ಮೈಸೂರು

ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ
ಮೈಸೂರು

ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ

September 12, 2018

ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಪಿರಿಯಾಪಟ್ಟಣ:  ರೈತರು ವ್ಯವಸಾಯದೊಂದಿಗೆ ಹೈನುಗಾರಿಕೆ ಅಳವಡಿಸಿಕೊಳ್ಳುವುದರ ಮುಖಾಂತರ ಆರ್ಥಿಕವಾಗಿ ಸದೃಢರಾಗುವಂತೆ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಹೇಳಿದರು. ತಾಲೂಕಿನ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಷೇರುದಾರರಿಗಾಗಿ ಒಕ್ಕೂಟದ ವತಿಯಿಂದ ಹಲವಾರು ಸವಲತ್ತು ಗಳನ್ನು ಜಾರಿಗೆ ತಂದಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು, ಸಂಘದ ವತಿಯಿಂದ ವಿಮಾ ಯೋಜನೆ ಹಾಗೂ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದ್ದು ರೈತರು ಉಪಯೋಗಿಸಿ ಕೊಳ್ಳುವಂತೆ ತಿಳಿಸಿದರು. ನಮ್ಮ ರಾಜ್ಯದ ಗುಣಮಟ್ಟದ ಹಾಲು…

ಸಾಧನೆ ಮೂಲಕ ಪೋಷಕರು, ಶಿಕ್ಷಕರಿಗೆ ಕೀರ್ತಿ ತನ್ನಿ
ಮೈಸೂರು

ಸಾಧನೆ ಮೂಲಕ ಪೋಷಕರು, ಶಿಕ್ಷಕರಿಗೆ ಕೀರ್ತಿ ತನ್ನಿ

September 12, 2018

ಎಚ್.ಡಿ.ಕೋಟೆ:  ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಪೋಷಕರು ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಹಿಂದುಳಿದ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಸುರೇಶ್ ಹೇಳಿದರು. ಪಟ್ಟಣದ ಗುರುಭವನದಲ್ಲಿ ಹಿಂದುಳಿದ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಸಮಾಜದಲ್ಲೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿರುತ್ತಾರೆ, ಅವರನ್ನು ಗುರುತಿಸಿ ಪ್ರೋತ್ಸಾಹ ನೀಡ ಬೇಕಿದೆ ಎಂದರು. ಸಂಘ ಪ್ರಾರಂಭವಾಗಿ 10 ವರ್ಷವಾಗಿದ್ದು ಮೊದಲ ಬಾರಿಗೆ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ…

ಮೈಸೂರಲ್ಲಿ ಬಂದ್ ಯಶಸ್ವಿ
ಮೈಸೂರು

ಮೈಸೂರಲ್ಲಿ ಬಂದ್ ಯಶಸ್ವಿ

September 11, 2018

ಮೈಸೂರು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಖಂಡಿಸಿ ಇಂದು ಕರೆ ನೀಡಿದ್ದ ‘ಭಾರತ್ ಬಂದ್’ಗೆ ಮೈಸೂರು ನಗರದಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು. ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಮೈಸೂರು ನಗರದಾದ್ಯಂತ ಅಲ್ಲಲ್ಲಿ ಭಾರೀ ಪ್ರತಿಭಟನೆ ಮಾಡಿ ಅಂಗಡಿ ಮುಂಗಟ್ಟು, ಕೆಲ ಕಚೇರಿಗಳನ್ನು ಬಲವಂತವಾಗಿ ಮುಚ್ಚಿ ಸಿದ್ದರಿಂದ ಮೈಸೂರಿನ ಹೃದಯಭಾಗದಲ್ಲಿನ ಎಲ್ಲಾ ವಾಣಿಜ್ಯ ಚಟುವಟಿಕೆಗಳು ಇಂದು ಮಧ್ಯಾಹ್ನದವರೆಗೆ ಸಂಪೂರ್ಣ ಬಂದ್ ಆಗಿತ್ತು. ಕಾಂಗ್ರೆಸ್‍ಗೆ ಜೆಡಿಎಸ್, ಬಿಎಸ್‍ಪಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಮೈಸೂರಲ್ಲಿ ಬಂದ್…

