ಮೈಸೂರು

ಕೆಸರು ಗದ್ದೆಯಂತಿರುವ ನಾರಾಯಣಶಾಸ್ತ್ರಿ ರಸ್ತೆ
ಮೈಸೂರು

ಕೆಸರು ಗದ್ದೆಯಂತಿರುವ ನಾರಾಯಣಶಾಸ್ತ್ರಿ ರಸ್ತೆ

July 13, 2018

ಮೈಸೂರು: ಮೈಸೂರು ನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ವಾಹನ ಸವಾರರು ಕೆಸರಿನಲ್ಲಿ ಜಾರಿ ಬೀಳುವಂತಾಗಿದ್ದು, ರಸ್ತೆ ಮಧ್ಯೆ ನಡೆಸುತ್ತಿರುವ ಒಳ ಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ. ಮೈಸೂರಿನ ವಿನೋಬಾ ರಸ್ತೆಯಿಂದ ದೇವರಾಜ ಅರಸು ಜಂಕ್ಷನ್‍ವರೆಗೆ ನಾರಾಯಣಶಾಸ್ತ್ರಿ ರಸ್ತೆಯಲ್ಲಿ ನಗರ ಪಾಲಿಕೆ ಒಂದು ತಿಂಗಳ ಹಿಂದೆಯೇ ಒಳ ಚರಂಡಿ ಕಾಮಗಾರಿ ಆರಂಭಿಸಿತ್ತು. ಜೆಸಿಬಿಯಲ್ಲಿ ರಸ್ತೆ ಮಧ್ಯೆದಲ್ಲಿಯೇ ಒಳ ಚರಂಡಿ ಮಾರ್ಗಕ್ಕೆ ಪೈಪ್ ಲೈನ್ ಅಳವಡಿಸಲು ರಸ್ತೆಯುದ್ದಕ್ಕೂ ಗುಂಡಿ ತೋಡಲಾಗಿತ್ತು. ಆದರೆ ಕಾರಣಾಂತರಗಳಿಂದ ಕಾಮಗಾರಿ ಪೂರ್ಣಗೊಳಿಸದೇ ಅರ್ಧಕ್ಕೆ…

ನಾಲ್ವರಿಂದ ಲಕ್ಷಾಂತರರೂ. ಕಸಿದ ಭೂಪ
ಮೈಸೂರು

ನಾಲ್ವರಿಂದ ಲಕ್ಷಾಂತರರೂ. ಕಸಿದ ಭೂಪ

July 13, 2018

ಮೈಸೂರು:  ಪವರ್ ಸ್ಟಾರ್ ಪುನೀತ್‍ರಾಜಕುಮಾರ್ ಜೊತೆ ಸಂಪರ್ಕ ಮಾಡಿಸಿ ಅವರ ಜೊತೆನೇ ಇರುವ ಹಾಗೆ ಕೆಲಸ ಕೊಡಿಸುತ್ತೇನೆಂದು ನಂಬಿಸಿದ ಬೆಂಗಳೂರಿನ ವ್ಯಕ್ತಿಯೋರ್ವ ಮೈಸೂರು ಜಿಲ್ಲೆ, ತಿ.ನರಸೀಪುರದ ನಾಲ್ವರಿಂದ ಲಕ್ಷಾಂತರ ರೂ. ಪಡೆದು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನ ಶ್ರೀನಿವಾಸ್‍ಪುರ ನಿವಾಸಿ ರವಿ(28) ಎಂಬಾತನೇ ಅಮಾಯಕ ರನ್ನು ವಂಚಿಸಿ ಪರಾರಿಯಾಗಿರುವ ವ್ಯಕ್ತಿ. ತನ್ನ ತಂಗಿ ಮದುವೆಗೆ ಹಣ ಹೊಂದಿಸುವ ಸಲುವಾಗಿ ಆತ ಅಮಾಯಕರಿಂದ ಹಣ ಕೀಳಲು ಪ್ಲಾನ್ ಮಾಡಿದ್ದನೆಂದು ಹೇಳಲಾಗಿದೆ. ತಾನು ನಟ ಪುನೀತ್ ರಾಜಕುಮಾರ್ ಸಹಾಯಕ…

