ಐತಿಹಾಸಿಕ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಮಹಾರಾಣಿ ಕಾಲೇಜು ಹಾಸ್ಟೆಲ್ ನಿರ್ಮಾಣ
ಮೈಸೂರು

ಐತಿಹಾಸಿಕ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಮಹಾರಾಣಿ ಕಾಲೇಜು ಹಾಸ್ಟೆಲ್ ನಿರ್ಮಾಣ

September 13, 2018

ಮೈಸೂರು: ಮೈಸೂ ರಿನ ನಂಜರಾಜ ಬಹ ದ್ದೂರ್ ಛತ್ರದ ಆವ ರಣದಲ್ಲಿ ಮಹಾರಾಣಿ ಕಾಲೇಜು ವಿದ್ಯಾರ್ಥಿ ನಿಲಯ ನಿರ್ಮಿಸ ಲಾಗುವುದು ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ತಿಳಿಸಿದ್ದಾರೆ.

ವಿದ್ಯಾರ್ಥಿನಿಲಯಕ್ಕಾಗಿ ಈಗಾಗಲೇ ಐತಿಹಾಸಿಕ ನಂಜರಾಜ ಬಹದ್ದೂರ್ ಕಲ್ಯಾಣ ಮಂಟಪದ ಆವರಣದಲ್ಲಿರುವ 1 ಎಕರೆ ಖಾಲಿ ಜಾಗವನ್ನು ರಾಜ್ಯ ಸರ್ಕಾರ ಉನ್ನತ ಶಿಕ್ಷಣ ಇಲಾಖೆಗೆ ಹಸ್ತಾಂತರಿಸ ಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಮೈಸೂರಿನ ಮಹಾರಾಣಿ ಕಲಾ ಕಾಲೇ ಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಸಾಂಸ್ಕøತಿಕ ವೇದಿಕೆ ಉದ್ಘಾಟಿಸಿ ಮಾತ ನಾಡುತ್ತಿದ್ದ ಕುಮಾರಸ್ವಾಮಿ ಅವರು, 1902 ರಲ್ಲಿ ಆರಂಭವಾದ ಮಹಾರಾಣಿ ಕಾಲೇಜಿ ನಲ್ಲಿ ಸಾವಿರಾರು ಗ್ರಾಮಾಂತರ ವಿದ್ಯಾರ್ಥಿ ಗಳು ಓದುತ್ತಿರುವುದರಿಂದ ಅದೇ ಸ್ಥಳದಲ್ಲಿ ಮೂಲ ಸೌಕರ್ಯ ಒದಗಿಸಲು ಸ್ಥಳಾಭಾವ ವಿರುವುದರಿಂದ ಕಾಲೇಜಿಗೆ ಸಮೀಪ ವಿರುವ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ನಿರ್ಮಿಸಲಾಗುವುದು ಎಂದರು.

150 ವರ್ಷಗಳ ಹಿಂದೆ ನಿರ್ಮಿಸಿದ್ದ ನಂಜರಾಜ ಬಹದ್ದೂರ್ ಛತ್ರವು ಅಂದಿನ ಮುನಿಸಿಪಲ್ ಆಡಳಿತದಲ್ಲಿತ್ತು. ಈಗ ಶ್ರೀ ನಂಜರಾಜ ಬಹದ್ದೂರ್ ಛತ್ರ ವ್ಯವ ಸ್ಥಾಪನಾ ಸಮಿತಿ ಆಡಳಿತ ನಡೆಸುತ್ತಿದೆ. ಮೈಸೂರಿಗೆ ಭೇಟಿ ನೀಡುವ ಪ್ರವಾಸಿಗರು ವಾಸ್ತವ್ಯ ಹೂಡಿ ವಿಶ್ರಾಂತಿ ಪಡೆಯಲು ಅನುಕೂಲ ವಾಗಲೆಂದು ನಂಜರಾಜ ಬಹದ್ದೂರ್ ಅವರು ಕಟ್ಟಡ ಕಟ್ಟಿಸಿದ್ದರು ಎಂದು ವ್ಯವ ಸ್ಥಾಪನಾ ಸಮಿತಿ ಅಧ್ಯಕ್ಷ ಸಿ. ಕೃಷ್ಣಪ್ಪ ಅವರು ‘ಮೈಸೂರು ಮಿತ್ರ’ನಿಗೆ ಮಾಹಿತಿ ನೀಡಿದರು.

