ಮೈಸೂರು

ಐತಿಹಾಸಿಕ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಮಹಾರಾಣಿ ಕಾಲೇಜು ಹಾಸ್ಟೆಲ್ ನಿರ್ಮಾಣ
ಮೈಸೂರು

ಐತಿಹಾಸಿಕ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಮಹಾರಾಣಿ ಕಾಲೇಜು ಹಾಸ್ಟೆಲ್ ನಿರ್ಮಾಣ

September 13, 2018

ಮೈಸೂರು: ಮೈಸೂ ರಿನ ನಂಜರಾಜ ಬಹ ದ್ದೂರ್ ಛತ್ರದ ಆವ ರಣದಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿ ನಿಲಯ ನಿರ್ಮಿಸ ಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ. ವಿದ್ಯಾರ್ಥಿನಿಲಯಕ್ಕಾಗಿ ಈಗಾಗಲೇ ಐತಿಹಾಸಿಕ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದ ಆವರಣದಲ್ಲಿರುವ 1 ಎಕರೆ ಖಾಲಿ ಜಾಗವನ್ನು ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ. ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕøತಿಕ ವೇದಿಕೆ ಉದ್ಘಾಟಿಸಿ ಮಾತ ನಾಡುತ್ತಿದ್ದ ಕುಮಾರಸ್ವಾಮಿ…

ಹೈವೇ ಸರ್ಕಲ್ ಎಲಿಫೆಂಟ್ ಕಾರಂಜಿ ಮತ್ತೆ ಧ್ವಂಸ
ಮೈಸೂರು

ಹೈವೇ ಸರ್ಕಲ್ ಎಲಿಫೆಂಟ್ ಕಾರಂಜಿ ಮತ್ತೆ ಧ್ವಂಸ

September 13, 2018

ಮೈಸೂರು: ಬ್ರಿಗೇಡ್ ಗ್ರೂಪ್‍ನಿಂದ ನಿರ್ಮಿಸಿ, ಕೆಲ ಕಾಲ ನಿರ್ವಹಣೆ ಮಾಡುತ್ತಿದ್ದ ಮೈಸೂರಿನ ಹೈವೇ ಸರ್ಕಲ್ ಎಂದೇ ಹೆಸರುವಾಸಿಯಾಗಿರುವ ಮೌಲನಾ ಅಬ್ದುಲ್ ಕಲಾಂ ಅಜಾದ್ ಸರ್ಕಲ್‍ನ ಸುಂದರ ಎಲಿಫೆಂಟ್ ಕಾರಂಜಿಯನ್ನು ಮಂಗಳವಾರ ರಾತ್ರಿ ಮತ್ತೆ ಧ್ವಂಸಗೊಳಿಸಲಾಗಿದೆ. ಮೈಸೂರಿನ ಸೌಂದರ್ಯಕ್ಕೆ ಒತ್ತಾಸೆ ಯಾಗಿದ್ದ, ನಾಲ್ಕೂ ಕಡೆಗಳಲ್ಲಿ ಆನೆ ಮುಖ ದಾಕೃತಿ ಹೊಂದಿದ ಕಾರಂಜಿ ಕಲಾಕೃತಿಯಲ್ಲಿ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಪೋಸ್ಟರ್ ಅಂಟಿಸಿ, ಬಂಟಿಂಗ್‍ಗಳನ್ನು ಕಟ್ಟುವ ಮೂಲಕ ಅದರ ಅಂದ ಕೆಡಿಸುತ್ತಿದ್ದವು. ಆದರೆ ಇದೀಗ ಎಲಿಫೆಂಟ್ ಕಾರಂಜಿ ಮೇಲಿನ…

ನಿಯಮ ಉಲ್ಲಂಘನೆ: 522 ಸಿಎ ನಿವೇಶನ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ
ಮೈಸೂರು

ನಿಯಮ ಉಲ್ಲಂಘನೆ: 522 ಸಿಎ ನಿವೇಶನ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ

