ಮೈಸೂರು: ಚಂದ್ರಗ್ರಹಣದ ಹಿನ್ನೆಲೆ ಯಲ್ಲಿ 2ನೇ ಆಷಾಢ ಶುಕ್ರವಾರವಾದ ನಾಳೆ(ಜು.27) ಸಂಜೆ 6 ಗಂಟೆಯಿಂದ ಚಾಮುಂಡಿಬೆಟ್ಟಕ್ಕೆ ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಸಿಟಿ ಬಸ್‍ಗಳು ಸಂಚರಿಸುವುದಿಲ್ಲ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್ ಅವರು ತಿಳಿಸಿದ್ದಾರೆ. ಶುಕ್ರವಾರ ಮುಂಜಾನೆ 4ರಿಂದ ಸಂಜೆ 4 ಗಂಟೆವರೆಗೆ ಮಾತ್ರ ಕೆಎಸ್‍ಆರ್‍ಟಿಸಿ ಬಸ್ಸುಗಳು ಲಲಿತಮಹಲ್ ಹೆಲಿಪ್ಯಾಡ್‍ನಿಂದ ಭಕ್ತಾದಿಗಳನ್ನು ಚಾಮುಂಡಿಬೆಟ್ಟಕ್ಕೆ ಕರೆದೊಯ್ಯಲಿವೆ. ಆದ್ದರಿಂದ ಮುಂಜಾನೆ 4 ಗಂಟೆಗೆ ಮೊದಲು ಹಾಗೂ ಸಂಜೆ 6ರ ನಂತರ ಯಾರೂ ಚಾಮುಂಡಿಬೆಟ್ಟಕ್ಕೆ ಹೋಗುವ ಪ್ರಯತ್ನ ಮಾಡಬಾರ…
ಇಂದು ಬಂಡಿಪಾಳ್ಯ ಎಪಿಎಂಸಿ ವರ್ತಕರಿಂದ ಬಂದ್
July 27, 2018ಮೈಸೂರು: ಲಾರಿ ಮುಷ್ಕರ ಗುರುವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಇಂದೂ ಕೂಡ ಯಾವುದೇ ಲಾರಿಗಳ ಸಂಚಾರ ಇರಲಿಲ್ಲ. ಈ ಮಧ್ಯೆ ಲಾರಿ ಮುಷ್ಕರ ಬೆಂಬಲಿಸಿ ಮೈಸೂರಿನ ಬಂಡೀಪಾಳ್ಯದ ಎಪಿಎಂಸಿ ವರ್ತಕರು ನಾಳೆ (ಜು.27) ಇಡೀ ದಿನ ತಮ್ಮ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲು ನಿರ್ಧರಿಸಿದ್ದಾರೆ. ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ದೇಶಾದ್ಯಂತ ನಡೆದಿರುವ ಲಾರಿ ಮುಷ್ಕರಕ್ಕೆ ಮೈಸೂರಲ್ಲಿಯೂ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಗಿದ್ದು, ಹೊರ ರಾಜ್ಯಗಳಿಂದ ಇಲ್ಲಿಗೆ ಹಾಗೂ ಇಲ್ಲಿಂದ ಹೊರ ರಾಜ್ಯಗಳಿಗೆ ಯಾವುದೇ ಲಾರಿಗಳ ಸಂಚಾರ…
ವಿಶ್ರಾಂತಿಗಾಗಿ ಯಡಿಯೂರಪ್ಪ ಜಿಂದಾಲ್‍ಗೆ ದಾಖಲು
July 27, 2018ಬೆಂಗಳೂರು: ಐದು ದಿನಗಳ ವಿಶ್ರಾಂತಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಇಂದು ದಾಖಲಾಗಿದ್ದಾರೆ. ವಿಧಾನ ಸಭೆ ಚುನಾವಣೆ ಹಾಗೂ ರಾಜ್ಯ ಪ್ರವಾಸದಿಂದ ದಣಿದಿರುವ ಅವರು ವಿಶ್ರಾಂತಿ ಪಡೆಯಲು ಬೆಂಗಳೂರಿನ ಹೊರವಲಯದಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಪ್ರತಿ ವರ್ಷ ಜಿಂದಾಲ್ ಆಸ್ಪತ್ರೆಗೆ ದಾಖಲಾಗಿ ಪ್ರಕೃತಿ ಚಿಕಿತ್ಸೆ ಪಡೆಯುವಂತೆ ಈ ವರ್ಷವೂ ವಿವಿಧ ಚಿಕಿತ್ಸೆಗಳನ್ನು ಯಡಿಯೂರಪ್ಪ ಪಡೆದುಕೊಳ್ಳಲಿದ್ದಾರೆ.
