ಮೈಸೂರು

ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಲ್ಯಾಬ್ ಸ್ವಚ್ಛತಾಗಾರರ ಪ್ರತಿಭಟನೆ
ಮೈಸೂರು

ಮೈಸೂರು ಮಹಾರಾಣಿ ವಿಜ್ಞಾನ ಕಾಲೇಜು ಲ್ಯಾಬ್ ಸ್ವಚ್ಛತಾಗಾರರ ಪ್ರತಿಭಟನೆ

July 12, 2018

ಮೈಸೂರು: ಏಕಾಏಕಿ ಕೆಲಸದಿಂದ ತೆಗೆಯಲಾಗಿದೆ ಎಂದು ಆರೋಪಿಸಿ ಮೈಸೂರಿನ ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ ಸಿಡಿಸಿ ಅಡಿ ಲ್ಯಾಬ್ ಸ್ವಚ್ಛತಾ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬುಧವಾರ ಪ್ರತಿಭಟನೆ ನಡೆಸಿದರು. ಕಾಲೇಜಿನ ಮುಖ್ಯದ್ವಾರದ ಎದುರು ಜಮಾಯಿಸಿದ ಕಾರ್ಮಿಕರು, ಸಿಡಿಸಿ ಅಡಿ 20 ಮಂದಿ ಕಾಲೇಜಿನ ಲ್ಯಾಬ್‍ಗಳ ಸ್ವಚ್ಛತಾ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದೆವು. ಮಾಸಿಕ 5,500 ರೂ. ವೇತನ ನೀಡಲಾಗುತ್ತಿತ್ತು. ಆದರೆ ಕಾಲೇಜಿನ ಪ್ರಾಂಶುಪಾಲರು 3,500 ರೂ.ಗೆ ಇಳಿಕೆ ಮಾಡುತ್ತೇವೆ ಎಂದರು. ಇದಕ್ಕೆ ನಿರಾಕರಿಸಿದ ಹಿನ್ನೆಲೆಯಲ್ಲಿ ಕೆಲಸದಿಂದಲೇ ತೆಗೆಯಲಾಗಿದೆ ಎಂದು…

ಜನಸಂಖ್ಯಾ ಸ್ಫೋಟದ  ಜಾಗೃತಿ ಜಾಥಾ
ಮೈಸೂರು

ಜನಸಂಖ್ಯಾ ಸ್ಫೋಟದ  ಜಾಗೃತಿ ಜಾಥಾ

July 12, 2018

ಮೈಸೂರು: ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮ ಕುರಿತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಧವಾರ ಮೈಸೂರಿನ ನಜರ್‍ಬಾದ್‍ನಲ್ಲಿ ಆಯೋಜಿಸಿದ್ದ ಜಾಗೃತಿ ಜಾಥದಲ್ಲಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡು ಮನೆಗೊಂದು ಮಗು ಸಾಕು ಎಂಬ ಸಂದೇಶ ಸಾರಿದರು. ಮೈಸೂರಿನ ನಜರ್‍ಬಾದ್‍ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ, ಭಾರತೀಯ ವೈದ್ಯಕೀಯ ಸಂಘ, ಆರ್‍ಎಲ್‍ಹೆಚ್‍ಪಿ ಹಾಗೂ ಒಡಿಪಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಡೆದ ಜಾಗೃತಿ…

