ಪಾಂಡವಪುರ ಪೊಲೀಸರಿಂದ 7 ಡಕಾಯಿತರ ಬಂಧನ: 9.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇತರ ವಸ್ತುಗಳು ವಶ, ಆರು ದರೋಡೆ ಪ್ರಕರಣ ಪತ್ತೆ
ಮಂಡ್ಯ

ಪಾಂಡವಪುರ ಪೊಲೀಸರಿಂದ 7 ಡಕಾಯಿತರ ಬಂಧನ: 9.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಇತರ ವಸ್ತುಗಳು ವಶ, ಆರು ದರೋಡೆ ಪ್ರಕರಣ ಪತ್ತೆ

December 17, 2019

ಮಂಡ್ಯ, ಡಿ. 16(ನಾಗಯ್ಯ)- ಏಳು ಡಕಾ ಯಿತರನ್ನು ಬಂಧಿಸುವಲ್ಲಿ ಯಶಸ್ವಿಯಾಗಿ ರುವ ಪಾಂಡವಪುರ ಪೊಲೀಸರು, 9.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿ ದ್ದಾರೆ. ಈ ಡಕಾಯಿತರು ಪಾಂಡವಪುರ, ಶ್ರೀರಂಗಪಟ್ಟಣ, ಸಾಲಿಗ್ರಾಮ ಹಾಗೂ ಹಾಸನ ಜಿಲ್ಲೆಯ ಗೊರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಪತ್ತೆಯಾಗಿದೆ.ಮಂಡ್ಯದ ತಮ್ಮ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಎಸ್ಪಿ ಕೆ. ಪರಶು ರಾಮ್, ಪ್ರಕರಣಗಳ ಬಗ್ಗೆ ವಿವರಿಸಿದರು.

ಪಾಂಡವಪುರ ತಾಲೂಕು ಚಿನಕುರಳಿಯ ಡ್ರೈವರ್ ಕೃಷ್ಣ(24), ಫೋಟೋಗ್ರಾಫರ್ ಸಿ.ಎನ್. ಆಕಾಶ್(19), ಸಿ.ಎಸ್. ಗುರು ಕಿರಣ್(20), ಮೈಸೂರಿನ ನೆಹರುನಗರದ ಮರಗೆಲಸಗಾರ ನವಾಜ್(25), ತನ್ವೀರ್ ಸೇಠ್‍ನಗರದ ಕಾರ್ ಸೀಟ್ ಹೊಲೆ ಯುವ ಕೆಲಸಗಾರ ಅಬೀದ್(24), ಕಲ್ಯಾಣ ಗಿರಿಯ ಬಾರ್‍ಬೆಂಡಿಂಗ್ ಕೆಲಸಗಾರ ರೋಹನ್(20), ಗೌಸಿಯಾನಗರದ ಅಡುಗೆ ಕೆಲಸಗಾರ ವಾಸಿಂ ಹುಸೇನ್ (23) ಬಂಧಿತ ಡಕಾಯಿತರು.

ಡಿ. 3ರಂದು ರಾತ್ರಿ 2 ಗಂಟೆ ಸುಮಾರಿ ನಲ್ಲಿ ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬೇಬಿ ಬೆಟ್ಟದಲ್ಲಿರುವ ಅಹಲ್ಯ ದೇವಿ ಕ್ರಷರ್‍ಗೆ ಬೈಕ್‍ನಲ್ಲಿ ಬಂದ ಮೂವರು ಮುಸುಕುಧಾರಿಗಳು ಮಾರಕಾಸ್ತ್ರಗಳನ್ನು ಹಿಡಿದು ಕ್ರಷರ್ ಸಿಬ್ಬಂದಿಗೆ ಬೆದರಿಸಿ 18 ಸಾವಿರ ರೂ. ದೋಚಿದ್ದರು. ಅದೇ ದಿನ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಟಿ.ಎಂ.ಹೊಸೂರಿನಲ್ಲಿ ರುವ ಶ್ರೀ ರಂಗನಾಥ ಸ್ಟೋನ್ ಕ್ರಷರ್‍ಗೆ ನುಗ್ಗಿದ ದುಷ್ಕರ್ಮಿಗಳು, 4 ಸಾವಿರ ರೂ. ನಗದು ಹಾಗೂ 4 ಸ್ಮಾರ್ಟ್ ಫೋನ್ ದೋಚಿದ್ದರು. ಡಿ.6ರಂದು ಪಾಂಡವ ಪುರ ತಾಲೂಕು ಶಂಭೂನಹಳ್ಳಿ ಬಳಿ ಬೈಕ್ ನಲ್ಲಿ ತೆರಳುತ್ತಿದ್ದ ಚಿನಕುರಳಿಯ ವಿನಾ ಯಕ ಜ್ಯುವೆಲ್ಲರಿ ಮಾಲೀಕ ಜಂಬು ಜೋಹಾರಿ ಅವರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಚಿನ್ನಾ ಭರಣ ಹಾಗೂ ಹಣ ದೋಚಿದ್ದರು. ಇವೆಲ್ಲಾ ಪ್ರಕರಣಗಳಲ್ಲೂ ಈ ಆರೋಪಿಗಳು ಭಾಗಿ ಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.