ಹುತಾತ್ಮ ಯೋಧರ ಕುಟುಂಬಗಳಿಗೆ 3 ತಿಂಗಳಲ್ಲಿ ಪರಿಹಾರ
July 27, 2018ಬೆಂಗಳೂರು: ನಿವೃತ್ತಿ ಹೊಂದಿದ ಹಾಗೂ ಯುದ್ಧ ದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ 3 ತಿಂಗಳಲ್ಲಿ ಪೂರ್ಣ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಲು ನೂತನ ಕಾನೂನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಹುತಾತ್ಮ ಯೋಧ ರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಗಡಿ ಕಾಯುವ ಯೋಧರು ದೇಶ ಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಾರೆ. ಇವರಿಗೆ ಪರಿಹಾರ ನೀಡುವ ಕಾರ್ಯ ತಡವಾಗಬಾರದು. ಅದಕ್ಕಾಗಿಯೇ…
ರೈತರಿಗೆ ಹೊಸ ಸಾಲ ನೀಡಲು ಸರ್ಕಾರ ಆದೇಶ
July 27, 2018ಬೆಂಗಳೂರು: ರೈತರ ಕೃಷಿ ಸಾಲ ಮನ್ನಾದ ಬಹು ದೊಡ್ಡ ಆರ್ಥಿಕ ಹೊರೆ ನಿರ್ವಹಣೆ ನಡುವೆಯೂ ಹೊಸದಾಗಿ ಸಾಲ ನೀಡಲು ಸರ್ಕಾರ ಆದೇಶ ಹೊರಡಿ ಸಿದೆ. ಶೂನ್ಯ ಬಡ್ಡಿ ದರದಲ್ಲಿ 3 ಲಕ್ಷ ರೂ. ವರೆಗಿನ ಬೆಳೆ ಸಾಲ ನೀಡು ವಂತೆ ಸಹಕಾರ ಸಂಘಗಳಿಗೆ ಸೂಚಿಸ ಲಾಗಿದೆ. ಇದೇ ವೇಳೆ 3 ಲಕ್ಷ ರೂ. ಗಿಂತ ಹೆಚ್ಚು ಮೊತ್ತದ ಕೃಷಿ ಸಾಲಕ್ಕೆ ಸಾಮಾನ್ಯ ಬಡ್ಡಿ ದರ ನಿಗದಿಪಡಿಸ ಲಾಗಿದೆ. ಈ ವರ್ಷದ ಏಪ್ರಿಲ್ 1ರಿಂದ 2019ರ ಮಾರ್ಚ್ 31ರವರೆಗೆ…
ಶೀಘ್ರ ಖಾಲಿ ನಿವೇಶನಗಳ ಸ್ವಚ್ಛತಾ ಕಾರ್ಯಾಚರಣೆ ಆರಂಭ
July 27, 2018ಮೈಸೂರು: ಮೈಸೂರು ನಗರದ ಖಾಲಿ ನಿವೇಶನಗಳಲ್ಲಿ ಬೆಳೆದಿರುವ ಗಿಡ-ಗಂಟಿಗಳನ್ನು ಕಿತ್ತು ಸ್ವಚ್ಛಗೊಳಿಸುವ ಕಾರ್ಯಾ ಚರಣೆಯನ್ನು ಶೀಘ್ರ ಆರಂಭಿಸ ಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ಕಮೀಷ್ನರ್ ಕೆ.ಹೆಚ್.ಜಗದೀಶ್ ಅವರು ತಿಳಿಸಿದ್ದಾರೆ. 