ಪಾಕ್ ಚುನಾವಣೆ; ಅತಂತ್ರ ಫಲಿತಾಂಶ
ದೇಶ-ವಿದೇಶ

ಪಾಕ್ ಚುನಾವಣೆ; ಅತಂತ್ರ ಫಲಿತಾಂಶ

July 27, 2018

ಇಸ್ಲಾಮಾಬಾದ್: ಬುಧ ವಾರ ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣೆಯಲ್ಲಿ ನಿರೀಕ್ಷೆಯಂತೆಯೇ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃ ತ್ವದ ತೆಹ್ರೀಕ್-ಎ-ಇನ್ಸಾಫ್ ಪಕ್ಷ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಸರ್ಕಾರ ರಚಿಸಲು ಅಗತ್ಯವಿರುವ ಸಂಖ್ಯಾಬಲ ಯಾವುದೇ ಪಕ್ಷಕ್ಕೆ ಸಿಕ್ಕಿಲ್ಲ. ಹೀಗಾಗಿ ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಎಲ್ಲಾ ಸಾಧ್ಯತೆಗಳು ಇವೆ.

272 ಸ್ಥಾನಗಳ ಪೈಕಿ ಮಾಹಿತಿ ಪ್ರಕಾರ ಪಿಟಿಐ 112 ಸ್ಥಾನ ಗೆದ್ದಿದ್ದರೆ, ನವಾಜ್ ಷರೀಫ್ ನೇತೃತ್ವದ ಪಿಎಂಎಲ್-ಎನ್ ಪಾರ್ಟಿ 63 ಸ್ಥಾನ, ಬಿಲಾವಲ್ ಭುಟ್ಟೋ ನೇತೃತ್ವದ ಪಿಪಿಪಿ 38 ಸ್ಥಾನಗಳನ್ನು ಪಡೆದಿದೆ. ಇತರರು ಬರೋಬ್ಬರಿ 57 ಕಡೆ ಜಯ ಭೇರಿ ಬಾರಿಸಿದ್ದಾರೆ. ಈಗಾಗಲೇ ಪಾಕಿ ಸ್ತಾನ ರಾಜಕೀಯ ಅಂಗಳದಲ್ಲಿ ಮೈತ್ರಿ ಚರ್ಚೆ ಗಳು ಆರಂಭಗೊಂಡಿವೆ. ಈ ಚುನಾವಣೆ ಯಲ್ಲಿ ಬೃಹತ್ ಅಕ್ರಮಗಳು ನಡೆದಿವೆ ಎಂದು ಆಪಾದಿಸಿ ಪಿಎಂಎಲ್-ಎನ್‍ಪಕ್ಷದ ಪ್ರಧಾನಿ ಅಭ್ಯರ್ಥಿ

ಶಾಹಬಾಜ್ ಷರೀಫ್ ಚುನಾವಣಾ ಫಲಿತಾಂಶವನ್ನು ತಿರಸ್ಕರಿಸಿದ್ದು ನನ್ನ 30 ವರ್ಷಗಳ ರಾಜಕೀಯ ಜೀವನದಲ್ಲಿ ಇಂತಹ ಭಯಾನಕ ರಾಜಕೀಯ ದೃಶ್ಯ ನೋಡಿಲ್ಲ. ಪಾಕಿ ಸ್ತಾನದ ಇತಿಹಾಸದಲ್ಲಿ ಇದು ಕೆಟ್ಟ ಚುನಾವಣೆ ಎಂದಿದ್ದಾರೆ. ಇನ್ನು ಪಿಟಿಐ ಬೆಂಬಲಿಗರು ಲಾಹೋರ್, ಇಸ್ಲಾಮಾಬಾದ್, ಮುಲ್ತಾನ್ ಸೇರಿ ಹಲ ವೆಡೆ ನೃತ್ಯ, ಬಾಣ ಬಿರುಸು ಗಳೊಂದಿಗೆ ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಇನ್ನು ಪಾಕಿಸ್ತಾನ ಚುನಾವಣೆಯಲ್ಲಿ ಮುಂಬೈ ದಾಳಿಯ ಸಂಚುಕೋರ, ಕುಖ್ಯಾತ ಭಯೋ ತ್ಪಾದಕ ಹಫೀಜ್ ಸಯೀದ್ ಬೆಂಬಲಿಸಿದ್ದ ಅಲ್ಲಾಹೋ ಅಕ್ಬರ್ ತೆಹ್ರಿಕ್ ಪಾರ್ಟಿ ಖಾತೆ ತೆರೆಯುವಲ್ಲಿ ವಿಫಲವಾಗಿದೆ. ಚುನಾ ವಣೆಯಲ್ಲಿ ಹಫೀಜ್ ಸಯೀದ್ ಬೆಂಬಲದೊಂದಿಗೆ ಎಎಟಿ ಪಕ್ಷದ ವತಿಯಿಂದ 200ಕ್ಕೂ ಅಧಿಕ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಆದರೆ ಯಾವುದೇ ಅಭ್ಯರ್ಥಿ ಕನಿಷ್ಠ ಠೇವಣಿಯನ್ನು ಪಡೆಯದೇ ಹೀನಾಯವಾಗಿ ಸೋತಿರುವುದು ಹಫೀಜ್‍ಗೆ ತೀವ್ರ ಮುಖಭಂಗವಾಗಿದೆ.

Translate »