ಮೈಸೂರು

ಮೈತ್ರಿ ಸರ್ಕಾರ ಉರುಳಿಸಲು ಜಾರಕಿಹೊಳಿ ಸಹೋದರರ ಸಿದ್ಧತೆ
ಮೈಸೂರು

ಮೈತ್ರಿ ಸರ್ಕಾರ ಉರುಳಿಸಲು ಜಾರಕಿಹೊಳಿ ಸಹೋದರರ ಸಿದ್ಧತೆ

September 12, 2018

ಬೆಂಗಳೂರು: ಗೌರಿ-ಗಣೇಶ ಹಬ್ಬದ ನಂತರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳುವ ಸ್ಪಷ್ಟ ಸೂಚನೆಗಳು ರಾಜ್ಯ ರಾಜಕೀಯ ವಲಯದಲ್ಲಿ ಕಂಡುಬರುತ್ತಿವೆ. ಜಾರಕಿಹೊಳಿ ಸಹೋದರರು ಸುಮಾರು 16 ಶಾಸಕರೊಂದಿಗೆ ಬಿಜೆಪಿ ಸೇರ್ಪಡೆಗೊಳ್ಳುವ ಮೂಲಕ ಮೈತ್ರಿ ಸರ್ಕಾರವನ್ನು ಉರುಳಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಬಿಜೆಪಿ ಶಾಸಕ ಶ್ರೀರಾಮುಲು ಅವರು ಸಚಿವ ರಮೇಶ್ ಜಾರಕಿಹೊಳಿ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಕಾಂಗ್ರೆಸ್ ಹಾಗೂ ಜೆಡಿಎಸ್‍ನಲ್ಲಿರುವ ಕನಿಷ್ಠ 14 ಶಾಸಕರನ್ನು ಬಿಜೆಪಿಗೆ ಕರೆತರುವ ಹೊಣೆಗಾರಿಕೆಯನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀಡಲಾಗಿದೆ. ಹಾಗೇನಾದರೂ…

ಪ್ರಾಥಮಿಕ ಶಾಲೆಗಳಿಗೆ ಇಂಗ್ಲಿಷ್ ಶಿಕ್ಷಕರ ನೇಮಕ
ಮೈಸೂರು

ಪ್ರಾಥಮಿಕ ಶಾಲೆಗಳಿಗೆ ಇಂಗ್ಲಿಷ್ ಶಿಕ್ಷಕರ ನೇಮಕ

September 12, 2018

ಮೈಸೂರು: ಖಾಸಗಿ ಶಾಲೆಯಲ್ಲಿ ಶ್ರೀಮಂತರ ಮಕ್ಕಳ ನಡುವೆ ಗ್ರಾಮೀಣ ಪ್ರದೇಶದ ಮಕ್ಕಳು ಇಂಗ್ಲಿಷ್ ಕಲಿಯುವ ಕೊರತೆ ಅನುಭವಿಸುತ್ತಿದ್ದು, ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಮಕ್ಕಳಿಗೆ ಬೋಧಿಸಲು ಒಂದು ಸಾವಿರ ಇಂಗ್ಲಿಷ್ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದರು. ಮೈಸೂರಿನ ಪಡುವಾರಹಳ್ಳಿಯ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವ ಹಣಾ ಕಾಲೇಜಿನ 2018-19ನೇ ಸಾಲಿನ ಸಾಂಸ್ಕøತಿಕ, ಕ್ರೀಡೆ, ಎನ್‍ಸಿಸಿ, ಎನ್‍ಎಸ್‍ಎಸ್ ಅನಾವರಣ, ಸ್ಕೌಟ್ಸ್ ಅಂಡ್ ಗೈಡ್ಸ್ ಹಾಗೂ ರೆಡ್‍ಕ್ರಾಸ್…

ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು…
ಮೈಸೂರು

ರಾಜ್ಯ ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು…

September 12, 2018

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮುಂದಿನ 15 ದಿನಗಳಲ್ಲಿ ಏನು ಬೇಕಾದರೂ ಆಗಬಹುದು ಅದಕ್ಕೆ ನಾನು ಹೊಣೆಯಲ್ಲ ಎಂದು ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಬಿಟ್ಟು, ಬಿಜೆಪಿ ಸೇರುವು ದಿಲ್ಲ, ಇರುವ ಸಮಸ್ಯೆಗಳ ಬಗ್ಗೆ ಹೈಕಮಾಂಡ್‍ಗೆ ತಿಳಿಸಿದ್ದೇವೆ, ಅವರೇ ಸಮಸ್ಯೆ ಬಗಹರಿಸುತ್ತಾರೆ ಎಂದು ಹೇಳಿದ್ದಾರೆ. ವರಿಷ್ಠರು ಬೆಳಗಾವಿ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು, ರಾಜ್ಯ ನಾಯಕರು ಹಾಗೂ ಹೈಕಮಾಂಡ್ ಈ ಸಮಸ್ಯೆ ಬಗೆ ಹರಿಸಬೇಕು ಎಂದು ತಿಳಿಸಿದ್ದಾರೆ. ಶ್ರೀರಾಮುಲು ಜೊತೆ…