10-15 ವರ್ಷಗಳಿಂದ ಮನೆಯನ್ನೂ ಕಟ್ಟದೇ, ಆಗಿಂದಾಗ್ಗೆ ಸ್ವಚ್ಛಗೊಳಿಸಿಕೊಳ್ಳದ ಕಾರಣ ನಿವೇಶನಗಳಲ್ಲಿ ಗಿಡ-ಗಂಟಿ ಬೆಳೆದು ಹಾವು, ಹಲ್ಲಿಗಳಿಗೆ ತಾಣವಾಗಿದ್ದಲ್ಲದೇ ಅಲ್ಲಿಗೆ ಸಾರ್ವಜನಿಕರು ಕಸ ತಂದು ಸುರಿಯುತ್ತಿದ್ದರು. ಇದರಿಂದ ಅಕ್ಕ-ಪಕ್ಕದ ಮನೆಯವರಿಗೆ ತೊಂದರೆ ಉಂಟಾಗು ತ್ತಿದ್ದು, ಕಳ್ಳ-ಕಾಕರ ಕಾರ್ಯಾಚರಣೆಗೂ ಅನುಕೂಲವಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ನಿವೇಶನಗಳನ್ನು ಸ್ವಚ್ಛ…
ನೀರು, ಬೀದಿ ದೀಪಗಳಿಲ್ಲ.. ಜೀವ ತಿನ್ನುವ ಮ್ಯಾನ್‍ಹೋಲ್…
July 27, 2018ಮೇಟಗಳ್ಳಿ, ಬಿಎಂಶ್ರೀನಗರ ಪ್ರದೇಶದಲ್ಲಿ ಶಾಸಕ ಎಲ್.ನಾಗೇಂದ್ರ ಪಾದಯಾತ್ರೆ ವೇಳೆ ಜನರಿಂದ ದೂರಿನ ಸುರಿಮಳೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಶಾಸಕ ತಾಕೀತು ಮೈಸೂರು: ನರ್ಮ್ ಮನೆಗಳಿಗೆ ನೀರು ಬರುತ್ತಿಲ್ಲ. ಬೀದಿ ದೀಪಗಳಿಲ್ಲ. ಜನರ ಜೀವ ತಿನ್ನಲು ಕುಸಿದಿರುವ ಮ್ಯಾನ್‍ಹೋಲ್ ಸರಿಪಡಿಸಿ, ಮಾಂಸದ ಅಂಗಡಿಗಳ ಗಲೀಜನ್ನು ಮ್ಯಾನ್‍ಹೋಲ್‍ಗಳಿಗೆ ಹಾಕಲಾಗುತ್ತಿದೆ. ಇಂಥ ಅನೇಕ ದೂರುಗಳು ಗುರುವಾರ ಮೇಟಗಳ್ಳಿ ಬಿ.ಎಂ.ಶ್ರೀನಗರ ಬಡಾವಣೆಗಳಲ್ಲಿ ಪಾದಯಾತ್ರೆ ಕೈಗೊಂಡಿದ್ದ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರಿಗೆ ಕೇಳಿಬಂದವು. ಮೈಸೂರಿನ ಬಿ.ಎಂ.ಶ್ರೀನಗರ ನರ್ಮ್ ಮನೆಗಳಿಗೆ ಕುಡಿಯುವ ನೀರಿನ ತೊಂದರೆ…
ಅಕ್ವೇರಿಯಂ ಕಟ್ಟಡ ಪರಿಶೀಲಿಸಿದ ಶಾಸಕ ಎಸ್.ಎ.ರಾಮದಾಸ್
July 27, 2018ಪ್ರವಾಸಿಗರ ಆಕರ್ಷಣೆಗೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ಮೈಸೂರು: ಮೈಸೂರು ಮೃಗಾಲಯ ಹಾಗೂ ಕಾರಂಜಿಕೆರೆ ನಡುವೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮತ್ಸಾಗಾರ (ಅಕ್ವೇರಿಯಂ) ದ ಕಟ್ಟಡವನ್ನು ಗುರುವಾರ ಶಾಸಕ ಎಸ್.ಎ.