ರಾಜ್ಯಾದ್ಯಂತ ‘ಭಾರತ್ ಬಂದ್’ ಯಶಸ್ವಿ
ಮೈಸೂರು

ರಾಜ್ಯಾದ್ಯಂತ ‘ಭಾರತ್ ಬಂದ್’ ಯಶಸ್ವಿ

September 11, 2018

ಬೆಂಗಳೂರು: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ರಾಜ್ಯದ ಜನತೆ ಪೂರ್ಣವಾಗಿ ಬೆಂಬಲಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಹೊರತುಪಡಿಸಿದರೆ, ರಾಜ್ಯಾದ್ಯಂತ ಯಾವುದೇ ಅಹಿತಕರ ಘಟನೆ ಇಲ್ಲದೆ ಸಂಜೆಯವರೆಗೂ, ಬಂದ್ ಯಶಸ್ವಿಯಾಯಿತು. ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ಕೈಕೈ ಮಿಲಾಯಿಸುವ ಹಂತ ತಲುಪಿದೆ. ಇದು ಉಡುಪಿ ಜಿಲ್ಲೆಯಲ್ಲಿ ತಾರಕಕ್ಕೇರಿ ಪರಿಸ್ಥಿತಿ ತಿಳಿಗೊಳಿಸಲು ಸ್ಥಳೀಯ ಅಧಿಕಾರಿಗಳು ನಾಳೆಯವರೆಗೂ ನಿಷೇಧಾಜ್ಞೆ ಹೇರಿದ್ದಾರೆ. ರಾಷ್ಟ್ರೀಯ ಕಾಂಗ್ರೆಸ್…

ಭಾರತ್ ಬಂದ್ ದಿನವೇ ಪೆಟ್ರೋಲ್ 36 ಪೈಸೆ, ಡೀಸೆಲ್ 33 ಪೈಸೆ ಹೆಚ್ಚಳ
ಮೈಸೂರು

ಭಾರತ್ ಬಂದ್ ದಿನವೇ ಪೆಟ್ರೋಲ್ 36 ಪೈಸೆ, ಡೀಸೆಲ್ 33 ಪೈಸೆ ಹೆಚ್ಚಳ

September 11, 2018

ಮೈಸೂರು: ತೈಲ ಬೆಲೆ ಏರಿಕೆ ಖಂಡಿಸಿ, ಭಾರತ್ ಬಂದ್ ದಿನದಂದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಣನೀಯವಾಗಿ ಹೆಚ್ಚಳವಾಗಿದೆ. ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್ ಯಶಸ್ವಿಯಾಗಿದೆ. ಆದರೆ ಬಂದ್ ನಡುವೆಯೇ ಪೆಟ್ರೋಲ್ ಬೆಲೆಯಲ್ಲಿ 36 ಪೈಸೆ ಹಾಗೂ ಡೀಸೆಲ್‍ನಲ್ಲಿ 33 ಪೈಸೆ ಹೆಚ್ಚಳವಾಗಿದೆ. ಭಾನುವಾರ ಮೈಸೂರಿ ನಲ್ಲಿ ಲೀಟರ್ ಪೆಟ್ರೋಲ್‍ಗೆ 82.75 ರೂ. ಇತ್ತು. ಇಂದು 83.11 ರೂ.ಗೆ ಏರಿಕೆಯಾಗಿದೆ. ಹಾಗೆಯೇ ನಿನ್ನೆ 74.62 ರೂ. ಇದ್ದ ಡೀಸೆಲ್ ಬೆಲೆ, ಇಂದು 74.95 ರೂ.ಗೆ ಹೆಚ್ಚಳವಾಗಿದೆ….

ತಕ್ಷಣ 2000 ಕೋಟಿ ರೂ. ಅನುದಾನಕ್ಕೆ ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ
ಮೈಸೂರು