ಬಿಜೆಪಿ ಮುಖಂಡರೊಂದಿಗೆ ಬಿಎಸ್‍ವೈ ಗಹನ ಚರ್ಚೆ
ಮೈಸೂರು

ಬಿಜೆಪಿ ಮುಖಂಡರೊಂದಿಗೆ ಬಿಎಸ್‍ವೈ ಗಹನ ಚರ್ಚೆ

September 12, 2018

ಬೆಂಗಳೂರು: ಆಡಳಿತ ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಪಕ್ಷದ ಪ್ರಮುಖ ನಾಯಕ ರೊಂದಿಗೆ ಸುದೀರ್ಘ ಸಮಾಲೋಚನೆ ನಡೆಸಿದರು. ಡಾಲರ್ಸ್ ಕಾಲನಿಯ ತಮ್ಮ ಧವಳಗಿರಿ ನಿವಾಸದಲ್ಲಿ ಬಹು ಸಮಯದವರೆಗೆ ಗೌಪ್ಯ ಸಭೆ ಮಾಡಿ, ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ಕಾಂಗ್ರೆಸ್-ಜೆಡಿಎಸ್‍ನಿಂದ ಬೇಸರಗೊಂಡು ತಮ್ಮ ಜೊತೆ ಕೈಜೋಡಿ ಸಲು ಶಾಸಕರು ಮುಂದಾಗಿರುವುದು, ಇದೇ ಸಂದರ್ಭದಲ್ಲಿ ವರಿಷ್ಠರು ನೀಡಿರುವ ಸಲಹೆಗಳನ್ನು ನಾಯಕರ ಗಮನಕ್ಕೆ ತಂದಿದ್ದಾರೆ. ಮೈತ್ರಿ ಸರ್ಕಾರ ಉರುಳಿಸಿ, ಬಿಜೆಪಿ ಸರ್ಕಾರ…

ನಮ್ಮ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ
ಮೈಸೂರು

ನಮ್ಮ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ

September 12, 2018

ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್ ನುಡಿ ಮೈಸೂರು: ನಮ್ಮ ಸರ್ಕಾರ ಸುಭದ್ರವಾಗಿದೆ. ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಹೈದರಾಬಾದ್, ಸಿಕಂದ್ರಾಬಾದ್ ಅಥವಾ ಯಾವ ಬಾದ್‍ಗಾದ್ರೂ ಹೋಗಲಿ ಚಿಂತೆ ಇಲ್ಲ. ಸರ್ಕಾರದ ಅಭದ್ರತೆ ವಿಚಾರದಲ್ಲಿ ಯಾರೂ ಕಿವಿಗೊಡಬಾರದು ಎಂದರು. ಸರ್ಕಾರ ರಚನೆಯಾದಾಗಿನಿಂದಲೂ ಇಂತಹ ಸುದ್ದಿಗಳು, ಅಪಪ್ರಚಾರ ನಡೆಯುತ್ತಲೇ ಇವೆ. ಯಾರು ಎಲ್ಲಿಗಾದ್ರೂ ಹೋಗಲಿ, ನನ್ನ ಸರ್ಕಾರ…

ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವಧನ ಏರಿಕೆ: ಪ್ರಧಾನಿ ಘೋಷಣೆ
ಮೈಸೂರು

ಅಂಗನವಾಡಿ, ಆಶಾ ಕಾರ್ಯಕರ್ತರ ಗೌರವಧನ ಏರಿಕೆ: ಪ್ರಧಾನಿ ಘೋಷಣೆ

September 12, 2018

ನವದೆಹಲಿ: ಆಶಾ ಹಾಗೂ ಅಂಗನವಾಡಿ ಕಾರ್ಯ ಕರ್ತೆಯರಿಗೆ ಸಿಹಿ ಸುದ್ದಿ. ಮುಂದಿನ ತಿಂಗಳಿನಿಂದ ಅವ ರಿಗೆ ನೀಡಲಾಗುವ ಗೌರವಧನವನ್ನು ಏರಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಲ್ಲದೇ, ಮಾನ್ಯತೆ ಪಡೆದ ಎಲ್ಲಾ ಆಶಾ ಕಾರ್ಯಕರ್ತೆ ಯರನ್ನು ಪ್ರಮುಖ ಸಾಮಾಜಿಕ ಸುರಕ್ಷತಾ ಯೋಜನೆ ವ್ಯಾಪ್ತಿಗೊಳಪಡಿಸಲಾಗು ವುದು, ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷ ಭೀಮಾ ಯೋಜನೆ ಯಡಿ ಉಚಿತ ವಿಮೆ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ. ಸಾಮಾಜಿಕ ಆರೋಗ್ಯ ಕಾರ್ಯಕರ್ತೆಯರು ವಿಮೆಗಾಗಿ ಯಾವುದೇ ಪ್ರೀಮಿಯಂ…

