ವಿಶ್ರಾಂತಿಗಾಗಿ ಯಡಿಯೂರಪ್ಪ ಜಿಂದಾಲ್‍ಗೆ ದಾಖಲು
ಮೈಸೂರು

ವಿಶ್ರಾಂತಿಗಾಗಿ ಯಡಿಯೂರಪ್ಪ ಜಿಂದಾಲ್‍ಗೆ ದಾಖಲು

July 27, 2018

ಬೆಂಗಳೂರು: ಐದು ದಿನಗಳ ವಿಶ್ರಾಂತಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿ ಯೂರಪ್ಪ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯಕ್ಕೆ ಇಂದು ದಾಖಲಾಗಿದ್ದಾರೆ. ವಿಧಾನ ಸಭೆ ಚುನಾವಣೆ ಹಾಗೂ ರಾಜ್ಯ ಪ್ರವಾಸದಿಂದ ದಣಿದಿರುವ ಅವರು ವಿಶ್ರಾಂತಿ ಪಡೆಯಲು ಬೆಂಗಳೂರಿನ ಹೊರವಲಯದಲ್ಲಿರುವ ಜಿಂದಾಲ್ ಪ್ರಕೃತಿ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ. ಪ್ರತಿ ವರ್ಷ ಜಿಂದಾಲ್ ಆಸ್ಪತ್ರೆಗೆ ದಾಖಲಾಗಿ ಪ್ರಕೃತಿ ಚಿಕಿತ್ಸೆ ಪಡೆಯುವಂತೆ ಈ ವರ್ಷವೂ ವಿವಿಧ ಚಿಕಿತ್ಸೆಗಳನ್ನು ಯಡಿಯೂರಪ್ಪ ಪಡೆದುಕೊಳ್ಳಲಿದ್ದಾರೆ.

Translate »