳ ಕಣಕ್ಕಿಳಿಸಲಾಗದಂತಹ ಪರಿಸ್ಥಿತಿ
ಮೈಸೂರು

ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಬಿಜೆಪಿಗೆ ಪರಿಷತ್ ಚುನಾವಣೆಗೂ ಅಭ್ಯರ್ಥಿಗಳ ಕಣಕ್ಕಿಳಿಸಲಾಗದಂತಹ ಪರಿಸ್ಥಿತಿ

September 25, 2018

ಬೆಂಗಳೂರು: – ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಿ, ಹೊಸ ಸರ್ಕಾರ ರಚನೆಗೆ ಮುಂದಾಗಿದ್ದ ಬಿಜೆಪಿ, ವಿಧಾನ ಪರಿಷತ್ತಿನ ಮೂರು ಸ್ಥಾನಗಳಿಗೆ ನಡೆಯುತ್ತಿರುವ ಉಪಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗದೆ ಭಾರೀ ಮುಖಭಂಗಕ್ಕೆ ಒಳಗಾಗಿದೆ.

ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದಿರುವುದರಿಂದ ನಾಮಪತ್ರ ಸಲ್ಲಿಸಿ ರುವ ಕಾಂಗ್ರೆಸ್‍ನ ನಜೀರ್ ಅಹಮದ್, ವೇಣುಗೋಪಾಲ್ ಹಾಗೂ ಜೆಡಿಎಸ್‍ನ ರಮೇಶ್ ಗೌಡ ಅವಿರೋಧ ಆಯ್ಕೆ ಖಚಿತ. ಸರ್ಕಾರ ರಚನೆಗಾಗಿ ಮೈತ್ರಿ ಪಕ್ಷಗಳ 18 ಶಾಸಕರನ್ನು ಸೆಳೆದಿದ್ದು, ಕುಮಾರ ಸ್ವಾಮಿ ನೇತೃತ್ವದ ಸರ್ಕಾರ ಪತನಗೊಳಿ ಸುತ್ತೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದ ಬಿಜೆಪಿ, ಪರಿಷತ್ ಚುನಾವಣೆಯಲ್ಲಿ ನಾಮಪತ್ರ ಸಲ್ಲಿ ಸಲು ಕೊನೆಯ ದಿನವಾದ ಇಂದು ಯಾವೊಬ್ಬ ಅಭ್ಯರ್ಥಿಯನ್ನೂ ಕಣಕ್ಕೆ ಇಳಿಸಲಿಲ್ಲ.

ವಿಧಾನಸಭೆಯಿಂದ ವಿಧಾನ ಪರಿಷತ್‍ನ ಮೂರು ಸ್ಥಾನಗಳಿಗೆ ಪ್ರತ್ಯೇಕವಾಗಿ ನಡೆ ಯುತ್ತಿರುವ ಚುನಾವಣೆಯಲ್ಲಿ ಕಣಕ್ಕಿಳಿ ಯುವ ಅಭ್ಯರ್ಥಿಗಳ ಹೆಸರುಗಳನ್ನೂ ರಾಜ್ಯ ಬಿಜೆಪಿ ಪ್ರಕಟಿಸಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂ ರಪ್ಪ ಪರವಾಗಿ ಆಪರೇಷನ್ ಕಮಲದ ನಾಯಕತ್ವ ವಹಿಸಿಕೊಂಡಿದ್ದ ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅಲ್ಲದೆ, ಇತ್ತೀಚೆಗೆ ಕಾಂಗ್ರೆಸ್ ತೊರೆದು ಪಕ್ಷ ಸೇರಿದ್ದ ಮಾಲಿಕಯ್ಯ ಗುತ್ತೇದಾರ್ ಹಾಗೂ ಬಿ.ಜೆ. ಪುಟ್ಟಸ್ವಾಮಿ ಅವರನ್ನು ಕಣಕ್ಕಿಳಿಸುವ ತೀರ್ಮಾನ ಕೈಗೊಂಡಿತ್ತು.

