ಮೈಸೂರು

ನ್ಯಾಯಾಂಗ ಆಡಳಿತ ತರಬೇತಿ
ಮೈಸೂರು

ನ್ಯಾಯಾಂಗ ಆಡಳಿತ ತರಬೇತಿ

July 13, 2018

ಮೈಸೂರು: -ಮೈಸೂರು ಜಿಲ್ಲೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಒಂದು ಮುಸ್ಲಿಂ ಅಭ್ಯರ್ಥಿಗೆ ಹಾಗೂ ಒಂದು ಕ್ರಿಶ್ಚಿಯನ್ ಅಭ್ಯರ್ಥಿಗಳ ಕಾನೂನು ಪದವೀಧರರಿಂದ ನ್ಯಾಯಾಂಗ ಆಡಳಿತದಲ್ಲಿ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ವಿತರಿಸುವ ಜು.16ರಿಂದ 31ರವರೆಗೆ ಸಂಜೆ 4.30 ಗಂಟೆವರೆಗೆ, ಅರ್ಜಿ ಸಲ್ಲಿಸಲು ಕಡೆಯ ದಿನಾಂಕ: 10.08.2018 ರಂದು ಸಂಜೆ 5.00 ಗಂಟೆಯೊಳಗೆ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಅಧಿಕಾರಿಗಳು, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಮೈಸೂರು. # 446,…

ಮನೆ, ನಿವೇಶನ ಖರೀದಿಸುವವರಲ್ಲಿ ಜಾಗೃತಿ  ಮೂಡಿಸಲು ನಾಳೆ ಮೈಸೂರಲ್ಲಿ ವಿಚಾರ ಸಂಕಿರಣ
ಮೈಸೂರು

ಮನೆ, ನಿವೇಶನ ಖರೀದಿಸುವವರಲ್ಲಿ ಜಾಗೃತಿ  ಮೂಡಿಸಲು ನಾಳೆ ಮೈಸೂರಲ್ಲಿ ವಿಚಾರ ಸಂಕಿರಣ

July 13, 2018

ಮೈಸೂರು: ಮನೆ, ನಿವೇಶನ ಖರೀದಿಸಲು ಬಯಸುವವರಿಗೆ ವಂಚನೆ, ಅವ್ಯವಹಾರದ ಜಾಗೃತಿ ಮೂಡಿಸುವುದಕ್ಕಾಗಿ ಜು.13ರಂದು ಸಂಜೆ 4.30ರಿಂದ 7.30ರವರೆಗೆ ಮೈಸೂರಿನ ನಜರ್‍ಬಾದ್‍ನಲ್ಲಿರುವ ಚಾಮುಂಡಿ ವಿಹಾರ್ ಕ್ರೀಡಾಂಗಣದ ಮುಂಭಾಗವಿರುವ ಹೊಟೇಲ್ ವಿಲ್ಲಾ ಪಾರ್ಕ್‍ನಲ್ಲಿ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ನ್ಯಾಷನಲ್ ರಿಯಲ್ ಎಸ್ಟೇಟ್ ಡೆವಲಪ್‍ಮೆಂಟ್ ಅಸೋಸಿಯೇಷನ್ ಕೋರ್ ಕಮಿಟಿ ಅಧ್ಯಕ್ಷ ಟಿ.ಜಿ.ಆದಿಶೇಷನ್ ತಿಳಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ನ್ಯಾಷನಲ್ ರಿಯಲ್ಎಸ್ಟೇಟ್ ಡೆವಲಪ್‍ಮೆಂಟ್ ಅಸೋಸಿಯೇ ಷನ್ (ನರೆಡ್ಕೊ) ವತಿಯಿಂದ ರೆರಾ (ರಿಯಲ್ ಎಸ್ಟೇಟ್…

