ಮಾತೃಪೂರ್ಣ, ಮಾತೃವಂದನಾ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸಲಹೆ
ಚಾಮರಾಜನಗರ

ಮಾತೃಪೂರ್ಣ, ಮಾತೃವಂದನಾ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಸಲಹೆ

September 16, 2018

ಚಾಮರಾಜನಗರ: ಸರ್ಕಾರದ ಮಾತೃಪೂರ್ಣ ಮತ್ತು ಮಾತೃವಂದನಾ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಜವಾಬ್ದಾರಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತರ ಮೇಲಿದೆ ಎಂದು ತಾಪಂ ಸದಸ್ಯ ಎಚ್.ವಿ. ಚಂದ್ರು ಹೇಳಿದರು.

ತಾಲೂಕಿನ ಗೂಳೀಪುರ ಗ್ರಾಮ ಪಂಚಾ ಯಿತಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಸಮಗ್ರ ಶಿಶು ಅಭಿವೃದ್ದಿ ಯೋಜನೆ ಸಂತೇಮರ ಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಪೌಷ್ಟಿಕ ಕರ್ನಾಟಕ, ಮಾತೃಪೂರ್ಣ ಹಾಗೂ ಮಾತೃ ವಂದನಾ ಮಾಸಾಚರಣೆ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗರ್ಭಿಣಿಯರು ಮತ್ತು ನವಜಾತ ಶಿಶು ಅಪೌಷ್ಟಿಕತೆಯಿಂದ ಬಳಲುವುದನ್ನು ತಡೆ ಯುವ ಸಲುವಾಗಿ ಸರ್ಕಾರ ಬಿಸಿಯೂ ಟದ ಮಾದರಿಯಲ್ಲಿ ಅಂಗನವಾಡಿ ಕೇಂದ್ರ ದಲ್ಲಿಯೇ ಊಟ ತಯಾರಿಸಿ ಊಟ ಒದ ಗಿಸುವುದೇ ಮಾತೃಪೂರ್ಣ ಯೋಜನೆ ಉದ್ದೇಶವಾಗಿದೆ. ಪ್ರತಿ ಗರ್ಭಿಣಿಯರು, ಬಾಣಂತಿಯರು ಸರ್ಕಾರದ ಮಾತೃಪೂರ್ಣ ಮತ್ತು ಮಾತೃವಂದನಾ ಕಾರ್ಯಕ್ರಮ ವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪೌಷ್ಟಿಕ ಆಹಾರ ಪದಾರ್ಥಗಳನ್ನು ಸೇವನೆ ಮಾಡುವ ಮೂಲಕ ಆರೋಗ್ಯವಂತ ಮಗು ವನ್ನು ಪಡೆದು ಸುಖಿ ಜೀವನ ನಡೆಸಬೇಕು. ಆಶಾ ಕಾರ್ಯಕರ್ತರು, ಅಂಗನ ವಾಡಿ ಕಾರ್ಯಕರ್ತರು ಉತ್ತಮ ಸೇವೆ ಮಾಡುವ ಮೂಲಕ ಮಾತೃಪೂರ್ಣ, ಮಾತೃ ವಂದನಾ ಕಾರ್ಯಕ್ರಮ ಅನುಷ್ಠಾನಗೊಳಿಸು ವಲ್ಲಿ ಚಾಮರಾಜನಗರ ತಾಲೂಕು ಜಿಲ್ಲೆಗೆ ಮಾದರಿ ಆಗುವಂತೆ ಮಾಡಬೇಕು ಎಂದರು.

ಮಹಿಳಾ ಮತ್ತು ಶಿಶು ಅಭಿವೃದ್ದಿ ಇಲಾ ಖೆಯ ಮೇಲ್ವಿಚಾರಕಿ ರುಕ್ಮಿಣಿ ಮಾತನಾಡಿ, ಮಾತೃಪೂರ್ಣ, ಮಾತೃವಂದನಾ ಕಾರ್ಯ ಕ್ರಮದಲ್ಲಿ ಚೊಚ್ಚಲ ಗರ್ಭಿಣಿಗೆ ಪೂರಕ ಪೌಷ್ಟಿಕ ಆಹಾರ ಸೇವೆನೆಗಾಗಿ 5 ಸಾವಿರ ರೂ ನೀಡಲಾಗುತ್ತಿದೆ ಗರ್ಭಿಣಿಯರು ಹಸಿಮೊಳಕೆ ಕಾಳು ಸೇವನೆ ಮಾಡು ವುದರಿಂದ ಆರೋಗ್ಯವಂತ ಮಗು ಪಡೆಯಬಹುದು. ವಿಕಲಚೇತನ ಮಗು ಹುಟ್ಟುವುದಿಲ್ಲ ಎಂದು ಹೇಳಿದರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ತೂಕ ಮಾಡಿಸಬೇಕು, ಆರೋಗ್ಯ ತಪಾ ಸಣೆ ಮಾಡಿಸಿ ಆರೋಗ್ಯಭಾಗ್ಯ ಕಾಪಾಡಿ ಕೊಳ್ಳಬೇಕು. ಅಂಗನವಾಡಿ ಕೇಂದ್ರದಲ್ಲಿ ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಚಿಕಿತ್ಸೆ ಗಾಗಿ 50 ಸಾವಿರ ರೂ. ನೀಡಲಾಗುತ್ತದೆ ಅಲ್ಲದೆ ಎಸ್‍ಸಿ, ಎಸ್‍ಟಿಗಳಿಗೆ ಹೆಚ್ಚು ಸೌಲಭ್ಯ ಸಿಗುತ್ತದೆ ಎಂದರು.

ಭಾಗ್ಯಲಕ್ಷ್ಮೀ ಯೋಜನೆಯಲ್ಲಿ ಮಗು ವಿನ ತಂದೆ, ತಾಯಿ ಆಕಸ್ಮಿಕ ಮರಣ ಹೊಂದಿದ್ದರೆ 2 ಲಕ್ಷ ರೂ. ಪರಿಹಾರ, ಅಪಘಾತದಲ್ಲಿ ಮರಣ ಹೊಂದಿದ್ದರೆ 4 ಲಕ್ಷ ರೂ. ಪರಿಹಾರ ದೊರೆಯುತ್ತದೆ. ಸರ್ಕಾರದ ಯೋಜನೆಗಳ ಕುರಿತು ಇಲಾಖೆ ವತಿಯಿಂದ ಅರಿವು ಮೂಡಿಸ ಲಾಗುತ್ತಿದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷೆ ದೊಡ್ಡತಾಯಮ್ಮ ಅಧ್ಯ ಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಶಂಕರಪ್ಪ, ಸದಸ್ಯೆ ನಿಂಗರಾಜಮ್ಮ, ಪಂಚಾಯಿತಿ ಅಭಿ ವೃದ್ಧಿ ಅಧಿಕಾರಿ ಸಿದ್ದರಾಜು, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಸುಜಾತ, ಕೋಟಂಬಳ್ಳಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ವಿಶಾಲಾಕ್ಷಿ, ಎಎನ್‍ಎಂ ಭಾಗ್ಯ, ಬೇಬಿ ಹಾಗೂ ಆಶಾಕಾರ್ಯಕರ್ತರು, ಅಂಗನ ವಾಡಿ ಕಾರ್ಯಕರ್ತರು ಹಾಜರಿದ್ದರು.

Translate »