ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ
ಮೈಸೂರು

ಹೈನುಗಾರಿಕೆ ಮೂಲಕ ಆರ್ಥಿಕವಾಗಿ ಸದೃಢರಾಗಿ

September 12, 2018

ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ
ಪಿರಿಯಾಪಟ್ಟಣ:  ರೈತರು ವ್ಯವಸಾಯದೊಂದಿಗೆ ಹೈನುಗಾರಿಕೆ ಅಳವಡಿಸಿಕೊಳ್ಳುವುದರ ಮುಖಾಂತರ ಆರ್ಥಿಕವಾಗಿ ಸದೃಢರಾಗುವಂತೆ ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ ಹೇಳಿದರು.

ತಾಲೂಕಿನ ಭುವನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಅವರು, ಷೇರುದಾರರಿಗಾಗಿ ಒಕ್ಕೂಟದ ವತಿಯಿಂದ ಹಲವಾರು ಸವಲತ್ತು ಗಳನ್ನು ಜಾರಿಗೆ ತಂದಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು, ಸಂಘದ ವತಿಯಿಂದ ವಿಮಾ ಯೋಜನೆ ಹಾಗೂ ಸಬ್ಸಿಡಿ ದರದಲ್ಲಿ ಯಂತ್ರೋಪಕರಣಗಳನ್ನು ವಿತರಿಸುತ್ತಿದ್ದು ರೈತರು ಉಪಯೋಗಿಸಿ ಕೊಳ್ಳುವಂತೆ ತಿಳಿಸಿದರು. ನಮ್ಮ ರಾಜ್ಯದ ಗುಣಮಟ್ಟದ ಹಾಲು ಹೊರ ರಾಜ್ಯಗಳಿಗೂ ಸರಬರಾಜಗುತ್ತಿದ್ದು ಎಲ್ಲರೂ ಉತ್ತಮ ಗುಣ ಮಟ್ಟವನ್ನು ಕಾಪಾಡಿಕೊಂಡು ಗರಿಷ್ಠ ಬೆಂಬಲ ದರ ಪಡೆಯುವಂತೆ ಕಿವಿಮಾತು ಹೇಳಿದರು.

ಮೈಮುಲ್ ಉಪ ವ್ಯವಸ್ಥಾಪಕ ಎನ್.ಕುಮಾರ್ ಮಾತನಾಡಿ, ನಮ್ಮ ರಾಜ್ಯದ ಹಾಲು ಗುಣಮಟ್ಟಕ್ಕೆ ದೇಶದಲ್ಲಿಯೇ ಪ್ರಸಿದ್ಧಿ ಹೊಂದಿದ್ದು ಅದಕ್ಕೆ ಮೂಲ ಕಾರಣರು ಷೇರುದಾರರಾಗಿದ್ದು ಮುಂದೆಯೂ ಸಹ ಹಾಲಿನ ಗುಣಮಟ್ಟವನ್ನು ಕಾಪಾಡಿಕೊಂಡು ಸಂಘದ ಅಭಿವೃದ್ಧಿಗೆ ಸಹಕರಿಸಿ ಹೆಚ್ಚಿನ ಸವಲತ್ತು ಗಳನ್ನು ಪಡೆಯುವಂತೆ ತಿಳಿಸಿದರು.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಬಿ.ಆರ್.ಪ್ರಕಾಶ್ ಕಳೆದ ಸಾಲಿನ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಚೆಲುವಪ್ಪ, ಈಶ್ವರಯ್ಯ, ರಾಮೇಗೌಡ, ನಿವೃತ್ತ ಶಿಕ್ಷಕ ಸಣ್ಣಸ್ವಾಮಿ ಗೌಡ, ಬಿ.ಕೆ.ನಾಗೇಂದ್ರ ಮಾತನಾಡಿದರು.
ಉಪಾಧ್ಯಕ್ಷೆ ಶಾಂತಮ್ಮ ನಿರ್ದೇಶಕರು ಗಳಾದ ಮಲ್ಲಿಕಾರ್ಜುನ, ಮೂರ್ತಿ, ಮಂಜು ನಾಥ, ತಮ್ಮೇಗೌಡ, ಪರಮೇಶ್ವರ, ಪುಟ್ಟರಾಜು, ಕುಮಾರ ತಿಮ್ಮಾಜಮ್ಮ, ಚನ್ನಯ್ಯ, ಸಿಬ್ಬಂದಿಗಳಾದ ಜಲೇಂದ್ರ, ತಮ್ಮೇಗೌಡ ಸೇರಿದಂತೆ ಸಂಘದ ಸದಸ್ಯರುಗಳು ಹಾಜರಿದ್ದರು.

Translate »