ಪರಿಸರಕ್ಕೆ ಧಕ್ಕೆಯಾಗಲಿರುವ ಹಿನ್ನೆಲೆಯಲ್ಲಿ ವಿವಾದಿತ ಮೈಸೂರು-ಮಡಿಕೇರಿ ರೈಲು ಮಾರ್ಗ ನಿರ್ಮಾಣ ಸಂಬಂಧ ಪರಿಸರವಾದಿಗಳು ಬಲವಾಗಿ ವಿರೋಧಿಸುತ್ತಿದ್ದು, ಇದನ್ನು ಕುಶಾಲನಗರದವರೆಗೆ ಮಾತ್ರ ನಿರ್ಮಿಸಲು ನಿರ್ಧರಿಸಿರುವ ವಿಚಾರವನ್ನು ರೈಲ್ವೆ ಅಧಿಕಾರಿಗಳು ಸಂಸದರಲ್ಲಿ ಸ್ಪಷ್ಟಪಡಿಸಿದರು.
ಮೈಸೂರು-ಮಡಿಕೇರಿ ಹೊಸ ರೈಲು ಸಂಪರ್ಕ ಕುರಿತಂತೆ ಸಂಸದ ಪ್ರತಾಪ್ ಸಿಂಹ ಅಧಿಕಾರಿಗಳನ್ನು ಪ್ರಶ್ನಿಸಿದಾಗ ಈ ವಿಷಯ ಬೆಳಕಿಗೆ ಬಂದಿತು. ರೈಲು ಮಾರ್ಗವನ್ನು ಕುಶಾಲನಗರದವರೆಗೆ ಮಾತ್ರ ಸೀಮಿತಗೊಳಿಸುವಂತೆ ಸಂಸದ ಪ್ರತಾಪ್‍ಸಿಂಹ ಸಲಹೆ ನೀಡಿದರು.
ಕೇರಳದ ತಲಚೇರಿಯಿಂದ ಮಡಿಕೇರಿವರೆಗಿನ ಉದ್ದೇಶಿತ ರೈಲು ಸಂಪರ್ಕಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡುವುದಿಲ್ಲ ಎಂದು ರಾಜ್ಯ ಸರ್ಕಾರವು ಹೇಳಿದೆ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.