ತಕ್ಷಣ 2000 ಕೋಟಿ ರೂ. ಅನುದಾನಕ್ಕೆ ಪ್ರಧಾನಿಗೆ ಸಿಎಂ ಕುಮಾರಸ್ವಾಮಿ ಮನವಿ

September 11, 2018

ಬೆಂಗಳೂರು:  ಅತಿ ವೃಷ್ಟಿ, ಅನಾವೃಷ್ಟಿಯಿಂದ ತತ್ತರಿಸಿರುವ ರಾಜ್ಯಕ್ಕೆ ತತ್‍ಕ್ಷಣವೇ 2000 ಕೋಟಿ ರೂ. ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ಕರ್ನಾಟಕದಲ್ಲಿ ತಲೆದೋರಿರುವ ನೆರೆ ಮತ್ತು ಬರ ಪರಿಸ್ಥಿತಿ ಅಧ್ಯಯನ ಮಾಡಲು ಕೇಂದ್ರ ತಂಡ ಕಳುಹಿಸಿ, ತಕ್ಷಣವೇ ಅನುದಾನ ಬಿಡುಗಡೆ ಮಾಡಿ ಎಂದು ಕೋರಿದ್ದಾರೆ. ಸರ್ಕಾರದ ಕೋರಿಕೆಗೆ ತಕ್ಷಣವೇ ಸ್ಪಂದಿ ಸಿರುವ ಪ್ರಧಾನಿಯವರು, ರಾಜ್ಯಕ್ಕೆ ತಜ್ಞರ ತಂಡಗಳನ್ನು ಕಳುಹಿಸಿಕೊಡುವುದಾಗಿ ಹೇಳಿ ದರಾದರೂ, ಅನುದಾನದ ಬಗ್ಗೆ ಚಕಾರ ವೆತ್ತಿಲ್ಲ. ನವದೆಹಲಿಯಲ್ಲಿಂದು ಪ್ರಧಾನಿ…

ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಹೆಚ್ಚಳ ಜಾರಿ
ಮೈಸೂರು

ಶನಿವಾರ ಮಧ್ಯರಾತ್ರಿಯಿಂದಲೇ ಬಸ್ ದರ ಹೆಚ್ಚಳ ಜಾರಿ

September 11, 2018

ಬೆಂಗಳೂರು: ಪೆಟ್ರೋಲ್, ಡೀಸೆಲ್ ದರ ಹೆಚ್ಚಳದ ಹಿನ್ನೆಲೆ ಯಲ್ಲಿ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿದ್ದ ರಾಜ್ಯ ಸರ್ಕಾರ ಮತ್ತೊಂದೆಡೆ ಬರುವ ಭಾನುವಾರದಿಂದ ರಾಜ್ಯ ರಸ್ತೆ ಸಾರಿಗೆ ದರ ಹೆಚ್ಚಳ ಮಾಡುವ ನಿರ್ಧಾರ ಪ್ರಕಟಿಸಿದೆ. ಬಂದ್‍ಗೆ ರಾಜ್ಯದ ಜನತೆ ಬೆಂಬಲ ವ್ಯಕ್ತಪಡಿಸಿದ ಬೆನ್ನಲ್ಲೆ, ಇದರ ಲಾಭ ಪಡೆದ ರಾಜ್ಯ ಸರ್ಕಾರ ಶೇ.18 ರಷ್ಟು ದರ ಹೆಚ್ಚಳ ಮಾಡುವ ತೀರ್ಮಾನ ತೆಗೆದುಕೊಂಡಿದೆ. ಶನಿವಾರ ಮಧ್ಯರಾತ್ರಿಯಿಂದಲೇ ದರ ಹೆಚ್ಚಳ ಜಾರಿಗೆ ಬರಲಿದ್ದು, ನಗರ ಸಾರಿಗೆ ದರ…

ಇಂದು ಮೈಸೂರಿಗೆ ಸಿಎಂ ಕುಮಾರಸ್ವಾಮಿ
ಮೈಸೂರು

ಇಂದು ಮೈಸೂರಿಗೆ ಸಿಎಂ ಕುಮಾರಸ್ವಾಮಿ

September 11, 2018

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರ ಸ್ವಾಮಿ ಅವರು ನಾಳೆ (ಸೆ.11) ಮೈಸೂ ರಿಗೆ ಆಗಮಿಸುವರು. ರಸ್ತೆ ಮೂಲಕ ಕಾರಿನಲ್ಲಿ ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಮೈಸೂರಿಗೆ ಆಗಮಿಸಲಿರುವ ಮುಖ್ಯಮಂತ್ರಿಗಳು, ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಮೈಸೂರು ನಗರ ಪತ್ರಿಕಾ ಛಾಯಾಗ್ರಾಹಕರ ವತಿಯಿಂದ ವಿಶ್ವ ಛಾಯಾಗ್ರಹಣ ದಿನಾ ಚರಣೆ ಅಂಗವಾಗಿ ಏರ್ಪಡಿಸಿರುವ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾ ಟಿಸುವರು. ಬೆಳಿಗ್ಗೆ 11.30 ಗಂಟೆಗೆ ಮಹಾರಾಣಿ ಮಹಿಳಾ ಕಲಾ ಕಾಲೇಜಿ ನಲ್ಲಿ ಏರ್ಪಡಿಸಿರುವ ಸಾಂಸ್ಕøತಿಕ ವೇದಿಕೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ಉದ್ಘಾಟಿಸಲಿರುವ…

ಮೈಸೂರಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‍ಗಳು
ಮೈಸೂರು

ಮೈಸೂರಲ್ಲಿ ರಸ್ತೆಗಿಳಿಯದ ಸಾರಿಗೆ ಬಸ್‍ಗಳು

September 11, 2018

ಮೈಸೂರು: ‘ಭಾರತ್ ಬಂದ್’ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಸೋಮವಾರ ಬೆಳಿಗ್ಗೆಯಿಂದಲೇ ನಗರ ಹಾಗೂ ಗ್ರಾಮಾಂತರ ವಿಭಾಗದ ಸಾರಿಗೆ ಬಸ್‍ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡ ಪರಿಣಾಮ ಪ್ರಯಾಣಿಕರು ತೀವ್ರ ಪರದಾಡಿದರು. ಇದರಿಂದ ಸಾರಿಗೆ ಸಂಸ್ಥೆಗೆ ಸುಮಾರು ಕೋಟಿ ರೂ ನಷ್ಟ ವಾಗಿದೆ ಎಂದು ಅಂದಾಜಿಸಲಾಗಿದೆ. ತೈಲ ಹಾಗೂ ಅಡುಗೆ ಅನಿಲ ದರ ಏರಿಕೆ ವಿರೋಧಿಸಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಜೆಡಿಎಸ್ ಸೇರಿದಂತೆ ವಿವಿಧ ಪಕ್ಷಗಳು, ಸಂಘಟನೆಗಳು ಬೆಂಬಲ ಸೂಚಿಸಿದ್ದರಿಂದ ಮೈಸೂರಿನಲ್ಲಿ ಬಂದ್ ಯಶಸ್ವಿಯಾಗಲಿದೆ…

ಭಾರತ್ ಬಂದ್‍ಗೆ ಬಡವರ ಜೀವನ ಬಲಿ
ಮೈಸೂರು

ಭಾರತ್ ಬಂದ್‍ಗೆ ಬಡವರ ಜೀವನ ಬಲಿ

September 11, 2018

ಮೈಸೂರು:  ಈ ಬಂದು-ಗಿಂದು ಯಾಕಾದ್ರೂ ಮಾಡ್ತಾರೆ ಸ್ವಾಮಿ?. ಬೆಳಿಗ್ಗೆಯಿಂದ ತಿಂಡಿ, ಊಟ ಮಾಡಿಲ್ಲ. ಒಂದ್ ರೂಪಾಯ್ ವ್ಯಾಪಾರ ಆಗಿಲ್ಲ. ಸಾಕಪ್ಪ ಈ ಜೀವ್ನ… ಇದು ಭಾರತ್ ಬಂದ್ ಬಿಸಿಯಿಂದ ನಲುಗಿದ್ದ ಮೈಸೂರಿನ ಬೀದಿ ಬದಿ ವ್ಯಾಪಾರಿಯೊಬ್ಬರ ವಿಷಾದದ ಮಾತು. ತೈಲ ಬೆಲೆ ಏರಿಕೆ ಖಂಡಿಸಿ, ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ರಾಜ ಕೀಯ ಪಕ್ಷಗಳು ಸೇರಿದಂತೆ ಬಹುತೇಕ ಸಂಘಟನೆಗಳು ಬೆಂಬಲ ನೀಡಿದ್ದವು. ದೇಶಾದ್ಯಂತ ಬಂದ್ ಯಶಸ್ವಿಯಾಗಿ ದ್ದಾಯ್ತು. ಇದರಿಂದಾಗುವ ಪರಿಣಾಮ ವನ್ನು ಕಾದು ನೋಡಬೇಕು. ಆದರೆ…

1 1,395 1,396 1,397 1,398 1,399 1,611
Translate »