ಮೈಸೂರು

ಮಾ.1ರಂದು ಡಾ.ಜಿ.ಪರಮೇಶ್ವರ್ ಗೌರವಾರ್ಥ 101 ಜೋಡಿ ಉಚಿತ ಸಾಮೂಹಿಕ ವಿವಾಹ

January 26, 2020

ಮೈಸೂರು: ಅಖಿಲ ಕರ್ನಾಟಕ ಡಾ.ಜಿ.ಪರಮೇಶ್ವರ್ ಯುವಸೈನ್ಯದ ವತಿಯಿಂದ ಮಾ.1 ರಂದು 101 ಜೋಡಿ ಉಚಿತ ಸಾಮೂಹಿಕ ವಿವಾಹ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಚಾಮ ರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಸೈನ್ಯ ಜಿಲ್ಲಾಧ್ಯಕ್ಷ ಸಿ.ಮಂಜುನಾಥ ತಿಳಿಸಿದರು.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶನಿ ವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್ ಅವರ ಗೌರವಾರ್ಥ ಬೆಂಡರ ವಾಡಿ ಗ್ರಾಮದಲ್ಲಿ ಯುವಸೈನ್ಯ ಹಾಗೂ ಗ್ರಾಮದ ಸವ್ಯಸಾಚಿ ಡಾ.ಜಿ.ಪರಮೇಶ್ವರ್ ಅಭಿಮಾನಿ ಬಳಗದಿಂದ 101 ಜೋಡಿ ಗಳಿಗೆ ಸಾಮೂಹಿಕ ವಿವಾಹ ಮಹೋ ತ್ಸವ ಏರ್ಪಡಿಸಲಾಗಿದೆ ಎಂದರು.

ಬೆಂಡರವಾಡಿ ಗ್ರಾಮದ ಬಗ್ಗೆ ಡಾ.ಜಿ. ಪರಮೇಶ್ವರ್ ಅವರಿಗೆ ವಿಶೇಷ ಪ್ರೀತಿ ಇದೆ. ಗ್ರಾಮಕ್ಕೆ ಅವರ ತಂದೆ ಶಿಕ್ಷಣ ಭೀಷ್ಮ ಹೆಚ್.ಎಂ.ಗಂಗಾಧರಯ್ಯ ಅವರ ಹೆಸರಿನಲ್ಲಿ ಸ್ಮಾರಕ ಗ್ರಂಥಾಲಯ ನಿರ್ಮಿ ಸಿದ್ದಾರೆ. ಅಂದು ಗ್ರಂಥಾಲಯದ ಉದ್ಘಾ ಟನೆಯೂ ನಡೆಯಲಿದೆ. ಜೊತೆಗೆ ಹೆಚ್. ಎಂ.ಗಂಗಾಧರಯ್ಯ ಅವರ ಹೆಸರಿನಲ್ಲಿ ಆರಂಭಿಸಿರುವ ರಾಷ್ಟ್ರೀಯ ಸಂಸ್ಕøತಿ ಪುರ ಸ್ಕಾರ ನೀಡಲಾಗುವುದು. ಪುರಸ್ಕಾರಕ್ಕೆ ಸಾಧಕರನ್ನು ಆಯ್ಕೆ ಮಾಡಬೇಕಿದ್ದು, 1 ಲಕ್ಷದ 1 ರೂ. ನಗದಿನೊಂದಿಗೆ ಪುರಸ್ಕಾರ ಪ್ರದಾನ ಮಾಡಲಾಗುವುದು ಎಂದರು. ಡಾ.ಜಿ.ಪರಮೇಶ್ವರ್ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚಾಮ ರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಶಾಸಕ ನಿರಂಜನ್‍ಕುಮಾರ್, ಸಂಸದ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. ಯುವಸೈನ್ಯದ ರಾಜ್ಯಾಧ್ಯಕ್ಷ ನಗುತರಂಗನಾಥ್, ಗುಂಡ್ಲುಪೇಟೆ ತಾಲೂಕು ಅಧ್ಯಕ್ಷ ಮಹೇಂದ್ರಕುಮಾರ್ ಮತ್ತಿತರರು ಗೋಷ್ಠಿಯಲ್ಲಿದ್ದರು.

Translate »