ಮೈಸೂರು ಅಭಿವೃದ್ಧಿಗೆ ಸಂಪರ್ಕದ್ದೇ ಸಮಸ್ಯೆ
ಮೈಸೂರು

ಮೈಸೂರು ಅಭಿವೃದ್ಧಿಗೆ ಸಂಪರ್ಕದ್ದೇ ಸಮಸ್ಯೆ

July 12, 2018

ದ್ವಿಚಕ್ರ ವಾಹನಗಳ ದುರಸ್ತಿದಾರರ ಕುಂದು ಕೊರತೆ ಸಭೆಯಲ್ಲಿ ಸಂಸದ ಪ್ರತಾಪ ಸಿಂಹ ವಿಷಾದ ಪ್ರಧಾನಿ ಮೋದಿ ನೆರವಿಂದ ರಸ್ತೆ, ರೈಲು, ವಿಮಾನ ಸಂಪರ್ಕ ಸುಧಾರಣೆ ಮೈಸೂರು: ಮೈಸೂರಿನ ಅಭಿವೃದ್ಧಿಗೆ ಬೇರೆ ಜಿಲ್ಲೆ, ರಾಜ್ಯಗಳಿಂದ ಬೆಸೆಯುವ ಸಂಪರ್ಕದ್ದೆ ಸಮಸ್ಯೆಯಾಗಿದೆ ಎಂದು ಸಂಸದ ಪ್ರತಾಪ ಸಿಂಹ ತಿಳಿಸಿದರು. ನಜರ್‌ಬಾದಿನ ವಿ.ಕೆ.ಹಾಲ್‍ನಲ್ಲಿ ಮೈಸೂರು ದ್ವಿಚಕ್ರ ವಾಹನಗಳ ದುರಸ್ತಿದಾರರ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ಕುಂದು-ಕೊರತೆಗಳ ಸಭೆಯಲ್ಲಿ ಅವರು ಮಾತನಾಡಿದರು. ಮೈಸೂರಿನ ಸಮಗ್ರ ಅಭಿವೃದ್ಧಿಗೆ ಇತರೆ ನಗರ ಮತ್ತು ರಾಜ್ಯಗಳ ಸಂಪರ್ಕ ಕಲ್ಪಿಸುವ ರಸ್ತೆಗಳ…

ರವಿವರ್ಮ ಚಿತ್ರಕಲಾ ಶಾಲೆಯಲ್ಲಿ  ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ
ಮೈಸೂರು

ರವಿವರ್ಮ ಚಿತ್ರಕಲಾ ಶಾಲೆಯಲ್ಲಿ  ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ

July 12, 2018

ಮೈಸೂರು:  ಮೈಸೂರಿನ ಚಾಮುಂಡಿಪುರಂನಲ್ಲಿರುವ ರವಿವರ್ಮ ಚಿತ್ರಕಲಾ ಶಾಲೆಯಲ್ಲಿ ಟಿ.ಎಸ್.ಮುರಳಿಯವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಲಾಗಿತ್ತು. ಪ್ರದರ್ಶನವನ್ನು ಉದ್ಘಾಟಿಸಿದ ಸಂಸದ ಪ್ರತಾಪ್ ಸಿಂಹ, ಕಲೆ ಮತ್ತು ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಅದಕ್ಕೆ ಕಠಿಣ ಪರಿಶ್ರಮ ಅಗತ್ಯವಾಗಿದ್ದು, ಏಕಚಿತ್ತದಿಂದ ಕಲಿತರೆ ಮಾತ್ರ ಸಾಧ್ಯವಾಗುತ್ತದೆ. ಕಲ್ಪನೆಯಲ್ಲಿ ಮೂಡುವ ಅಮೂರ್ತ ರೂಪದ ಸ್ಥಳಗಳನ್ನು ಮೂರ್ತರೂಪಕ್ಕೆ ತರುವ ಕೆಲಸ ಟಿ.ಎಸ್.ಮುರಳಿಯವರಿಂದ ಮಾತ್ರ ಸಾಧ್ಯವಾಗಿದೆ ಮೈಸೂರಿನ ಸುತ್ತಮುತ್ತಲಿನ ಪ್ರಕೃತಿ ಸೌಂದರ್ಯವನ್ನು ಚಿತ್ರಿಸಿರುವುದು ಶ್ಲಾಘನೀಯ ಎಂದು ಕಲಾವಿದ ಟಿ.ಎಸ್.ಮುರುಳಿಯವರನ್ನು ಅಭಿನಂದಿಸಿದರು. 40 ಬಗೆಯ ಕಲಾಕೃತಿಗಳು- 5 ದಿನಗಳು…

