ಉದ್ಯೋಗಾವಕಾಶ ಕಲ್ಪಿಸುವ ಎಸ್.ಅಚ್ಯುತಾನಂದ ಅವರಿಗೆ ಸನ್ಮಾನ
ಮೈಸೂರು

ಉದ್ಯೋಗಾವಕಾಶ ಕಲ್ಪಿಸುವ ಎಸ್.ಅಚ್ಯುತಾನಂದ ಅವರಿಗೆ ಸನ್ಮಾನ

September 16, 2018

ಮೈಸೂರು:  ಮೈಸೂರಿನ ಟಿ.ಕೆ. ಬಡಾವಣೆಯ ನಿವಾಸಿ ಹಾಗೂ ಪ್ರಸ್ತುತ ಬೆಂಗಳೂರಿನ ಇನ್‍ಸೈನ್ ಎಕ್ವಿಪ್‍ಮೆಂಟ್ ಪ್ರೈವೇಟ್ ಲಿಮಿಟೆಡ್‍ನ ಬ್ಯುಸಿನೆಸ್ ಯೂನಿಟ್ ಹೆಡ್ ಆಗಿ ಕಾರ್ಯ ನಿರ್ವಹಿಸು ತ್ತಿರುವ ಎಸ್.ಅಚ್ಯುತಾನಂದ ಸೇರಿದಂತೆ ನಾಲ್ವರನ್ನು ಇತ್ತೀಚೆಗೆ ವಿದ್ಯಾಮಾತಾ ಫೌಂಡೇಷನ್ ವತಿಯಿಂದ ಪುತ್ತೂರಿನ ಸುದಾನ ರೆಸಿಡೆನ್ಸಿಯಲ್ ಸ್ಕೂಲ್ ನಡೆದ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಅಚ್ಯುತಾನಂದ ಅವರು ವಾಟ್ಸ್‍ಆಪ್ ಗ್ರೂಪ್ ಹೆಸರಿನಲ್ಲಿ `ಉದ್ಯೋಗ ನಿಮಿತ್ತÀಂ’ ಸ್ಥಾಪಿಸಿ, ಎಲ್ಲಿ ಉದ್ಯೋಗದ ಬಗ್ಗೆ ಮಾಹಿತಿ ಪಡೆದು ಕೈಗಾರಿಕೆಗಳಿಗೆ ಅಗತ್ಯವಿರುವ ಹುದ್ದೆಗಳನ್ನು ಒದಗಿಸುವ ಮೂಲಕ ಕಾರ್ಖಾನೆ ಮಾಲೀಕರು ಮತ್ತು ಕಾರ್ಮಿಕರ ನಡುವೆ ಸೇತುವೆ ಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಹಲವರು ಉದ್ಯೋಗ ಪಡೆದುಕೊಂಡು ಜೀವನ ಸಾಗಿಸುತ್ತಿದ್ದು, ಇವರ ಸಾಮಾಜಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಗಿದೆ.

Translate »