ಇಂದು ಸಂಜೆ 6 ಗಂಟೆ ನಂತರ  ಚಾಮುಂಡಿಬೆಟ್ಟಕ್ಕೆ ಬಸ್ ಸಂಚಾರವಿಲ್ಲ
ಮೈಸೂರು

ಇಂದು ಸಂಜೆ 6 ಗಂಟೆ ನಂತರ  ಚಾಮುಂಡಿಬೆಟ್ಟಕ್ಕೆ ಬಸ್ ಸಂಚಾರವಿಲ್ಲ

July 27, 2018

ಮೈಸೂರು: ಚಂದ್ರಗ್ರಹಣದ ಹಿನ್ನೆಲೆ ಯಲ್ಲಿ 2ನೇ ಆಷಾಢ ಶುಕ್ರವಾರವಾದ ನಾಳೆ(ಜು.27) ಸಂಜೆ 6 ಗಂಟೆಯಿಂದ ಚಾಮುಂಡಿಬೆಟ್ಟಕ್ಕೆ ಮೈಸೂರಿನ ಲಲಿತ ಮಹಲ್ ಹೆಲಿಪ್ಯಾಡ್‍ನಿಂದ ಸಿಟಿ ಬಸ್‍ಗಳು ಸಂಚರಿಸುವುದಿಲ್ಲ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಪ್ರಸಾದ್ ಅವರು ತಿಳಿಸಿದ್ದಾರೆ.

ಶುಕ್ರವಾರ ಮುಂಜಾನೆ 4ರಿಂದ ಸಂಜೆ 4 ಗಂಟೆವರೆಗೆ ಮಾತ್ರ ಕೆಎಸ್‍ಆರ್‍ಟಿಸಿ ಬಸ್ಸುಗಳು ಲಲಿತಮಹಲ್ ಹೆಲಿಪ್ಯಾಡ್‍ನಿಂದ ಭಕ್ತಾದಿಗಳನ್ನು ಚಾಮುಂಡಿಬೆಟ್ಟಕ್ಕೆ ಕರೆದೊಯ್ಯಲಿವೆ. ಆದ್ದರಿಂದ ಮುಂಜಾನೆ 4 ಗಂಟೆಗೆ ಮೊದಲು ಹಾಗೂ ಸಂಜೆ 6ರ ನಂತರ ಯಾರೂ ಚಾಮುಂಡಿಬೆಟ್ಟಕ್ಕೆ ಹೋಗುವ ಪ್ರಯತ್ನ ಮಾಡಬಾರ ದೆಂದೂ ತಿಳಿಸಿದ್ದಾರೆ.

ಚಂದ್ರಗ್ರಹಣದ ಕಾರಣ ಚಾಮುಂಡೇಶ್ವರಿ ದೇವಸ್ಥಾನದ ಬಾಗಿಲನ್ನು ಶುಕ್ರವಾರ ರಾತ್ರಿ 9 ಗಂಟೆಗೆ ಬಂದ್ ಮಾಡಬೇಕಾಗಿರುವುದರಿಂದ ಭಕ್ತಾದಿಗಳು ಸಹಕರಿಸಬೇಕು. ಮುಂದಿನ ಆಷಾಢ ಶುಕ್ರವಾರಗಳಾದ ಆಗಸ್ಟ್ 2 ಮತ್ತು ಆ.9ರಂದು ದೇವ ಸ್ಥಾನ ಎಂದಿನಂತೆ ಮುಂಜಾನೆ 5.30ರಿಂದ ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ತೆರೆದಿರುತ್ತದೆ ಎಂದೂ ಪ್ರಸಾದ್ ಅವರು ತಿಳಿಸಿದ್ದಾರೆ. 2ನೇ ಆಷಾಢ ಶುಕ್ರವಾರದ ಪ್ರಯುಕ್ತ ಜಿಲ್ಲಾಡಳಿತ, ಚಾಮುಂಡೇ ಶ್ವರಿ ದೇವಸ್ಥಾನ ಮತ್ತು ಚಾಮುಂಡಿಬೆಟ್ಟ ಗ್ರಾಮ ಪಂಚಾಯ್ತಿ ವತಿಯಿಂದ ಎಂದಿನಂತೆ ಸಕಲ ಸಿದ್ಧತೆ ನಡೆಸಲಾಗಿದೆ.

ದರ್ಶನ ಸಾಲು, ವಿಶೇಷ ದರ್ಶನ, ಸ್ವಚ್ಛತೆ, ಕುಡಿಯುವ ನೀರು, ಶೌಚಾಲಯ, ದಾಸೋಹ, ಪ್ರಸಾದ ವಿನಿಯೋಗ ಹಾಗೂ ವಾಹನ ನಿಲುಗಡೆಗೆ ಸೂಕ್ತ ಸೌಲಭ್ಯಕ್ಕೆ ಸಿದ್ಧತೆ ಮಾಡಲಾಗಿದ್ದು, ಚಂದ್ರ ಗ್ರಹಣದ ಕಾರಣ ರಾತ್ರಿ 9 ಗಂಟೆಗೆ ದೇವಸ್ಥಾನದ ಬಾಗಿಲು ಹಾಕುವು ದರೊಳಗೆ ಸಕಲ ಪೂಜಾ ಕೈಂಕರ್ಯಗಳನ್ನು ಪೂರೈಸಲು ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

Translate »