ನಿಯಮ ಉಲ್ಲಂಘನೆ: 522 ಸಿಎ ನಿವೇಶನ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ
ಮೈಸೂರು

ನಿಯಮ ಉಲ್ಲಂಘನೆ: 522 ಸಿಎ ನಿವೇಶನ ಮಂಜೂರಾತಿ ರದ್ದಿಗೆ ಮುಡಾ ನಿರ್ಧಾರ

September 13, 2018

ಮೈಸೂರು: ನಿಯಮ ಸ್ಪಷ್ಟ ಉಲ್ಲಂಘನೆ ಆಗಿರುವ ಒಟ್ಟು 522 ಸಿಎ ನಿವೇಶನಗಳ ಮಂಜೂರಾತಿ ರದ್ದು ಪಡಿಸುವುದಕ್ಕೆ ಸಂಬಂಧಿಸಿದಂತೆ ವಿಶೇಷ ಸಭೆ ಕರೆದು ನಿರ್ಧಾರ ಕೈಗೊಳ್ಳಲು ಬುಧವಾರ ನಡೆದ ಮುಡಾ ಸಭೆ ತೀರ್ಮಾನ ಕೈಗೊಂಡಿದೆ.

ಮೈಸೂರು ನಗರಾಭಿವೃದ್ದಿ ಪ್ರಾಧಿ ಕಾರದ ಸಭಾಂಗಣದಲ್ಲಿ ಮುಡಾ ಅಧ್ಯ ಕ್ಷರು ಆದ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರ ಅಧ್ಯಕ್ಷತೆಯಲ್ಲಿ ಬುಧ ವಾರ ನಡೆದ ಸಭೆಯಲ್ಲಿ ಮುಡಾ ಆಯುಕ್ತ ಕಾಂತರಾಜು ಈ ವಿಷಯ ಸಭೆಯ ಮುಂದಿಟ್ಟರು.
ಹಿಂದಿನ ಸಿಐಟಿಬಿಯಿಂದ ಇದುವರೆಗೆ ಮೈಸೂರು ನಗರದಲ್ಲಿ ಹಂಚಿಕೆ ಮಾಡಿ ರುವ ಒಟ್ಟು 629 ಸಿಎ ನಿವೇಶನಗಳ ಪೈಕಿ 107 ನಿವೇಶನಗಳಲ್ಲಿ ನಿಯಮ ಪಾಲನೆ ಆಗಿವೆ. ಉಳಿದ 522 ನಿವೇಶನ ಗಳು, ಹಂಚಿಕೆ ಮಾಡಿ ಸುಮಾರು 30-40 ವರ್ಷಗಳಾಗಿದ್ದರೂ ಕಾನೂನು ಪಾಲನೆ ಮಾಡದೆ ಇರುವುದರಿಂದ ಅವುಗಳನ್ನು ನಗರಾಭಿವೃದ್ಧಿ ಕಾಯ್ದೆ ಹಾಗೂ ನಾಗರಿಕ ಸೌಲಭ್ಯ ಕಾಯ್ದೆಯಡಿ ಪ್ರಾಧಿಕಾರವು ಅವುಗಳ ಮಂಜೂರಾತಿ ರದ್ದುಪಡಿಸಿ ವಶ ಪಡಿಸಿಕೊಳ್ಳಬಹುದಾಗಿದೆ ಎಂಬುದನ್ನು ಆಯುಕ್ತರು ಸಭೆಯ ಗಮನಕ್ಕೆ ತಂದರು.

ಈ ನಿವೇಶನಗಳ ಮಂಜೂರಾತಿ ರದ್ದು ಪಡಿಸಿ ಮರುಹಂಚಿಕೆ ಮಾಡಿದರೆ ಪ್ರಾಧಿ ಕಾರಕ್ಕೆ ಸುಮಾರು 90 ರಿಂದ 100 ಕೋಟಿ ರೂ. ಆದಾಯ ಬರುತ್ತದೆ. ಅಲ್ಲದೆ, ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಂಡರೆ ಇನ್ನುಳಿದ ಸಂಘ-ಸಂಸ್ಥೆಗಳಿಗೆ ಇದು ಎಚ್ಚರಿಕೆ ಗಂಟೆಯಾಗಲಿದೆ ಎಂಬ ಬಗ್ಗೆಯೂ ಆಯುಕ್ತರು ಸಭೆಗೆ ವಿವರಿಸಿದರು.