ರಾಮದಾಸ್ ಅವರು ಪರಿಶೀಲಿಸಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಪ್ರವಾಸಿಗರ ವೀಕ್ಷಣೆಗೆ ಸಮರ್ಪಿಸುವಂತೆ ಸಲಹೆ ನೀಡಿದರು. ಮೃಗಾಲಯ ಹಾಗೂ ಪಾಲಿಕೆಯ ಅಧಿಕಾರಿಗಳೊಂದಿಗೆ ಇಂದು ಮಧ್ಯಾಹ್ನ ಅಕ್ವೇರಿಯಂ ಕಟ್ಟಡಕ್ಕೆ ಆಗಮಿಸಿದ ಎಸ್.ಎ.ರಾಮದಾಸ್ ಮೃಗಾಲಯದ ಅಧಿಕಾರಿಗಳಿಂದ ಅಕ್ವೇರಿಯಂನ ನಕ್ಷೆಯನ್ನು ವೀಕ್ಷಿಸಿದರು. ಸಾಂಸ್ಕೃತಿಕ ಹಾಗೂ ಪಾರಂಪರಿಕ ನಗರವಾದ ಮೈಸೂರಿಗೆ ಬೃಹತ್ ಗಾತ್ರದ ಅಕ್ವೇರಿಯಂ…
ಸಚಿವರಾದ ಜಿಟಿಡಿ, ಮಹೇಶ್ ಪ್ರಶಂಸಿಸಿದ ಭಗವಾನ್
July 27, 2018ಮೈಸೂರು: ಶಿಕ್ಷಣ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆ ತರುವ ನಿಟ್ಟಿನಲ್ಲಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಚಿಂತಕ ಪ್ರೊ.ಕೆ.ಎಸ್.ಭಗವಾನ್ ಪ್ರಶಂಸೆ ವ್ಯಕ್ತಪಡಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದಿಂದ ಹೆಚ್ಚು ಮತಗಳ ಅಂತರದಿಂದ ಶಾಸಕರಾಗಿ ಆಯ್ಕೆಯಾದ ಜಿ.ಟಿ.ದೇವೇಗೌಡ ಅವರು ಉನ್ನತ ಶಿಕ್ಷಣ ಸಚಿವ ಖಾತೆ ವಹಿಸಿಕೊಳ್ಳಲು ಆರಂಭದಲ್ಲಿ ಹಿಂಜರಿದಿದ್ದರು. ಆದರೆ ಇದೀಗ ಉತ್ತಮವಾಗಿ ಖಾತೆ ನಿಭಾಯಿಸುತ್ತಿದ್ದು,…
ಮರಿಮಲ್ಲಪ್ಪ ಪಿಯು ಕಾಲೇಜಿನ ಸಾಂಸ್ಕೃತಿಕ, ಕ್ರೀಡಾ ವೇದಿಕೆಗೆ ಚಾಲನೆ
July 27, 2018ಮೈಸೂರು: ಮೈಸೂರಿನ ಮರಿಮಲ್ಲಪ್ಪ ಪದವಿ ಪೂರ್ವ ಕಾಲೇಜಿನ ವತಿಯಿಂದ ಗುರುವಾರ ಮೈಸೂರಿನ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ಸಾಂಸ್ಕೃತಿಕ ಹಾಗೂ ಕ್ರೀಡಾ ವೇದಿಕೆಗೆ ಚಾಲನೆ ನೀಡಲಾಯಿತು. ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ ಅವರು ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನಗಳಲ್ಲಿ ಸಾಧನೆ ಮಾಡಿ, ತಮ್ಮ ಪ್ರತಿಭೆ ಮೆರೆದಿರುವ ಯುವಕರ ಪಡೆಯೇ ನಮ್ಮ ದೇಶದಲ್ಲಿದೆ. ಆದರೆ ಇಂದಿನ ಪೈಪೋಟಿ ಯುಗದಲ್ಲಿ ಯುವ ಜನಾಂಗ ಅನೇಕ ಒತ್ತಡಗಳಿಗೆ ಸಿಲುಕಿ ಆತ್ಮಹತ್ಯೆಯ ದಾರಿ ಹಿಡಿದಿದ್ದಾರೆ ಎಂದು…