ವಿಶೇಷ ಸೀರೆಗಳ ಪ್ರದರ್ಶನ, ಮಾರಾಟ `ಸಿಲ್ಕ್ ಇಂಡಿಯಾ-2018ಕ್ಕೆ’ ಚಾಲನೆ
ಮೈಸೂರು

ವಿಶೇಷ ಸೀರೆಗಳ ಪ್ರದರ್ಶನ, ಮಾರಾಟ `ಸಿಲ್ಕ್ ಇಂಡಿಯಾ-2018ಕ್ಕೆ’ ಚಾಲನೆ

July 12, 2018

ಮೈಸೂರು:  ನಂಜರಾಜ ಬಹದ್ದೂರ್ ಛತ್ರದಲ್ಲಿ ಹಸ್ತಶಿಲ್ಪಿ ಸಂಸ್ಥೆಯು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ 6 ದಿನಗಳ ಕಾಲ ಆಯೋಜಿಸಿರುವ ಬೃಹತ್ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಮೇಳ `ಸಿಲ್ಕ್ ಇಂಡಿಯಾ-2018’ಕ್ಕೆ ಬುಧವಾರ ಚಾಲನೆ ದೊರೆಯಿತು. ಈ ಮೇಳದಲ್ಲಿ ಕಾಶ್ಮೀರದಿಂದ ಕಾಂಚೀಪುರಂ ವರೆಗಿನ ರೇಷ್ಮೆ ಸೀರೆ ಉತ್ಪಾದಕರು, ವಿನ್ಯಾಸಗಾರರು ಮತ್ತು ರೇಷ್ಮೆ ಸಹಕಾರ ಸಂಘಗಳು ಭಾಗವಹಿಸಿದ್ದು, ದೇಶದ 20ಕ್ಕೂ ಹೆಚ್ಚು ರಾಜ್ಯಗಳ ನೇಕಾರರು, ಕುಶಲಕರ್ಮಿಗಳು ಉತ್ಪಾದಿಸುವ ತಸ್ಸರ್ ರೇಷ್ಮೆ ಸೀರೆಗಳು, ಕ್ರೇಪ್ ಮತ್ತು ಜಾರ್ಟೆಟ್ ಸಿಲ್ಕ್ ಸೀರೆಗಳು, ಅರಿಣ ರೇಷ್ಮೆ…

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಆರಂಭ
ಮೈಸೂರು

ಸೆಪ್ಟೆಂಬರ್‌ನಲ್ಲಿ ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಆರಂಭ

July 12, 2018

ಮೈಸೂರು: ಕೇಂದ್ರ ಸರ್ಕಾರದ ಅನುದಾನದಲ್ಲಿ ಬೆಂಗಳೂರು-ಮೈಸೂರು ನಡುವೆ 10 ಪಥದ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಾಣ ಮಾಡುತ್ತಿದ್ದು, ಸೆಪ್ಟೆಂಬರ್‌ನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು. ನಂಜರಾಜ ಬಹದ್ದೂರ್ ಛತ್ರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಮೈಸೂರಿಗೆ ಸಂಪರ್ಕ ಕಲ್ಪಿಸುವುದು ದೊಡ್ಡ ಸಮಸ್ಯೆಯಾಗಿತ್ತು. ಹಾಗಾಗಿ 2014ರಲ್ಲಿ ನರೇಂದ್ರಮೋದಿಯವರು ಪ್ರಧಾನಿಯಾದ ನಂತರ ಮೈಸೂರು-ಬೆಂಗಳೂರು ನಡುವಿನ ಜೋಡಿಹಳಿ ರೈಲುಮಾರ್ಗ ಪೂರ್ಣ ಮತ್ತು ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲಾಗಿದೆ ಎಂದರು. ಹಾಗೆಯೇ ರಸ್ತೆಯ ಮೇಲಿನ ಒತ್ತಡವನ್ನು ತಗ್ಗಿಸಲು ಬೆಂಗಳೂರಿನ ಕೆಂಗೇರಿಯ ನೈಸ್ ರಸ್ತೆ…