ಕಲಾ ಮಂದಿರ ಮುಂಭಾಗ ಕೃತಕ ಜಲಪಾತಕ್ಕೆ ಚಾಲನೆ
ಮೈಸೂರು

ಕಲಾ ಮಂದಿರ ಮುಂಭಾಗ ಕೃತಕ ಜಲಪಾತಕ್ಕೆ ಚಾಲನೆ

July 13, 2018

ಮೈಸೂರು:  ಸಾಂಸ್ಕೃತಿಕ ಕೇಂದ್ರ ಬಿಂದು ಕಲಾಮಂದಿರದ ಮುಂಭಾಗ ನೂತನವಾಗಿ ನಿರ್ಮಿಸಿರುವ ಕೃತಕ ಜಲಪಾತ ಕಲಾ ರಸಿಕರನ್ನು ತನ್ನತ್ತ ಸೆಳೆಯುತ್ತಿದ್ದು, ಗುರುವಾರ ಉದ್ಘಾಟನೆಗೊಂಡಿತು. ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಜಗನ್ಮೋಹನ್ ರಾವ್ ಅವರು ಕೃತಕ ಜಲಪಾತವನ್ನು ಉದ್ಘಾಟಿಸಿದರು. ನಂತರ ಕಿರುರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ವ್ಯವಸ್ಥಾಪಕ ನಿರ್ದೇಶಕ ಜಗನ್ಮೋಹನ್ ರಾವ್ ಮಾತನಾಡಿ, ಕಳೆದ ವರ್ಷ ಬ್ಯಾಂಕ್ ನೋಟ್ ಪೇಪರ್ ಮಿಲ್‍ನ ಸಿಎಸ್‍ಆರ್ ನಿಧಿಯಿಂದ ನವೋದಯ ಶಾಲೆಗಳ ಅಭಿವೃದ್ಧಿಗೆ 1.40 ಕೋಟಿ ರೂ….

ಕೆ.ಹೆಚ್.ರಾಮಯ್ಯರ 140ನೇ ಜಯಂತ್ಯೋತ್ಸವ ಆಚರಣೆ
ಮೈಸೂರು

ಕೆ.ಹೆಚ್.ರಾಮಯ್ಯರ 140ನೇ ಜಯಂತ್ಯೋತ್ಸವ ಆಚರಣೆ

July 13, 2018

ಮೈಸೂರು:  ವಿವಿಪುರಂನ ಕೆ.ಹೆಚ್.ರಾಮಯ್ಯರವರ ಹಾಸ್ಟೆಲ್ ಸಭಾಂಗಣದಲ್ಲಿ ಒಕ್ಕಲಿಗರ ರತ್ನ ಕೆ.ಹೆಚ್.ರಾಮಯ್ಯರವರ 140ನೇ ಜಯಂತ್ಯೋತ್ಸವನ್ನು ಗುರುವಾರ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಗಣ್ಯರು ಕೆ.ಹೆಚ್.ರಾಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ವೇಳೆ ಹೆಚ್.ಸಿ.ದಾಸಪ್ಪ ಸಾರ್ವಜನಿಕ ವಿಚಾರ ಸಂಸ್ಥೆ ಕಾರ್ಯದರ್ಶಿ ಸರೋಜಮ್ಮ ತುಳಸಿದಾಸ್ ಮಾತನಾಡಿ, ಕೆ.ಹೆಚ್.ರಾಮಯ್ಯರವರು ಒಂದು ದಿನ ವಾಯು ವಿಹಾರಕ್ಕೆ ಹೋಗಿದ್ದ ವೇಳೆ ಒಬ್ಬ ಹುಡುಗ ಬೀದಿ ದೀಪದ ಬೆಳಕಲ್ಲಿ ಓದುತ್ತಿದ್ದ. ಇದನ್ನು ಕಂಡ ರಾಮಯ್ಯ, ಇಲ್ಲಿ ಯಾಕೆ ಓದುತ್ತಿದ್ದೀಯಾ? ಎಂದು ಕೇಳಿದರು. ನಮ್ಮ ಮನೆಯಲ್ಲಿ ವಿದ್ಯುತ್ ಇಲ್ಲ. ಹಾಗಾಗಿ…

