ಕೊಳ್ಳೇಗಾಲ, ಯಳಂದೂರಿನ ಶಿಕ್ಷಕರ ದಿನಾಚರಣೆ
ಚಾಮರಾಜನಗರ

ಕೊಳ್ಳೇಗಾಲ, ಯಳಂದೂರಿನ ಶಿಕ್ಷಕರ ದಿನಾಚರಣೆ

September 16, 2018

ಶೀಘ್ರದಲ್ಲಿಯೇ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಕ್ಕೆ ಕ್ರಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿಕೆ

ಯಳಂದೂರು,ಸೆ:  ‘ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದ್ದು, ಕೂಡಲೇ ಅವರನ್ನು ನೇಮಕ ಮಾಡಲು ಕ್ರಮ ವಹಿಸಲಾಗುವುದು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ಹೇಳಿದರು.
ಪಟ್ಟಣದ ಜೆಎಸ್‍ಎಸ್ ಮಹಿಳಾ ಕಾಲೇ ಜಿನಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾ ಚರಣೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ 4 ಲಕ್ಷ ಶಿಕ್ಷಕರು ಇದ್ದು, ಒಂದೂವರೆ ಕೋಟಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರ ಬಲ ವರ್ಧನೆ ಮಾಡುವ ನಿಟ್ಟಿನಲ್ಲಿ ರಾಜ್ಯದ ಸ್ವಯಂ ಸೇವಾ ಸಂಸ್ಥೆಗಳು ಸಹಕಾರ ನೀಡುತ್ತಿದೆ ಎಂದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಆರ್ಥಿಕವಾಗಿ ದುರ್ಬಲ ರಾಗಿದ್ದರೂ, ಸಾಕಷ್ಟು ಪ್ರತಿಭಾವಂತ ರಾಗಿದ್ದಾರೆ. ಹಾಗಾಗಿ, ಶಿಕ್ಷಕರು ವಿದ್ಯಾ ರ್ಥಿಗಳ ಪ್ರತಿಭೆಯನ್ನು ಗುರುತಿಸಬೇಕು. ಕಲಿಕಾಸಕ್ತಿಯನ್ನು ಮೂಡಿಸಬೇಕು. ಅವರಲ್ಲಿ ವೈಜ್ಞಾನಿಕ ಚಿಂತನೆಗಳನ್ನು ಬಿತ್ತನೆ ಮಾಡ ಬೇಕು ಎಂದು ಸಲಹೆ ನೀಡಿದರು.

ಶಿಕ್ಷಕರು ತಮ್ಮ ಜೀವನದ ಜಂಜಾಟ ವನ್ನು ಶಾಲಾ ಆವರಣಕ್ಕೆ ತರದೆ ಮಕ್ಕಳ ಭವಿಷ್ಯದ ಬಗ್ಗೆ ಆಲೋಚಿಸಬೇಕು. ಅವರಲ್ಲಿ ಓದಿನ ಬಗ್ಗೆ ಕಾಳಜಿ ಮೂಡಿ ಸುವ ಜೊತೆಗೆ, ಗುಣಮಟ್ಟದ ಶಿಕ್ಷಣವನ್ನು ನೀಡಿ ಉತ್ತಮ ಪ್ರಜೆಗಳನ್ನಾಗಿ ರೂಪಿ ಸಬೇಕು ಎಂದು ತಿಳಿಸಿದರು.