ಮೈಸೂರು-ಬೆಂಗಳೂರು ವಿಶ್ವದರ್ಜೆ ರಸ್ತೆ 2020ಕ್ಕೆ ಸಂಚಾರಕ್ಕೆ ರೆಡಿ
ಮೈಸೂರು

ಮೈಸೂರು-ಬೆಂಗಳೂರು ವಿಶ್ವದರ್ಜೆ ರಸ್ತೆ 2020ಕ್ಕೆ ಸಂಚಾರಕ್ಕೆ ರೆಡಿ

July 11, 2018

ಬೆಂಗಳೂರು: ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯನ್ನು ವಿಶ್ವದರ್ಜೆ ರಸ್ತೆಯಾಗಿ ಪರಿವರ್ತನೆಗೊಳಿ ಸುವ ಕಾಮಗಾರಿ ಸದ್ಯದಲ್ಲೇ ಆರಂಭಗೊಳ್ಳಲಿದೆ. ಮೈಸೂರು-ಬೆಂಗಳೂರು ಎರಡೂ ಬದಿಯಿಂದ ಏಕಕಾಲಕ್ಕೆ ಕೆಲಸ ಪ್ರಾರಂಭ ಗೊಳ್ಳಲಿದ್ದು, 18 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. 2020ರ ಆರಂಭಕ್ಕೆ ಸಂಚಾರಕ್ಕೆ ಮುಕ್ತಗೊಳ್ಳಲಿದೆ ಎಂದು ರಾಜ್ಯ ಲೋಕೋಪಯಾಗಿ ಸಚಿವ ಹೆಚ್.ಡಿ. ರೇವಣ್ಣ ತಿಳಿಸಿದ್ದಾರೆ. ವಿಧಾನ ಪರಿಷತ್‍ನಲ್ಲಿ ಸಂದೇಶ್ ನಾಗರಾಜ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಯೋಜನೆಗೆ ಒಟ್ಟಾರೆ 6000 ಕೋಟಿ ರೂ. ವೆಚ್ಚ ತಗುಲಲಿದ್ದು, ಇದರಲ್ಲಿ ರಸ್ತೆ ಕಾಮಗಾರಿಗೆ 4153 ಕೋಟಿ ಹಾಗೂ ಉಳಿದ…

ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 15,600 ಅತಿಥಿ ಶಿಕ್ಷಕರ ನೇಮಕ: ಮಹೇಶ್
ಮೈಸೂರು

ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 15,600 ಅತಿಥಿ ಶಿಕ್ಷಕರ ನೇಮಕ: ಮಹೇಶ್

July 11, 2018

ಬೆಂಗಳೂರು: ಪ್ರಾಥ ಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿ ಇರುವ 15,600 ಹುದ್ದೆಗಳಿಗೆ ಅತಿಥಿ ಶಿಕ್ಷಕ ರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎನ್.ಮಹೇಶ್ ವಿಧಾನಸಭೆಯಲ್ಲಿ ಇಂದು ತಿಳಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ಸುಭಾಷ್ ಗುತ್ತೇದಾರ್ ಅವರ ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ಪ್ರೌಢಶಾಲೆಗಳಲ್ಲಿ 3100 ಅತಿಥಿ ಶಿಕ್ಷಕರನ್ನು ನೇಮಕ ಮಾಡಿ ಕೊಳ್ಳಲಾಗುವುದು ಎಂದರು. ಒಟ್ಟಾರೆ ಪ್ರಾಥ ಮಿಕ, ಪ್ರೌಢ ಶಾಲೆಗಳಲ್ಲಿ 25,600 ಶಿಕ್ಷಕರ ಹುದ್ದೆ ಖಾಲಿ ಇದ್ದು ಈಗಾಗಲೇ 10,000 ಮಂದಿ ಪದವೀಧರರನ್ನು ಶಿಕ್ಷಕರಾಗಿ ನೇಮಕ…

ಕಾಲೇಜು ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ 4800 ಹುದ್ದೆ ಭರ್ತಿಗೆ ಕ್ರಮ: ಜಿಟಿಡಿ
ಮೈಸೂರು

ಕಾಲೇಜು ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರ 4800 ಹುದ್ದೆ ಭರ್ತಿಗೆ ಕ್ರಮ: ಜಿಟಿಡಿ

July 11, 2018

ಬೆಂಗಳೂರು:  ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಸೇರಿ ದಂತೆ 4800 ವಿವಿಧ ಹುದ್ದೆಗಳು ಖಾಲಿ ಇದ್ದು, ಆದ್ಯತೆ ಮೇಲೆ ಭರ್ತಿ ಮಾಡಲು ಕ್ರಮ ಕೈಗೊಳ್ಳುವುದಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ವಿಧಾನ ಸಭೆಗೆ ತಿಳಿಸಿದರು. ಪ್ರಶ್ನೋತ್ತರ ವೇಳೆ ಯಲ್ಲಿ ಡಾ. ಉಮೇಶ್ ಜಿ. ಯಾದವ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹುದ್ದೆ ಗಳು ಸೇರಿದಂತೆ 3800 ಹುದ್ದೆಗಳು ಪದವಿ ಕಾಲೇಜುಗಳಲ್ಲಿ ಖಾಲಿ ಇವೆ. ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಒಂದು ಸಾವಿರ ಹುದ್ದೆಗಳು ಖಾಲಿ ಇವೆ….

ಮಧ್ಯಾಹ್ನ 12 ಗಂಟೆ ನಂತರ ಆಡಳಿತ ಕೇಂದ್ರಗಳು ದಲ್ಲಾಳಿ ಕೇಂದ್ರಗಳಾಗುತ್ತವೆ!
ಮೈಸೂರು

ಮಧ್ಯಾಹ್ನ 12 ಗಂಟೆ ನಂತರ ಆಡಳಿತ ಕೇಂದ್ರಗಳು ದಲ್ಲಾಳಿ ಕೇಂದ್ರಗಳಾಗುತ್ತವೆ!

