ಸಾಧನೆ ಮೂಲಕ ಪೋಷಕರು, ಶಿಕ್ಷಕರಿಗೆ ಕೀರ್ತಿ ತನ್ನಿ
ಮೈಸೂರು

ಸಾಧನೆ ಮೂಲಕ ಪೋಷಕರು, ಶಿಕ್ಷಕರಿಗೆ ಕೀರ್ತಿ ತನ್ನಿ

September 12, 2018

ಎಚ್.ಡಿ.ಕೋಟೆ:  ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುವ ಮೂಲಕ ಪೋಷಕರು ಮತ್ತು ಶಿಕ್ಷಕರಿಗೆ ಕೀರ್ತಿ ತರಬೇಕು ಎಂದು ಹಿಂದುಳಿದ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ಸುರೇಶ್ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಹಿಂದುಳಿದ ವರ್ಗಗಳ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರತಿಯೊಂದು ಸಮಾಜದಲ್ಲೂ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿರುತ್ತಾರೆ, ಅವರನ್ನು ಗುರುತಿಸಿ ಪ್ರೋತ್ಸಾಹ ನೀಡ ಬೇಕಿದೆ ಎಂದರು. ಸಂಘ ಪ್ರಾರಂಭವಾಗಿ 10 ವರ್ಷವಾಗಿದ್ದು ಮೊದಲ ಬಾರಿಗೆ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತಿದೆ.

ಬಡ ವಿದ್ಯಾರ್ಥಿಗಳು ಹೆಚ್ಚಾಗಿ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದು, ವೈಯಕ್ತಿಕವಾಗಿ 500 ನೋಟ್‍ಬುಕ್ ನೀಡುವುದಾಗಿ ತಿಳಿಸಿ ದರು. ಸರ್ಕಾರಿ ಶಾಲೆಗಳ ಬೆಳವಣಿಗೆಗೆ ಸಂಘ ಸಂಸ್ಥೆಗಳು ಮುಂದಾಗಬೇಕು ಎಂದರು.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕನ್ನಡಪ್ರಮೋದ ಮಾತನಾಡಿ, ಸಣ್ಣ ಸಣ್ಣ ಸಮಾಜಗಳು ಒಗ್ಗೂಡಿ ಹಿಂದುಳಿದ ವರ್ಗಗಳ ವೇದಿಕೆಯಲ್ಲಿ ಸಂಘಟಿತರಾಗ ಬೇಕಾದ ಅನಿವಾರ್ಯತೆ ಇದೆ ಎಂದರು.

ಹಿಂದುಳಿದ ವರ್ಗಗಳಿಗೆ ಸಾಮಾಜಿಕ ವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯ ಬೆಳವಣಿಗಾಗಿ ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿ ಧಾನಿಕ ಮಾನ್ಯತೆ ನೀಡಿರುವುದು ಸಂತಸದ ವಿಚಾರವಾಗಿದೆ ಎಂದರು.
ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿಗಳಾದ ಮಿಲನ್, ನಫೀಜಾ ಇಲಾಯಿ, ಶುಭಾಂಕ ಪಿಯುಸಿ ವಿಭಾಗದ ಎಂ.ಮಿಥುನ್, ಭವಾನಿ, ಜಸ್ಮಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಸಂಘದ ಗೌರವಾಧ್ಯಕ್ಷ ರಾದ ಸಿಬಗತ್ ಬೇಗ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಎನ್.ವಿ.ಸುರೇಶ್, ಜಾನ್ ಕೆನಡಿ, ಎಸ್.ಬಿ.ಲತಾ, ಚಂದ್ರಶೇಖರ್, ಲೋಕೇಶ್, ಪ್ರೇಮಕುಮಾರ್, ಮಹಮದ್ ಸಜ್ಜಾದ್, ಮಹದೇವಸ್ವಾಮಿ, ರಾಜಪ್ಪ, ರಂಗ ಸ್ವಾಮಿ, ರಾಮಚಂದ್ರ, ಕರಿಯಪ್ಪ, ರವಿ ಹಾಜರಿದ್ದರು.

Translate »