ನಾಗನಹಳ್ಳಿಯಲ್ಲಿ ಹೊಸ ಸ್ಯಾಟ್‍ಲೈಟ್  ರೈಲ್ವೆ ಟರ್ಮಿನಲ್ ನವೆಂಬರ್ ವೇಳೆಗೆ ಸಿದ್ಧ
ಮೈಸೂರು

ನಾಗನಹಳ್ಳಿಯಲ್ಲಿ ಹೊಸ ಸ್ಯಾಟ್‍ಲೈಟ್  ರೈಲ್ವೆ ಟರ್ಮಿನಲ್ ನವೆಂಬರ್ ವೇಳೆಗೆ ಸಿದ್ಧ

September 13, 2018

ಮೈಸೂರು:  ಮೈಸೂರು ಸಮೀಪದ ನಾಗನಹಳ್ಳಿ ಬಳಿ (ಮೈಸೂರಿನಿಂದ 10 ಕಿ.ಮೀ.ದೂರ) 2018 -19ರಲ್ಲಿ 7.8 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಹೊಸ ಸ್ಯಾಟ್‍ಲೈಟ್ ರೈಲ್ವೆ ಟರ್ಮಿ ನಲ್ ಸ್ಥಾಪಿಸುವ ಕಾರ್ಯ ಪ್ರಗತಿಯಲ್ಲಿದ್ದು, ಈ ಕುರಿತ ವಿವರವಾದ ಯೋಜನೆ ವರದಿ (ಡಿಪಿಆರ್) ತಯಾರಾಗಿದೆ. ಯೋಜ ನೆಯು ಈ ವರ್ಷದ ನವೆಂಬರ್‍ನಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ.

ಮೈಸೂರು ರೈಲ್ವೆ ನಿಲ್ದಾಣದಲ್ಲಿನ ದಟ್ಟಣೆಯನ್ನು ನಿವಾರಿಸುವ ಉದ್ದೇಶ ದಿಂದ ಇದನ್ನು ನಿರ್ಮಿಸಲಾಗುತ್ತಿದೆ ಎಂದು ಮಂಗಳವಾರ ಮೈಸೂರಿನ ವಿಭಾ ಗೀಯ ರೈಲ್ವೆ ವ್ಯವಸ್ಥಾಪಕರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನೈರುತ್ಯ ರೈಲ್ವೆ ಅಧಿ ಕಾರಿಗಳು ಮೈಸೂರು ಸಂಸದ ಪ್ರತಾಪ್ ಸಿಂಹ ಮತ್ತು ಚಾಮರಾಜನಗರ ಸಂಸದ ಆರ್.ಧ್ರುವನಾರಾಯಣ್ ಅವರಿಗೆ ಈ ವಿಷಯ ತಿಳಿಸಿದರು.

ಈ ಯೋಜನೆಗೆ 400 ಎಕರೆಗಳಷ್ಟು ಭೂಮಿಯನ್ನು ನಿಗದಿಪಡಿಸಲಾಗಿದೆ. ನಿಲ್ದಾಣದ ಕಟ್ಟಡದ ಜೊತೆಗೆ ಆರು ಪ್ಲಾಟ್ ಫಾರಂ, ಆರು ಸ್ಟಾಬ್ಲಿಂಗ್ ಲೈನ್‍ಗಳು ಇನ್ನಿತರೆ ಹೊಂದಿದೆ ಎಂದು ಸಂಸದ ಪ್ರತಾಪ್‍ಸಿಂಹ ಪ್ರಶ್ನೆಗೆ ಅವರು ತಿಳಿಸಿದರು.
ಈ ಯೋಜನೆಗಾಗಿ ಭೂಮಿ ಗುರು ತಿಸಿ, ಕಾಯ್ದಿರಿಸುವಂತೆ ಅಧಿಕಾರಿಗಳಿಗೆ ಪ್ರತಾಪ್‍ಸಿಂಹ ಸಲಹೆಗೆ ಉತ್ತರಿಸಿದ ಅಧಿಕಾರಿಗಳು, ರಾಜ್ಯ ಸರ್ಕಾರದಿಂದ ಆದಷ್ಟು ಬೇಗ ಭೂಮಿ ಮಂಜೂರು ಮಾಡಲು ಕೋರಿದ್ದು, ಈ ವಿಚಾರದಲ್ಲಿ ಚುನಾಯಿತ ಪ್ರತಿನಿಧಿಗಳೊಂದಿಗೆ ಜಂಟಿ ಪರಿಶೀಲನೆ ನಡೆಯಲಿದೆ ಎಂದರು.