ಮೈಸೂರಲ್ಲಿ ಅರಣ್ಯ ಇಲಾಖೆ ಹುತಾತ್ಮರಿಗೆ ಗೌರವ ನಮನ: ಹುತಾತ್ಮರ ಗುಣಗಾನ
ಮೈಸೂರು

ಮೈಸೂರಲ್ಲಿ ಅರಣ್ಯ ಇಲಾಖೆ ಹುತಾತ್ಮರಿಗೆ ಗೌರವ ನಮನ: ಹುತಾತ್ಮರ ಗುಣಗಾನ

September 12, 2018

ಮೈಸೂರು: ಮೈಸೂರಿನ ಅಶೋಕಪುರಂನ ಅರಣ್ಯ ಭವನದ ಆವರಣದ ದಿ.ವೆಂಕಟಸ್ವಾಮಿ ಉದ್ಯಾನವನದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಪುಷ್ಪನಮನ ಸಲ್ಲಿಸುವ ಮೂಲಕ ಕರ್ತವ್ಯದ ವೇಳೆ ಹುತಾತ್ಮರಾದ ಅರಣ್ಯ ಸಿಬ್ಬಂದಿಯ ಆತ್ಮಕ್ಕೆ ಶಾಂತಿ ಕೋರಿ, ಗೌರವ ನಮನ ಸಲ್ಲಿಸಿದರು. ಪ್ರತಿ ವರ್ಷ ಸೆ.11ರಂದು ಅರಣ್ಯ ಇಲಾಖೆ ಹುತಾತ್ಮರ ದಿನ ಆಚರಿಸಿ ರಾಜ್ಯದ ವಿವಿಧ ಅರಣ್ಯಗಳಲ್ಲಿ ಕರ್ತವ್ಯ ನಿರ್ವಹಿಸುವಾಗಲೇ ಹುತಾತ್ಮರಾದ ಅರಣ್ಯ ಇಲಾಖೆಯ ಸಿಬ್ಬಂದಿಗಳಿಗೆ ಗೌರವ ಸಮರ್ಪಿಸುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದು ಮೈಸೂರಿನ ಅಶೋಕಪುರಂನ ಅರಣ್ಯ ಭವನದ…

ಆರೋಗ್ಯವಂತ ಮಹಿಳೆ-ಸಂತಸದ ಮನೆ: ಸೆ.16ರಂದು `ಸೀರೆ ನಡಿಗೆ’ ಸ್ಪರ್ಧೆ
ಮೈಸೂರು

ಆರೋಗ್ಯವಂತ ಮಹಿಳೆ-ಸಂತಸದ ಮನೆ: ಸೆ.16ರಂದು `ಸೀರೆ ನಡಿಗೆ’ ಸ್ಪರ್ಧೆ

September 12, 2018

ಮೈಸೂರು:`ಆರೋಗ್ಯವಂತ ಮಹಿಳೆ-ಸಂತಸದ ಮನೆ’ ವಿಷಯ ಕುರಿತಂತೆ ಮೈಸೂರಿನ ಇನ್ನರ್ ವ್ಹೀಲ್ ಕ್ಲಬ್ ಆಫ್ ಮೈಸೂರು ಸೆಂಟ್ರಲ್ ವತಿಯಿಂದ ಸೆ.16ರಂದು ಬೆಳಿಗ್ಗೆ 6 ಗಂಟೆಗೆ ಮಹಿಳೆಯರಿಗಾಗಿ `ಸೀರೆ ನಡಿಗೆ’ (ಸ್ಯಾರಿ ವಾಕಥಾನ್) ಏರ್ಪಡಿಸಿದೆ. ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯರು ಸೀರೆ ಉಟ್ಟು ನಡೆಯುವ ಸ್ಪರ್ಧೆ ಏರ್ಪಡಿಸಿದೆ. ಮೂರು ಕಿ.ಮೀ ಉದ್ದದ ಈ ನಡಿಗೆ ಬೆಳಿಗ್ಗೆ 6 ಗಂಟೆಗೆ ಮೈಸೂರಿನ ಮಹಾರಾಜ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಜಮಾತೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಲಿದ್ದಾರೆ. ಮಹಾರಾಜ ಜೂನಿಯರ್…