ಪಂಜಿನ ಕವಾಯತು ಮೈದಾನದ  ಆಸನ ಸಾಮಥ್ರ್ಯ 33,500ಕ್ಕೆ ಹೆಚ್ಚಳ ಮುಡಾದಿಂದ ಕಾಮಗಾರಿ ಪೂರ್ಣ, ದಸರಾ ವೇಳೆ ಬಳಕೆಗೆ ಮುಕ್ತ
ಮೈಸೂರು

ಪಂಜಿನ ಕವಾಯತು ಮೈದಾನದ  ಆಸನ ಸಾಮಥ್ರ್ಯ 33,500ಕ್ಕೆ ಹೆಚ್ಚಳ ಮುಡಾದಿಂದ ಕಾಮಗಾರಿ ಪೂರ್ಣ, ದಸರಾ ವೇಳೆ ಬಳಕೆಗೆ ಮುಕ್ತ

July 13, 2018

ಮೈಸೂರು: ಮುಡಾದಿಂದ ಕೈಗೊಂಡಿದ್ದ ಮೈಸೂರಿನ ಬನ್ನಿಮಂಟಪದಲ್ಲಿರುವ ದಸರಾ ಪಂಜಿನ ಕವಾಯತು ಮೈದಾನದ (dasara torch light parade grounds) ಆಸನ ಸಾಮಥ್ರ್ಯ ಹೆಚ್ಚಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಈ ಬಾರಿಯ ದಸರಾಗೆ ಬಳಕೆಗೆ ಸಿದ್ಧವಾಗಿದೆ. ಈ ಹಿಂದೆ ಕೇವಲ 22,000 ಮಂದಿ ಕುಳಿತು ಪಂಜಿನ ಕವಾಯತು ವೀಕ್ಷಿಸುತ್ತಿದ್ದರು. ವರ್ಷದಿಂದ ವರ್ಷಕ್ಕೆ ಈ ಕಾರ್ಯಕ್ರಮಕ್ಕೆ ಬರುವ ಜನಸಂಖ್ಯೆ ಹೆಚ್ಚಾಗಿದ್ದು, ಬೇಡಿಕೆಯೂ ಜಾಸ್ತಿಯಾದ ಹಿನ್ನೆಲೆಯಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ವು ಆಸನ ಸಾಮಥ್ರ್ಯವನ್ನು 22 ಸಾವಿರದಿಂದ 33,500ಕ್ಕೆ ಹೆಚ್ಚಿಸಲು ತೀರ್ಮಾನಿಸಿತ್ತು. ಯೋಜನೆಗೆ…

ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್‍ಗಾಗಿ ಬಿವಿಎಸ್ ಪ್ರತಿಭಟನೆ
ಮೈಸೂರು

ವಿದ್ಯಾರ್ಥಿಗಳಿಗೆ ಉಚಿತ ಬಸ್‍ಪಾಸ್‍ಗಾಗಿ ಬಿವಿಎಸ್ ಪ್ರತಿಭಟನೆ

July 13, 2018

ಮೈಸೂರು: ಎಲ್ಲಾ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಬಹುಜನ ವಿದ್ಯಾರ್ಥಿ ಸಂಘದ (ಬಿವಿಎಸ್) ಆಶ್ರಯದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಗುರುವಾರ ಪ್ರತಿಭಟನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಎಲ್ಲಾ ವರ್ಗದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೂ ಉಚಿತ ಬಸ್‍ಪಾಸ್ ಸೌಲಭ್ಯ ಕಲ್ಪಿಸಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು. ಹಿಂದಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದ್ದ ಎಸ್‍ಸಿ ಹಾಗೂ ಎಸ್‍ಟಿ…