ನಂಜನಗೂಡು ರೈಲು ನಿಲ್ದಾಣ ಮೇಲ್ದರ್ಜೆಗೆ: ನಂಜನಗೂಡಿನ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ನಂಜನಗೂಡು ರೈಲ್ವೆ ನಿಲ್ದಾಣವನ್ನು ಸುಂದರಗೊಳಿಸ ಲಾಗುವುದು ಎಂದು ಸಂಸದ ಆರ್. ಧ್ರುವನಾರಾಯಣ್ ಅವರ ಪ್ರಶ್ನೆಯೊಂ ದಕ್ಕೆ ನೈರುತ್ಯ ರೈಲ್ವೆ ಮಹಾ ಪ್ರಬಂಧಕ ಅಶೋಕ್‍ಕುಮಾರ್ ಗುಪ್ತ ತಿಳಿಸಿದರು.

ಚಾಮರಾಜನಗರ ಮತ್ತು ಹೆಜ್ಜಾಲ ನಡು ವಿನ ಹೊಸ ರೈಲ್ವೆ ಯೋಜನೆ ಬಗ್ಗೆ ಕೇಳಿದ ಪ್ರಶ್ನೆಗೆ, 140 ಕಿ.ಮೀ ಉದ್ದದ ಈ ಮಾರ್ಗಕ್ಕೆ 1,300 ಕೋಟಿ ರೂ. ಮಂಜೂರಾಗಿದ್ದು, ಕರ್ನಾಟಕ ರಾಜ್ಯ ಸರ್ಕಾರದೊಂದಿಗೆ ಹಣ ಮತ್ತು ಭೂ ಹಂಚಿಕೆ ಆಧಾರದ ಮೇಲೆ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ರೈಲು ಮಾರ್ಗದ ವಿದ್ಯುದೀಕರಣಕ್ಕೆ ಅನು ಮೋದನೆ: ನೈರುತ್ಯ ರೈಲ್ವೆಯ ತುಮ ಕೂರು-ಹುಬ್ಬಳ್ಳಿ, ಚಾಮರಾಜನಗರ-ಮೈಸೂರು-ಅರಸೀಕೆರೆ ಒಳಗೊಂಡು ಮೈಸೂರು ವಿಭಾಗ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ರೈಲ್ವೆ ಮಾರ್ಗದ ವಿದ್ಯುದೀ ಕರಣ ಕಾರ್ಯಕ್ಕೆ ಅನುಮೋದಿಸಲಾಗಿದೆ ಎಂದು ಜಿಎಂ ಗುಪ್ತ ಹೇಳಿದರು.

ರೈಲ್ವೆ ಸೇವೆಯನ್ನು ಇನ್ನಷ್ಟು ಸುಧಾರಿ ಸುವ ಹಾಗೂ ಸಾರ್ವಜನಿಕರ ಮಹತ್ವದ ಸಮಸ್ಯೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರ ನಿರ್ದೇಶನದಂತೆ ಈ ಸಭೆ ನಡೆಸಲಾಗಿದೆ ಎಂದರು. ಡಿಆರ್‍ಎಂ ಅಪರ್ಣಾ ಗರ್ಗ್, ಡಿಜಿಎಂ ಇ.ವಿಜಯಾ ಇನ್ನಿತರ ಅಧಿಕಾರಿ ಗಳು ಸಭೆಯಲ್ಲಿ ಉಪಸ್ಥಿತರಿದ್ದರು

Translate »