ಬೇಬಿ ಬೆಟ್ಟದಲ್ಲಿ ನಡೆದಿದ್ದ ದರೋಡೆ ಪ್ರಕರಣದ ತನಿಖೆ ನಡೆಸುತ್ತಿದ್ದ ಪಾಂಡವ ಪುರ ಪೊಲೀಸರು ಅಲ್ಲಿನ ಸಿಸಿ ಕ್ಯಾಮರಾ ದಲ್ಲಿ ದಾಖಲಾಗಿದ್ದ ದೃಶ್ಯಾವಳಿಗಳಿಗಳನ್ನು ಪರಿಶೀಲಿಸಿದಾಗ, ದರೋಡೆಗೂ ಕೆಲ ದಿನಗಳ ಹಿಂದೆ ಇಬ್ಬರು ಯುವಕರು ಅಲ್ಲಿಗೆ ಬಂದು ಕ್ರಷರ್ ಸಿಬ್ಬಂದಿ ಜೊತೆ ಮಾತ ನಾಡುತ್ತಿರುವುದು ಕಂಡು ಬಂತು. ಈ ಹಿನ್ನೆಲೆಯಲ್ಲಿ ಎಸ್. ಕೃಷ್ಣ ಮತ್ತು ಸಿ.ಎನ್. ಆಕಾಶ್ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಈ ಆರು ದರೋಡೆ ಪ್ರಕರಣಗಳು ಪತ್ತೆಯಾಯಿತು ಎಂದು ಎಸ್ಪಿ ತಿಳಿಸಿದರು.

ಈ ಕಾರ್ಯಾಚರಣೆಯಲ್ಲಿ ಹೆಚ್ಚುವರಿ ಎಸ್ಪಿ ಶ್ರೀಮತಿ ಶೋಭಾರಾಣಿ, ಶ್ರೀರಂಗ ಪಟ್ಟಣ ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಪಾಂಡವಪುರ ಸರ್ಕಲ್ ಇನ್ಸ್‍ಪೆಕ್ಟರ್ ರವೀಂದ್ರ ನೇತೃತ್ವ ದಲ್ಲಿ ಎಎಸ್‍ಐ ಬಿ.ಜೆ. ರವಿ, ಸಿಬ್ಬಂದಿ ಗಳಾದ ಎಸ್. ಅರುಣ್‍ಕುಮಾರ್, ಕೆ. ಶ್ರೀನಿವಾಸಮೂರ್ತಿ, ಎನ್.ಎಸ್. ಚಂದ್ರ ಶೇಖರ್, ಕೃಷ್ಣ ಶೆಟ್ಟಿ, ಕೆ.ಆರ್. ಸತೀಶ, ಮಹದೇವ, ರವಿಕಿರಣ, ಲೋಕೇಶ್ ಅವರು ಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿ ಸಿದ್ದು, ಅವರನ್ನೆಲ್ಲಾ ಜಿಲ್ಲಾ ಎಸ್ಪಿ ಪ್ರಶಂಸಿದ್ದಾರೆ.

ಒಬ್ಬ ಸಾಲ ತೀರಿಸಲು, ಮತ್ತೊಬ್ಬ ಮದುವೆಗೆ ಚಿನ್ನ ಖರೀದಿಸಲು ದರೋಡೆ
ಬಂಧಿತ ಡಕಾಯಿತರಲ್ಲಿ ಒಬ್ಬ ಸಾಲ ತೀರಿಸಲು ಹಾಗೂ ಮತ್ತೊಬ್ಬ ತನ್ನ ಮದುವೆಗೆ ಚಿನ್ನ ಖರೀದಿಸಲು ದರೋಡೆಗೆ ಇಳಿದದ್ದು, ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಬಂಧಿತರ ಪೈಕಿ ಚಿನಕುರಳಿಯ ಕೃಷ್ಣ ಟಿಪ್ಪರ್ ಖರೀದಿಸಿದ್ದರು. ಅದರ ಸಾಲ ತೀರಿಸಿಬೇಕಿತ್ತು. ಇಎಂಐ ಕಟ್ಟುವ ಅವಧಿ ಮುಗಿದಿದ್ದು, ಹಣ ಕಟ್ಟದಿದ್ದರೆ ಟಿಪ್ಪರ್‍ನ್ನು ವಶಪಡಿಸಿಕೊಳ್ಳಲಾಗುತ್ತದೆ ಎಂಬಂತಹ ಸ್ಥಿತಿಯಲ್ಲಿ ಸಾಲದ ಇಎಂಐ ಕಟ್ಟಿ ಟಿಪ್ಪರ್ ಉಳಿಸಿಕೊಳ್ಳಬೇಕು ಎಂದು ಆತ ಇತರರೊಂದಿಗೆ ಸೇರಿ ದರೋಡೆಗಿಳಿದಿದ್ದಾನೆ. ಮೈಸೂರಿನ ನೆಹರುನಗರದ ಮರಗೆಲಸಗಾರ ನವಾಜ್‍ಗೆ ಡಿ. 14ರಂದು ಶಿಕ್ಷಕಿಯೋರ್ವರ ಜೊತೆ ಮದುವೆ ನಿಗದಿಯಾಗಿತ್ತು. ಮದುವೆಗೆ ಚಿನ್ನ ಖರೀದಿಸಲು ಹಣವಿಲ್ಲದೆ ಪರದಾಡುತ್ತಿದ್ದ ಈತ, ಚಿನ್ನಕ್ಕಾಗಿ ದರೋಡೆಗಾಗಿ ದರೋಡೆಗಿಳಿದಿದ್ದಾನೆ. ಪೊಲೀಸರು ಈತನನ್ನು ಡಿ. 10ರಂದೇ ವಶಕ್ಕೆ ತೆಗೆದುಕೊಂಡಿದ್ದು, ಮದುವೆಯೂ ನಿಂತು ಹೋಗಿ ಈತ ಜೈಲು ಪಾಲಾಗಬೇಕಾಯಿತು.

Translate »