ವೃತ್ತಿಪರ ನೈಪುಣ್ಯಗಾರರ ಪರಿಚಯಿಸಲು  ‘ಮೈಸೂರು ಪಂಡಿತ್’ ಹೊಸ ವೆಬ್‍ಸೈಟ್
ಮೈಸೂರು

ವೃತ್ತಿಪರ ನೈಪುಣ್ಯಗಾರರ ಪರಿಚಯಿಸಲು  ‘ಮೈಸೂರು ಪಂಡಿತ್’ ಹೊಸ ವೆಬ್‍ಸೈಟ್

July 13, 2018

ಮೈಸೂರು: ವಿವಿಧ ಕ್ಷೇತ್ರಗಳ ನುರಿತ ವೃತ್ತಿ ಪರರನ್ನು ಸಾರ್ವಜನಿಕರಿಗೆ ಒಂದೇ ವೇದಿಕೆಯಲ್ಲಿ ಪರಿಚಯಿಸುವುದಕ್ಕಾಗಿ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ ಸಂಸ್ಥೆಯು ಅಭಿವೃದ್ಧಿಪಡಿಸಿರುವ ‘ಮೈಸೂರು ಪಂಡಿತ್’ ಹೊಸ ವೆಬ್‍ಸೈಟ್ ಅನ್ನು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ನಡೆದ ಕಾರ್ಯ ಕ್ರಮದಲ್ಲಿ ಕೃಷಿ ತಜ್ಞ ಡಾ.ಎಂ.ಮಹದೇವಪ್ಪ ಅನಾವರಣಗೊಳಿಸಿದರು. ನೂತನ ವೆಬ್‍ಸೈಟ್‍ಗೆ ಚಾಲನೆ ನೀಡಿದ ಬಳಿಕ ಡಾ.ಎಂ.ಮಹದೇವಪ್ಪ ಮಾತನಾಡಿ, ವೃತ್ತಿಪರರಾದ ವೈದ್ಯರು, ಇಂಜಿನಿಯರ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳ ನುರಿತ ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದಕ್ಕಾಗಿ ವೇದಾ ಸಾಫ್ಟೆಕ್ ಇಂಡಿಯಾ ಪ್ರೈ.ಲಿ…

ಜು.15ರಂದು ಝಗಮಗಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ
ಮೈಸೂರು

ಜು.15ರಂದು ಝಗಮಗಿಸುವ ಶಾಸ್ತ್ರೀಯ ನೃತ್ಯ ಪ್ರದರ್ಶನ

July 13, 2018

ಮೈಸೂರು: ಮೈಸೂರು ಬಿ.ನಾಗರಾಜ್‍ರವರಿಂದ ಸಂಯೋಜನೆಗೊಂಡಿರುವ ಆರ್ಟಿಕ್ಯುಲೇಟ್ ಫೆಸ್ಟಿವಲ್ (ನೃತ್ಯೋತ್ಸವ) ನಗರದ ಆದಿಚುಂಚನಗಿರಿ ರಸ್ತೆಯಲ್ಲಿರುವ ವೀಣೆ ಶೇಷಣ್ಣ ಭವನ, ಗಾನಭಾರತಿ ಆವರಣದಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರದಂದು ಆಯೋಜನೆಗೊಳ್ಳುತ್ತಿದೆ. ಈ ಉತ್ಸವದಲ್ಲಿ ಐದು ಮಂದಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತರಾಗಿರುವ ಶಾಸ್ತ್ರೀಯ ನೃತ್ಯ ಕಲಾಕಾರರು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗನ್ನು ನೀಡಲಿದ್ದಾರೆ. ಈ ನೃತ್ಯ ಸರಣಿಯ 26ನೆಯ ನೃತ್ಯೋತ್ಸವವು ಜು.15, 2018 ಭಾನುವಾರದಂದು ಸಂಜೆ 6 ಗಂಟೆಗೆ ಪ್ರಾರಂಭವಾಗಲಿದೆ. ಕಥಕ್ ಏಕವ್ಯಕ್ತಿ ಶೈಲಿಯ ನೃತ್ಯವನ್ನು ಪುಣೆಯ ಗುರು…