September 13, 2018

ಮೈಸೂರು: ನಿಯಮ ಸ್ಪಷ್ಟ ಉಲ್ಲಂಘನೆ ಆಗಿರುವ ಒಟ್ಟು 522 ಸಿಎ ನಿವೇಶನಗಳ ಮಂಜೂರಾತಿ ರದ್ದು ಪಡಿಸುವುದಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ನಿರ್ಧಾರ ಕೈಗೊಳ್ಳಲು ಬುಧವಾರ ನಡೆದ ಮುಡಾ ಸಭೆ ತೀರ್ಮಾನ ಕೈಗೊಂಡಿದೆ. ಮೈಸೂರು ನಗರಾಭಿವೃದ್ದಿ ಪ್ರಾಧಿ ಕಾರದ ಸಭಾಂಗಣದಲ್ಲಿ ಮುಡಾ ಅಧ್ಯ ಕ್ಷರು ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರ ಅಧ್ಯಕ್ಷತೆಯಲ್ಲಿ ಬುಧ ವಾರ ನಡೆದ ಸಭೆಯಲ್ಲಿ ಮುಡಾ ಆಯುಕ್ತ ಕಾಂತರಾಜು ಈ ವಿಷಯ ಸಭೆಯ ಮುಂದಿಟ್ಟರು. ಹಿಂದಿನ ಸಿಐಟಿಬಿಯಿಂದ ಇದುವರೆಗೆ ಮೈಸೂರು ನಗರದಲ್ಲಿ…

ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಸಾ.ರಾ.ಮಹೇಶ್
ಮೈಸೂರು

ಬಿಜೆಪಿಯ 10 ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ: ಸಾ.ರಾ.ಮಹೇಶ್

September 13, 2018

ಮೈಸೂರು: ರಾಜ್ಯದಲ್ಲಿ ಅಸ್ತಿತ್ವದಲ್ಲಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ಬಿಜೆಪಿ ತೆರೆಮರೆಯ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ.ಮಹೇಶ್, 10 ಮಂದಿ ಬಿಜೆಪಿ ಶಾಸಕರು ನಮ್ಮ ಸಂಪರ್ಕ ದಲ್ಲಿದ್ದಾರೆ ಎನ್ನುವ ಮೂಲಕ ಕುತೂಹಲ ಕೆರಳಿಸಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದಕ್ಕಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರ ಆಪರೇಷನ್ ಕಮಲ ಮಾಡಲು ಮುಂದಾಗಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿ ಮಾಡಿದೆ. ಕಳೆದ…

ಸಹೋದರರಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ
ಮೈಸೂರು

ಸಹೋದರರಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ

September 13, 2018

ಅರಸೀಕೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವ ಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ತಾಳೆಗರಿ ಭವಿಷ್ಯ ನುಡಿಯುವ ಶ್ರೀಗಳು, ಇಂದು ತಾಲೂಕಿನ ಮಾಡಾಳು ಗ್ರಾಮದ ಬಸವೇಶ್ವರ ದೇಗುಲದಲ್ಲಿ ಗೌರಿ ಪ್ರತಿಷ್ಠಾಪಿಸಿ, ಬಳಿಕ ಭವಿಷ್ಯ ನುಡಿದರು. ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನ ವಾಗಲಿದೆ. ಬೆಳಗಾವಿ ಸಹೋ ದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಸಹೋದರ ಹುಟ್ಟಿಕೊಳ್ಳುತ್ತಾರೆ ನೋಡುತ್ತಿರಿ ಎಂದರು. ದೇಶದಲ್ಲಿ…