ಗೊಂದಲದ ಗೂಡಾದ ನಂಜನಗೂಡು ನಗರಸಭೆಯ ವಿಶೇಷ ಸಾಮಾನ್ಯ ಸಭೆ
ಮೈಸೂರು

ಗೊಂದಲದ ಗೂಡಾದ ನಂಜನಗೂಡು ನಗರಸಭೆಯ ವಿಶೇಷ ಸಾಮಾನ್ಯ ಸಭೆ

September 12, 2018

ನಾಲ್ವರು ಸದಸ್ಯರಿಂದ ಪ್ರತಿಭಟನೆ, 3 ಟೆಂಡರ್‍ಗೆ ಅನುಮೋದನೆ ನಂಜನಗೂಡು: ನಗರಸಭೆಯಲ್ಲಿ ಇಂದು ವಿಶೇಷ ಸಾಮಾನ್ಯ ಸಭೆ ನಗರಸಭಾ ಅಧ್ಯಕ್ಷೆ ಪುಷ್ಪಲತಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾರಂಭದಲ್ಲೇ ಸದಸ್ಯರ ಪರಸ್ಪರ ವಾಕ್ ಸಮರ ನಡೆದು 2 ತಾಸಿ ನವರೆಗೆ ನಾಲ್ವರು ಸದಸ್ಯರು ನಮ್ಮ ವಾರ್ಡ್‍ಗಳ ಅಭಿವೃದ್ಧಿಗೆ ನಗರೋತ್ಥಾನ ಯೋಜನೆಯಡಿಯಲ್ಲಿ ಕಾಮಗಾರಿ ಕೈಗೊಂಡಿಲ್ಲ ಎಂದು ಪ್ರತಿಭಟಿಸಿದರು. ಇಂದು ಮಧ್ಯಾಹ್ನ ಸಾಮಾನ್ಯ ವಿಶೇಷ ಅಧಿವೇಶನ ಪ್ರಾರಂಭವಾಯಿತು. ಸದಸ್ಯರಾದ ನಿಂಗಪ್ಪ, ಖಾಲಿದ್, ಬಾಬು, ಇಂದ್ರಾಣಿ ಅವರು ತಮ್ಮ ಆಸನದಿಂದ ಎದ್ದು ನಗರ ಸಭಾ…

ಜೀತಮುಕ್ತ ಕಾರ್ಮಿಕರು ಸ್ವಂತ ಊರಿಗೆ
ಮೈಸೂರು

ಜೀತಮುಕ್ತ ಕಾರ್ಮಿಕರು ಸ್ವಂತ ಊರಿಗೆ

September 12, 2018

ತಹಸೀಲ್ದಾರ್ ನಗದು, ಚೆಕ್ ಪ್ರಮಾಣ ಪತ್ರ ವಿತರಣೆ ಬೈಲಕುಪ್ಪೆ:  ಜೀತಮುಕ್ತ 15 ಕೂಲಿ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತಲುಪಿಸುವಂತೆ ಉಪವಿಭಾಗಾ ಧಿಕಾರಿ ಕೆ.ನಿತೀಶ್ ನೀಡಿದ ಆದೇಶದಂತೆ ತಲಾ 3 ಸಾವಿರ ನಗದು 17 ಸಾವಿರ ಚೆಕ್ ಹಾಗೂ ಜೀತಮುಕ್ತ ಪ್ರಮಾಣ ಪತ್ರವನ್ನು ಜೀತಮುಕ್ತರಿಗೆ ತಹಸಿಲ್ದಾರ್ ಜೆ. ಮಹೇಶ್ ಮಂಗಳವಾರ ವಿತರಿಸಿದರು. ಪಿರಿಯಾಪಟ್ಟಣ ತಾಲೂಕು ಬೈಲಕುಪ್ಪೆ ಟಿಬೇಟಿಯನ್ ನಿರಾಶ್ರಿತರ ಶಿಬಿರದಲ್ಲಿ ಶುಂಠಿ ಕೆಲಸಕ್ಕೆಂದು ಬಂದು ಜೀತದಾಳು ಗಳಾಗಿದ್ದ 15 ಮಂದಿಗೆ ಹುಣಸವಾಡಿ ಬಿಸಿಎಂ ಹಾಸ್ಟೆಲ್‍ನಲ್ಲಿ ತಾಲೂಕು ಆಡಳಿತದ…

1 1,394 1,395 1,396 1,397 1,398 1,611
Translate »