ಸ್ಕೂಟರ್‍ನಿಂದ ಬಿದ್ದು ಸವಾರ ಸಾವು
ಮೈಸೂರು

ಸ್ಕೂಟರ್‍ನಿಂದ ಬಿದ್ದು ಸವಾರ ಸಾವು

September 16, 2018

ಗೋಣಿಕೊಪ್ಪಲು:  ಸ್ಕೂಟರ್‍ನಿಂದ ಬಿದ್ದು ಸವಾರ ಸಾವನಪ್ಪಿರುವ ಘಟನೆ ಪೊನ್ನಂಪೇಟೆ ಸಮೀಪದ ಮುಗುಟಗೇರಿ ಎಂಬಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ಬಲ್ಯಮುಂಡೂರು ಗ್ರಾಮದ ರವಿ (48) ಮೃತ ವ್ಯಕ್ತಿ. ಪೊನ್ನಂಪೇಟೆಯಿಂದ ಸ್ಕೂಟರ್‍ನಲ್ಲಿ ತೆರಳುತ್ತಿದ್ದಾಗ ಆಯಾತಪ್ಪಿ ಬಿದ್ದು ತಲೆಗೆ ಗಂಭೀರ ಗಾಯವಾಗಿ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನಪ್ಪಿದರು. ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಶವಗಾರದಲ್ಲಿ ಶವ ಪರೀಕ್ಷೆ ನಡೆಸಲಾಯಿತು. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Translate »