ಮೈಸೂರು: 7 ವರ್ಷದ ಪುತ್ರಿ ಮೇಲೆ ಅತ್ಯಾಚಾರವೆಸಗಿದ್ದ ಕಾಮುಕ ತಂದೆಗೆ ಮೈಸೂರು ನ್ಯಾಯಾಲಯವು 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿದೆ. ಮೈಸೂರಿನ ರಾಜೀವ್‍ನಗರ 1ನೇ ಹಂತದ ನಿವಾಸಿ 35 ವರ್ಷದ ವ್ಯಕ್ತಿ ಶಿಕ್ಷೆಗೊಳಗಾದ ತಂದೆ. ಆತ 2016ರ ಏಪ್ರಿಲ್ 16ರಂದು ಆಟವಾಡುತ್ತಿದ್ದ ತನ್ನ 7 ವರ್ಷದ ಪುತ್ರಿ ಮೇಲೆರಗಿ ಅತ್ಯಾಚಾರ ನಡೆಸಿದ್ದ. ಪ್ರಕರಣ ದಾಖ ಲಿಸಿಕೊಂಡಿದ್ದ ಉದಯಗಿರಿ ಠಾಣೆ ಇನ್ಸ್‍ಪೆಕ್ಟರ್ ಪಿ.ಪಿ.ಸಂತೋಷ್, ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ಮೈಸೂರಿನ 6ನೇ…
ಉದ್ಯೋಗಾವಕಾಶ ಕಲ್ಪಿಸುವ ಎಸ್.ಅಚ್ಯುತಾನಂದ ಅವರಿಗೆ ಸನ್ಮಾನ
September 16, 2018ಮೈಸೂರು: ಮೈಸೂರಿನ ಟಿ.ಕೆ. ಬಡಾವಣೆಯ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನ ಇನ್‍ಸೈನ್ ಎಕ್ವಿಪ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ಬ್ಯುಸಿನೆಸ್ ಯೂನಿಟ್ ಹೆಡ್ ಆಗಿ ಕಾರ್ಯ ನಿರ್ವಹಿಸು ತ್ತಿರುವ ಎಸ್.ಅಚ್ಯುತಾನಂದ ಸೇರಿದಂತೆ ನಾಲ್ವರನ್ನು ಇತ್ತೀಚೆಗೆ ವಿದ್ಯಾಮಾತಾ ಫೌಂಡೇಷನ್ ವತಿಯಿಂದ ಪುತ್ತೂರಿನ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಚ್ಯುತಾನಂದ ಅವರು ವಾಟ್ಸ್‍ಆಪ್ ಗ್ರೂಪ್ ಹೆಸರಿನಲ್ಲಿ `ಉದ್ಯೋಗ ನಿಮಿತ್ತÀಂ’ ಸ್ಥಾಪಿಸಿ, ಎಲ್ಲಿ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಕೈಗಾರಿಕೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಒದಗಿಸುವ ಮೂಲಕ ಕಾರ್ಖಾನೆ ಮಾಲೀಕರು ಮತ್ತು ಕಾರ್ಮಿಕರ…
ಜೀವನದಲ್ಲಿ ಜಿಗುಪ್ಸೆ: ಯುವಕ ಆತ್ಮಹತ್ಯೆ
September 16, 2018ಮೈಸೂರು:ಅಪ್ರಾಪ್ತ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಲೇಟ್ ಚೆನ್ನಬಸವರಾಜು ಅವರ ಪುತ್ರ ಸಂಜಯ್‍ಕುಮಾರ್(17) ಮೃತರು. ಸಂಜಯ್‍ಕುಮಾರ್ ಅವರ ತಂದೆ ಚೆನ್ನಬಸವ ರಾಜು ಅವರು 6 ತಿಂಗಳು ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್, ಕುಟುಂಬ ನಿರ್ವಹಣೆಗಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಆದರೆ, ಈ ಕೆಲಸದಿಂದ ಬರುತ್ತಿದ್ದ ಆದಾಯ ಸಾಕಾಗದೇ, ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆಯಾಗಿತ್ತು. ಇದರಿಂದ ಮನನೊಂದ ಸಂಜಯ್, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ…
ಸ್ಕೂಟರ್‍ನಿಂದ ಬಿದ್ದು ಸವಾರ ಸಾವು