July 11, 2018

ಬೆಂಗಳೂರು: ಬೆಂಗಳೂರಿನ ಬಹುಮಹಡಿ ಆಡಳಿತ ಕೇಂದ್ರಗಳು ಮಧ್ಯಾಹ್ನ 12 ಗಂಟೆಯ ನಂತರ ದಲ್ಲಾಳಿ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ. ಇಂತಹ ಕಚೇರಿಗಳಲ್ಲಿ ವರ್ಗಾವಣೆ, ಅನುದಾನ, ಅನುಮೋದನೆ ಕೆಲಸಗಳಿಗೆ ಲಾಬಿ ನಡೆಯುತ್ತದೆ ಎಂದು ಮಾಜಿ ಸಚಿವರೂ ಆದ ಹಾಲಿ ಜೆಡಿಎಸ್ ಶಾಸಕ ಅಡಗೂರು ಹೆಚ್.ವಿಶ್ವನಾಥ್ ವಿಧಾನಸಭೆ ಯಲ್ಲಿ ಆಡಳಿತಾಂಗದ ಬಣ್ಣ ಬಯಲು ಮಾಡಿದರು. ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈ ಆಡಳಿತ ಕೇಂದ್ರಗಳಲ್ಲಿ ದಲ್ಲಾಳಿಗಳೇ ತುಂಬಿರುತ್ತಾರೆ. ತಾಲೂಕು ಕಚೇರಿ ಯಿಂದ ಜಿಲ್ಲಾಧಿಕಾರಿ ಕಚೇರಿ, ಜಿಲ್ಲಾಧಿಕಾರಿ ಕಚೇರಿಯಿಂದ ಕಾರ್ಯದರ್ಶಿ ಕಚೇರಿ…

ತಮಿಳ್ನಾಡಿಗೆ ನೀರು ಬಿಡಲು ಸಿಎಂ ಸೂಚನೆ
ಮೈಸೂರು

ತಮಿಳ್ನಾಡಿಗೆ ನೀರು ಬಿಡಲು ಸಿಎಂ ಸೂಚನೆ

July 11, 2018

ಬೆಂಗಳೂರು: ರಾಜ್ಯಾದ್ಯಂತ ಉತ್ತಮ ಮಳೆಯಾ ಗುತ್ತಿದ್ದು, ಕಾವೇರಿ ಕೊಳ್ಳದ ಜಲಾಶಯ ಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ತಮಿಳು ನಾಡಿಗೆ ನೀರು ಬಿಡು ವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಜುಲೈ ತಿಂಗಳಿನಲ್ಲಿ ತಮಿಳು ನಾಡಿಗೆ ಎಷ್ಟು ನೀರು ಬಿಡಬೇಕೋ ಅಷ್ಟು ನೀರನ್ನು ಬಿಡಿ ಎಂದು ಜಲ ಸಂಪನ್ಮೂಲ ಇಲಾಖೆಯ ಅಧಿಕಾರಿ ಗಳಿಗೆ ಸೂಚಿಸಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಂಗಳೂರು, ರಾಮನಗರ ಹಾಗೂ ಮಂಡ್ಯದಿಂದ ಸಾಕಷ್ಟು ನೀರು ತಮಿಳುನಾಡಿಗೆ ಹರಿದುಹೋಗುತ್ತದೆ. ಇದರ ಜೊತೆಗೆ ಜಲಾಶಯದಿಂದಲೂ…

ವೃತ್ತಿಪರ ಕೋರ್ಸ್‍ಗಳ ಶುಲ್ಕ ಶೇ.8ರಷ್ಟು ಹೆಚ್ಚಳ
ಮೈಸೂರು

ವೃತ್ತಿಪರ ಕೋರ್ಸ್‍ಗಳ ಶುಲ್ಕ ಶೇ.8ರಷ್ಟು ಹೆಚ್ಚಳ

July 11, 2018

ಬೆಂಗಳೂರು:  ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕೋರ್ಸ್‍ಗಳ ಶುಲ್ಕವನ್ನು ಶೇಕಡಾ 8ರಷ್ಟು ಹೆಚ್ಚಿಸಿದೆ. ಉನ್ನತ ಶಿಕ್ಷಣ ಇಲಾಖೆ ತನ್ನ ಹಿಂದಿನ ನಿರ್ಧಾರ ದಿಂದ ಹಿಂದೆ ಸರಿದಿದೆ. ಕಳೆದ ವರ್ಷ ವೃತ್ತಿಪರ ಶಿಕ್ಷಣಗಳ ಕೋರ್ಸ್ ಶುಲ್ಕಗಳನ್ನು ಶೇಕಡಾ 10ರಷ್ಟು ಹೆಚ್ಚಳ ಮಾಡಿತ್ತು. ಕೊನೆಗೆ ಕಾನೂನು ಪರಿಣಾಮಗಳನ್ನು ಎದುರಿಸಬೇಕಾಗಿ ಬರುವ ಸಾಧ್ಯತೆಯಿರುವುದರಿಂದ ಸರ್ಕಾರ ಶೇಕಡಾ 8ರಷ್ಟು ಶುಲ್ಕ ಹೆಚ್ಚಿ ಸಲು ತೀರ್ಮಾನಿಸಿದೆ. ಉನ್ನತ ಶಿಕ್ಷಣ ಇಲಾಖೆ ಮೂಲಗಳು ಹೇಳುವ ಪ್ರಕಾರ, ರಾಜ್ಯ ಸರ್ಕಾರ ರಚಿಸಿರುವ…

