ಸೌಹಾದರ್, ಸಹಕಾರ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಲು ಸಲಹೆ
ಚಾಮರಾಜನಗರ

ಸೌಹಾದರ್, ಸಹಕಾರ ಸಂಸ್ಥೆಯ ಅಭಿವೃದ್ಧಿಗೆ ಸಹಕರಿಸಲು ಸಲಹೆ

September 16, 2018

ಚಾಮರಾಜನಗರ:  ‘ಕ್ರೆಡಿಟ್ ಕೋ ಆಪರೇಟಿವ್ ಸಂಸ್ಥೆ ಅಭಿವೃದ್ಧಿ ಹೊಂದಲು ಸಂಘದ ಸದಸ್ಯರ ಪಾತ್ರ ಬಹಳ ಮುಖ್ಯ ವಾಗಿದೆ. ಸೌಹಾದರ್, ಸಹಕಾರ ನಿಯಮಿತ ಸಂಸ್ಥೆಗಳು ಬೆಳೆಯಲು ಸಾರ್ವಜನಿಕರು ಸಹಕರಿಸಬೇಕು’ ಎಂದು ಶ್ರೀಅಕ್ಷಯಶ್ರೀ ಸೌಹಾದರ್À ಕ್ರೆಡಿಟ್ ಕೋ ಆಪರೇಟಿವ್‍ನ ಅಧ್ಯಕ್ಷ ಕೆ.ವೀರಭದ್ರಸ್ವಾಮಿ ಹೇಳಿದರು.

ನಗರದ ರೋಟರಿ ಭವನದಲ್ಲಿ ಶ್ರೀ ಅಕ್ಷಯಶ್ರೀ ಸೌಹಾರ್ದ ಕ್ರೆಡಿಟ್ ಕೋ ಆಪ ರೇಟಿವ್ 2017-18ನೇ ಸಾಲಿನ ಸರ್ವ ಸದ ಸ್ಯರ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸದಸ್ಯರಲ್ಲದೆ ರಾಜ್ಯದಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಗಳು ಬೆಳವಣಿಗೆಯಾಗುತ್ತಿದ್ದು, ಸ್ಥಳೀಯ ಸದಸ್ಯರೋಡಗೂಡಿ ಬೆಳೆಯುವ ಸೌಹಾದರ್ ಸಹಕಾರಿಗಳ ಸಂಖ್ಯೆ ಕಡಿಮೆ ಯಾಗುತ್ತಿರುವುದು ದುರ್ದೈವ ಶೇ.70 ಲಕ್ಷಕ್ಕೂ ಹೆಚ್ಚು ಬ್ಯಾಂಕ್ ವ್ಯವಹಾರ ನಡೆ ದಿದ್ದು, ಶೇ. 6.5 ಲಾಭಾಂಶ ನೀಡ ಲಾಗುವುದು. ಹಾಗಾಗಿ, ಪಿಎಲ್‍ಡಿ ಬ್ಯಾಂಕ್, ಎಂಡಿಸಿಸಿ ಬ್ಯಾಂಕ್ ಅಪೇಕ್ಸ್ ಬ್ಯಾಂಕ್ ನಂತೆ ಸೌಹಾರ್ದ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡುವಂತೆ ಫೆಡರಲ್ ಬ್ಯಾಂಕ್ ಸ್ಥಾಪಿಸುವಂತೆ ರಾಜ್ಯಕ್ಕೆ ಒತ್ತಾಯಿಸಿದರು.

ಸೌಹಾರ್ದ ಸಹಕಾರಿಗಳಲ್ಲಿ ಸದಸ್ಯರ ಠೇವಣಿ ಖಾತ್ರಿ ಯೋಜನೆಯನ್ನು ಜಾರಿ ಗೊಳಿಸಬೇಕು. ಕ್ರೆಡಿಟ್ ಸೌಹಾರ್ದ ಸಹ ಕಾರಿಗಳಿಗೆ ಬಾಧಿಸುತ್ತಿರುವ ಆದಾಯ ತೆರಿಗೆ ಪಾವತಿಗಾಗಿ ಆಗುತ್ತಿರುವ ತೊಂದರೆ ಯನ್ನು ಶಾಶ್ವತವಾಗಿ ಕೊನೆಗೊಳಿಸಲು ಪ್ರಯತ್ನಿಸುವುದು. ನಮ್ಮ ಸಂಸ್ಥೆಯಿಂದ ಛಾಪಾಕಾಗದ, ರಸಗೊಬ್ಬರ, ಜನರಿಕ್ ಔಷಧಿ, ಕಡಿಮೆ ದರದಲ್ಲಿ ದಿನ ನಿತ್ಯೋ ಪಯೊಗಿ ವಸ್ತುಗಳನ್ನು ಮಾರಾಟ ಮಳಿ ಗೆಗಳನ್ನು ಸ್ಥಾಪಿಸಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರೈತ ಮುಖಂಡರಾದ ಹೆಬ್ಬಸೂರು ಬಸವಣ್ಣ ಮಾತ ನಾಡಿ, ಯುವ ಪೀಳಿಗೆಗೆ ಸೌಹಾರ್ದಿ ಸಹಕಾರಿಗಳಲ್ಲಿ ಹೆಚ್ಚು-ಹೆಚ್ಚು ಸದಸ್ಯತ್ವ ಪಡೆದುಕೊಳ್ಳಬೇಕು ದಿನನಿತ್ಯ ಉಪಯೋಗಿ ಸುವ ವಸ್ತುಗಳು, ವ್ಯವಸಾಯ್ಯೊತ್ಪನ್ನ ಸಲ ಕರಣೆಗಳನ್ನು ಸಂಘಗಳ ಮೂಲಕ ಪಡೆ ದರೆ ಸಹಕಾರಿಗಳು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡ ಗುರು ಪ್ರಸಾದ್ ಕಟ್ನವಾಡಿ, ಸಹಾಯಕ ಶಿಕ್ಷಣಾ ಧಿಕಾರಿ ಶಿವಮಾದು, ಉಪಾಧ್ಯಕ್ಷರಾದ ಕೆ.ಎಸ್. ನಾಗಮಲ್ಲೇಶ್, ನಿರ್ದೇಶಕರಾದ ಎಸ್.ಎಂ. ನಂದೀಶ್, ನಾಗಮಲ್ಲಪ್ಪ, ಕೆ.ಬಿ. ಮಾದೇವ ಗೌಡ, ಸ್ವಾಮಿ ಮರಿಯಾಲ, ದೇವರಾಜು, ಕೆ.ಜಿ.ಸಂತೋಷ್, ಮುಖಂಡರಾದ ಮರಿ ಯಾಲ ಪುಟ್ಟಸ್ವಾಮಿ, ಕರಿನಂಜನಪುರ ಮಹೇಶ್, ಕೆ.ಎಸ್.ಶಿವಮೂರ್ತಿ, ಗುರುಸ್ವಾಮಿ, ನಾಗರಾಜಪ್ಪ, ನಂದೀಶ್ ಕಾಳನಹುಂಡಿ ಕುಮಾರ್, ಮಲ್ಲಣ್ಣ, ಕೇಬಲ್ ರಂಗಸ್ವಾಮಿ, ಮುಖ್ಯ ಕಾರ್ಯನಿರ್ವಹಕಾಧಿಕಾರಿ ಜ್ಯೋತಿ, ಸಹಾಯಕ ಮಂಜು ಹಾಜರಿದ್ದರು

Translate »