ಸ್ಕೂಟರ್‍ಗೆ ಬಸ್ ಡಿಕ್ಕಿ: ಬಾಲಕ ಸಾವು
ಕೊಡಗು

ಸ್ಕೂಟರ್‍ಗೆ ಬಸ್ ಡಿಕ್ಕಿ: ಬಾಲಕ ಸಾವು

December 17, 2019

ಕುಶಾಲನಗರ, ಡಿ.16- ಸ್ಕೂಟರ್‍ಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಹಿಂಬದಿ ಕುಳಿತಿದ್ದ ಬಾಲಕನ ಮೇಲೆ ಬಸ್ ಹರಿದು ಆತ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಪಟ್ಟಣದ ಬೈಚನಹಳ್ಳಿಯಲ್ಲಿ ಸೋಮವಾರ ನಡೆದಿದೆ. ಪೃಥ್ವಿ(3) ಮೃತಪಟ್ಟ ಬಾಲಕ. ಗೊಂದಿ ಬಸವನಹಳ್ಳಿಯ ನಿವಾಸಿಯಾದ ಪರಮೇಶ್ವರ್ ಮತ್ತು ಗೀತಾ ದಂಪತಿ ಪುತ್ರ ಈತ.

ಘಟನೆ ವಿವರ: ಪರಮೇಶ್ ಅವರು ಪಟ್ಟಣದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಪೂಜೆ ಮುಗಿಸಿಕೊಂಡು ತಮ್ಮ ಸ್ಕೂಟರ್‍ನಲ್ಲಿ ಮಗ ಪೃಥ್ವಿಯನ್ನು ಕರೆದುಕೊಂಡು ಮನೆಗೆ ಹೋಗುತ್ತಿದ್ದಾಗ ಬೈಚನಹಳ್ಳಿ ಬಳಿ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬರುತ್ತಿದ್ದ ಸರ್ಕಾರಿ ಕೆಎಸ್ ಆರ್‍ಟಿ ಬಸ್ ಡಿಕ್ಕಿ ಹೊಡೆದಿದೆ. ಪರಿಣಾಮ ಬೈಕ್ ಸಮೇತ ಪರಮೇಶ್ ಹಾಗೂ ಪೃಥ್ವಿ ರಸ್ತೆಗೆ ಬಿದ್ದಿದ್ದಾರೆ. ಆದರೆ, ಪೃಥ್ವಿ ಬಸ್‍ನ ಹಿಂಬದಿ ಚಕ್ರದ ಕೆಳಗೆ ಬಿದ್ದಿದ್ದರಿಂದ ಆತನ ಮೇಲೆ ಬಸ್ ಹರಿದಿದೆ. ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ.

ಘಟನೆ ನಡೆದ ತಕ್ಷಣ ನೂರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಮೃತ ಮಗುವಿನ ಕುಟುಂಬದ ಸದಸ್ಯರ ರೋಧನ ಮುಗಿಲು ಮುಟ್ಟಿತು. ಸ್ಥಳಕ್ಕೆ ಸಂಚಾರಿ ಪೆÇಲೀಸ್ ಠಾಣಾಧಿಕಾರಿ ಅಚ್ಚಮ್ಮ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಘಟನಾ ಸ್ಥಳದಲ್ಲಿ ನೆರೆದಿದ್ದ ಜನರನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ಪೆÇಲೀಸರು ಸುಗಮಗೊಳಿಸಿದರು. ಈ ಕುರಿತು ಕುಶಾಲನಗರ ಸಂಚಾರಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಸ್‍ನ ಚಾಲಕನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.

Translate »