ಇನ್ನೂ 3 ತಿಂಗಳು ಪ್ರಕೃತಿ ಆತಂಕ ಮತ್ತೆ ಭವಿಷ್ಯ ನುಡಿದ ಕೋಡಿಶ್ರೀ
ಮೈಸೂರು

ಇನ್ನೂ 3 ತಿಂಗಳು ಪ್ರಕೃತಿ ಆತಂಕ ಮತ್ತೆ ಭವಿಷ್ಯ ನುಡಿದ ಕೋಡಿಶ್ರೀ

August 22, 2018

ಹಾಸನ: ಕರ್ನಾಟಕ ಮತ್ತು ಕೇರಳದಲ್ಲಿ ನೈಸರ್ಗಿಕ ವಿಕೋಪ ಕುರಿತು ಮತ್ತೊಮ್ಮೆ ಭವಿಷ್ಯ ನುಡಿದಿರುವ ಅರಸೀಕೆರೆ ತಾಲೂಕಿನ ಕೋಡಿಮಠ ಸಂಸ್ಥಾನದ ಶಿವಾನಂದ ಶಿವಯೋಗಿ ರಾಜೇಂದ್ರ ಶ್ರೀಗಳು, ಇನ್ನೂ 3 ತಿಂಗಳು ಪ್ರಕೃತಿ ವಿಕೋಪಗಳು ಮುಂದುವರಿ ಯಲಿವೆ ಎಂದು ತಿಳಿಸಿದ್ದಾರೆ. ಹಾಸನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಮಳೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಕೋಪಗಳು ಇನ್ನೂ ಮೂರು ತಿಂಗಳು ಮುಂದುವರಿಯಲಿದೆ. ಜನರಿಗೆ ಇದರಿಂದ ಮತ್ತಷ್ಟು ತೊಂದರೆಯಾಗಲಿದೆ ಎಂದಿದ್ದಾರೆ.

ಮುಂದಿನ ಕಾರ್ತಿಕ ಮಾಸದವರೆಗೂ ಮಳೆ ಆರ್ಭಟಿಸಲಿದೆ. ಇದರಿಂದ ಪ್ರವಾಹ, ಭೂಕುಸಿತದಂತಹ ನೈಸರ್ಗಿಕ ವಿಕೋಪದಿಂದ ಇನ್ನಷ್ಟು ತೊಂದರೆಯಾಗಲಿದೆ. ರಾಜ್ಯದ ಕೆಲವು ಭಾಗಗಳಲ್ಲಿ ಪ್ರವಾಹದಿಂದ ಆದ ತೊಂದರೆಗಳಿಂದ ಸಾರ್ವಜನಿಕರು ಇನ್ನೂ ಸುಧಾರಿಸಿಕೊಳ್ಳದ ಈ ಹೊತ್ತಿನಲ್ಲಿ ಕೋಡಿಶ್ರೀಗಳ ಭವಿಷ್ಯ ಮತ್ತಷ್ಟು ಚಿಂತೆಗೀಡಾಗುವಂತೆ ಮಾಡಿದೆ.

Translate »