ಮೈಸೂರಲ್ಲಿ ಹಜ್ ಯಾತ್ರಾರ್ಥಿಗಳಿಗೆ ತರಬೇತಿ, ರೋಗ ನಿರೋಧಕ ಚುಚ್ಚುಮದ್ದು
ಮೈಸೂರು

ಮೈಸೂರಲ್ಲಿ ಹಜ್ ಯಾತ್ರಾರ್ಥಿಗಳಿಗೆ ತರಬೇತಿ, ರೋಗ ನಿರೋಧಕ ಚುಚ್ಚುಮದ್ದು

July 12, 2018

ಮೈಸೂರು:  ಮೈಸೂರು, ಮಂಡ್ಯ ಹಾಗೂ ಚಾಮರಾಜನಗರ ಜಿಲ್ಲೆಗಳಿಂದ 2018ರ ಹಜ್ ಯಾತ್ರೆಗೆ 350ಕ್ಕೂ ಹೆಚ್ಚು ಮಂದಿ ತೆರಳಲಿದ್ದು, ಬುಧವಾರ ಹಜ್ ಯಾತ್ರಾರ್ಥಿಗಳಿಗೆ ಅಗತ್ಯ ತರಬೇತಿ ಹಾಗೂ ರೋಗ ನಿರೋಧಕ ಚುಚ್ಚುಮದ್ದು ನೀಡಲಾಯಿತು. ಆ.1ರಿಂದ ತಂಡಗಳಾಗಿ ಯಾತ್ರಾರ್ಥಿಗಳು ವಿಮಾನದಲ್ಲಿ ಪ್ರಯಾಣ ಬೆಳೆಸಲಿದ್ದು, ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾ ಹಜ್ ಕಮಿಟಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಮೈಸೂರಿನ ಉದಯಗಿರಿಯ ಪಿ ಅಂಡ್ ಟಿ ಕ್ವಾಟ್ರಸ್ ರಸ್ತೆಯ ಆರ್‍ಕೆ ಪ್ಯಾಲೆಸ್ ಫಂಕ್ಷನ್ ಹಾಲ್‍ನಲ್ಲಿ ಇಂದು ಹಮ್ಮಿಕೊಂಡಿದ್ದ ಯಾತ್ರೆ ಸಂಬಂಧ ತರಬೇತಿ…

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಹಸಿರು ದಿನ ಆಚರಣೆ
ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಹಸಿರು ದಿನ ಆಚರಣೆ

July 12, 2018

ಮೈಸೂರು: ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಸುಂದರವಾದ ಹಸಿರು ವಾತಾವರಣದಲ್ಲಿ ವನಮಹೋತ್ಸವದ ಪ್ರಯುಕ್ತ ಹಸಿರು ದಿನ ಆಚರಿಸಲಾಯಿತು. ಮಕ್ಕಳಿಗೆ ಗಿಡಗಳ ಮಹತ್ವ, ಗಿಡಗಳಿಂದಾಗುವ ಉಪಯೋಗ, ಗಿಡಗಳಿಂದ ನಮಗೆ ಸಿಗುವಂತಹ ತರಕಾರಿ, ಹಣ್ಣು ಹಂಪಲು, ಹೂಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ಹಾಗೆಯೇ ಶಾಲೆಯಲ್ಲಿರುವ ವಿವಿಧ ಜಾತಿಯ ಹಣ್ಣು, ಹೂವಿನ ಗಿಡಗಳು, ಮರಗಳನ್ನು ಪರಿಚಯಿಸಲಾಯಿತು. ಔಷಧೀಯ ಗುಣಗಳಿರುವ ಗಿಡಗಳು, ಅವುಗಳನ್ನು ಯಾವಾಗ ಉಪಯೋಗಿಸುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸಲಾಯಿತು. ಮಕ್ಕಳು ಗಿಡಗಳ ಸುಂದರತೆ, ಅದರ ಉಪಯೋಗವನ್ನು…