ಕೊಡಗು ರೈಲು ಸಂಪರ್ಕ ಕುಶಾಲನಗರದವರೆಗೆ ಮಾತ್ರ
ಮೈಸೂರು

ಕೊಡಗು ರೈಲು ಸಂಪರ್ಕ ಕುಶಾಲನಗರದವರೆಗೆ ಮಾತ್ರ

September 13, 2018

ಪರಿಸರಕ್ಕೆ ಧಕ್ಕೆಯಾಗಲಿರುವ ಹಿನ್ನೆಲೆಯಲ್ಲಿ ವಿವಾದಿತ ಮೈಸೂರು-ಮಡಿಕೇರಿ ರೈಲು ಮಾರ್ಗ ನಿರ್ಮಾಣ ಸಂಬಂಧ ಪರಿಸರವಾದಿಗಳು ಬಲವಾಗಿ ವಿರೋಧಿಸುತ್ತಿದ್ದು, ಇದನ್ನು ಕುಶಾಲನಗರದವರೆಗೆ ಮಾತ್ರ ನಿರ್ಮಿಸಲು ನಿರ್ಧರಿಸಿರುವ ವಿಚಾರವನ್ನು ರೈಲ್ವೆ ಅಧಿಕಾರಿಗಳು ಸಂಸದರಲ್ಲಿ ಸ್ಪಷ್ಟಪಡಿಸಿದರು. ಮೈಸೂರು-ಮಡಿಕೇರಿ ಹೊಸ ರೈಲು ಸಂಪರ್ಕ ಕುರಿತಂತೆ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ರೈಲು ಮಾರ್ಗವನ್ನು ಕುಶಾಲನಗರದವರೆಗೆ ಮಾತ್ರ ಸೀಮಿತಗೊಳಿಸುವಂತೆ ಸಂಸದ ಪ್ರತಾಪ್‍ಸಿಂಹ ಸಲಹೆ ನೀಡಿದರು. ಕೇರಳದ ತಲಚೇರಿಯಿಂದ ಮಡಿಕೇರಿವರೆಗಿನ ಉದ್ದೇಶಿತ ರೈಲು ಸಂಪರ್ಕಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ…

ಮೈಸೂರು ಅರಮನೆಯಲ್ಲಿ ಗೌರಿ ಪೂಜೆ ನೆರವೇರಿಸಿದ ಯುವರಾಣಿ ತ್ರಿಷಿಕಾಕುಮಾರಿ
ಮೈಸೂರು

ಮೈಸೂರು ಅರಮನೆಯಲ್ಲಿ ಗೌರಿ ಪೂಜೆ ನೆರವೇರಿಸಿದ ಯುವರಾಣಿ ತ್ರಿಷಿಕಾಕುಮಾರಿ

September 13, 2018

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗೌರಿಹಬ್ಬದ ಸಂಭ್ರಮ ಮನೆ ಮಾಡಿದೆ. ಇದರ ಜತೆಗೆ ಮೈಸೂರು ಅರಮನೆಯಲ್ಲೂ ಯುವರಾಣಿ ತ್ರಿಷಿಕಾಕುಮಾರಿ ಒಡೆಯರ್ ಅವರಿಂದ ಗೌರಿ ಪೂಜೆ ನೆರವೇರಿದೆ. ತ್ರಿಷಿಕಾಕುಮಾರಿ ಅವರು ಸಂಪ್ರದಾಯ ಬದ್ಧವಾಗಿ ಗೌರಿ ಪೂಜೆಯನ್ನು ಅರಮನೆಯಲ್ಲಿ ನೆರವೇರಿಸಿರುವ ಫೋಟೋ ಹಾಗೂ ಪೂಜೆಯ ನಂತರ ಅರಮನೆಗೆ ಬಂದಿದ್ದ ಮುತ್ತೈದೆಯರಿಗೆ ಬಾಗಿನ ನೀಡಿ, ಶುಭಾಶಯ ಕೋರುತ್ತಿರುವ ಭಾವಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪತ್ನಿಯ ಪೂಜಾ ಕೈಂಕರ್ಯಗಳ ಫೋಟೋಗಳನ್ನು ಯದುವೀರ್ ಅವರು, ತಮ್ಮ ಫೇಸ್‍ಬುಕ್ ಹಾಗೂ ಇತರೆ ಸಾಮಾಜಿಕ ಜಾಲತಾಣದಲ್ಲಿ…

