ಮೈಸೂರಿಗೆ ವಿ.ಸೋಮಣ್ಣ ಉಸ್ತುವಾರಿ
ಮೈಸೂರು

ಮೈಸೂರಿಗೆ ವಿ.ಸೋಮಣ್ಣ ಉಸ್ತುವಾರಿ

August 23, 2019

ಮೈಸೂರು, ಆ.22- ಸಚಿವ ವಿ.ಸೋಮಣ್ಣ ಅವರು ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಆಗಿದ್ದು, ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿದೆ. ಆದೇಶ ಪತ್ರದಲ್ಲಿ, ವಿ.ಸೋಮಣ್ಣ, ಮಾನ್ಯ ಸಚಿವರು, ಕರ್ನಾಟಕ ಸರ್ಕಾರ ಇವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ನೇಮಿಸಲಾಗಿದೆ ಎಂದು ಆದೇಶಿಸಿದೆ.

ನೆರೆ ಬಗ್ಗೆ ಪರಿಶೀಲನೆ ಮಾಡಿ ಮಾಹಿತಿ ನೀಡುವುದಕ್ಕೆ ಆರ್.ಅಶೋಕ್ ಅವರನ್ನು ಮೈಸೂ ರಿನ ಉಸ್ತುವಾರಿ ಆಗಿ ಮಾಡಲಾಗಿತ್ತು. ಆಗ ಅಶೋಕ್ ಅವರೇ ಜಿಲ್ಲಾ ಉಸ್ತುವಾರಿ ಆಗು ತ್ತಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇಂದು ಬೆಳಿಗ್ಗೆ ದಸರಾ ಗಜಪಡೆಗೆ ಚಾಲನೆ ನೀಡುವಾಗ ಸೋಮಣ್ಣ ಅವರು ಮೈಸೂರಿನ ಉಸ್ತುವಾರಿ ಆರ್.ಅಶೋಕ್ ಆದರೆ ನನಗೆ ಸಂತೋಷ ಎಂದು ಹೇಳಿದ್ದರು. ಆದರೆ ಅಷ್ಟ ರಲ್ಲಿ ಸರ್ಕಾರ ವಿ.ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿ ಆಗಿ ನೇಮಕ ಮಾಡಿ ಆದೇಶಿ ಸಿದೆ. ಮುಂದಿನ ತಿಂಗಳು ದಸರಾ ಬರುತ್ತಿ ರುವ ಕಾರಣ ತರಾತುರಿಯಲ್ಲಿ ಸೋಮಣ್ಣ ಅವರನ್ನು ಜಿಲ್ಲಾ ಉಸ್ತುವಾರಿಯಾಗಿ ನೇಮಕ ಮಾಡಿದ್ದಾರೆ ಎನ್ನಲಾಗಿದೆ.

Translate »