ಹುತಾತ್ಮ ಯೋಧರ ಕುಟುಂಬಗಳಿಗೆ 3 ತಿಂಗಳಲ್ಲಿ ಪರಿಹಾರ
ಮೈಸೂರು

ಹುತಾತ್ಮ ಯೋಧರ ಕುಟುಂಬಗಳಿಗೆ 3 ತಿಂಗಳಲ್ಲಿ ಪರಿಹಾರ

July 27, 2018

ಬೆಂಗಳೂರು: ನಿವೃತ್ತಿ ಹೊಂದಿದ ಹಾಗೂ ಯುದ್ಧ ದಲ್ಲಿ ಹುತಾತ್ಮ ಯೋಧರ ಕುಟುಂಬಗಳಿಗೆ 3 ತಿಂಗಳಲ್ಲಿ ಪೂರ್ಣ ಪರಿಹಾರ ಹಾಗೂ ಇತರೆ ಸೌಲಭ್ಯ ಒದಗಿಸಲು ನೂತನ ಕಾನೂನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು.

ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯ ದಿವಸ್ ಆಚರಣೆಯಲ್ಲಿ ಹುತಾತ್ಮ ಯೋಧ ರಿಗೆ ಗೌರವ ಸಲ್ಲಿಸಿ ಮಾತನಾಡಿದ ಅವರು, ಗಡಿ ಕಾಯುವ ಯೋಧರು ದೇಶ ಕ್ಕಾಗಿ ತಮ್ಮ ಪ್ರಾಣವನ್ನೇ ಸಮರ್ಪಿಸುತ್ತಾರೆ. ಇವರಿಗೆ
ಪರಿಹಾರ ನೀಡುವ ಕಾರ್ಯ ತಡವಾಗಬಾರದು. ಅದಕ್ಕಾಗಿಯೇ ಸೈನಿಕ ವೆಲ್‍ಫೇರ್ ಬೋರ್ಡ್ ತೆರೆಯಲಾಗಿದೆ. ಆದರೂ ಪರಿಹಾರ ತಡವಾಗುವ ಆರೋಪವಿದೆ. ಹೀಗಾಗಿ ನೂತನ ಕಾನೂನು ತರಲು ಹೊರಟಿದ್ದೇವೆ ಎಂದರು.

ವಿಧಾನಸೌಧದ ಒಳಗೆ ಮಾಧ್ಯಮದವರ ಪ್ರವೇಶಕ್ಕೆ ನಿರ್ಬಂಧ ಹೇರುವ ಪ್ರಯತ್ನ ನಡೆಯುತ್ತಿಲ್ಲ. ಅನಗತ್ಯ ವ್ಯಕ್ತಿಗಳ ಓಡಾಟ ಹೆಚ್ಚಾಗಿದೆ, ಇದರಿಂದ ಕೆಲಸಕ್ಕೆ ಅಡ್ಡಿ ಯಾಗುತ್ತಿದೆ, ಭದ್ರತೆ ದೃಷ್ಟಿಯಿಂದ ಅನಗತ್ಯ ವ್ಯಕ್ತಿಗಳ ಓಡಾಟಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ನೀಡಿದ ಸಲಹೆ ಕುರಿತು ಚರ್ಚೆ ನಡೆಸಿದ್ದೇವೆ ಎಂದರು.

ಒಲಂಪಿಕ್ಸ್‍ನಲ್ಲಿ ಗೆದ್ದರೆ ನಗದು ಬಹುಮಾನ: ಒಲಿಂಪಿಕ್‍ನಲ್ಲಿ ಚಿನ್ನ ಗೆದ್ದರೆ 3 ಕೋಟಿ, ಬೆಳ್ಳಿಗೆ 2 ಕೋಟಿ ಹಾಗೂ ಕಂಚು ಗೆದ್ದರೆ 1 ಕೋಟಿ ರೂಪಾಯಿ ನೀಡುವು ದಾಗಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಘೋಷಿಸಿದ್ದಾರೆ.

ವಿಧಾನಸೌಧದ ಕಚೇರಿಯಲ್ಲಿ ಕಾಮನ್‍ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತ ಬ್ಯಾಡ್ಮಿಂಟನ್ ತಾರೆ ಕನ್ನಡತಿ ಅಶ್ವಿನಿ ಪೊನ್ನಪ್ಪ ಅವರನ್ನು ಸನ್ಮಾನಿಸಿ, ಸರ್ಕಾರದ ವತಿಯಿಂದ 33 ಲಕ್ಷ ರೂ. ನೀಡಿ ಘೋಷಣೆ ಮಾಡಿದರು. ಕ್ರೀಡಾಪಟುಗಳನ್ನು ಪೊಲೀಸ್ ಇಲಾಖೆಗೆ ನೇರ ನೇಮಕಾತಿ ಮಾಡಿಕೊಳ್ಳಲು ಸಿ ಅಂಡ್ ಆರ್ ನಿಯಮಕ್ಕೆ ಬದಲಾವಣೆ ತಂದು ಹಿಂದಿನ ಪದ್ಧತಿ ಮುಂದುವರೆಸುವುದಾಗಿ ತಿಳಿಸಿದರು.

Translate »