ಗ್ರಾಮೀಣ ಪ್ರದೇಶದಲ್ಲಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ದಲ್ಲಿ ಅನುದಾನದ ಕೊರತೆಯಿದೆ. ಉದ್ಯಮಿ ಗಳು, ದಾನಿಗಳು ಶಾಲೆಗಳ ಅಭಿವೃದ್ಧಿಗೆ ಸಹಾಯ ನೀಡಬೇಕು. ಈ ನಿಟ್ಟಿನಲ್ಲಿ ಶಿಕ್ಷ ಕರು, ಬಿಆರ್‍ಸಿ ಮತ್ತು ಸಿಆರ್‍ಪಿಗಳು, ಕ್ಷೇತ್ರ ಶಿಕ್ಷಣಾಧಿಕಾರಿ ದಾನಿಗಳನ್ನು ಭೇಟಿ ಮಾಡಿ ಶಾಲೆಯ ಅಭಿವೃದ್ಧಿಗೆ ಶ್ರಮಿಸ ಬೇಕು ಎಂದು ತಿಳಿಸಿದರು.
ಜಿಪಂ ಉಪಾಧ್ಯಕ್ಷ ಜೆ.ಯೋಗೇಶ್ ಮಾತ ನಾಡಿ, ವಿದ್ಯಾರ್ಥಿಗಳ ಬದುಕನ್ನು ಅಸನು ಮಾಡುವುದು ಶಿಕ್ಷಕರಿಂದ ಮಾತ್ರ ಸಾಧ್ಯ ವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಮೂಢನಂಬಿಕೆಗೆ ಜೋತು ಬಿದ್ದು ವಿದ್ಯಾರ್ಥಿಗಳು ತಮ್ಮ ಭವಿಷ್ಯ ವನ್ನು ಹಾಳು ಮಾಡಿಕೊಳ್ಳುತಿದ್ದಾರೆ ಎಂದು ವಿಷಾದಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತಿಯಾದ ಶಿಕ್ಷ ಕರುಗಳಿಗೆ ಶಿಕ್ಷಕರ ಸಂಘದಿಂದ ಸನ್ಮಾ ನಿಸಲಾಯಿತ್ತು. ಜಿಪಂ ಸದಸ್ಯೆ ಉಮಾವತಿ, ತಾಪಂ ಅಧ್ಯಕ್ಷ ನಿರಂಜನ್‍ಕುಮಾರ್, ಉಪಾ ಧ್ಯಕ್ಷೆ ಮಲ್ಲಾಜಮ್ಮ, ಸದಸ್ಯರಾದ ನಾಗರಾಜು, ಪವಿತ್ರ, ಪುಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ತಿರು ಮಲಾಚಾರ್, ಇಓ ರಾಜು, ಪಪಂ ಉಪಾಧ್ಯಕ್ಷ ವೈ.ಎಸ್.ಭೀಮಪ್ಪ, ಸದಸ್ಯರಾದ ಉಮಾ ಶಂಕರ್, ಜೆ.ಶ್ರೀನಿವಾಸ್, ಫಣೀಶ್, ಬಿಆರ್‍ಸಿ ಮಹೇಶ್, ಶಿಕ್ಷಕರ ಸಂಘದ ಅಧ್ಯಕ್ಷ ರಾಜು, ಶಿಕ್ಷಕರಾದ ರೇಚಣ್ಣ, ಗೋವಿಂದ, ರಾಧ, ಶಿವಲಾಂಕರ್, ವೀರ ಭದ್ರಸ್ವಾಮಿ, ಮಂಜುನಾಥಸ್ವಾಮಿ, ಮಹೇಂದ್ರ ಹಾಜರಿದ್ದರು.

ಸಾಧನೆ ಸಾಧಕನ ಸ್ವತ್ತು: ಹುಲಿಕಲ್ ನಟರಾಜ್
ಡೊಂಗಿ ಮಂತ್ರವಾದಿಗಳ ಮಾತಿಗೆ ಜೋತು ಬಿದ್ದರೇ, ಜೀವನದ ಸುಖವನ್ನು ಹಾಳು ಮಾಡಿಕೊಳ್ಳಬೇಕಾಗುತ್ತದೆ. ಇಂದಿನ ಮಂತ್ರ ವಾಧಿಗಳು ಮಾಟ ಮಂತ್ರ ಎಂದು ಜನರನ್ನು ಮೋಸ ಮಾಡುತ್ತಿದ್ದಾರೆ. ಹಾಗಾಗಿ, ಯಾರು ಕೂಡ ಮೂಢÀ ನಂಬಿಕೆ, ಕಂದಾಚಾರಗಳಿಂದ ಸಾಧನೆ ಮಾಡಲು ಸಾಧ್ಯ ವಿಲ್ಲ. ಸಾಧನೆ ಸಾಧÀಕನ ಸ್ವತ್ತು ಎಂದು ಪವಾಡ ರಹಸ್ಯ ಬಯಲು ಕಾರ್ಯಕ್ರಮದ ರೂವಾರಿ ಹುಲಿಕಲ್ ನಟರಾಜು ಹೇಳಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತಿಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕಂದಾಚಾರಗಳು, ಮಾಟ ಮಂತ್ರ ಸೇರಿದಂತೆ ಮಂತ್ರವಾದಿಗಳು ಕೃತಕ ದೇವಾಲಯಗಳನ್ನು ನಿರ್ಮಿಸಿಕೊಳ್ಳುವುದರ ಜೊತೆಯಲ್ಲಿ ಹಣದ ಆಸೆಗೆ ಮುಗ್ದ ಜನರ ಭವಿಷ್ಯವನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅದನ್ನು ಬಿಟ್ಟು ಅವರಿಗೆ ಅತಿಯಾದ ಸ್ವಾತಂತ್ರ್ಯ ನೀಡಿದರೆ ಮಕ್ಕಳ ಭವಿಷ್ಯವನ್ನು ಹಾಳು ಮಾಡಲು ದಾರಿ ಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ವೈಟ್ನರ್, ಪೆಟ್ರೋಲ್, ಫೇವಿಕಾಲ್ ವಸ್ತುಗಳನ್ನು ಮಾದÀಕ ವಸ್ತುಗಳಗಾಗಿ ಬಳಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

 

ಮಕ್ಕಳ ಕಲಿಕಾ ಪ್ರಗತಿಗೆ ಸ್ಪಂದಿಸಲು ಶಿಕ್ಷಕರಿಗೆ ಸಲಹೆ

ಕೊಳ್ಳೇಗಾಲ: ‘ಶಿಕ್ಷಕರು ಮಕ್ಕಳ ಕಲಿಕಾ ಪ್ರಗತಿಯ ಬಗ್ಗೆ ಸ್ಪಂದಿಸಿ ಅವರ ಭವಿಷ್ಯವನ್ನು ಉಜ್ವಲಗೊಳಿಸ ಬೇಕು’ ಎಂದು ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಚಿವ ಎನ್.ಮಹೇಶ್ ಸಲಹೆ ನೀಡಿದರು.