ಕಾವೇರಿ ಕೊಡಗು ಮಹಿಳಾ ಸಂಘದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ
ಮೈಸೂರು

ಕಾವೇರಿ ಕೊಡಗು ಮಹಿಳಾ ಸಂಘದಿಂದ ಉಚಿತ ವೈದ್ಯಕೀಯ ತಪಾಸಣಾ ಶಿಬಿರ

July 12, 2018

ಮೈಸೂರು: ಮೈಸೂರಿನ ಶ್ರೀ ಕಾವೇರಿ ಕೊಡಗು ಮಹಿಳಾ ಸಂಘದ ವತಿ ಯಿಂದ ಶ್ರೀರಾಂಪುರ 2ನೇ ಹಂತ, ಎಲ್‍ಐಸಿ ಕಾಲೋನಿ, ಸಿ.ಎ. ನಂ.4ರಲ್ಲಿರುವ ಮಹಾವೀರ ವಿದ್ಯಾಮಂದಿರದಲ್ಲಿ ಜು.15 (ಭಾನುವಾರ) ರಂದು ಬೆಳಿಗ್ಗೆ 10.30ರಿಂದ ಸಂಜೆ 4 ಗಂಟೆವರೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಶಿಬಿರವನ್ನು ಡಾ. ಮಾತಂಡ ಅಯ್ಯಪ್ಪ ಉದ್ಘಾಟಿಸಲಿದ್ದು, ಸಂಘದ ಅಧ್ಯಕ್ಷರಾದ ಜೆರ್ರಿ ಪೊನ್ನಪ್ಪ ಅಧ್ಯಕ್ಷತೆ ವಹಿಸುವರು. ಫಿಜಿಷಿಯನ್ ಡಾ.ಲತಾ ಮುತ್ತಣ್ಣ, ಮೂಳೆ ರೋಗ ತಜ್ಞ ಡಾ.ದೇವಯ್ಯ, ಚರ್ಮ ರೋಗ ತಜ್ಞರಾದ ಡಾ.ಪಿ.ಎ.ಕುಶಾಲಪ್ಪ, ಡಾ. ಪೂವಮ್ಮ,…

2ನೇ ದಿನವೂ ಮುಂದುವರೆದ  ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಸಭೆ
ಮೈಸೂರು

2ನೇ ದಿನವೂ ಮುಂದುವರೆದ  ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಸಭೆ

July 12, 2018

ಮೈಸೂರು: ಆರ್‍ಬಿಐ ಸೇರಿದಂತೆ ಬ್ಯಾಂಕಿಂಗ್ ವ್ಯವಸ್ಥೆ ಸುಧಾರಣೆ ಮತ್ತು ಜಿಎಸ್‍ಟಿ ಸಾಧಕ-ಬಾಧಕಗಳ ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಮಂಗಳವಾರ ಮೈಸೂರಿಗೆ ಆಗಮಿಸಿರುವ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ನೇತೃತ್ವದ ಕೇಂದ್ರ ಆರ್ಥಿಕ ಸ್ಥಾಯಿ ಸಮಿತಿ ಸದಸ್ಯರು 2ನೇ ದಿನವಾದ ಇಂದೂ ವಿವಿಧ ಸಂಘ-ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು. ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಸಭೆ ನಡೆಸಿದ ಮೊಯ್ಲಿ ಅವರು, ನಂತರ ಮಧ್ಯಾಹ್ನ ಮೈಸೂರು ಅರಮನೆಗೆ ಭೇಟಿ ನೀಡಿದ್ದರು. ಸಂಜೆ ಕೆಆರ್‍ಎಸ್‍ಗೆ ಸಮಿತಿಯ ಸದಸ್ಯರನ್ನು ಕರೆದೊಯ್ದು ರಾತ್ರಿ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದು,…

1 1,491 1,492 1,493 1,494 1,495 1,611
Translate »