ಪಾಂಡವಪುರ, ಕೆ.ಆರ್.ಪೇಟೆಯಲ್ಲಿ ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ
ಮಂಡ್ಯ

ಪಾಂಡವಪುರ, ಕೆ.ಆರ್.ಪೇಟೆಯಲ್ಲಿ ಹೆಚ್‍ಡಿಕೆ ಹುಟ್ಟುಹಬ್ಬ ಆಚರಣೆ

December 17, 2019

ಪಾಂಡವಪುರ/ ಕೆ.ಆರ್.ಪೇಟೆ, ಡಿ.16- ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ 60ನೇ ಹುಟ್ಟುಹಬ್ಬವನ್ನು ಪಾಂಡವಪುರ ಹಾಗೂ ಕೆ.ಆರ್.ಪೇಟೆ ಯಲ್ಲಿ ಆಚರಿಸಿದ ಬಗ್ಗೆ ವರದಿಯಾಗಿದೆ.

ಪಾಂಡವಪುರ: ಮಾಜಿ ಸಿಎಂ ಹೆಚ್.ಡಿ.ಕುಮಾರ ಸ್ವಾಮಿ ಅವರ 60ನೇ ಹುಟ್ಟುಹಬ್ಬವನ್ನು ಜೆಡಿಎಸ್ ಕಾರ್ಯಕರ್ತರು ಜಿಪಂ ಸದಸ್ಯ ಸಿ.ಅಶೋಕ್ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು. ಈ ವೇಳೆ ಜೆಡಿಎಸ್ ಅಧ್ಯಕ್ಷ ಹೆಚ್.ಇ.ಧರ್ಮರಾಜು, ಯುವ ಘಟಕದ ಅಧ್ಯಕ್ಷ ಚೇತನ್, ಮುಖಂಡರಾದ ಚಲುವರಾಜು, ವಿ.ಎಸ್. ನಿಂಗೇಗೌಡ, ಬಿ.ವೈ.ಬಾಬು, ಶ್ರೀಹರ್ಷ, ಅಶೋಕ್, ಕೃಷ್ಣ, ಮಹೇಂದ್ರ, ಅರವಿಂದ್, ಮೋಹನ್, ರವಿಕುಮಾರ್ ಹಲವರಿದ್ದರು.

ಕೆ.ಆರ್.ಪೇಟೆ: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮತ್ತು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರ ಹುಟ್ಟುಹಬ್ಬದ ಅಂಗವಾಗಿ ತಾಲೂಕು ಜೆಡಿಎಸ್ ಕಾರ್ಯ ಕರ್ತರು ಪಟ್ಟಣದ ದುಂಡಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ ಮಾಡಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

ಈ ವೇಳೆ ಜಿಪಂ ಸದಸ್ಯ ಬಿ.ಎಲ್.ದೇವರಾಜು, ಉಪಾ ಧ್ಯಕ್ಷೆ ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಜಿಪಂ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಹೆಚ್.ಟಿ. ಮಂಜು, ಜೆಡಿಎಸ್ ಮುಖಂಡರಾದ ಎ.ಆರ್.ರಘು, ಬಸ್ ಕೃಷ್ಣೇಗೌಡ, ಜಿಪಂ ಸದಸ್ಯರಾದ ರಾಮದಾಸ್, ತಾಲೂಕು ಯುವ ಜೆಡಿಎಸ್ ಅಧ್ಯಕ್ಷ ಕೆ.ಎಸ್.ಸಂತೋಷ್ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಜಗನ್ನಾಥ್, ಮುಖಂಡರಾದ ರೇವಣ್ಣ, ಅಶೋಕ್‍ಕುಮಾರ್, ಬಿ.ಎಸ್. ಪುಟ್ಟಸ್ವಾಮಿಗೌಡ, ಹೆಚ್.ಆರ್.ನಾಗರಾಜೇಗೌಡ, ವಸಂತ ಕುಮಾರ್, ಕುಮಾರ್, ಸುಬ್ಬೇಗೌಡ, ಬಿ.ವಿ.ನಾಗೇಶ್, ರಂಗರಾಜು, ಕೆ.ವಿ.ದಿವಾಕರ್, ತನ್ವೀರ್‍ಪಾಷಾ, ಸಚಿನ್‍ಕೃಷ್ಣ, ಅತೀಕ್, ಪುರ ಸಭಾ ಸದಸ್ಯ ಗಿರೀಶ್, ಶ್ರೀನಿಧಿ, ಕೆ.ಟಿ.ಶ್ರೀನಿವಾಸ್, ಲೋಕೇಶ್, ತಾಲೂಕು ಹೆಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಸಂಘದ ಲೋಕೇಶ್, ಕುಮಾರ್ ಮತ್ತಿತರರಿದ್ದರು.

Translate »