ಉದ್ಯಮ ಸ್ನೇಹಿ ವಾತಾವರಣ: ಕರ್ನಾಟಕಕ್ಕೆ 8ನೇ ಸ್ಥಾನ
ದೇಶ-ವಿದೇಶ, ಮೈಸೂರು

ಉದ್ಯಮ ಸ್ನೇಹಿ ವಾತಾವರಣ: ಕರ್ನಾಟಕಕ್ಕೆ 8ನೇ ಸ್ಥಾನ

July 11, 2018

ನವದೆಹಲಿ: ಅತ್ಯುತ್ತಮ ಉದ್ಯಮ ಸ್ನೇಹಿ ವಾತಾವರಣ ಇರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾ ಟಕಕ್ಕೆ 8ನೇ ಸ್ಥಾನ. ತೆಲುಗು ಭಾಷಿಕ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣಕ್ಕೆ ಮೊದಲ ಮತ್ತು 2ನೇ ಸ್ಥಾನ ದೊರೆತಿದ್ದು, ಹರ್ಯಾಣ ರಾಜ್ಯ ಮೂರನೇ ಸ್ಥಾನದಲ್ಲಿದೆ. ಕೇಂದ್ರ ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ನೂತನ ಉದ್ಯಮ ಸ್ನೇಹಿ ವಾತಾವರಣವಿರುವ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದೆ. ವಿಶ್ವಬ್ಯಾಂಕ್ ಮತ್ತು ಕೈಗಾರಿಕಾ ನೀತಿ ಮತ್ತು ಪ್ರಚಾರ ಇಲಾಖೆ ಇಂದು ಈ ಪಟ್ಟಿಯನ್ನು ಬಿಡುಗಡೆ ಮಾಡಿವೆ. ಉಳಿದಂತೆ ಜಾರ್ಖಂಡ್…

ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ
ಮೈಸೂರು

ರೈಲು ಬೋಗಿಯಲ್ಲಿ ಸರ್ಕಾರಿ ಶಾಲೆ: ಮಕ್ಕಳನ್ನು ಸೆಳೆಯಲು ಶಿಕ್ಷಕರ ಹೀಗೊಂದು ತಂತ್ರ

July 11, 2018

ಮೈಸೂರು: ಬಸ್ ಸೌಲಭ್ಯವೇ ಇಲ್ಲದ ಗ್ರಾಮದಲ್ಲಿ ಏಕಾಏಕಿ ರೈಲು ಗಾಡಿ ಬಂದು ನಿಂತರೆ ಅಚ್ಚರಿ ಎನಿಸದೇ ಇರಲಾರದು. ಅಂತಹ ಆಶ್ಚರ್ಯಕರ ಸಂಗತಿಯೊಂದು ನಂಜನಗೂಡು ತಾಲೂಕು, ಸುತ್ತೂರು ಕ್ಲಸ್ಟರ್ ವ್ಯಾಪ್ತಿಯ ಹಾರೋಪುರ ಗ್ರಾಮದಲ್ಲಿ ನಡೆದಿದೆ. ನಂಜನಗೂಡಿನಿಂದ ಸುಮಾರು 30 ಕಿ.ಮೀ. ದೂರದಲ್ಲಿರುವ ಹಾರೋಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ರೈಲು ಬೋಗಿ ಗಳಾಗಿ ಮಾರ್ಪಟ್ಟಿದ್ದು, ಇದೀಗ ಶಾಲೆ ಜನಾಕರ್ಷಣೆ ಕೇಂದ್ರವಾಗಿದೆ. ಶಾಲೆಯಲ್ಲಿ 3 ಕೊಠಡಿಗಳಿವೆ. ಮೊದಲ ಕೊಠಡಿಗೆ ಎಂಜಿನ್ ಹಾಗೂ ಉಳಿದೆರಡು ಕೊಠಡಿಗೆ ಬೋಗಿಗಳ ಚಿತ್ರ ಚಿತ್ರಿಸಲಾಗಿದ್ದು,…

1 1,492 1,493 1,494 1,495 1,496 1,611
Translate »