ಜು.25ರಂದು ಉದ್ಯೋಗ ಮೇಳ
ಮೈಸೂರು

ಜು.25ರಂದು ಉದ್ಯೋಗ ಮೇಳ

July 13, 2018

ಮೈಸೂರು: ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಕಚೇರಿಯ ಆವರಣದಲ್ಲಿ ಜು.25ರಂದು ಬೆಳಿಗ್ಗೆ 10 ಗಂಟೆಗೆ ಕಚೇರಿಯ ಆವರಣದಲ್ಲಿ ವಿಶ್ವ ಕೌಶಲ್ಯ ದಿನದ ಅಂಗವಾಗಿ “ಉದ್ಯೋಗ ಮೇಳ ”ವನ್ನು ಆಯೋಜಿಸಲಾಗಿದೆ. ಉದ್ಯೋಗ ಮೇಳದಲ್ಲಿ ಸುರಭಿ ಪ್ಲಾನ್‍ಟೆಕ್ ಮೈಸೂರು, ಬಿ.ಎಸ್.ಗೌಡ ಎಂಟರ್ ಪ್ರೈಸಸ್ ಮೈಸೂರು, ಯುರೇಕಾಫೋಬ್ರ್ಸ್ ಮೈಸೂರು, ತೇಜಸ್ವಿನಿ ಎಂಟರ್‍ಪ್ರೈಸಸ್ ಮೈಸೂರು, ರೀಟೇಲ್ ವಕ್ರ್ಸ್‍ಇಂಡಿಯಾ ಪ್ರೈ. ಲಿ. ಬೆಂಗಳೂರು, ಹಿಂದುಜಾ ಗ್ಲೋಬಲ್ ಸಲ್ಯೂಷನ್ ಮೈಸೂರು, ರಾಜಾ ಬಯೋಟೆಕ್ ಮೈಸೂರು, ಗ್ರಾಸ್ ರೋಟ್…

ಜುಲೈ 16ರಂದು ಎಸಿಬಿಯಿಂದ ದೂರು ಸ್ವೀಕಾರ
ಮೈಸೂರು

ಜುಲೈ 16ರಂದು ಎಸಿಬಿಯಿಂದ ದೂರು ಸ್ವೀಕಾರ

July 13, 2018

ಮೈಸೂರು: ಸರ್ಕಾರಿ ಕಚೇರಿಗಳಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುವಲ್ಲಿ ವಿಳಂಬ, ಲಂಚಕ್ಕಾಗಿ ಒತ್ತಾಯ ಹಾಗೂ ಇನ್ನಿತರ ರೀತಿಯಲ್ಲಿ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಮೈಸೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸ್ ಠಾಣೆಯ ಉಪಾಧೀಕ್ಷಕರು ಜು.16ರಂದು ಬೆಳಿಗ್ಗೆ 11 ಗಂಟೆಗೆ ಟಿ. ನರಸೀಪುರ ಪರಿವೀಕ್ಷಣಾ ಮಂದಿರದಲ್ಲಿ ಹಾಗೂ ಮಧ್ಯಾಹ್ನ 3-30 ಗಂಟೆಗೆ ನಂಜನಗೂಡಿನ ಪರಿವೀಕ್ಷಣಾ ಮಂದಿರದಲ್ಲಿ, ಜುಲೈ 17 ರಂದು ಬೆಳಿಗ್ಗೆ 11 ಗಂಟೆಗೆ ಹುಣಸೂರು ಪರಿವೀಕ್ಷಣಾ ಮಂದಿರ ಹಾಗೂ ಮಧ್ಯಾಹ್ನ 3-30 ಗಂಟೆಗೆ ಹುಣಸೂರು ಪರಿವೀಕ್ಷಣಾ ಮಂದಿರದಲ್ಲಿ…

1 1,490 1,491 1,492 1,493 1,494 1,611
Translate »