ರಾಜ್ಯ ಘಟಕದ ನಿರ್ಧಾರಕ್ಕೆ ಕೇಂದ್ರ ನಾಯಕರು ಸಹಮತ ವ್ಯಕ್ತಪಡಿಸದ ಕಾರಣ ನಾಮಪತ್ರ ಸಲ್ಲಿಸಲು ಸಿದ್ಧಗೊಂಡು ಕ್ಲಬ್ ಒಂದರಲ್ಲಿ ಕಾದು ಕುಳಿತಿದ್ದ ಈ ಅಭ್ಯರ್ಥಿ ಗಳು ಬರಿಗೈಲಿ ಹಿಂದಿರುಗಿದ್ದಾರೆ.

ವಿಧಾನಸಭೆಯಲ್ಲಿ ಪ್ರಸಕ್ತ 222 ಸದಸ್ಯ ರಿದ್ದು ಕಾಂಗ್ರೆಸ್-ಜೆಡಿಎಸ್‍ಗೆ ಒಟ್ಟು 118 ಮತಗಳು, ಬಿಜೆಪಿಗೆ 104 ಮತಗಳು ಲಭ್ಯವಿವೆ. ಆಪರೇಷನ್ ಕಮಲದಲ್ಲಿ ತಮ್ಮ ಪರ ಇರುವ ಶಾಸಕರ ಮತಗಳನ್ನು ಈ ಚುನಾವಣೆಗೆ ಬಳಸಿಕೊಂಡು ಮೊದಲ ಹಂತದಲ್ಲಿ ಸರ್ಕಾರಕ್ಕೆ ಮುಖಭಂಗ ತರುವ ಉದ್ದೇಶ ಯಡಿಯೂರಪ್ಪ ಅವರದ್ದಾಗಿತ್ತು.

ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಲು ಇನ್ನೂ 8 ಮತಗಳು ಹೆಚ್ಚುವರಿಯಾಗಿ ಅಗತ್ಯ ವಿತ್ತು, ಈ ಮತಗಳನ್ನು ಸಿದ್ಧಪಡಿಸಿ ಕೊಂಡಿದ್ದೇವೆ ಎಂದು ಕೇಂದ್ರ ನಾಯಕ ರಿಗೆ ಭರವಸೆ ನೀಡಿದ್ದಲ್ಲದೆ, ಆ ಶಾಸಕರ ಪಟ್ಟಿಯನ್ನೂ ನೀಡಿದ್ದರು. ಕಳೆದ ವಾರ 18 ಶಾಸಕರನ್ನು ಮುಂಬೈಗೆ ಕರೆದು ಕೊಂಡು ಹೋಗಿ, ವಿಧಾನಸಭೆಗೆ ಮಿಲಿ ಟರಿ ಬೆಂಗಾವಲಿನಲ್ಲಿ ಬರುವುದಾಗಿ ಹೇಳಿಕೊಂಡಿದ್ದ ಬಿಜೆಪಿ, ಮುಂಬೈನಲ್ಲಿ ಕಾಂಗ್ರೆಸ್‍ನ ಬಿ.ಸಿ. ಪಾಟೀಲ್ ಹೊರತು ಪಡಿಸಿ ಇನ್ಯಾವುದೇ ಶಾಸಕರು ಇರಲಿಲ್ಲ.

ರಾಜ್ಯ ಘಟಕ ಆಗಿಂದಾಗ್ಯೆ ಸರ್ಕಾರ ರಚಿಸಲು ವಿಫಲವಾಗಿ ತಮ್ಮನ್ನು ಅಪ ಮಾನಕ್ಕೆ ಗುರಿ ಮಾಡಿಕೊಳ್ಳುತ್ತಿದೆ ಎಂಬುದನ್ನು ಮನಗಂಡ ಪಕ್ಷದ ರಾಷ್ಟ್ರೀಯ ಮುಖಂಡರು, ಪರಿಷತ್ ಉಪಚುನಾವಣೆಯಲ್ಲೂ ಇದೇ ಮುಂದುವರಿದರೆ ಮತ್ತೊಮ್ಮೆ ಅಪ ಮಾನ ತಪ್ಪಿದ್ದಲ್ಲ ಎಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅವಕಾಶ ನೀಡಲಿಲ್ಲ.

Translate »