ಈ ಪ್ರಸ್ತಾವನೆ ಬಗ್ಗೆ ಅಧ್ಯಕ್ಷರು ಸೇರಿ ದಂತೆ ಸದಸ್ಯರು ಪ್ರಶಂಸೆ ವ್ಯಕ್ತಪಡಿಸಿ ದರಾದರೂ ಕೆಲವು ಕಾನೂನು ತೊಡಕು ಗಳನ್ನು ಮತ್ತೊಮ್ಮೆ ಪರಿಶೀಲಿಸಿ, ಈ ಕುರಿತು ಕಾನೂನು ತಜ್ಞರೊಂದಿಗೆ ಚರ್ಚಿ ಸಿದ ನಂತರ ಶೀಘ್ರದಲ್ಲೇ ವಿಶೇಷ ಸಭೆ ಕರೆದು ಈ ನಿವೇಶನಗಳ ಮಂಜೂರಾತಿ ರದ್ದುಪಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳ ಬಹುದಾಗಿದೆ ಎಂದು ಒಮ್ಮತದ ತೀರ್ಮಾನಕ್ಕೆ ಬರಲಾಯಿತು.

ಪರಿಶೀಲನೆ ನಂತರ ನಿವೇಶನ ಬಿಡುಗಡೆ: ಅಲ್ಲದೆ, ಮೈಸೂರು ನಗರದಾದ್ಯಂತ ಖಾಸಗಿ ಬಡಾವಣೆಗಳಲ್ಲಿ ನಿವೇಶನಗಳನ್ನು ಬಿಡುಗಡೆ ಮಾಡುವ ಬಗ್ಗೆ ಸ್ಥಳ ಪರಿ ಶೀಲಿಸಿ, ಅಭಿವೃದ್ಧಿ ಕೆಲಸ ಪೂರ್ಣ ಗೊಂಡಿ ದೆಯೇ ಎಂಬುದನ್ನು ಖುದ್ದು ಭೇಟಿ ನೀಡಿ ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ಸಭೆ ಅಧಿಕಾರಿಗಳಿಗೆ ಸೂಚಿಸಿತು.

ಅದೇ ರೀತಿ ತುಂಡು ನಿವೇಶನ ಮಂಜೂ ರಾತಿ, ಬದಲಿ ನಿವೇಶನ ಇತ್ಯಾದಿ ವಿಷಯ ಗಳು ಇಂದಿನ ಸಭೆಯಲ್ಲಿ ಚರ್ಚೆಗೆ ಬಂದವು. ಇನ್ನುಳಿದಂತೆ ಹೆಚ್ಚುವರಿ ವಿಷಯ ಗಳನ್ನು ಸಭೆಯಲ್ಲಿ ಚರ್ಚಿಸಲು ಸಾಧ್ಯ ವಾಗದ ಹಿನ್ನೆಲೆಯಲ್ಲಿ ಅವುಗಳನ್ನು ಮುಂದಿನ ಸಭೆಗೆ ಮುಂದೂಡಲಾಯಿತು.

ಸಭೆಯಲ್ಲಿ ಶಾಸಕರಾದ ತನ್ವೀರ್‍ಸೇಠ್, ಎಲ್.ನಾಗೇಂದ್ರ, ಎಸ್.ಎ.ರಾಮದಾಸ್, ರವೀಂದ್ರ ಶ್ರೀಕಂಠಯ್ಯ, ಹರ್ಷವರ್ಧನ, ವಿಧಾನ ಪರಿಷತ್ ಸದಸ್ಯರಾದ ಸಂದೇಶ್ ನಾಗರಾಜು, ಮರಿತಿಬ್ಬೇಗೌಡ, ಕೆ.ಟಿ. ಶ್ರೀಕಂಠೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಮುಡಾ ಆಯುಕ್ತ ಕಾಂತ ರಾಜು, ಕಾರ್ಯದರ್ಶಿ ಎಂ.ಕೆ.ಸವಿತಾ, ನಗರ ಯೋಜಕ ಸದಸ್ಯ ಗಿರೀಶ್, ಸೂಪರಿಂ ಟೆಂಡಿಂಗ್ ಇಂಜಿನಿಯರ್ ಬಿ.ಕೆ.ಸುರೇಶ್ ಬಾಬು, ವಿಶೇಷ ಭೂಸ್ವಾಧೀನಾಧಿಕಾರಿ ಇಂದ್ರಮ್ಮ, ಎಕ್ಸಿಕ್ಯುಟೀವ್ ಇಂಜಿನಿಯರ್ ಪ್ರಭಾಕರ್ ಸೇರಿದಂತೆ ಮತ್ತಿತರ ಅಧಿಕಾರಿ ಗಳು ಪಾಲ್ಗೊಂಡಿದ್ದರು.

 

Translate »