ಪಟ್ಟಣದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಶನಿವಾರ ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಸನ್ಮಾನ ಕಾರ್ಯ ಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶಿಕ್ಷಕರು ತಮ್ಮ ಬದುಕಿನ ಜಂಜಾಟ ಮರೆತು ಮಕ್ಕಳ ಕಲಿಕಾ ಪ್ರಗತಿಗೆ ಸ್ಪಂದಿಸಬೇಕು. ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಶಿಕ್ಷಕರು ಶ್ರಮಿಸಬೇಕು ಎಂದರು. ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಪಳನಿಸ್ವಾಮಿ ಜಾಗೇರಿ, ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರಾದ ಮಹದೇವ, ನಾಗರಾಜ, ಎಂ.ಚಿಕ್ಕರಾಜು ಹಾಗೂ ಬ್ಲಾಕ್ ಹಂತದ ಉತ್ತಮ ಶಿಕ್ಷಕರು ಎಂಬ ಹೆಗ್ಗಳಿಕೆಗೆ ಭಾಜನರಾದ ಚೌಡೇಶ್ವರಿ ಶಾಲೆಯ ಮೋಹನ್‍ಕುಮಾರ್, ಜಿನಕನಹಳ್ಳಿ ಶಾಲೆಯ ನಾಗೇಶ್, ಮುಳ್ಳೂರು ಶಾಲೆಯ ಶಿವ ಕುಮಾರ್ ಹಾಗೂ ಸುವರ್ಣಮೇರಿ, ಸತ್ತೇಗಾಲ ಶಾಲೆಯ ಉಮೇಶ್, ದೊಡ್ಡಿಂದುವಾಡಿ ಶಾಲೆಯ ರೂಪ ಅವರÀನ್ನು ಸನ್ಮಾನಿಸಲಾಯಿತು.

ನಿವೃತ್ತಿ ಹೊಂದಿದ ಜಡೇಸ್ವಾಮಿ, ಶೇಖರ, ಜವನೇಗೌಡ, ಸವಿತಾದೇವಿ, ಮಹದೇವಯ್ಯ, ರತ್ನಪುತ್ರಿ, ಗ್ಲಾಡಿಸ್, ಫಿಲೋ ಮಿನಾ ರಾಣಿ, ರಜಿನಾಕುಮಾರಿ, ಸುಜಾತಾ, ಸುಲೋಚನಾ ಅವರಿಗೆ ಬೀಳ್ಕೊಡುಗೆ ನೀಡಲಾಯಿತು.

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷೆ ಶಿವಮ್ಮ, ಸದಸ್ಯರಾದ ನಾಗರಾಜು, ಮರಗದ ಮಣಿ, ತಾಪಂ ಉಪಾಧ್ಯಕ್ಷೆ ಲತಾ ರಾಜಣ್ಣ, ಸದಸ್ಯರಾದ ಪುಷ್ಪಾ, ಅರುಣ್‍ಕುಮಾರ್, ನಗರಸಭೆ ಸದಸ್ಯರಾದ ಮನೋಹರ್, ಪವಿತ್ರ, ನಾಸೀಪ್, ಚೌಡೇಶ್ವರಿ ಕಲ್ಯಾಣ ಮಂಟಪ ಟ್ರಸ್ಟ್ ಅಧ್ಯಕ್ಷ ಚಿಂತು ಪರಮೇಶ್, ಸಾರ್ವಜನಿಕ ಶಿಕ್ಷಣ ಇಲಾ ಖೆಯ ಉಪನಿರ್ದೇಶಕಿ ಮಂಜುಳಾ, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಪಾಟೀಲ್, ರಾಮಕೃಷ್ಣ, ಸರ್ಕಾರಿ ನೌಕರರ ಸಂಘದ ಪ್ರಾನ್ಸಿಸ್, ಜಿಲ್ಲಾ ದೈಹಿಕ ಶಿಕ್ಷಣ ನಿರ್ದೇಶಕ ಜಾರ್ಜ್‍ಫಿಲೀಪ್, ಶಿಕ್ಷಕರ ಸಂಘದ ಬುಕಾನಿ, ವಿಜಯ್ ಕುಮಾರ್, ಹೂವಮ್ಮ, ಶಾಂತರಾಜು, ಶಾಂತಮೂರ್ತಿ, ದೊರೆಸ್ವಾಮಿ, ಆನಂದರಾಜು, ಉಮಾ ಶಂಕರ್, ನಾಗಸುಂದ್ರಮ್ಮ, ಬಸವಣ್ಣ, ಬಾಲಕೃಷ್ಣೆಗೌಡ. ನಂಜುಂಡ ಮೂರ್ತಿ, ನಂದೀಶ್, ಸಿದ್ದರಾಜು ಇದ್ದರು.

Translate »