ಜೀವನದಲ್ಲಿ ಜಿಗುಪ್ಸೆ: ಯುವಕ ಆತ್ಮಹತ್ಯೆ
ಮೈಸೂರು

ಜೀವನದಲ್ಲಿ ಜಿಗುಪ್ಸೆ: ಯುವಕ ಆತ್ಮಹತ್ಯೆ

September 16, 2018

ಮೈಸೂರು:ಅಪ್ರಾಪ್ತ ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕ್ಯಾತಮಾರನಹಳ್ಳಿಯಲ್ಲಿ ನಡೆದಿದೆ. ಇಲ್ಲಿನ ಲೇಟ್ ಚೆನ್ನಬಸವರಾಜು ಅವರ ಪುತ್ರ ಸಂಜಯ್‍ಕುಮಾರ್(17) ಮೃತರು. ಸಂಜಯ್‍ಕುಮಾರ್ ಅವರ ತಂದೆ ಚೆನ್ನಬಸವ ರಾಜು ಅವರು 6 ತಿಂಗಳು ಹಿಂದೆ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್, ಕುಟುಂಬ ನಿರ್ವಹಣೆಗಾಗಿ ಗಾರೆ ಕೆಲಸ ಮಾಡಿಕೊಂಡಿದ್ದರು. ಆದರೆ, ಈ ಕೆಲಸದಿಂದ ಬರುತ್ತಿದ್ದ ಆದಾಯ ಸಾಕಾಗದೇ, ಕುಟುಂಬ ನಿರ್ವಹಣೆಗೆ ತೀವ್ರ ತೊಂದರೆಯಾಗಿತ್ತು. ಇದರಿಂದ ಮನನೊಂದ ಸಂಜಯ್, ಮನೆಯಲ್ಲಿ ಯಾರು ಇಲ್ಲದ ವೇಳೆ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »