ಬಿಜೆಪಿಗಿಂತ ಸಿದ್ದರಾಮಯ್ಯ ನಮ್ಮ ಮೊದಲ ಶತ್ರು
ಮೈಸೂರು

ಬಿಜೆಪಿಗಿಂತ ಸಿದ್ದರಾಮಯ್ಯ ನಮ್ಮ ಮೊದಲ ಶತ್ರು

August 23, 2019

ಬೆಂಗಳೂರು, ಆ.22(ಕೆಎಂಶಿ)-ಬಿಜೆಪಿ ಗಿಂತ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ನಮ್ಮ ಮೊದಲ ರಾಜಕೀಯ ಶತ್ರು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಆಂಗ್ಲ ವೆಬ್‍ಸೈಟ್‍ಗೆ ನೀಡಿರುವ ಸಂದರ್ಶ ನದಲ್ಲಿ ಮೊದಲ ಬಾರಿಗೆ ಸಿದ್ದರಾಮಯ್ಯ ಅವರನ್ನು ಬಹಿರಂಗವಾಗಿ ತರಾಟೆಗೆ ತೆಗೆದು ಕೊಂಡಿದ್ದಾರೆ. ಮುಖ್ಯಮಂತ್ರಿ ಸ್ಥಾನದಿಂದ ನನ್ನನ್ನು ಕೆಳಗಿಳಿಸಿ, ಬಿ.ಎಸ್.ಯಡಿಯೂರಪ್ಪ ಅಧಿಕಾರ ವಹಿಸಿಕೊಳ್ಳಲು ಇವರ ರಾಜಕೀಯ ಕರಾಮತ್ತೆ ಕಾರಣ. ಯಡಿಯೂರಪ್ಪ ಪೂರ್ಣ ವಾಗಿ ಸಂಪುಟ ರಚನೆಗೂ ಮುನ್ನವೇ ಟೆಲಿ ಫೋನ್ ಕದ್ದಾಲಿಕೆ ಸಿಬಿಐಗೆ ವಹಿಸಲು ಸಿದ್ದ ರಾಮಯ್ಯನವರೇ ಕಾರಣ ಎಂದು ತಿಳಿಸಿದ್ದಾರೆ.

ನಮಗೆ ಕಾಂಗ್ರೆಸ್ ಪಕ್ಷದ ಜೊತೆ ಭಿನ್ನಾಭಿ ಪ್ರಾಯವಿಲ್ಲ. ಆ ಪಕ್ಷದ ಅಧಿನಾಯಕಿ, ಜೆಡಿಎಸ್ ಜೊತೆಗಿನ ಮೈತ್ರಿಗೆ ಸಂಬಂಧಿಸಿದಂತೆ ತೆಗೆದು ಕೊಳ್ಳುವ ನಿರ್ಧಾರಕ್ಕೆ ಬದ್ಧರಾಗುತ್ತೇವೆ. ಆದರೆ ಸಿದ್ದ ರಾಮಯ್ಯನ ನಾಯಕತ್ವದಲ್ಲಿ ಕಾಂಗ್ರೆಸ್ ಹೋದರೆ, ನಾವು ಅವರ ಜೊತೆ ಯಾವುದೇ ಸಂಬಂಧವನ್ನು ಇಟ್ಟುಕೊಳ್ಳುವುದಿಲ್ಲ. ಇದ ಕ್ಕಿಂತ ಬಿಜೆಪಿ ಪಕ್ಷವೇ ಉತ್ತಮ ಎಂದು ಬಣ್ಣಿ ಸಿದ್ದಾರೆ. ನಮ್ಮ ಕುಟುಂಬ ಮುಖ್ಯಮಂತ್ರಿಯಾಗಿ ಅಧಿಕಾರ ಹಿಡಿದಿದ್ದು, ಸಿದ್ದರಾಮಯ್ಯನವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ನನ್ನ ವಿರುದ್ಧ ಕತ್ತಿ ಮಸೆಯುತ್ತಲೇ ಬಂದರು.

