ಸಹೋದರರಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ
ಮೈಸೂರು

ಸಹೋದರರಿಂದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ

September 13, 2018

ಅರಸೀಕೆರೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಸಹೋದರರಿಂದ ಕಂಟಕ ಇದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಶಿವ ಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ತಾಳೆಗರಿ ಭವಿಷ್ಯ ನುಡಿಯುವ ಶ್ರೀಗಳು, ಇಂದು ತಾಲೂಕಿನ ಮಾಡಾಳು ಗ್ರಾಮದ ಬಸವೇಶ್ವರ ದೇಗುಲದಲ್ಲಿ ಗೌರಿ ಪ್ರತಿಷ್ಠಾಪಿಸಿ, ಬಳಿಕ ಭವಿಷ್ಯ ನುಡಿದರು.

ರಾಜ್ಯ ಸರ್ಕಾರಕ್ಕೆ ಸಹೋದರರಿಂದ ಕಂಟಕವಿದ್ದು, ನವೆಂಬರ್ ತಿಂಗಳವರೆಗೂ ರಾಜಕೀಯ ಪರಿಸ್ಥಿತಿ ಡೋಲಾಯಮಾನ ವಾಗಲಿದೆ. ಬೆಳಗಾವಿ ಸಹೋ ದರರಂತೆ ಅಧಿಕಾರಕ್ಕಾಗಿ ಮತ್ತೋರ್ವ ಸಹೋದರ ಹುಟ್ಟಿಕೊಳ್ಳುತ್ತಾರೆ ನೋಡುತ್ತಿರಿ ಎಂದರು. ದೇಶದಲ್ಲಿ ಪ್ರಾಕೃತಿಕ ವಿಕೋಪಗಳು ಇನ್ನೂ ಹೆಚ್ಚಾಗಲಿವೆ. ಭೂ-ಕಂಪನದ ಹೊಡೆತಕ್ಕೆ ದೊಡ್ಡ ದೊಡ್ಡ ನಗರಗಳು ತತ್ತರಿಸಲಿವೆ. ಸಾವು-ನೋವುಗಳ ಸರಣಿ ಹೆಚ್ಚಾಗಲಿದೆ.

Translate »