ಹಿಂದಿನ ಸರ್ಕಾರವಿದ್ದಾಗಲೇ ಛತ್ರದ ಆವರಣದ 1 ಎಕರೆ ಜಾಗವನ್ನು ಮಹಾ ರಾಣಿ ಕಾಲೇಜು ಹಾಸ್ಟೆಲ್ ನಿರ್ಮಿಸಲು ವರ್ಗಾವಣೆ ಮಾಡಿ ಖಾತೆಯನ್ನೂ ಮಾಡಿ ಕೊಡಲಾಗಿದೆ ಎಂದ ಅವರು, ಛತ್ರದ ಪಾರಂ ಪರಿಕ ಕಟ್ಟಡವನ್ನು ಕೆಡವುದಿಲ್ಲ. ಅದರ ಹಿಂಭಾಗದ ಖಾಲಿ ಜಾಗದಲ್ಲಿ ಹಾಸ್ಟೆಲ್ ಕಟ್ಟಡ ನಿರ್ಮಿಸಲಾಗುವುದು ಎಂದರು.

ಕೆಲ ಪತ್ರಿಕೆಗಳಲ್ಲಿ ನಂಜರಾಜ ಬಹದ್ದೂರ್ ಛತ್ರದ ಕಟ್ಟಡವನ್ನು ಕೆಡವಿ ಅಲ್ಲಿ ಮಹಾ ರಾಣಿ ಕಾಲೇಜು ಹಾಸ್ಟೆಲ್ ನಿರ್ಮಿಸಲಾಗು ವುದು ಎಂಬ ಸುದ್ದಿ ಪ್ರಕಟವಾಗಿರುವುದು ಸುಳ್ಳು ಎಂದು ಕೃಷ್ಣಪ್ಪ ತಿಳಿಸಿದರು.

ಮುಜರಾಯಿ ಇಲಾಖೆಗೆ ಸೇರಿದ ಒಟ್ಟು 10 ಎಕರೆ ಪ್ರದೇಶವಿರುವ ನಂಜರಾಜ ಬಹದ್ದೂರ್ ಛತ್ರದ ಆವರಣದಲ್ಲಿ ಕೆಎಸ್ ಆರ್‍ಟಿಸಿ, ಮಯೂರ ಹೋಟೆಲ್, ವಾರ್ತಾ ಮತ್ತು ಪ್ರಚಾರ ಇಲಾಖೆ ಕಚೇರಿ, ಆಟೊ ಗ್ಯಾರೇಜ್, 2 ಪೆಟ್ರೊಲ್ ಬಂಕ್‍ಗಳು, ವೇಬ್ರಿಡ್ಜ್, ಸರ್ಕಾರಿ ನೌಕರರ ಸಂಘದ ಕಚೇರಿ ಹಾಗೂ ಖಾಸಗಿ ಹೋಟೆಲ್‍ಗಳು ನಡೆಯುತ್ತಿವೆ ಎಂದ ಕೃಷ್ಣಪ್ಪ, ಲೀಸ್ ಅವಧಿ ಮುಗಿದಿ ರುವ ಖಾಸಗಿಯವರನ್ನು ತೆರವುಗೊಳಿಸ ಬೇಕಾಗಿದೆ. ಕೆಲವು ಪ್ರಕರಣ ನ್ಯಾಯಾಲಯ ದಲ್ಲಿವೆ ಎಂದೂ ತಿಳಿಸಿದರು.

ಗುತ್ತಿಗೆ ಅವಧಿ ಮುಗಿದಿರುವ ಖಾಸಗಿ ಯವರನ್ನು ತೆರವುಗೊಳಿಸುವ ಬಗ್ಗೆ ಸಮಿತಿ ಯಲ್ಲಿ ತೀರ್ಮಾನ ಕೈಗೊಂಡು ಸರ್ಕಾರಕ್ಕೆ ಕಳುಹಿಸಲಾಗಿದೆ. ಆದ್ದರಿಂದ ಗುತ್ತಿಗೆ ಅವಧಿ ವಿಸ್ತರಿಸುವ ಪ್ರಶ್ನೆಯೇ ಇಲ್ಲ ಎಂದು ಅವರು ತಿಳಿಸಿದರು.

Translate »