ನಾನು ತೆಗೆದುಕೊಂಡ ಕಾರ್ಯಕ್ರಮಗಳು ಜನಪ್ರಿಯವಾಗುವುದನ್ನು ಸಹಿಸದೇ ಪ್ರತಿ ಹಂತದಲ್ಲೂ ತಮ್ಮ ಆಪ್ತರನ್ನು ಛೂ ಬಿಟ್ಟು ಕಾಂಗ್ರೆಸ್‍ನಲ್ಲಿ ಬಂಡಾಯ ಎಬ್ಬಿಸಿದರು. ಅಷ್ಟೇ ಅಲ್ಲ ಸರ್ಕಾರ ಉರುಳಲು ಅವರ ಆಪ್ತರೇ ಕಾರಣ. ಅವರ ಮಾರ್ಗದರ್ಶ ನದಲ್ಲೇ ಈ ಶಾಸಕರು ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಹೋಗಲು ಮುಂದಾದರು. 14 ತಿಂಗಳ ಕಾಲ ನನಗೂ ಈ ಜಂಜಾಟ ಸಾಕಾಗಿ ಹೋಗಿತ್ತು. ಇದರ ಎಲ್ಲಾ ಅರಿವು ರಾಜ್ಯ ಮತ್ತು ರಾಷ್ಟ್ರೀಯ ಕಾಂಗ್ರೆಸ್‍ನ ಮುಖಂಡರಿಗೂ ತಿಳಿದಿದೆ. ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯನವರಿಗೆ ಸರ್ಕಾರ ಉಳಿಸಲು ಹತ್ತು ಹಲವು ಬಾರಿ ಸಲಹೆ-ಸೂಚನೆಗಳನ್ನು ನೀಡಿದ್ದರು. ಆದರೆ ಇವರ ಆಟಕ್ಕೆ ರಾಜ್ಯ ನಾಯಕರು ಏನೂ ಮಾಡಲಾಗದೇ, ಕೈಕಟ್ಟಿ ಕುಳಿತರು. ನಾನು ಅಮೆರಿಕ ಪ್ರವಾಸದಲ್ಲಿದ್ದಾಗ, ಕಾಂಗ್ರೆಸ್ ಶಾಸಕರು ಬಿಜೆಪಿ ಸೇರುವುದು ನನಗೆ ಖಚಿತ ಮಾಹಿತಿ ಇತ್ತು. ಆದರೆ ಪ್ರತಿ ಬಾರಿ ಸರ್ಕಾರ ಉಳಿಸಲು ಭಾರೀ ಕಸರತ್ತು ನಡೆಸಿದ್ದೆ. ಆದರೆ ಕೊನೆ ಹೋರಾಟದಲ್ಲಿ ನಾನೇ ಕೈಬಿಟ್ಟೆ. ಕೆಲವರು ಹಿಂದಕ್ಕೆ ಬರಲು ಸಿದ್ಧರಾಗಿದ್ದರೂ, ಸಿದ್ದರಾಮಯ್ಯ ಬಂದವರನ್ನು ವಿಶೇಷ ವಿಮಾನದಲ್ಲಿ ಮತ್ತೆ ಮುಂಬೈಗೆ ಕಳುಹಿಸುವ ವ್ಯವಸ್ಥೆ ಮಾಡುತ್ತಿದ್ದರು ಎಂದು ದೂರಿದ್ದಾರೆ. ಬೇಕಾದರೆ ಕಾಂಗ್ರೆಸ್, ಸರ್ಕಾರ ಉಳಿಸಿಕೊಳ್ಳಲಿ ಎಂದು ನಾನು ಕೈ ಚೆಲ್ಲಿದೆ. ನಂತರ ಎಲ್ಲಾ ಬೆಳವಣಿಗೆ ನಿಮಗೆ ತಿಳಿದಿದೆ ಎಂದಿದ್ದಾರೆ.

ONE COMMENT ON THIS POST To “ಬಿಜೆಪಿಗಿಂತ ಸಿದ್ದರಾಮಯ್ಯ ನಮ್ಮ ಮೊದಲ ಶತ್ರು”

Translate »