September 16, 2018ಗೋಣಿಕೊಪ್ಪಲು: ಸ್ಕೂಟರ್‍ನಿಂದ ಬಿದ್ದು ಸವಾರ ಸಾವನಪ್ಪಿರುವ ಘಟನೆ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ. ಬಲ್ಯಮುಂಡೂರು ಗ್ರಾಮದ ರವಿ (48) ಮೃತ ವ್ಯಕ್ತಿ. ಪೊನ್ನಂಪೇಟೆಯಿಂದ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಆಯಾತಪ್ಪಿ ಬಿದ್ದು ತಲೆಗೆ ಗಂಭೀರ ಗಾಯವಾಗಿ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನಪ್ಪಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಾರಿ ದಸರಾ ಉತ್ಸವಕ್ಕೆ 25 ಕೋಟಿ ಅನುದಾನಕ್ಕೆ ಬೇಡಿಕೆ: ಸಚಿವ ಜಿಟಿಡಿ
September 15, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲು 25ಕೋಟಿ ಅನುದಾನ ನೀಡುವಂತೆ ಮುಖ್ಯ ಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಈ ಸಾಲಿನಲ್ಲೂ ಯುವ ದಸರಾ, ರೈತ ದಸರಾ ಸೇರಿದಂತೆ 16 ಕಾರ್ಯಕ್ರಮಗಳು ಜರು ಗಲಿವೆ ಎಂದು ಮೈಸೂರು ದಸರಾ ಮಹೋತ್ಸವ ಕಾರ್ಯಕಾರಿ ಸಮಿತಿ ಅಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಜಿಲ್ಲಾ ಮಟ್ಟದ ದಸರಾ ಕಾರ್ಯಕಾರಿ ಸಮಿತಿ ಸಭೆ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದಸರಾ…
ಕೊಲೆ, ಸುಲಿಗೆ, ಲಾಟರಿ, ಇಸ್ಪೀಟ್, ಸರ್ಕಾರಿ ಕಡತ ಸುಡುವ ದಂಧೆಕೋರ ಮೂಲಕ ನನ್ನ ಸರ್ಕಾರ ಪತನಕ್ಕೆ ಬಿಜೆಪಿ ಪ್ರಯತ್ನ
September 15, 2018ಬೆಂಗಳೂರು: ಕೊಲೆ, ಸುಲಿಗೆ, ಲಾಟರಿ, ಇಸ್ಪೀಟ್ ಹಾಗೂ ಸರ್ಕಾರಿ ಕಡತಗಳನ್ನು ಸುಟ್ಟು ದಂಧೆ ನಡೆಸುವವರ ಮೂಲಕ ನನ್ನ ಸರ್ಕಾರ ಪತನಗೊಳಿಸಲು ರಾಜ್ಯ ಬಿಜೆಪಿ ನಾಯಕರು ಹೊರಟಿದ್ದಾರೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ಬಲವಾದ ಆರೋಪ ಮಾಡಿದ್ದಾರೆ. ಈ ಕಿಂಗ್‍ಪಿನ್‍ಗಳು ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಖರೀದಿ ಮಾಡಲು ಅಕ್ರಮವಾಗಿ ನೂರಾರು ಕೋಟಿ ರೂ. ಸಂಗ್ರಹ ಮಾಡುತ್ತಿದ್ದಾರೆ. ಇವರು ಯಾರು ಎಂಬ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇಂತಹ ದಗಾಕೋರರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ….
ಬೆಳಗಾವಿ ಭಿನ್ನಮತ ಒಂದು ಸಣ್ಣ ಸಮಸ್ಯೆ: ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅಭಿಮತ
September 15, 2018ಬೆಂಗಳೂರು: ಬೆಳಗಾವಿಯ ಜಾರಕಿ ಹೊಳಿ ಸಹೋದರರ ಭಿನ್ನಮತ ಅಂತಹ ದೊಡ್ಡ ಸಮಸ್ಯೆಯೇನೂ ಆಗಿಲ್ಲ. ಆಂತರಿಕವಾಗಿ ಯಾವುದೇ ಭಿನ್ನಮತ ಇಲ್ಲ. ಸಣ್ಣ ಸಮಸ್ಯೆಯನ್ನು ಗಂಭೀರ ಸಮಸ್ಯೆಯೆಂದು ಬಿಂಬಿಸಲಾಗಿದೆಯಷ್ಟೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಇಂದಿಲ್ಲಿ ತಿಳಿಸಿದ್ದಾರೆ. ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಭೇಟಿ ನೀಡಿ ಅವರ ಜೊತೆ ಎರಡೂ ತಾಸಿಗೂ ಹೆಚ್ಚು ಸುದೀರ್ಘ ಚರ್ಚೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಪೋಲಕಲ್ಪಿತ ಸುದ್ದಿಗಳಿಗೆ ಜಾಸ್ತಿ ಒತ್ತು ಕೊಡಲಾಗಿದೆ. ಅದನ್ನು ಹೊರತುಪಡಿಸಿದರೆ ಯಾವುದೇ ಅಂತಹ…
ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ್, ಬೆಳಗಾವಿ ಜಿಲ್ಲೆ ಮಾಡಲು ಸಿಎಂ ನಿರ್ಧಾರ
September 15, 2018ಬೆಂಗಳೂರು: ಬೆಳಗಾವಿ ಜಿಲ್ಲೆಯ ಗೊಂದಲಮಯ ರಾಜಕಾರಣಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿಲ್ಲೆಯನ್ನು ಮೂರು ಭಾಗಗಳನ್ನಾಗಿ ಬೇರ್ಪಡಿಸುವ ಮೂಲಕ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ರೂಪಿಸಿದ್ದಾರೆ. ಬೆಳಗಾವಿ, ಚಿಕ್ಕೋಡಿ ಮತ್ತು ಗೋಕಾಕ್ ಅನ್ನು ಜಿಲ್ಲಾ ಕೇಂದ್ರಗಳನ್ನಾಗಿ ಘೋಷಿಸಲು ತೀರ್ಮಾನಿಸಿ, ಕಂದಾಯ ಸಚಿವ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದಾರೆ. ಈ ಸಮಿತಿ ವರದಿ ನಂತರ ಮೂರು ಜಿಲ್ಲೆಗಳನ್ನಾಗಿ ವಿಭಜಿಸಿ ಬೆಳಗಾವಿ, ಗೋಕಾಕ್ ಮತ್ತು ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಗಳಾಗಿ ಕನ್ನಡ ರಾಜ್ಯೋತ್ಸವ ದಿನವಾದ ನವೆಂಬರ್ 1ರಂದು…
ಮೈಸೂರು ಅರಮನೆ ಆವರಣಕ್ಕೆ ಬಂದ ದಸರಾ ಗಜಪಡೆ 2ನೇ ತಂಡ
September 15, 2018ಮೈಸೂರು: ಮೈಸೂರು ದಸರಾ ಮಹೋತ್ಸವಕ್ಕೆ ಆಗಮಿಸಿರುವ ಬಲರಾಮ ನೇತೃತ್ವದ ಗಜಪಡೆಯ 2ನೇ ತಂಡವನ್ನು ಅರಮನೆ ಆವರಣಕ್ಕೆ ಸಾಂಪ್ರದಾಯಿಕವಾಗಿ ಶುಕ್ರವಾರ ಸ್ವಾಗತಿಸಲಾಯಿತು. ಅರಮನೆ ಜಯಮಾರ್ತಾಂಡ ದ್ವಾರದ ಬಳಿ ಡಿಸಿಎಫ್ ಸಿದ್ರಾಮಪ್ಪ ಚಳ್ಕಾಪುರೆ ಸೇರಿದಂತೆ ಮತ್ತಿತರೆ ಅಧಿಕಾರಿಗಳು ವಿಶೇಷ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಗತಿಸಿದರು. ಈ ವೇಳೆ ಎಡಿಸಿ ಯೋಗೇಶ್, ಅರಮನೆ ಮಂಡಳಿ ಉಪ ನಿರ್ದೇ ಶಕ ಟಿ.ಎಸ್.ಸುಬ್ರಹ್ಮಣ್ಯ, ಆನೆ ವೈದ್ಯ ನಾಗರಾಜು ಸೇರಿದಂತೆ ಮತ್ತಿತರೆ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ವೇಳೆ ಆರ್ಚಕರಾದ ಪ್ರಹ್ಲಾದ ರಾವ್ ನೇತೃತ್ವದಲ್ಲಿ…
ಆಪರೇಷನ್ ಕಮಲ ಎಸಿಬಿಗೆ ಕಾಂಗ್ರೆಸ್ ದೂರು
September 15, 2018ಬೆಂಗಳೂರು: ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕ ರನ್ನು ಸೆಳೆದು ಮೈತ್ರಿ ಸರ್ಕಾರ ಪತನ ಗೊಳಿಸುವ ಬಿಜೆಪಿ ಪ್ರಯತ್ನಕ್ಕೆ ಪ್ರತಿ ಯಾಗಿ ಕಾಂಗ್ರೆಸ್ ಎಸಿಬಿ ಅಸ್ತ್ರಕ್ಕೆ ಮೊರೆ ಹೋಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರು ಇಂದು ಈ ಸಂಬಂಧ ಎಸಿಬಿಗೆ ದೂರು ಸಲ್ಲಿಸಿ ದ್ದಾರೆ. ಕಾಂಗ್ರೆಸ್‍ನ 12 ಶಾಸಕರಿಗೆ ಬಿಜೆಪಿ 20ರಿಂದ 30 ಕೋಟಿ ಹಣದ ಆಮಿಷ ಒಡ್ಡಿದೆ ಎಂದು ಸುದ್ದಿವಾಹಿನಿಗಳಲ್ಲಿ ಬಿತ್ತರವಾದ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಬಿಜೆಪಿ ವಿರುದ್ಧ ಈ ದೂರನ್ನು ಸಲ್ಲಿಸಲಾಗಿದೆ. ಎಸಿಬಿಗೆ ಈಶ್ವರ…










