ನಮ್ಮ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ
ಮೈಸೂರು

ನಮ್ಮ ಸರ್ಕಾರ ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ

September 12, 2018

ಮುಖ್ಯಮಂತ್ರಿ ಕುಮಾರಸ್ವಾಮಿ ಖಡಕ್ ನುಡಿ
ಮೈಸೂರು: ನಮ್ಮ ಸರ್ಕಾರ ಸುಭದ್ರವಾಗಿದೆ. ಅದನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಹಾಗೂ ಕ್ರೀಡಾ ವೇದಿಕೆ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಹೈದರಾಬಾದ್, ಸಿಕಂದ್ರಾಬಾದ್ ಅಥವಾ ಯಾವ ಬಾದ್‍ಗಾದ್ರೂ ಹೋಗಲಿ ಚಿಂತೆ ಇಲ್ಲ. ಸರ್ಕಾರದ ಅಭದ್ರತೆ ವಿಚಾರದಲ್ಲಿ ಯಾರೂ ಕಿವಿಗೊಡಬಾರದು ಎಂದರು.

ಸರ್ಕಾರ ರಚನೆಯಾದಾಗಿನಿಂದಲೂ ಇಂತಹ ಸುದ್ದಿಗಳು, ಅಪಪ್ರಚಾರ ನಡೆಯುತ್ತಲೇ ಇವೆ. ಯಾರು ಎಲ್ಲಿಗಾದ್ರೂ ಹೋಗಲಿ, ನನ್ನ ಸರ್ಕಾರ ಸುಭದ್ರವಾಗಿದೆ. ಮುಖ್ಯಮಂತ್ರಿ ಹುದ್ದೆ ಶಾಶ್ವತವಲ್ಲ. ಈ ಹುದ್ದೆ ಯಾರಿಗೂ ಶಾಶ್ವತವೆಂದು ಹೇಳಲಾಗದು. ಜನರ ಸಮಸ್ಯೆ, ಸಂಕಷ್ಟ ಪರಿಹಾರ ಮಾಡುವುದು ಮುಖ್ಯ ಎಂದರು.

ನೂರು ದಿನಗಳಿಂದ ಇಂದು ಬೀಳುತ್ತದೆ, ನಾಳೆ ಬೀಳುತ್ತದೆ ಅಂದಿದ್ರು, ಈಗ ಗೌರಿ-ಗಣೇಶ ಹಬ್ಬ ಅಂತಿದ್ದಾರೆ, ಗಾಂಧಿಜಯಂತಿ, ಮುಂದೆ ದಸರಾ ಅಂತ ಹೇಳ್ಕೊಂಡು ಬರ್ತಿದ್ದಾರೆ. ಸರ್ಕಾರ ಎಷ್ಟು ಭದ್ರವಾಗಿದೆ ಅನ್ನೋದು ನನಗೆ ಗೊತ್ತಿದೆ ಎಂದು ಟಾಂಗ್ ನೀಡಿದ ಕುಮಾರಸ್ವಾಮಿ, ಇದರಿಂದ ಅಧಿಕಾರಿಗಳು ಉದಾಸೀನ ಮಾಡಿದರೆ ಸಹಿಸಲಾಗದು. ನನಗೆ ಜಾತಿ ಪ್ರಶ್ನೆ ಇಲ್ಲ. ಪ್ರಾಮಾಣಿಕವಾಗಿ ಕೆಲಸ ಮಾಡುವವರಿಗೆ ರಕ್ಷಣೆ ಇರುತ್ತದೆ. ಉದಾಸೀನ ಮಾಡುವವರಿಗಲ್ಲ ಎಂದು ಪರೋಕ್ಷ ಎಚ್ಚರಿಕೆ ನೀಡಿದರು.

Translate »