ಬೈಕ್ ಡಿಕ್ಕಿ: ಗುಳ್ಳೆ ನರಿ ಸಾವು
ಮೈಸೂರು

ಬೈಕ್ ಡಿಕ್ಕಿ: ಗುಳ್ಳೆ ನರಿ ಸಾವು

September 13, 2018

ಮೈಸೂರು: ಮೈಸೂರಿನ ಮಾನಸ ಗಂಗೋತ್ರಿಯ ಬಯಲು ರಂಗಮಂದಿರದ ಬಳಿ ಕಳೆದ ರಾತ್ರಿ ಬೈಕ್ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟುತ್ತಿದ್ದ ಗುಳ್ಳೆನರಿ ಸಾವನ್ನಪ್ಪಿದೆ. ಬೋಗಾದಿ ರಸ್ತೆ- ಹುಣಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಕುಕ್ಕರಹಳ್ಳಿ ಕೆರೆಯಿಂದ ಬಯಲು ರಂಗಮಂದಿರ ದತ್ತ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ನರಿ ರಸ್ತೆಯ ಬದಿ ಕೆಲ ಅಡಿ ತೆವಳಿ ಅಸುನೀಗಿದೆ. ಇಂದು ಬೆಳಿಗ್ಗೆ ದಾರಿ ಹೋಕರು ನರಿಯ ಮೃತದೇಹ ಗಮನಿಸಿ, ಅರಣ್ಯ…

ಆಪರೇಷನ್ ಕಮಲ ಮೂಲಕ  ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಯತ್ನ
ಮೈಸೂರು

ಆಪರೇಷನ್ ಕಮಲ ಮೂಲಕ  ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಯತ್ನ

September 13, 2018

ಬೆಂಗಳೂರು: ಆಪರೇಷನ್ ಕಮಲದ ಮೂಲಕ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪ್ರದೇಶ ಕಾಂಗ್ರೆಸ್, ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ಮುಖ್ಯಸ್ಥರಿಗೆ ದೂರು ನೀಡಲು ಮುಂದಾಗಿದೆ. ಕಾಂಗ್ರೆಸ್ ಸಿದ್ಧಪಡಿಸಿರುವ ದೂರಿನಂತೆ ಕಳೆದ ಕೆಲವು ದಿನಗಳಿಂದ ಈ ಜನಪ್ರಿಯ ಸರ್ಕಾರವನ್ನು ಅಸ್ಥಿರಗೊಳಿಸಲು ವಿರೋಧ ಪಕ್ಷವಾದ ಬಿಜೆಪಿಯ ಕೆಲವು ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಆ ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಅವರ ಪುತ್ರ ವಿಜೇಂದ್ರ, ಪಕ್ಷದ…

ಮದಗಜ ಗೋಪಾಲಸ್ವಾಮಿ ದಸರಾಗೆ ಗೈರು
ಮೈಸೂರು

ಮದಗಜ ಗೋಪಾಲಸ್ವಾಮಿ ದಸರಾಗೆ ಗೈರು

September 13, 2018

ಸೆ.14ರಂದು ದಸರಾ ಗಜಪಡೆ ಎರಡನೇ ತಂಡ ಅಂತಿಮ ಕ್ಷಣದಲ್ಲಿ ಸ್ಥಾನ ಗಿಟ್ಟಿಸಿಕೊಂಡ ಪ್ರಶಾಂತ ಮೈಸೂರು: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಸೆ.14ರಂದು ಸಂಜೆ ದಸರಾ ಗಜಪಡೆ ಎರಡನೇ ತಂಡದ ಆರು ಆನೆಗಳು ಮೈಸೂರು ಅರಮನೆ ಆವರಣ ಪ್ರವೇಶಿಸಲಿದ್ದು, ಈ ವೇಳೆ ಆಗ ಮಿಸಬೇಕಾಗಿದ್ದ 35 ವರ್ಷದ ಗೋಪಾಲಸ್ವಾಮಿಗೆ ಮದವೇರಿದ್ದು, ಅದನ್ನು ಕೈಬಿಟ್ಟು ವಿಶೇಷ ಅನು ಮತಿ ಪಡೆದು ಪ್ರಶಾಂತನನ್ನು ಕರೆತರಲಾಗುತ್ತಿದೆ. ಈಗಾಗಲೇ ಸೆ.2ರಂದು ಮೊದಲ ತಂಡದಲ್ಲಿ ಗಜಪಡೆ ನಾಯಕ ಅರ್ಜುನ, ಚೈತ್ರ, ವರಲಕ್ಷ್ಮೀ ವಿಕ್ರಮ, ಗೋಪಿ, ಧನಂಜಯ…

1 1,392 1,393 1,394 1,395 1,396 1,611
Translate »